ಹೃದಯ ಆರೋಗ್ಯವಾಗಿ ಇರಬೇಕೆಂದರೆ, 'ಆಹಾರ ಪಥ್ಯ' ಹೀಗಿರಲಿ...

Posted By: manu
Subscribe to Boldsky

ದೇಹದಲ್ಲಿ ಪ್ರಮುಖ ಭಾಗವಾಗಿರುವ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಹೃದಯದ ಆರೋಗ್ಯ ಚೆನ್ನಾಗಿದ್ದರೆ ನೀವು ನಿಶ್ಚಿಂತೆಯಿಂದ ಇರಬಹುದು. ಅತಿಯಾದ ಒತ್ತಡ, ವೇಗದ ಜೀವನ ಮತ್ತು ಜಂಕ್ ಫುಡ್ ಸಾಹಸದಿಂದಾಗಿ ಹೃದಯದ ಆರೋಗ್ಯವು ಕೆಡುತ್ತಲೇ ಇದೆ. ಇದರಿಂದ ಹೃದಯಾಘಾತ ಮತ್ತು ಎದೆನೋವಿನಂತಹ ಸಮಸ್ಯೆಯು ಕಾಣಿಸುತ್ತದೆ. 

ಲವಲವಿಕೆಯ ಹೃದಯಕ್ಕಾಗಿ ಆರೋಗ್ಯಕರ ಆಹಾರಕ್ರಮ

ಇಂತಹ ಕಾಯಿಲೆಗಳನ್ನು ದೂರವಿಟ್ಟು ಹೃದಯವನ್ನು ಆರೋಗ್ಯದಿಂದ ಇಡಬೇಕಾದರೆ ಆಯುರ್ವೇದದಲ್ಲಿ ಸೂಚಿಸಿರುವಂತಹ ಕೆಲವೊಂದು ಆಹಾರವನ್ನು ಸೇವಿಸಬೇಕು. ಈ ಲೇಖನದಲ್ಲಿ ಹೃದಯದ ಆರೋಗ್ಯಕ್ಕೆ ಸೂಚಿಸಲಾಗಿರುವ ಕೆಲವೊಂದು ಆಹಾರಗಳನ್ನು ಪಟ್ಟಿ ಮಾಡಲಾಗಿದೆ. ಇದನ್ನು ತಿಳಿದುಕೊಂಡು ಅದನ್ನು ಪಾಲಿಸಿಕೊಂಡು ಹೋದರೆ ಆರೋಗ್ಯವಂತ ಹೃದಯವು ನಿಮ್ಮದಾಗುವುದು....  

ಗಿಡಮೂಲಿಕೆಗಳು ಮತ್ತು ಮಸಾಲೆಗಳು

ಗಿಡಮೂಲಿಕೆಗಳು ಮತ್ತು ಮಸಾಲೆಗಳು

ಆಯುರ್ವೇದದ ಪ್ರಕಾರ ಮಸಾಲೆ ಮತ್ತು ಗಿಡಮೂಲಿಕೆಗಳು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇವುಗಳು ಉಪ್ಪಿಗಿಂತಲೂ ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ. ಆದ್ದರಿಂದ ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ದಾಲ್ಚಿನ್ನಿ ಪುಡಿ ಅಥವಾ ಖಾರದ ಮತ್ತು ಉಪ್ಪಿನಂಶವಿರುವ ಕೆಂಪು ಮೆಣಸಿನ ಪುಡಿ, ದಾಲ್ಚಿನ್ನಿ ಎಲೆ, ಬೆಳ್ಳುಳ್ಳಿಯ ಒಣ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ಲಿಂಬೆರಸ, ಸೂರ್ಯಕಾಂತಿ ಬೀಜದ ತಿರುಳಿನ ಪುಡಿ ಮೊದಲಾದವುಗಳನ್ನು ಬಳಸಬಹುದು.

ಆಲಿವ್ ತೈಲ

ಆಲಿವ್ ತೈಲ

ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆ ಅಂದರೆ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ (cold process) ಆಲಿವ್ ಎಣ್ಣೆ. ಇದರಲ್ಲಿರುವ ವಿವಿಧ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಒಟ್ಟಾರೆ ನಿಮ್ಮ ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಎಣ್ಣೆ ಬಳಕೆಯಾಗುತ್ತದೆಯೋ ಅಲ್ಲೆಲ್ಲಾ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ.

ಸಾಲ್ಮನ್ ಮೀನು

ಸಾಲ್ಮನ್ ಮೀನು

ಕಡಿಮೆ ಕೊಬ್ಬಿನ ಪ್ರೋಟೀನ್ ನ್ನು ಒಳಗೊಂಡಿರುವ ಸಾಲ್ಮನ್ ನಲ್ಲಿ ಒಮೆಗಾ3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಸಾಲ್ಮನ್ ಅಥವಾ ಒಮೆಗಾ 3 ಕೊಬ್ಬಿನಾಮ್ಲವನ್ನು ಹೊಂದಿರುವ ಮೀನನ್ನು ವಾರದಲ್ಲಿ ಎರಡು ಸಲ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇಡೀ ಗೋಧಿಯ ಬ್ರೆಡ್

ಇಡೀ ಗೋಧಿಯ ಬ್ರೆಡ್

ಬಿಳಿಯ ಬ್ರೆಡ್ ನಲ್ಲಿ ಇರುವುದಕ್ಕಿಂತ ಹೆಚ್ಚಿನ ನಾರಿನಾಂಶ, ವಿಟಮಿನ್ ಮತ್ತು ಖನಿಜಾಂಶವು ಈ ಬ್ರೆಡ್ ನಲ್ಲಿದೆ. ಹೃದಯದ ಆರೋಗ್ಯಕ್ಕೆ ಬಂದರೆ ಇದನ್ನು ಒಂದು ಸೂಪರ್ ಫುಡ್ ಎಂದು ಪರಿಗಣಿಸಬಹುದು.

ನೇರಳೆಹಣ್ಣುಗಳು

ನೇರಳೆಹಣ್ಣುಗಳು

ನೇರಳೆಹಣ್ಣುಗಳು ರೋಗಗಳ ವಿರುದ್ಧ ಹೋರಾಡುವಂತಹ ಅತ್ಯುತ್ತಮ ಹಣ್ಣುಗಳು ಎಂದು ಪರಿಗಣಿಸಲಾಗಿದೆ. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್, ನಾರಿನಾಂಶ ಮತ್ತು ವಿಟಮಿನ್ ಸಿ ಇದೆ.

ಓಟ್ ಮೀಲ್

ಓಟ್ ಮೀಲ್

ಇಡೀ ಧಾನ್ಯಗಳಲ್ಲಿ ಇರುವಂತಹ ವಿಟಮಿನ್, ಖನಿಜಾಂಶ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ನಾರಿನಾಂಶ ಇದರಲ್ಲಿದೆ. ಓಟ್ಸ್ ಹೆಚ್ಚು ಇರುವಂತಹ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿ ಹೃದಯದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಸೋಯಾ ಪ್ರೋಟೀನ್

ಸೋಯಾ ಪ್ರೋಟೀನ್

ನಾರಿನಾಂಶ, ವಿಟಮಿನ್ ಮತ್ತು ಖನಿಜಾಂಶವನ್ನು ಹೊಂದಿರುವಂತಹ ಸೋಯಾ ಪ್ರೋಟೀನ್ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ ಮತ್ತು ಇದು ಹೃದಯದ ಹಲವಾರು ಕಾಯಿಲೆಗಳನ್ನು ಗುಣಪಡಿಸುವುದು. ಇದರಲ್ಲಿ ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬು ಉನ್ನತ ಮಟ್ಟದಲ್ಲಿದೆ.

ಬಾರ್ಲಿ

ಬಾರ್ಲಿ

ನೋಡಲಿಕ್ಕೆ ಬಿಳಿಯ ಬಣ್ಣದ ಗೋಧಿಯಂತೆಯೇ ಇರುವ ಬಾರ್ಲಿ ಸಹಾ ಹೃದಯಕ್ಕೆ ಉತ್ತಮವಾದ ಆಹಾರವಾಗಿದೆ. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟ ನೀರು ಸಹಾ ಉತ್ತಮವಾಗಿದೆ. ನಿಮ್ಮ ಆಹಾರದಲ್ಲಿ ಬಾರ್ಲಿಯ ಖಾದ್ಯಗಳು ಸಾಕಷ್ಟಿರುವಂತೆ ನೋಡಿಕೊಳ್ಳಿ. ಬಾರ್ಲಿಯ ಸೂಪ್ ಮತ್ತು ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದ ಒಂದು ಭಾಗವನ್ನಾಗಿಸಿ. ಇಡಿಯ ಗೋಧಿ ಉಪಯೋಗಿಸಿ ತಯಾರಿಸುವ ಹುಗ್ಗಿ ಮೊದಲಾದ ಸಿಹಿಗಳನ್ನು ಬಾರ್ಲಿ ಉಪಯೋಗಿಸಿಯೂ ತಯಾರಿಸಬಹುದು. ಕೊಂಚ ಅಂಟಾಗುವುದು ಹೆಚ್ಚು ಎನ್ನಿಸುವುದೇ ವಿನಃ ಪೋಷಕಾಂಶಗಳ ದೃಷ್ಟಿಯಿಂದ ಬಾರ್ಲಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಾರ್ಲಿ ಪುಡಿಗಿಂತಲೂ ಬಾರ್ಲಿಯ ಕಾಳುಗಳೇ ಉತ್ತಮವಾಗಿವೆ.

ಬಾರ್ಲಿ ನೀರು: ಇದುವೇ ಆರೋಗ್ಯ ವೃದ್ಧಿಗೆ ಪನ್ನೀರು

ಮೊಸರು

ಮೊಸರು

ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಗಳಿವೆ. ಆದರೆ ಜೊತೆಗೇ ಕೊಬ್ಬು ಸಹಾ ಇದೆ. ಹೃದಯಕ್ಕೆ ಮೊಸರಿನ ಮೊದಲ ಅಂಶಗಳು ಉತ್ತಮವಾದರೂ ಕೊಬ್ಬು ಉತ್ತಮವಲ್ಲ! ಈ ನಿಜವನ್ನು ಪರಿಗಣಿಸಿದ ಡೈರಿ ಸಂಸ್ಥೆಗಳು ಈಗ ಈ ಕೊಬ್ಬಿನ ಪ್ರಮಾಣವನ್ನು ಸಾಕಷ್ಟು ನಿವಾರಿಸಿ ಲೋ ಫ್ಯಾಟ್ ಅಥವಾ ಕಡಿಮೆ ಕೊಬ್ಬಿನ ರೂಪದಲ್ಲಿ ಮಾರಾಟ ಮಾಡುತ್ತಿವೆ. ಇದರಲ್ಲಿ ಸಕ್ಕರೆ ಬೆರೆಸದ ಮೊಸರನ್ನು ನಿಮ್ಮ ನಿತ್ಯದ ಆಹಾರದ ಒಂದು ಭಾಗವನ್ನಾಗಿಸುವ ಮೂಲಕ ಮೊಸರಿನ ಎಲ್ಲಾ ಆರೋಗ್ಯಕರ ಅಂಶಗಳನ್ನು ಪಡೆಯಬಹುದು.

For Quick Alerts
ALLOW NOTIFICATIONS
For Daily Alerts

    English summary

    As Per Ayurveda, These Foods Are The Best For Your Heart

    There are a great variety of foods that are known to reduce the risk of cardiovascular diseases. Eating some of these foods in their natural form, as they come from the ground, is also considered the best. According to Ayurveda, the secret to a healthy heart is not sticking to a particular kind of food, but going for different kinds of foods like fruits, vegetables, fish, meat, whole grains and so on
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more