Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಜೀವ ಹಿಂಡುವ ಹೆಮ್ಮಾರಿ ಹೃದಯಾಘಾತಕ್ಕೆ ಕಾರಣ ತಿಳಿದುಕೊಳ್ಳಿ
ಹೃದಯಾಘಾತಕ್ಕೆ ಹಲವಾರು ಕಾರಣಗಳಿದ್ದರೂ ಪ್ರತಿಯೊಬ್ಬರ ಶರೀರ, ಆಹಾರ, ಆನುವಂಶಿಕ ಹಿನ್ನೆಲೆ, ದೈಹಿಕ ಚಟುವಟಿಕೆ, ಮಾನಸಿಕ ಸ್ವಾಸ್ಥ್ಯ, ಬೇರೆ ಕಾಯಿಲೆಗಳಿಗೆ ತೆಗೆದುಕೊಳ್ಳುತ್ತಿರುವ ಔಷಧಿಗಳು, ಹಿಂದೆಂದೋ ತೆಗೆದುಕೊಂಡಿದ್ದ ಔಷಧಿಗಳ ಅಡ್ಡಪರಿಣಾಮಗಳು ಮೊದಲಾದ ಹಲವು ಕಾರಣಗಳು ಹೃದಯಾಘಾತಕ್ಕೆ ಕಾರಣವಾಗುತ್ತವೆ.
ಇಡಿಯ ದೇಹಕ್ಕೆ ರಕ್ತ ಸರಬರಾಜು ಮಾಡುವ ಹೃದಯಕ್ಕೇ ರಕ್ತಸಂಚಾರದಲ್ಲಿ ಅಡಚಣೆಯಾದರೆ ಹೃದಯಾಘಾತ ಸಂಭವಿಸುತ್ತದೆ. ಒಂದು ವೇಳೆ ಹೃದಯಕ್ಕೆ ರಕ್ತಸರಬರಾಜು ಮಾಡುವ ನರಗಳ ಒಳಗಿನ ರಕ್ತ ಹೆಪ್ಪುಗಟ್ಟಿದರೆ ಹೃದಯಾಘಾತದ ಸಂಭವ ಹೆಚ್ಚಾಗುತ್ತದೆ. ಈ ತೊಂದರೆಯನ್ನು ನಿವಾರಿಸಲು ಕೂಡಲೇ ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುವುದು ಅಗತ್ಯ.
ಆಸ್ಪತ್ರೆಯಲ್ಲಿ ವೈದ್ಯರು ಇದೇ ಕಾರಣಕ್ಕಾಗಿ ಮೊದಲು ಆಮ್ಲಜನಕದ ನಳಿಕೆಯನ್ನು ಮೂಗಿಗೆ ನೀಡಿ ಉಪಚಾರ ನೀಡುತ್ತಾರೆ. ಬನ್ನಿ ಹೃದಯಾಘಾತಕ್ಕೆ ಕಾರಣಗಳೇನು ಎಂಬುದನ್ನು ತಿಳಿಯೋಣ.... ಹೃದಯಾಘಾತ ಬರದಂತೆ ತಡೆಯಬೇಕೆ?

ಹೃದಯಾಘಾತಕ್ಕೆ ಕಾರಣವೇನು?
ಅಪಧಮನಿಗಳಲ್ಲಿ ರಕ್ತವು ಕಟ್ಟಿಕೊಳ್ಳುವುದೇ ಇದಕ್ಕೆ ಮುಖ್ಯ ಕಾರಣ. ಅವು ಹೃದಯಕ್ಕೆ ಬೇಕಾದ ಆಮ್ಲಜನಕಯುಕ್ತ ರಕ್ತದ ಪೂರೈಕೆಯನ್ನು ತಡೆಯುತ್ತವೆ. ಅಧಿಕ ಕೊಲೆಸ್ಟ್ರಾಲ್,ಧೂಮಪಾನ, ಟ್ರೈಗ್ಲಿಸೆರೈಡ್‌ಗಳು, ಕೊಲೆಸ್ಟ್ರಾಲ್, ಸ್ಥೂಲಕಾಯ, ಒತ್ತಡ, ಮಧುಮೇಹ, ಆಲ್ಕೋಹಾಲ್, ಮುಪ್ಪು ಮತ್ತು ವಂಶವಾಹಿಗಳ ಕಾರಣದಿಂದ ಹೃದಯಾಘಾತ ಸಂಭವಿಸಬಹುದು.

ಔಷಧೋಪಚಾರ
ಸಾಮಾನ್ಯವಾಗಿ, ಹೃದ್ರೋಗಿಗಳಿಗೆ ರಕ್ತ ಹೆಪ್ಪುಗಟ್ಟುವುದನ್ನು ನಿವಾರಿಸುವ ಔಷಧಿಗಳನ್ನು ನೀಡಲಾಗುತ್ತದೆ. ಈ ರಕ್ತ ಹೆಪ್ಪುಗಟ್ಟುವುದನ್ನು ನಿವಾರಿಸುವ ಔಷಧಿಗಳನ್ನು ರೋಗಿಯ ಜೀವ ಉಳಿಸಲು ಸರಿಯಾದ ಸಮಯಕ್ಕೆ ನೀಡಬೇಕಾಗುತ್ತದೆ.

ನಗು ಜೀವ ಉಳಿಸಬಲ್ಲದೆ?
ಅಧ್ಯಯನಗಳ ಪ್ರಕಾರ ಮನುಷ್ಯ ನಗುತ್ತ ಇದ್ದರೆ, ಆತನ ರಕ್ತದ ಪರಿಚಲನೆಯು ಚೆನ್ನಾಗಿ ನಡೆಯುತ್ತದೆಯಂತೆ. ಯಾವಾಗ ರಕ್ತವು ದೇಹದಲ್ಲಿ ಸರಿಯಾಗಿ ಪರಿಚಲನೆಯಾಗುತ್ತದೆಯೋ, ಆಗ ದೇಹದಲ್ಲಿ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ. ಆಗ ನಿಮ್ಮ ಹೃದಯವು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಆಗಾಗಿ ಅವಕಾಶ ಸಿಕ್ಕಾಗಲೆಲ್ಲ ನಗುತ್ತ ಇರಿ. ನಗು ನಗುತ್ತ ಇರಿ.

ಹೃದಯಾಘಾತವು ಏಕೆ ಬೆಳಗ್ಗೆ ಕಂಡು ಬರುತ್ತದೆ?
ಇದಕ್ಕೆ ಕಾರಣ ಸರಳ, ನಾವೆಲ್ಲರು ಅಂದಿನ ದಿನ ಕೆಲಸ ಕಾರ್ಯ ಮತ್ತು ತಲೆನೋವುಗಳನ್ನು ನೆನೆದು ಒತ್ತಡಕ್ಕೆ ಒಳಗಾಗುವುದು ಬೆಳಗ್ಗೆಯೇ ಅಲ್ಲವೇ? ಜೊತೆಗೆ ಬೆಳಿಗಿನ ಜಾವ ನಮ್ಮ ಮೇಲೆ ಕೆಲಸದ ಒತ್ತಡ ಮಟ್ಟ ಮತ್ತಷ್ಟು ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಒತ್ತಡವೆಲ್ಲವು ನೇರವಾಗು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಆಗ ರಕ್ತದೊತ್ತಡ ಮತ್ತು ಒತ್ತಡ ಎಲ್ಲವೂ ಸೇರಿ ಪ್ರಾಣಕ್ಕೆ ಅಪಾಯವನ್ನು ತಂದಿಡುತ್ತವೆ.



Click it and Unblock the Notifications