Latest Updates
-
ಬುಧ ಮಾರ್ಗಿ: ದಂಪತಿಗಳ ಜಗಳಕ್ಕೆ ಫುಲ್ ಸ್ಟಾಪ್ ಇಡಲು 10 ನಿಮಿಷದ ಮ್ಯಾಜಿಕ್ ಸೂತ್ರ! -
ಹಣದುಬ್ಬರದ ಬಿಸಿ: ₹99ರಲ್ಲಿ ಹೈ-ಪ್ರೋಟೀನ್ ಊಟ ತಯಾರಿಸುವುದು ಹೇಗೆ? ಇಲ್ಲಿದೆ ಬಜೆಟ್ ಪ್ಲಾನ್ -
ಛತ್ ಪೂಜೆ 2026: ಪಟ್ನಾ, ದೆಹಲಿ, ಮುಂಬೈನಲ್ಲಿ ಅರ್ಘ್ಯದ ನಿಖರ ಸಮಯ ಮತ್ತು ಘಾಟ್ ಸುರಕ್ಷತಾ ನಿಯಮಗಳು -
ದೆಹಲಿಯ ವಿಷಕಾರಿ ಗಾಳಿ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಈ ವ್ಯಾಯಾಮ ಮಾಡಿ! -
ಮಕ್ಕಳ ಭವಿಷ್ಯ ಭದ್ರವಾಗಿರಲಿ: ಎನ್ಪಿಎಸ್ ವಾತ್ಸಲ್ಯದಿಂದ ಪಾಕೆಟ್ ಮನಿವರೆಗೆ ಪೋಷಕರಿಗೆ ಇಲ್ಲಿದೆ ಸೂಕ್ತ ಹಣಕಾಸು ಮಾರ್ಗದರ್ಶಿ -
ಇಂದಿನಿಂದ ಹಾಲು ದುಬಾರಿ: ಅಮೂಲ್, ಮದರ್ ಡೈರಿ ಬೆಲೆ ಏರಿಕೆ; ಬಜೆಟ್ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬಿಗ್ ಬಾಸ್ ಕನ್ನಡ 13: ದೊಡ್ಮನೆಯ ಹೊಸ ಕ್ಯಾಪ್ಟನ್ ಯಶಸ್ ಕೃಷ್ಣ, ಮನೆಯಲ್ಲಿ ಬದಲಾಗುತ್ತಾ ಗೇಮ್ ಪ್ಲಾನ್? -
ದಟ್ಟ ಮಂಜು ಮತ್ತು ಮಾಲಿನ್ಯ: ಬೆಳಗಿನ ವಾಕಿಂಗ್ ಮಾಡುವವರು ಈ 12 ನಿಮಿಷದ ವ್ಯಾಯಾಮ ಮಿಸ್ ಮಾಡಬೇಡಿ! -
ಮದುವೆ ಪ್ಲಾನಿಂಗ್ ಗೊಂದಲವೇ? ಕನ್ನಡಿಗ ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಮತ್ತು ಶಾಂತಿಯುತ ಮದುವೆ ಮಾರ್ಗದರ್ಶಿ! -
ವಿಶ್ವ ಮಧುಮೇಹ ದಿನ: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ₹100ರೊಳಗೆ ಸಿಗುವ ಬೆಸ್ಟ್ ಡಯಟ್ ಟಿಪ್ಸ್!
ನೆಲ್ಲಿಕಾಯಿ ಜ್ಯೂಸ್ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಈ 8 ಪ್ರಮುಖ ಪ್ರಯೋಜನಗಳಿವೆ
ನೆಲ್ಲಿಕಾಯಿ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು, ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು ನೋಡಿ:
ನೆಲ್ಲಿಕಾಯಿ ಜ್ಯೂಸ್ನಲ್ಲಿ ವಿಟಮಿನ್ ಸಿ ಇದೆ
ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ತುಂಬಾನೇ ಪರಿಣಾಮಕಾರಿ. ಇದನ್ನು ನೀವು ಸೇವಿಸಲಾರಂಭಿಸಿದರೆ ಕಾಯಿಲೆ ಬೀಳುವುದು ಕಡಿಮೆಯಾಗುವುದು.

ಉರಿಯೂತ ಕಡಿಮೆ ಮಾಡುತ್ತದೆ
ಉರಿಯೂತದ ಸಮಸ್ಯೆ ಇರುವವರು ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಉರಿಯೂತದ ಲಕ್ಷಣಗಳು ಕಡಿಮೆಯಾಗುವುದು. ಇದು ಊತ ಹಾಗೂ ನೋವು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ನಡೆಯುತ್ತದೆ. ಇದರಿಂದ ದೇಹವು ನಾವು ತಿಂದ ಆಹಾರದಿಂದ ಪೋಷಕಾಂಶವನ್ನು ಹೀರಿಕೊಳ್ಳುವ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುತ್ತದೆ.
ಚಯಪಚಯ ಕ್ರಿಯೆ ಉತ್ತಮವಾಗಿಸಿ ತೂಕ ನಿಯಂತ್ರಿಸುತ್ತದೆ
ಚಯಪಚಯ ಕ್ರಿಯೆ ಚೆನ್ನಾಗಿ ನಡೆಯುತ್ತಿದ್ದರೆ ತೂಕ ನಿಯಂತ್ರಣದಲ್ಲಿ ಇರುತ್ತದೆ. ತೂಕವನ್ನು ನಿಯಂತ್ರಿಸುವಲ್ಲಿ ಹಾಗೂ ಒಟ್ಟುಮೊತ್ತ ಆರೋಗ್ಯವನ್ನು ಕಾಪಾಡಲು ಇದು ಸಹಾಯ ಮಾಡುತ್ತದೆ.
ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ
ನೆಲ್ಲಿಕಾಯಿ ಜ್ಯೂಸ್ ಕುಡಿದರೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ, ಇದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.
ಹೃದಯ ಆರೋಗ್ಯಕ್ಕೆ ಒಳ್ಳೆಯದು
ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತದ ಸಮಸ್ಯೆ ಹೆಚ್ಚಾಗುವುದು, ಕೊಲೆಸ್ಟ್ರಾಲ್ ನಿಯಂತ್ರಿಸುವ ಕೆಲಸವನ್ನು ನೆಲ್ಲಿಕಾಯಿ ಜ್ಯೂಸ್ ಮಾಡುತ್ತದೆ, ಇದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ದೇಹವನ್ನು ಡಿಟಾಕ್ಸ್ ಮಾಡುತ್ತದೆ
ದೇಹದಲ್ಲಿ ಕಶ್ಮಲಗಳು ಹೆಚ್ಚಾದರೆ ಇದರಿಂದ ರಕ್ತ ಮಲೀನವಾಗಿ ಕಾಯಿಲೆಗಳು ಬರುವುದು, ನೆಲ್ಲಿಕಾಯಿ ಜ್ಯೂಸ್ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಿ ದೇಹವನ್ನು ಡಿಟಾಕ್ಸ್ ಮಾಡುತ್ತದೆ.
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಮಾನಸಿಕ ಒತ್ತಡ ಎಂಬುವುದು ಪ್ರತಿಯೊಬ್ಬರಲ್ಲೂ ಇರುತ್ತದೆ, ಇದನ್ನು ಕಡಿಮೆ ಮಾಡದಿದ್ದರೆ ಆರೋಗ್ಯಕ್ಕೆ ಅಪಾಯ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಮಾನಸಿಕ ಒತ್ತಡ ಹೆಚ್ಚಿಸುವ ಹಾರ್ಮೋನ್ಗಳನ್ನು ನಿಯಂತ್ರಿಸಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
ಸೌಂದರ್ಯ ವೃದ್ಧಿಸುತ್ತದೆ
ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು, ತ್ವಚೆಯ ಹೊಳಪು ಹೆಚ್ಚಾಗುವುದು. ಆದ್ದರಿಂದ ಸೌಂದರ್ಯವರ್ಧನೆಗೆ ಕೂಡ ಇದು ಸಹಕಾರಿಯಾಗಿದೆ.
ನೆಲ್ಲಿಕಾಯಿ ಜ್ಯೂಸ್ ಮಾಡುವುದು ಹೇಗೆ?
5-6 ನೆಲ್ಲಿಕಾಯಿ
ಶುಂಠಿ
ಜೇನು
ನೀರು
ನೆಲ್ಲಿಕಾಯಿ ಬೀಜ ತೆಗೆದು ಜ್ಯೂಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಹೊರಗಡೆ ಸಿಗುವ ಆಮ್ಲ ಜ್ಯೂಸ್ಗಿಂತ ನೀವೇ ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿಯಿರಿ.
ಜೇನು, ಶುಂಠಿ, ನೆಲ್ಲಿಕಾಯಿ, ಶುಂಠಿ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು, ಶುಂಠಿ ಸ್ವಲ್ಪ ಕಡಿಮೆ ಹಾಕಿ. ಹೀಗೆ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
