Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಆರೋಗ್ಯ ಟಿಪ್ಸ್: ದಾಳಿಂಬೆ ಜ್ಯೂಸ್‌ನ ಜಬರ್ದಸ್ತ್ ಪವರ್
ಒಡೆದಾಗ ಕೆಂಪಗಿನ ಮುತ್ತುಗಳನ್ನು ಪೋಣಿಸಿಟ್ಟಂತೆ ಕಾಣುವ ದಾಳಿಂಬೆ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ಪಾಲಿಫೆನಾಲುಗಳಿವೆ. ಇವು ಮಾನಸಿಕ ಒತ್ತಡದ ಮೂಲಕ ಹೆಚ್ಚುವ ರಕ್ತದೊತ್ತಡವನ್ನು ಕಡಿಮೆಗೊಳಿಸುವಲ್ಲಿ ಅಪಾರವಾದ ಸಹಾಯ ಮಾಡುತ್ತವೆ.
ಅಲ್ಲದೇ ಕ್ಯಾನ್ಸರ್‌ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವವನ್ನು ತಗ್ಗಿಸಿ ಹಲವು ಬಗೆಯ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಸಾಮಾನ್ಯವಾಗಿ ನಮ್ಮೆಲ್ಲರಿಗೆ ಹಣ್ಣು ಎಂದರೆ ಬಾಳೆಹಣ್ಣು ಸುಲಿದಷ್ಟು ಸುಲಭವಾಗಿರಬೇಕು. ಸುಲಿಯಲು ಕಷ್ಟವಾಗುವ ಹಣ್ಣುಗಳ ಮಾರಾಟ ಕಡಿಮೆ ಇರುವುದಕ್ಕೆ ಇದೇ ಕಾರಣ. ದಾಳಿಂಬೆ ಸಹಾ ಸುಲಿಯಲು ಕೊಂಚ ತಾಳ್ಮೆ ಬೇಡುವ ಹಣ್ಣಾದ ಕಾರಣ ಹೆಚ್ಚಿನವರು ಈ ಹಣ್ಣಿನ ಬಗ್ಗೆ ಹೆಚ್ಚಿನ ಒಲವು ತೋರುವುದಿಲ್ಲ. ಆರೋಗ್ಯಕರ ದಾಳಿಂಬೆ ಪಾನೀಯ ಟೇಸ್ಟ್ ಮಾಡಿ

ಆದರೆ ಈ ಅಸಡ್ಡೆಯಿಂದ ಎಂತಹ ಅತ್ಯಮೋಘ ಹಣ್ಣಿನ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಿದ್ದೇವೆಂದು ಅವರಿಗೆ ಗೊತ್ತಿಲ್ಲ...ಅದರಲ್ಲೂ ದಾಳಿಂಬೆ ಹಣ್ಣಿನ ಜ್ಯೂಸ್‌ನಲ್ಲಿ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳಿವೆ ಎಂಬುದು ಈಗಾಗಲೇ ಖಚಿತಪಡಿಸಲಾಗಿದೆ. ಬನ್ನಿ ಕೆಳಗೆ ನೀಡಲಾಗಿರುವ ವಿವರಗಳನ್ನು ಓದಿದ ಬಳಿಕ ದಾಳಿಂಬೆಯನ್ನು ಸೇವಿಸುವತ್ತ ಮನಸ್ಸು ಬದಲಾಗುವುದು ಖಂಡಿತ.
ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ
ನಮ್ಮ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಥವಾ (LDL cholesterol) ಮಟ್ಟ ತಗ್ಗಿರುವಂತೆ ಮಾಡಲು ದಿನಕ್ಕೊಂದು ಲೋಟ ದಾಳಿಂಬೆ ಕುಡಿದರೆ ಸಾಕು. ಅಲ್ಲದೇ ಒಳ್ಳೆಯ ಕೊಲೆಸ್ಟ್ರಾಲ್ (HDL cholesterol) ಮಟ್ಟ ಹೆಚ್ಚಿರುವಂತೆ ಮತ್ತು ಟ್ರೈಗ್ಲಿಸರೈಡ್ ಮಟ್ಟ ಸಂತುಲಿತ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತದೆ.
ಉತ್ತಮ ಆರೋಗ್ಯಕ್ಕೆ ಈ ಮೂರೂ ಕೊಲೆಸ್ಟ್ರಾಲ್ ಗಳು ಆಯಾ ಮಟ್ಟದಲ್ಲಿರುವುದು ಅಗತ್ಯ. ದಾಳಿಂಬೆ ಈ ಕೆಲಸವನ್ನು ಮಾಡುತ್ತದೆ ಹಾಗೂ ರಕ್ತನಾಳಗಳ ಒಳಗೆ ಜಿಡ್ಡು ಕಟ್ಟಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಚರ್ಮದ ಕಾಂತಿ, ಕೋಮಲತೆಗಾಗಿ - ದಾಳಿಂಬೆ ಜ್ಯೂಸ್
ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ
ಹೃದಯತೊಂದರೆಗೂ ಮಧುಮೇಹಕ್ಕೂ ನೇರವಾದ ಸಂಬಂಧವಿದೆ. ನಿತ್ಯವೂ ಒಂದು ಲೋಟ ದಾಳಿಂಬೆ ರಸ ಸೇವಿಸುವ ಮೂಲಕ ಹೃದಯದ ಕ್ಷಮತೆ ಹೆಚ್ಚುತ್ತಿದ್ದ ಹಾಗೆಯೇ ಮಧುಮೇಹವನ್ನೂ ನಿಯಂತ್ರಿಸಲು ನೆರವಾಗುತ್ತದೆ. ದಾಳಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೃದಯವನ್ನು ತೊಂದರೆಗಳಿಂದ ಕಾಪಾಡುವ ಜೊತೆಗೇ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುತ್ತದೆ.
ಅಲ್ಲದೇ ಇದರಲ್ಲಿ ಸಕ್ಕರೆ ಅತಿ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಈ ರಸ ಹೇಳಿ ಮಾಡಿಸಿದಂತಿದ್ದು ದೇಹದ ಆರ್ದ್ರತೆಯನ್ನು ಉಳಿಸಿಕೊಳ್ಳುವ ಮೂಲಕ ದೇಹ ಒಣಗುವುದನ್ನು ತಡೆಯುತ್ತದೆ.
ರಕ್ತದ ಒತ್ತಡವನ್ನು ಸಮತೋಲನದಲ್ಲಿಡುತ್ತದೆ
ವಿಶೇಷವಾಗಿ ಸ್ಥೂಲದೇಹಿಗಳಲ್ಲಿ ರಕ್ತದೊತ್ತಡ ಹೆಚ್ಚಾಗಿದ್ದು ಇಂದಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಯುವಜನತೆಯಲ್ಲಿಯೂ ಸ್ಥೂಲಕಾಯ ಕಂಡುಬರುತ್ತಿರುವುದು ಮಾತ್ರ ಕೊಂಚ ಆತಂಕ ತರುವ ವಿಷಯವಾಗಿದೆ. ನಿತ್ಯವೂ ಒಂದು ಲೋಟ ದಾಳಿಂಬೆ ರಸ ಕುಡಿಯುವ ಮೂಲಕ ಅಧಿಕ ರಕ್ತದೊತ್ತಡ ಇರುವವರಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿರಲು ನೆರವಾಗುತ್ತದೆ. ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು
ಅಪಧಮನಿಕಾಠಿಣ್ಯ (arthelosclerosis) ತೊಂದರೆಯಿಂದ ರಕ್ಷಿಸುತ್ತದೆ
ಒಂದು ಸಂಶೋಧನೆಯಲ್ಲಿ ಅಪಧಮನಿಕಾಠಿಣ್ಯ (arthelosclerosis) ತೊಂದರೆಯಿಂದ ನರಳುತ್ತಿದ್ದ ವ್ಯಕ್ತಿಗಳಿಗೆ ದಾಳಿಂಬೆ ರಸವನ್ನು ಔಷಧಿಯ ರೂಪದಲ್ಲಿ ನೀಡಲಾಯಿತು. ಈ ತೊಂದರೆ ಇದ್ದವರ ನರಗಳ ಒಳಭಾಗದಲ್ಲಿ ಗೋಡೆಗೆ ಅಂಟಿಕೊಂಡಂತೆ ಜಿಡ್ಡು (plaque) ಅಂಟಿಕೊಂಡು ನರದ ಒಳಗಣ ವ್ಯಾಸವನ್ನು ತೀರಾ ಚಿಕ್ಕದಾಗಿಸುತ್ತವೆ.
ಇದರಿಂದ ನರ ಪೆಡಸು ಅಥವಾ ಕಠಿಣವಾಗುತ್ತದೆ. ಈ ನರಗಳ ಮೂಲಕ ರಕ್ತ ಹರಿಸಲು ಹೃದಯಕ್ಕೆ ಹೆಚ್ಚಿನ ಒತ್ತಡ ಬೇಕಾಗುತ್ತದೆ. ದಾಳಿಂಬೆ ರಸ ಸೇವಿಸಲು ಪ್ರಾರಂಭವಾದ ಬಳಿಕ ನರಗಳ ಒಳಗಿನ ಜಿಡ್ಡು ಕಡಿಮೆಯಾಗಿ ನರದ ಗೋಡೆ ತೆಳುವಾಗುತ್ತಾ ಹೋಗಿರುವುದು ಕಂಡುಬಂದಿದೆ. ತನ್ಮೂಲಕ ರಕ್ತಪರಿಚಲನೆ ಸುಲಭಗೊಂಡು ಹೃದಯದ ಒತ್ತಡವನ್ನೂ ಕಡಿಮೆ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














