ಕೋವಿಡ್ 19 ಚೇತರಿಕೆಗೆ ಸತು ಅವಶ್ಯಕ: ಸತುವಿನಂಶವಿರುವ ಟಾಪ್ 10 ಸೂಪರ್ ಫುಡ್ಸ್

ಸತು ನಮ್ಮ ದೇಹಕ್ಕೆ ಅವಶ್ಯಕವಾದ ಖನಿಜಾಂಶವಾಗಿದೆ. ಇದು ದೇಹದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇನ್ನು ಇದೀಗ ಕೋವಿಡ್‌ 19 ರೋಗ ಗುಣಪಡಿಸುವಲ್ಲಿ ಸತು ಪ್ರಮುಖ ಪಾತ್ರವಹಿಸುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಕೋವಿಡ್ 19 ಚೇತರಿಕೆಗೆ ಸತು ಅವಶ್ಯಕ: ಸತುವಿನಂಶವಿರುವ ಟಾಪ್ 10 ಸೂಪರ್ ಫುಡ್ಸ್ | Boldsky Kannada

Zinc Important To Recover From Covid 19, Here Are Zinc Rich Super Foods

ಸತು ದೇಹಕ್ಕೆ ಅವಶ್ಯಕವಾದರೂ ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ, ಇದನ್ನು ನಾವು ಆಹಾರದ ಮೂಲಕ ತೆಗೆದುಕೊಳ್ಳಬೇಕು. ಒಬ್ಬ ವ್ಯಕ್ತಿ ದಿನಕ್ಕೆ 8-10ಗ್ರಾಂ ಸತು ಸೇವಿಸಬೇಕು. ಇನ್ನು ಗರ್ಭಿಣಿಯರು ಹಾಗೂ ಎದೆ ಹಾಲುಣಿಸುತ್ತಿರುವ ತಾಯಂದಿರು ದಿನಕ್ಕೆ 12ಗ್ರಾಂನಷ್ಟು ಸತು ತೆಗೆದುಕೊಳ್ಳಬೇಕು.

ದೇಹದಲ್ಲಿ ಸತುವಿನ ಕಾರ್ಯವೇನು?

ದೇಹದಲ್ಲಿ ಸತುವಿನ ಕಾರ್ಯವೇನು?

  • ನಮ್ಮ ದೇಹದಲ್ಲಿ 300ಕ್ಕೂ ಹೆಚ್ಚು ಕಿಣ್ವಗಳಿದ್ದು ಅವು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಿಲು ಸತು ಅವಶ್ಯಕ.
  • ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸತು ಅವಶ್ಯಕ
  • ದೇಹದಲ್ಲಿ ನಾಶವಾದ ಜೀವಕೋಶಗಳು ಪುನರುತ್ಪತ್ತಿಯಾಗಲು ಹಾಗೂ ದೇಹದಲ್ಲಿ ಗಾಯ ವಾಸಿಯಾಗಲು ಸತು ಅವಶ್ಯಕ.
  • ನಾವು ವಾಸನೆ ಗ್ರಹಿಸಲು ಹಾಗೂ ಆಹಾರದ ರುಚಿ ತಿಳಿಯಲು ಸತು ಅವಶ್ಯಕ. ಆದ್ದರಿಂದಲೇ ವಾಸನೆ ಹಾಗೂ ರುಚಿ ಕಳೆದುಕೊಂಡ ಕೋವಿಡ್ 19 ರೋಗಿಗಳಿಗೆ ಸತು ಸಪ್ಲಿಮೆಂಟ್‌ ನೀಡಿದ ಒಂದೆರಡು ದಿನಗಳಲ್ಲಿ ರುಚಿ ಹಾಗೂ ವಾಸನೆ ಮರಳಿ ಬರುತ್ತದೆ.
  • ದೇಹದಲ್ಲಿ ಸೆಕ್ಸ್ ಹಾರ್ಮೋನ್‌ಗಳ ಉತ್ಪತ್ತಿಗೆ ಹಾಗೂ ಟಸ್ಟೋಸ್ಟಿರಾನ್ ಹಾಗೂ ಪ್ರೊಟ್ಯಾಕ್ಸಿನ್‌ ರಸದೂತದ ಉತ್ಪಾದನೆಗೆ ಕೂಡ ಸತು ಖನಿಜಾಂಶ ಅವಶ್ಯಕ.
  • ಇನ್ನು ರೋಗಾಣುಗಳ ವಿರುದ್ಧ ಹೋರಾಡಿ ದೇಹವನ್ನು ರಕ್ಷಣೆ ಮಾಡುವಲ್ಲಿಯೂ ಸತು ಪ್ರಮುಖ ಪಾತ್ರವಹಿಸುತ್ತದೆ.
  •  ಸತುವಿನಂಶ ಹೊಂದಿರುವ ಟಾಪ್ 10 ಆಹಾರಗಳು

    ಸತುವಿನಂಶ ಹೊಂದಿರುವ ಟಾಪ್ 10 ಆಹಾರಗಳು

    ಮಾಂಸ:

    ಅದರಲ್ಲೂ ಕೆಂಪು ಮಾಂಸದಲ್ಲಿ ಅತ್ಯಧಿಕ ಸತುವಿನಂಶವಿರುತ್ತದೆ. ಹಂದಿ ಮಾಂಸ, ಕುರಿ ಮಾಂಸ ಇವುಗಳಲ್ಲಿ ಸತುವಿನಂಶವಿರುತ್ತದೆ.

    ಈ ಮಾಂಸಗಳಲ್ಲಿ 100 ಗ್ರಾಂ ಮಾಂಸದಲ್ಲಿ 4.8ಗ್ರಾಂನಷ್ಟು ಸತುವಿನಂಶವಿರುತ್ತದೆ.

    ಸಂಸ್ಕರಿಸಿದ ಮಾಂಸ ತಿನ್ನುವುದಕ್ಕಿಂತ ತಾಜಾ ಮಾಂಸ ಖರೀದಿಸಿ ಅಡುಗೆ ಮಾಡಿ ತಿನ್ನಿ.

    ಕಪ್ಪೆಚಿಪ್ಪು

    ಕಪ್ಪೆಚಿಪ್ಪು

    ಕಪ್ಪೆ ಚಿಪ್ಪು ಇದರಲ್ಲಿ ಕೂಡ ಸತುವಿನಂಶ ಅಧಿಕವಿದೆ. 100 ಗ್ರಾಂ ಕಪ್ಪೆ ಚಿಪ್ಪಿನ ಮಾಂಸದಲ್ಲಿ 7.6ಗ್ರಾಂನಷ್ಟು ಸತುವಿನಂಶವಿರುತ್ತದೆ. ಇನ್ನು ಸೀಗಡಿಯಲ್ಲೂ ಸತುವಿನಂಶ ಅಧಿಕವಿದೆ. 100ಗ್ರಾಂ ಸೀಗಡಿ ಮೀನಿನಲ್ಲಿ 3.5 ಗ್ರಾಂನಷ್ಟು ಸತುವಿನಂಶವಿರುತ್ತದೆ.

    ಗರ್ಭಿಣಿಯರು ಕಪ್ಪೆ ಚಿಪ್ಪು ಮಾಂಸ ಸೇವಿಸುವುದಾದರೆ ಚೆನ್ನಾಗಿ ಬೇಯಿಸಿ ತಿನ್ನಬೇಕು, ಇಲ್ಲದಿದ್ದರೆ ಫುಡ್‌ ಪಾಯಿಸನ್ ಉಂಟಾಗುವ ಸಾಧ್ಯತೆ ಇದೆ.

     ಧಾನ್ಯಗಳು

    ಧಾನ್ಯಗಳು

    ಕಡಲೆ, ಬೀನ್ಸ್ ಈ ರೀತಿಯ ಕಾಳುಗಳಲ್ಲಿಯೂ ಸತುವಿನಂಶ ಅಧಿಕವಿರುತ್ತದೆ. 100 ಗ್ರಾಂ ಧಾನ್ಯಗಳಲ್ಲಿ ದಿನದಲ್ಲಿ ಅವಶ್ಯಕವಾದ ಸತುವಿನಂಶದಲ್ಲಿ ಶೇ. 12ರಷ್ಟು ಸಿಗುತ್ತದೆ. ಆದರೆ ನಮ್ಮ ದೇಹವು ಧಾನ್ಯಗಳಲ್ಲಿನ ಸತುವಿನಂಶಕ್ಕಿಂತ ಮಾಂಸಗಳಲ್ಲಿನ ಸತುವಿನಂಶ ಬೇಗನೆ ಹೀರಿಕೊಳ್ಳುತ್ತದೆ. ಮೊಳಕೆ ಬರಿಸಿದ ಕಾಳುಗಳನ್ನು ಹೆಚ್ಚಾಗಿ ತಿನ್ನಿ.

    ಬೀಜಗಳು

    ಬೀಜಗಳು

    ಇನ್ನು ಬೀಜಗಳಲ್ಲಿಯೂ ಸತುವಿನಂಶ ಅಧಿಕವಿರುತ್ತದೆ. ಕುಂಬಳಕಾಯಿ ಬೀಜ ತಿನ್ನುವುದರಿಂದ ನಿಮಗೆ ದೇಹಕ್ಕೆ ಅಗ್ಯತವಾದ ಸತುವಿನಂಶ ಸಿಗುವುದು. ನೀವು ಸಸ್ಯಾಹಾರಿಗಳದರೆ ಕುಂಬಳಕಾಯಿ ಬೀಜ ಹೆಚ್ಚಾಗಿ ತಿನ್ನಿ. 3 ಚಮಚ ಬೀಜದಲ್ಲಿ ಶೇ. 31ರಿಂದ 43ರಷ್ಟು ಅಂದರೆ 30ಗ್ರಾಂ ನಷ್ಟು ಸತುವಿನಂಶವಿರುತ್ತದೆ.

    ಇನ್ನು ಇತರ ಬೀಜಗಳನ್ನು ಸೇವಿಸುವುದು ಕುಡಿಯುವುದು ಒಳ್ಳೆಯದು.

     ನಟ್ಸ್

    ನಟ್ಸ್

    ನಟ್ಸ್‌ಗಳಲ್ಲಿ ಕೂಡ ಸತುವಿನಂಶ ಅಧಿಕವಿದೆ. ಇದರಲ್ಲಿ ಕೊಬ್ಬು, ನಾರಿನಂಶ ಹಾಗೂ ಇತರ ಪ್ರೊಟೀನ್‌, ಕೊಬ್ಬಿನಂಶವೂ ದೊರೆಯುತ್ತದೆ. ಗೋಡಂಬಿಯಲ್ಲಿ ಸತುವಿನಂಶ ಅಧಿಕವಿದೆ. ಒಂದು ಔನ್ಸ್‌ನಷ್ಟು ಸತುವಿನಲ್ಲಿ 28ಗ್ರಾಂ ಸತುವಿನಂಶವಿರುತ್ತದೆ. ಇನ್ನು ಬಾದಾಮಿ ಇತರ ನಟ್ಸ್ ಸೇವಿಸಿ.

    ನಟ್ಸ್‌ ತಿನ್ನುವುದರಿಂದ ದೇಹಕ್ಕೆ ಅಗ್ಯತವಾದ ಇತರ ಪ್ರೊಟೀನ್‌ ಅಂಶಗಳು ಕೂಡ ದೇಹಕ್ಕೆ ಸಿಗುತ್ತದೆ.

    ಹಾಲಿನ ಉತ್ಪನ್ನಗಳು

    ಹಾಲಿನ ಉತ್ಪನ್ನಗಳು

    ಹಾಲು ಹಾಗೂ ಚೀಸ್‌ ಉತ್ಪನ್ನಗಳಲ್ಲಿ ಸತುವಿನಂಶ ಅಧಿಕವಿರುತ್ತದೆ. ಇದನ್ನು ನಮ್ಮ ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ. 100 ಗ್ರಾಂ ಚೀಸ್‌ನಲ್ಲಿ ದಿನಕ್ಕೆ ಅವಶ್ಯಕವಾದ ಶೇ. 28ರಷ್ಟು ಸತುವಿನಂಶ ದೊರೆಯುತ್ತದೆ. ಒಂದು ಕಪ್ ಹಾಲಿನಲ್ಲಿ ಶೇ. 9ರಷ್ಟು ಸತುವಿನಂಶ ದೊರೆಯುತ್ತದೆ..

     ಮೊಟ್ಟೆಗಳು

    ಮೊಟ್ಟೆಗಳು

    ದಿನದಲ್ಲಿ ಒಂದು ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಅವಶ್ಯಕವಾದ ಸತುವಿನಂಶ ದೊರೆಯುವುದು. ಒಂದು ದೊಡ್ಡ ಮೊಟ್ಟೆಯಲ್ಲಿ ದಿನದಲ್ಲಿ ಅವಶ್ಯಕವಾದ ಶೇ. 5ರಷ್ಟು ಸತುವಿನಂಶವಿರುತ್ತದೆ. ಅಲ್ಲದೆ ಮೊಟ್ಟೆಯಲ್ಲಿ ಚೊಲೈನ್‌ ಅಂಶವಿರುತ್ತದೆ, ಇದು ಕೂಡ ದೇಹಕ್ಕೆ ತುಂಬಾ ಅವಶ್ಯಕ. ಪ್ರೊಟೀನ್, ವಿಟಮಿನ್ ಬಿ, ಸೆಲೆನಿಯಮ್ ಕೂಡ ದೊರೆಯುತ್ತದೆ.

    ಸಿರಿಧಾನ್ಯಗಳು

    ಸಿರಿಧಾನ್ಯಗಳು

    ಗೋಧಿ, ನವಣೆ, ಓಟ್ಸ್ ಇವುಗಳಲ್ಲಿ ಕೂಡ ಸತುವಿನಂಶ ಚೆನ್ನಾಗಿ ಇರುತ್ತದೆ. ಇದನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿ. ಇದರ ಜೊತೆಗೆ ವಿಟಮಿನ್ ಬಿ, ಮೆಗ್ನಿಷ್ಯಿಯಂ, ರಂಜಕ, ಮೆಗ್ನಿಷ್ಯಿಯಂ, ಸೆಲೆನಿಯಂ ಅಂಶವಿರುತ್ತದೆ.

    ತರಕಾರಿಗಳು

    ತರಕಾರಿಗಳು

    ಆಲೂಗಡ್ಡೆ, ಬೀನ್ಸ್ ಇವುಗಳಲ್ಲಿ ಕೂಡ ಸ್ವಲ್ಪ ಪ್ರಮಾಣದ ಸತುವಿನಂಶವಿರುತ್ತದೆ. ಮಾಂಸ ತಿನ್ನದವರು ಈ ತರಕಾರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಇವಷ್ಟೇ ಸಾಕಾಗುವುದಿಲ್ಲ. ನೀವು ಗೋಡಂಬಿ, ಬೀಜಗಳನ್ನು ತಿಂದರೆ ಮಾತ್ರ ದೇಹಕ್ಕೆ ಅವಶ್ಯಕವಾದ ಸತುವಿನಂಶ ದೊರೆಯುತ್ತದೆ.

    ಡಾರ್ಕ್ ಚಾಕೋಲೇಟ್

    ಡಾರ್ಕ್ ಚಾಕೋಲೇಟ್

    ಡಾರ್ಕ್‌ ಚಾಕೋಲೇಟ್ ಕೂಡ ಸತುವಿನಂಶ ಹೊಂದಿದ್ದು 100 ಗ್ರಾಂ ಚಾಕೋಲೆಟ್‌ನಲ್ಲಿ 3.3 ಮಿಗ್ರಾಂ ಸತು ಅಂದರೆ ದಿನಕ್ಕೆ ಅವಶ್ಯಕವಾದ ಸತುವಿನಂಶದಲ್ಲಿ ಶೇ. 33ರಷ್ಟು ಸತು ದೊರೆಯುತ್ತದೆ. ಇದರ ಜೊತೆಗೆ ದೇಹಕ್ಕೆ ಅಗ್ಯತವಾದ ಇತರ ಪ್ರೊಟೀನ್ ಹಾಗೂ ಕ್ಯಾಲೋರಿ ಕೂಡ ಡಾರ್ಕ್‌ ಚಾಕೋಲೆಟ್ ತಿನ್ನುವುದರಿಂದ ದೊರೆಯುವುದು.

English summary

Why Zinc-Rich Food Is Important to Boost Immunity & Prevent Coronavirus Infection

Zinc is important for covid 19 patient, here are to 10 zinc rich natural foods, include these foods in your daily diet...
X
Desktop Bottom Promotion