Latest Updates
-
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
Yash Diet Plan: ಫಿಟ್ನೆಸ್‌ಗಾಗಿ ರಾಕಿಂಗ್ ಸ್ಟಾರ್ ಯಶ್ ಡಯಟ್ ಹಾಗೂ ವರ್ಕೌಟ್ ಪ್ಲ್ಯಾನ್ ಹೇಗಿದೆ ಗೊತ್ತಾ?
'ನಾನು ಬರೋವರೆಗೆ ಮಾತ್ರ ಬೇರೆಯವರ ಹವಾ, ನಾನು ಬಂದ ಮೇಲೆ ನಂದೇ ಹವಾ' ಎಂದು ಯಶ್ ಸಿನಿಮಾದಲ್ಲಿ ಹೇಳಿರುವ ಡೈಲಾಗ್ ಅವರ ಸಿನಿ ಜೀವನದಲ್ಲಿ ನಿಜವಾಗಿದೆ. ಈಗ ಎಲ್ಲೆಡೆ ಯಶ್‌ದ್ದೇ ಹವಾ.. ಭಾರತದ ಸಿನಿ ರಂಗವೇ ಅವರತ್ತ ನೋಡುತ್ತಿದ್ದಾರೆ.

ಬಾಲಿವುಡ್ ಅಂದರೆ ತುಂಬಾನೇ ಶ್ರೇಷ್ಠ, ಅದರಲ್ಲಿ ನಟಿಸುವವರೇ ದೊಡ್ಡ ನಟರು ಎಂಬ ಭ್ರಮೆ ಇತ್ತು. ಆದರೆ ಆ ಭ್ರಮೆಯೆಲ್ಲಾ ಪುಡಿ-ಪುಡಿ ಮಾಡಿದ್ದು ಯಶ್. ಅಪ್ಪಟ ಕನ್ನಡದ ಹುಡುಗ ಕನ್ನಡದಲ್ಲೇ ನಟಿಸಿ ಇಡೀ ಬಾಲಿವುಡ್ ನಿಬ್ಬೆರಾಗುವಂತೆ ಮಾಡಿದ್ದಾರೆ. ಕನ್ನಡ ಎಂಬುವುದನ್ನು ಉಚ್ಛರಿಸುವ ಬದಲು ಕನ್ನಡ್ ಎಂದು ಹೇಳುತ್ತಿದ್ದವರು ಈಗ ಕನ್ನಡ ಎಂದು ಹೇಳುತ್ತಿದ್ದಾರೆ.
ಈಗ ಉತ್ತರ ಭಾರತದವರೂ ಕೂಡ ಕೆಜಿಎಫ್ ನಟನ ಬಗ್ಗೆ ಹೆಚ್ಚೆಚ್ಚು ತಿಳಿಯಲು ಬಯಸುತ್ತಿದ್ದಾರೆ.

ಯಶ್ ಫಿಟ್ನೆಸ್
ಯಶ್ ಸ್ಯಾಂಡಲ್‌ವುಡ್‌ನ ಸ್ಫುರದ್ರೂಪಿ ನಟ ವಯಸ್ಸು 35. ಇವರ ಎತ್ತರ 180ಸೆಮೀ ಅಡಿಯಲ್ಲಿ ಹೇಳುವುದಾದರೆ 5 ಅಡಿ 11 ಇಂಚು.
ಮೈ ತೂಕ 75ಕೆಜಿ.
ಆಕರ್ಷಕ ಮೈ ತೂಕಕ್ಕಾಗಿ ಯಶ್ ವರ್ಕೌಟ್ ಜೊತೆಗೆ ಆಹಾರಕ್ರಮದ ಕಡೆಗೂ ಗಮನ ನೀಡುತ್ತಾರೆ, ಅವರ ಆಹಾರಕ್ರಮ ಹೀಗಿದೆ ನೋಡಿ:

ಯಶ್ ಡಯಟ್
ಯಶ್ ಬ್ರೇಕ್‌ಫಾಸ್ಟ್
ಯಶ್ ಬ್ರೇಕ್‌ಫಾಸ್ಟ್‌ನಲ್ಲಿ ಕಾರ್ಬ್ಸ್ ಹೆಚ್ಚಿರುತ್ತದೆ. ನಟ್ಸ್ ಜೊತೆಗೆ ನಟ್‌ಮಗ್, 5 ಪೀಸ್ ಬ್ರೌನ್ ಬ್ರೆಡ್, 8 ಮೊಟ್ಟೆಯ ಬಿಳಿ ಜೊತೆಗೆ ತರಕಾರಿ ಸೇವಿಸುತ್ತಾರೆ. ಇವರ ಬ್ರೇಕ್‌ಫಾಸ್ಟ್‌ನಲ್ಲಿ ಕಲ್ಲಂಗಡಿ ಮತ್ತು ಪಪ್ಪಾಯಿ ಇರುತ್ತದೆ.
ಸ್ನ್ಯಾಕ್ಸ್
1 ಗಂಟೆಗೆ ಒಂದು ಪ್ರೊಟೀನ್ ಶೇಕ್ ಮತ್ತು ಆಯಾ ಕಾಲಕ್ಕೆ ದೊರೆಯುವ ಹಣ್ಣುಗಳು (ಸೀಸನಲ್ ಫ್ರೂಟ್ಸ್) ಸೇವಿಸುತ್ತಾರೆ.
ಲಂಚ್‌ಗೆ ಮೀನು ಹಾಗೂ ಪ್ರೊಟೀನ್ ಇರುವ ಪದಾರ್ಥಗಳನ್ನು ಸೇವಿಸುತ್ತಾರೆ.
ಸಂಜೆ ಜಿಮ್‌ಗೆ ಹೋಗುವ ಮೊದಲು
4 ಪೀಸ್ ಬ್ರೌನ್ ಬ್ರೆಡ್ ಹಾಗೂ 4 ಬಾಳೆಹಣ್ಣು ಸೇವಿಸುತ್ತಾರೆ.

ರಾತ್ರಿಯೂಟ
ಯಶ್‌ಗೆ ಮನೆಯೂಟ ತುಂಬಾನೇ ಇಷ್ಟ. ಮುದ್ದೆ ಇಷ್ಟಪಡುತ್ತಾರೆ. ಇವರು ರಾತ್ರಿಯಲ್ಲಿ ಲೈಟ್ ಆಗಿರುವ ಪ್ರೊಟೀನ್ ಅಧಿಕವಿರುವ ಆಹಾರ ಸೇವಿಸುತ್ತಾರೆ.
ಮನೆಯಲ್ಲಿ ಅವರ ಊಟವನ್ನು ರಾಧಿಕಾರವರೇ ಸಿದ್ಧಪಡಿಸುತ್ತಾರೆ.
ಯಶ್ ಅವರ ತಾಯಿ ಯಶ್‌ಗೆ ಸಿಹಿ ಅಂದರೆ ತುಂಬಾನೇ ಇಷ್ಟ, ಮೊದಲು ಡಬ್ಬ ಲೆಕ್ಕದಲ್ಲಿ ತಿನ್ನುತ್ತಿದ್ದರು. ಆದರೆ ನಟರಾದ ಮೇಲೆ ಸಿಹಿ ಹೆಚ್ಚು ತಿನ್ನುತ್ತಿಲ್ಲ. ನಾಟಿ ಕೋಳಿ ಸಾರು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.
ಯಶ್ ತಮ್ಮ ಆಹಾರಕ್ರಮದಲ್ಲಿ ಹೀಗೆ ಇರಬೇಕು ಎಂಬ ನಿಯಮ ಹಾಕಿಲ್ಲ, ಬದಲಿಗೆ ಆರೋಗ್ಯಕರ ಆಹಾರ ಸೇವಿಸಲು ಅದರಲ್ಲೂ ಮನೆಯೂಟ ಹೆಚ್ಚು ಬಯಸುತ್ತಾರೆ. ಇನ್ನು ಹಬ್ಬಗಳು, ವಿಶೇಷ ಸಂದರ್ಭಗಳಲ್ಲಿ ಡಯಟ್ ಪಕ್ಕಕ್ಕಿಟ್ಟು ಅದನ್ನು ಸವಿಯುತ್ತಾರೆ.

ಯಶ್ ರ್ಕೌಟ್
ಅವರು ವಾರದಲ್ಲಿ 6 ದಿನ ವರ್ಕೌಟ್ ಮಾಡುತ್ತಾರೆ. ಅವರ ವರ್ಕೌಟ್‌ನಲ್ಲಿ ಕಾರ್ಡಿಯೋ ಹಾಗೂ ಮಸಲ್ ಟ್ರೈನಿಂಗ್ ಎರಡೂ ಇದೆ. ಬೆಳಗ್ಗೆ 6 ಗಂಟೆಯಿಂದ ಯಶ್ ದಿನಚರಿ ಪ್ರಾರಂಭವಾಗುತ್ತದೆ. ಅವರ ಟ್ರೈನರ್ ಅನೇಕ ಬಗೆಯ ವ್ಯಾಯಾಮ ಮಾಡಿಸುತ್ತಾರೆ. ಹೊಟ್ಟೆಗೆ ಒಂದು ಗಂಟೆ ವ್ಯಾಯಾಮ ಮಾಡುತ್ತಾರೆ.
ಅವರ ವರ್ಕೌಟ್‌ನಲ್ಲಿ 30 ನಿಮಿಷ ಪವರ್ ಟ್ರೈನಿಂಗ್, ಪುಶ್ ಅಪ್, ಪುಲ್ ಅಪ್ ಇರುತ್ತದೆ. ಇದನ್ನೆಲ್ಲಾ ಬೆಳಗ್ಗೆ ಮಾಡುತ್ತಾರೆ.
ದಿನದಲ್ಲಿ ಎರಡು ಬಾರಿ ವರ್ಕೌಟ್ ಮಾಡುತ್ತಾರೆ.
ವಾರದಲ್ಲಿ ಒಮ್ಮೆ ತಮಗೆ ಇಷ್ಟವಾದ ಆಹಾರ ಸೇವಿಸುತ್ತಾರೆ.



Click it and Unblock the Notifications