Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹೃದಯದ ಮಿಡಿತ ನಿಮ್ಮ ಹಿಡಿತದಲ್ಲಿರಲಿ

ಹೃದಯದ ಸಮಸ್ಯೆಯಿಂದ ಪಾರುಮಾಡಬಹುದಾದ ಆಹಾರ ಮತ್ತು ಅವುಗಳು ಹೇಗೆ ಸಹಕಾರಿ ಎಂದು ಇಲ್ಲಿ ನೋಡೋಣ:
* ಮೀನು: ಮೀನಿನಲ್ಲಿರುವ ಒಮೆಗಾ 3 ಆಸಿಡ್ ಹೃದಯಕ್ಕೆ ತುಂಬಾ ಅವಶ್ಯಕ. ರಕ್ತನಾಳದಲ್ಲಿರುವ ಟ್ರಗ್ಲಿಸೆರಾಯಿಡ್ಸ್ ಎಂಬ ಕೊಬ್ಬನ್ನು ಕರಗಿಸಲು ಇದು ಸಹಕಾರಿ. ಮೀನನ್ನು ತಿನ್ನುವುದರಿಂದ ಎದೆ ಉರಿ ಮತ್ತು ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು. ಸಾಲ್ಮನ್, ಶ್ರಂಪ್, ಟ್ಯೂನ, ಟ್ರಾಟ್, ಹೆರ್ರಿಂಗ್ಮ ಮ್ಯಾಜೆರಲ್, ಸಾರ್ಡೈನ್ಸ್ ಮುಂತಾದ ಜಾತಿಯ ಮೀನುಗಳ ಸೇವನೆ ಹೃದಯಕ್ಕೆ ಉತ್ತಮ. ಎಣ್ಣೆಯಲ್ಲಿ ಕರಿದ ಮೀನುಗಳನ್ನು ಹೆಚ್ಚು ತಿನ್ನಬಾರದು.
* ಕೆಂಪು ವೈನ್: ದಿನಕ್ಕೆ 5-8 ಔನ್ಸ್ ಕೆಂಪು ವೈನ್ ಸೇವನೆಯಿಂದ ಹೃದಯದ ಖಾಯಿಲೆಯನ್ನು ತಡೆಯಬಹುದು. ಕೆಂಪು ವೈನನ್ನು ದ್ರಾಕ್ಷಿಯಿಂದ ತಯಾರಿಸುವುದರಿಂದ ಅದರಲ್ಲಿರುವ HDL ಎಂಬ ಅಂಶ ಹೃದಯಕ್ಕೆ ಉಪಯೋಗ. ಇದು ರಕ್ತನಾಳ ಸರಾಗ ಮಾಡುವುದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತೆ. ವೈನ್ ಕುಡಿಯುವುದು ಬೇಡವೆಂದರೆ ಕಪ್ಪು ದ್ರಾಕ್ಷಿಯ ಜ್ಯೂಸನ್ನು ಕುಡಿಯಬಹುದು.
* ಟೊಮೊಟೊ ಮತ್ತು ತರಕಾರಿ: ಹಸಿರು ತರಕಾರಿಗಳಲ್ಲಿ ಹೃದಯಕ್ಕೆ ಉಪಯೋಗವಾಗುವ ಫೊಲೇಟ್ ಅಂಶವಿದೆ. ಪಾಲಾಕ್, ಹೂಕೋಸು, ಈರುಳ್ಳಿ ಎಲೆ ಮುಂತಾದವು ಆಹಾರದಲ್ಲಿರಲಿ. ಟೊಮೆಟೊದಲ್ಲಿ ಕೂಡ ಲೈಕೊಪೀನ್ ಎಂಬ ಅಂಶವಿದ್ದು, ಇದೂ ಕೂಡ ಹೃದಯಾಘಾತದ ಸಾಧ್ಯತೆ ಕಡಿಮೆಗೊಳಿಸುತ್ತೆ.
* ಹೆಚ್ಚು ಫೈಬರ್ ಇರಲಿ: ಎಲ್ಲ ದವಸ ಧಾನ್ಯಗಳಲ್ಲಿಯೂ ಹೆಚ್ಚಿನ ನಾರಿನಂಶವಿದ್ದು, ಕಡಿಮೆ ಕೊಬ್ಬಿನಂಶವಿರುತ್ತದೆ. ಧಾನ್ಯಗಳಲ್ಲಿರುವ ಮಿನರಲ್, ಪ್ರೊಟೀನ್ ಮತ್ತು ವಿಟಮಿನ್ ಗಳು ಹೃದಯವನ್ನು ಆರೋಗ್ಯವಾಗಿಡುತ್ತದೆ. ಓಟ್, ಬಾರ್ಲೆ, ಕೆಂಪಕ್ಕಿ, ಗೋಧಿ ಮತ್ತು ಕಾಳುಗಳಾದ ಬಟಾಣಿ, ಬೀನ್ಸ್ ನ ಸೇವನೆ ಇದ್ದರೆ ಉತ್ತಮ.
* ಕೋಕೋ ಅಥವಾ ಚಾಕಲೇಟ್: ಕೋಕೋ ಅಥವಾ ಡಾರ್ಕ್ ಚಾಕಲೇಟ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿನ ಫ್ಲೇವನಾಲ್ ಅಂಶ ರಕ್ತನಾಳವನ್ನು ಸರಾಗಗೊಳಿಸುತ್ತದೆ. ಇದು ಎದೆ ಉರಿಯನ್ನೂ ತಗ್ಗಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
