For Quick Alerts
ALLOW NOTIFICATIONS  
For Daily Alerts

ವೆಜಿಟೇರಿಯನ್‌: ತೂಕ ಇಳಿಕೆಗೆ ಕೀಟೋ ಡಯಟ್‌ ರುಟೀನ್‌ ಹೇಗಿರಬೇಕು ಗೊತ್ತಾ..?

|

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ರೋಗಮುಕ್ತ ಸದೃಢ ಆರೋಗ್ಯಕ್ಕೆ ಡಯಟ್‌ನತ್ತ ವಾಲುತ್ತಿದ್ದಾರೆ. ಅದರಲ್ಲೂ ಈಚೀಚೆಗೆ ತೂಕ ಕಡಿಮೆ ಮಾಡಿಕೊಳ್ಳಬೇಕಂದುಕೊಂಡಿರೋರು, ಡಯಾಬಿಟೀಸ್‌ ಇದ್ದವರು ಕಿಟೋ ಡಯಟ್‌ ಫಾಲೋ ಮಾಡ್ತಾ ಇದ್ದಾರೆ. ಸಸ್ಯಾಹಾರಿಗಳಿಗೂ ಕೂಡಾ ಪ್ರತ್ಯೇಕವಾದ ಕಿಟೋ ಡಯಟ್‌ ಇದೆ. ಏನಿದು ಕಿಟೋ ಡಯಟ್‌, ಅದರಲ್ಲೂ ಸಸ್ಯಾಹಾರಿ ಡಯಟ್‌ನಿಂದ ಎಷ್ಟು ಪ್ರಯೋಜನಗಳಿವೆ, ಇದರಿಂದ ಅಡ್ಡಪರಿಣಾಮಗಳೇನಾದರೂ ಇದೆಯಾ, ಇದನ್ನು ಹೇಗೆ ಫಾಲೋ ಮಾಡಬೇಕು ಎನ್ನುವ ಸಂರ್ಪೂಣ ಮಾಹಿತಿ ಈ ಲೇಖನದಲ್ಲಿದೆ ನೋಡಿ.

ಸಸ್ಯಾಹಾರಿ ಕಿಟೋ ಡಯಟ್‌ ಎಂದರೆ

ಸಸ್ಯಾಹಾರಿ ಕಿಟೋ ಡಯಟ್‌ ಎಂದರೆ

ಕಿಟೋ ಡಯಟ್‌ ಎಂದರೆ ಕಡಿಮೆ ಕಾರ್ಬೋಹೈಡ್ರೇಟ್ಸ್‌ ಇರುವ ಆಹಾರ ಸೇವಿಸುವುದಾಗಿದೆ. ಪ್ರೋಟೀನ್‌ ಹಾಗೂ ಕೊಬ್ಬಿನಂಶವಿರುವ ಆಹಾರ ಪದಾರ್ಥಗಳಿಂದ ಹೆಚ್ಚು ಕ್ಯಾಲೋರಿಗಳನ್ನು ಪಡೆಯುವುದು ಹಾಗೂ ಕಾರ್ಬೋಹೈಡ್ರೇಟ್‌ ಇರುವ ಆಹಾರಗಳಿಂದ ಕಡಿಮೆ ಕ್ಯಾಲೋರಿಗಳನ್ನು ಪಡೆಯುವುದು ಈ ಡಯಟ್‌ನಲ್ಲಿ ಸೇರಿದೆ. ಮುಖ್ಯವಾಗಿ ಅಂದರೆ ಸಕ್ಕರೆ, ಸೋಡಾ, ತಂಪು ಪಾನೀಯ, ,ಬೇಕರಿ ಸಿಹಿಗಳು ಮತ್ತು ಬಿಳಿ ಬ್ರೆಡ್‌ ಮುಂತಾದ ಜೀರ್ಣಿಸಿಕೊಳ್ಳಲು ಸುಲಭವಾದ ಕಾರ್ಬೋಹೈಡ್ರೇಟ್‌ ಆಹಾರಗಳನ್ನು ಕಡಿತಗೊಳಿಸುವುದಾಗಿದೆ.

ಇಂತಹ ಕಾರ್ಬೋಹೈಡ್ರೇಟ್‌ಗಳ ಕಡಿತದಿಂದಾಗಿ ದೇಹದಲ್ಲಿ 'ಕೆಟೋಸಿಸ್‌' ಎನ್ನುವ ಚಯಾಪಚಯ ಸ್ಥಿತಿ ಉಂಟಾಗುತ್ತೆ, ಕಾರ್ಬೋಹೈಡ್ರೇಟ್‌ಗಳು ಕಡಿಮೆಯಾದಾಗ ದೇಹವು ಶಕ್ತಿಗಾಗಿ ಕೊಬ್ಬನ್ನು ಬಳಸಿಕೊಳ್ಳುತ್ತದೆ. ಈ ಕೊಬ್ಬು ಯಕೃತ್ತಿನಲ್ಲಿ ಕೀಟೋನ್‌ ಆಗಿ ಪರಿವರ್ತನೆಯಾಗಿ ಮೆದುಳಿಗೆ ಬೇಕಾಗುವ ಶಕ್ತಿಯನ್ನು ಪೂರೈಸುತ್ತದೆ. ಸರಳವಾಗಿ ಹೇಳುವುದಾದರೆ ಈ ಡಯಟ್‌ನಲ್ಲಿ ದೇಹವು ಶಕ್ತಿಗಾಗಿ ಕಾರ್ಬೋಹೈಡ್ರೇಟ್‌ ವ್ಯಯಿಸುವ ಬದಲು ಕೊಬ್ಬನ್ನು ಬಳಸಿಕೊಳ್ಳುತ್ತದೆ.

ಈ ಡಯಟ್‌ನಲ್ಲಿ ನಿಮ್ಮ ದೇಹಕ್ಕೆ ಪ್ರತಿದಿನ ಬೇಕಾಗುವ ಕ್ಯಾಲೋರಿಗಳಲ್ಲಿ ಶೇಕಡಾ 70ರಷ್ಟು ಕೊಬ್ಬಿನಿಂದಲೇ ಬರಬೇಕು. ಹಾಗಾಗಿ ಎಣ್ಣೆ, ಮಾಂಸ, ಮೀನು ಮತ್ತು ಫುಲ್‌ ಫ್ಯಾಟ್‌ ಡೈರಿ ಉತ್ಪನ್ನಗಳನ್ನು ಬಳಸಿಕೊಳ್ಲಬೇಕು. ಆದರೆ ಸಸ್ಯಾಹಾರಿಗಳು ಮಾಂಸಾಹಾರದ ಬದಲಿಯಾಗಿ ತೆಂಗಿನ ಎಣ್ಣೆ, ಮೊಟ್ಟೆ, ಬಟರ್‌ಫ್ರೂಟ್‌, ಬೀಜಗಳು, ಒಣಹಣ್ಣುಗಳನ್ನು ಸೇವಿಸಬೇಕಾಗುತ್ತೆ.

ಈ ಡಯಟ್‌ನಲ್ಲಿ ಸಂಪೂರ್ಣವಾಗಿ ಸಕ್ಕರೆಯಂಶವಿರುವ ಆಹಾರಗಳನ್ನು ಬಿಡುವುದರಿಂದ ರಕ್ತದಲ್ಲಿ ಸಕ್ಕರೆ ಮತ್ತು ಇನ್ನುಲಿನ್‌ ಮಟ್ಟದಲ್ಲಿ ಇಳಿಕೆಯಾಗುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರಿಗೆ ಡಯಾಬಿಟೀಸ್‌ ಇರುವವರಿಗೆ ನೆಚ್ಚಿನ ಡಯಟ್‌ ಇದಾಗಿದೆ.

ಕಿಟೋ ಡಯಟ್‌ ಹೇಗೆ ಪರಿಣಾಮ ಬೀರುತ್ತೆ..?

ಕಿಟೋ ಡಯಟ್‌ ಹೇಗೆ ಪರಿಣಾಮ ಬೀರುತ್ತೆ..?

ಕಿಟೋ ಡಯಟ್‌ನಲ್ಲಿ ನೀವು ದಿನಕ್ಕೆ 50 ಗ್ರಾಂಗಿಂತ ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದಾಗ, ನಿಮ್ಮ ದೇಹದಲ್ಲಿ ಗ್ಲುಕೋಸ್‌ ಅಂಶ ಖಾಲಿಯಾಗುತ್ತದೆ. ಅಲ್ಲದೇ ಸಕ್ಕರೆಯ ಅಂಶ ಬೇಗನೇ ಬಳಸಲ್ಪಡುತ್ತದೆ. ನಂತರ ದೇಹವು ಶಕ್ತಿಗಾಗಿ ಪ್ರೋಟೀನ್ ಮತ್ತು ಕೊಬ್ಬನ್ನು ವ್ಯಯಿಸಲು ಆರಂಭಿಸುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತಾ ಬಂದಾಗ ನೀವು ತೂಕವನ್ನು ತೂಕವನ್ನು ಕಳೆದುಕೊಳ್ಳಬಹುದು. ಇದನ್ನು ಕೆಟೋಸಿಸ್ ಎಂದು ಕರೆಯಲಾಗುತ್ತದೆ. ಕೆಟೋಜೆನಿಕ್ ಆಹಾರವು ಅಲ್ಪಾವಧಿಯ ಆಹಾರವಾಗಿದ್ದು ಅದು ಆರೋಗ್ಯ ಪ್ರಯೋಜನಗಳಿಂತ ಹೆಚ್ಚಾಗಿ ತೂಕ ಇಳಿಕೆಗೆ ಕಾರಣವಾಗುತ್ತದೆ.

ಯಾರು ಈ ಕಿಟೋ ಡಯಟ್‌ ಮಾಡಬಹುದು

ಯಾರು ಈ ಕಿಟೋ ಡಯಟ್‌ ಮಾಡಬಹುದು

ಹೆಚ್ಚಾಗಿ ಡಯಟ್‌ ಮಾಡೋದು ತೂಕ ಕಳೆದುಕೊಳ್ಳಲು. ಹಾಗಾಗಿ ನೀವು ತೂಕ ಕಳೆದುಕೊಳ್ಳಲು ಬಯಸಿದಲ್ಲಿ ಈ ಡಯಟ್‌ ಟ್ರೈ ಮಾಡಬಹುದು. ಅಲ್ಲದೇ ಇದು ಅಪಸ್ಮಾರದಂತಹ ಸಮಸ್ಯೆಗಳ ನಿರ್ವಹಣೆಗೂ ಸಹಾಯಕ. ಹೃದ್ರೋಗ, ಮೊಡವೆ, ಮೆದುಳಿನ ಸಮಸ್ಯೆಗಳಿರುವವರಿಗೂ ಉತ್ತಮ. ಅಲ್ಲದೇ ಮಧುಮೇಹ ಇರುವವರಿಗೂ ಸಕ್ಕರೆಯ ಅಂಶ ನಿಯಂತ್ರಣಕ್ಕೆ ಇದು ಉತ್ತಮ, ಡಯಟ್‌ ಆಗಿದೆ.

ಕಿಟೋ ಡಯಟ್‌ನ ಪ್ರಯೋಜನಗಳು

ಕಿಟೋ ಡಯಟ್‌ನ ಪ್ರಯೋಜನಗಳು

ಯಾವುದೇ ಡಯಟ್‌ ಆದರೂ ಅದರಿಂದ ಕೆಲವೊಂದಿಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಂತೆ ಕಿಟೋ ಡಯಟ್‌ನಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ನೋಡೋಣ.

ತೂಕ ಇಳಿಕೆ

ತೂಕ ಇಳಿಕೆ

ಸಸ್ಯಾಹಾರಿ ಕಿಟೋ ಡಯಟ್‌ ಆರಂಭಿಸಿದ ಮೂರರಿಂದ ಆರು ತಿಂಗಳ ಒಳಗಾಗಿ ನೀವು ಹೆಚ್ಚಿನ ತೂಕವನ್ನು ಕಳೆದುಕೊಳ್ಳಬಹುದು. ಅಧ್ಯಯನದ ಪ್ರಕಾರ 18 ವಾರಗಳಲ್ಲಿ ಮಾಂಸಾಹಾರಿಗಳಿಗಿಂತ ಸಸ್ಯಾಹರಿ ಕಿಟೋ ಡಯಟ್‌ ಅನುಸರಿಸುವವರು ಹೆಚ್ಚಿನ ತೂಕವನ್ನು ಕಳೆದುಕೊಂಡಿದ್ದಾರೆ. ಕಾರ್ಬೋಹೈಡ್ರೇಟ್‌ನ ಬದಲಾಗಿ ಕೊಬ್ಬನ್ನು ಶಕ್ತಿಯಾಗಿ ಬದಲಾಯಿಸಲು ಹೆಚ್ಚು ಕ್ಯಾಲೋರಿಗಳನ್ನು ಪಡೆದುಕೊಳ್ಳುವುದರಿಂದ ತೂಕ ಕಳೆದುಕೊಳ್ಳುವುದು ಸಹಜ. ಈ ಡಯಟ್‌ನಲ್ಲಿ ಹೆಚ್ಚು ಕೊಬ್ಬು, ಪ್ರೋಟೀನ್‌ ಭರಿತ ಆಹಾರವೇ ನಿಮ್ಮ ಹೊಟ್ಟೆತುಂಬಿಸುತ್ತದೆ. ಹಾಗಾಗಿ ಆಹಾರ ಸೇವನೆಯ ಪ್ರಮಾಣವೂ ಕಡಿಮೆಯಾಗುತ್ತದೆ. ಇದು ತೂಕ ಇಳಿಕೆಗೆ ಸಹಕಾರಿ.

ದೀರ್ಘಕಾಲೀನ ಖಾಯಿಲೆಗಳಿಂದ ರಕ್ಷಣೆ

ದೀರ್ಘಕಾಲೀನ ಖಾಯಿಲೆಗಳಿಂದ ರಕ್ಷಣೆ

ಸಸ್ಯಾಹಾರಿ ಕಿಟೋ ಡಯಟ್‌ ಹಲವಾರು ದೀರ್ಘಕಾಲೀನ ರೋಗಗಳ ಅಪಾಯವನ್ನು ಕಡಿಮೆಗೊಳಿಸುತ್ತದೆ. ಅಧ್ಯಯನದ ಪ್ರಕಾರ ಕ್ಯಾನ್ಸರ್‌, ಹೃದಯದ ಸಮಸ್ಯೆ ಹಾಗೂ ರಕ್ತದೊತ್ತಡದ ಸಮಸ್ಯೆಗಳನ್ನು ಈ ಡಯಟ್‌ನಿಂದ ಬರದಂತೆ ನೋಡಿಕೊಳ್ಳಬಹುದು. ನಮ್ಮ ದೇಹದಲ್ಲಿರುವ ಇನ್ಸುಲಿನ್‌ ಸಕ್ಕರೆಯ ಅಂಶವನ್ನು ಇಂಧನವಾಗಿ ಬಳಸಲು ಅನುವು ಮಾಡಿಕೊಡುತ್ತದೆ. ಈ ಕಿಟೋ ಡಯಟ್‌ನಲ್ಲಿ ಸಕ್ಕರೆಯಂಶದ ಆಹಾರಗಳಿಗೆ ಕಡಿವಾಣ ಹಾಕುವುದರಿಂದ ತನ್ನಿಂದತಾನೇ ಇನ್ಸುಲಿನ್‌ ಕಡಿಮೆಯಾಗುತ್ತದೆ. ಈ ಕಡಿಮೆ ಮಟ್ಟದ ಇನ್ಸುಲಿನ್ ಕ್ಯಾನ್ಸರ್‌ ವಿರುದ್ಧ ರಕ್ಷಣೆ ನೀಡುತ್ತದೆ ಹಾಗೂ ಕ್ಯಾನ್ಸರ್‌ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

ಹೆಚ್ಚು ಕೊಬ್ಬು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾರೆ. ಆದರೆ ಕಿಟೋ ಡಯಟ್‌ನಲ್ಲಿರುವ ಹೆಚ್ಚು ಕೊಬ್ಬನ್ನು ಹೊಂದಿರುವ ಆಹಾರಗಳು ಒಳ್ಳೆಯ ಕೊಲೆಸ್ಟ್ರಾಲ್‌ ಹೆಚ್ಚಿಸುತ್ತದೆ. ಈ ಆಹಾರಕ್ರಮದಿಂದ ಉಂಟಾಗುವ ಕಡಿಮೆ ಇನ್ಸುಲಿನ್‌ ನಿಮ್ಮ ದೇಹವು ಹೆಚ್ಚು ಕೊಲೆಸ್ಟ್ರಾಲ್‌ ಸಂಗ್ರಹವಾಗುವುದನ್ನು ತಡೆಯುತ್ತದೆ. ಇದರಿಂದಾಗಿ ಹೈ ಬಿಪಿ, ಹೃದಯನಾಳದಲ್ಲಿ ಬ್ಲಾಕೇಜ್, ಹೃದಯಾಘಾತ ಮತ್ತು ಇತರ ಹೃದಯ ಸಂಬಂಧೀ ಸಮಸ್ಯೆಯನ್ನು ಹೊಂದುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎನ್ನಲಾಗುತ್ತೆ.

ಮಧುಮೇಹ ನಿಯಂತ್ರಿಸುವುದು

ಮಧುಮೇಹ ನಿಯಂತ್ರಿಸುವುದು

ಕಡಿಮೆ ಕಾರ್ಬ್‌ ಆಹಾರಗಳು ರಕ್ತದಲ್ಲಿ ಸಕ್ಕರೆಯಂಶವನ್ನು ಕಡಿಮೆಗೊಳಿಸುತ್ತದೆ. ಇದಲ್ಲದೇ ಸಸ್ಯಾಹಾರಿ ಕಿಟೋ ಡಯಟ್‌ ಮಧುಮೇಹದ ಅಪಾಯವನ್ನ ಶೇಕಡಾ 53ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳುತ್ತದೆ ಒಂದು ಅಧ್ಯಯನ. ಮಧುಮೇಹ ನಿಯಂತ್ರಣಕ್ಕಾಗಿ ಹೆಚ್ಚು ಔಷಧಿಯನ್ನು ಸೇವಿಸುತ್ತಿರುವವರು ಖಂಡಿತವಾಗಿಯೂ ಈ ಸಸ್ಯಾಹಾರಿ ಕಿಟೋ ಡಯಟ್‌ ಫಾಲೋ ಮಾಡಬಹುದು.ಆದರೆ ಕಿಟೋ ಡಯಟ್‌ನಲ್ಲಿ ದೇಹವು ಶಕ್ತಿಗಾಗಿ ಕೊಬ್ಬನ್ನು ವ್ಯಯಿಸಿದಾಗ ಕಿಟೋನ್‌ ಎಂಬ ಸಂಯುಕ್ತ ಬಿಡುಗಡೆಯಾಗುತ್ತದೆ. ಇದು ಟೈಪ್‌ 1 ಡಯಾಬಿಟೀಸ್‌ ಹೊಂದಿರುವವರಿಗೆ ಈ ಕಿಟೋನ್‌ಗಳು ಅಸ್ವಸ್ಥತೆಗೆ ಕಾರಣವಾಗಬಹುದು. ಹಾಗಾಗಿ ಡಯಾಬಿಟೀಸ್‌ ಇರುವವರು ಕಿಟೋ ಡಯಟ್‌ ಪ್ರಾರಂಭಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

ನರಸಂಬಂಧೀ ಸಮಸ್ಯೆಗಳಿಗೆ ಪರಿಹಾರ

ನರಸಂಬಂಧೀ ಸಮಸ್ಯೆಗಳಿಗೆ ಪರಿಹಾರ

ಕಿಟೋ ಡಯಟ್‌ ನಿಮ್ಮ ಮೆದುಳು ಮತ್ತು ಬೆನ್ನುಮೂಳೆಯ ಮೇಲೆ ಆರೋಗ್ಯಕರ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಜೊತೆಗೆ ಇವುಗಳನ್ನು ಒಟ್ಟಿಗೆ ಜೋಡಿಸುವ ನರಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಎಪಿಲೆಪ್ಸಿ, ಮರೆವಿನ ಖಾಯಿಲೆ, ಪಾರ್ಕಿನ್ಸನ್‌ ಖಾಯಿಲೆ ಮತ್ತು ನಿದ್ರಾಹೀನತೆಗೆ ಪರಿಹಾರ ನೀಡುತ್ತೆ.

ಕಿಟೋ ಡಯಟ್‌ನಲ್ಲಿ ಈ ಆಹಾರಗಳನ್ನು ತ್ಯಜಿಸಬೇಕು

ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಯಾವುದೇ ಆಹಾರವು ಸೀಮಿತವಾಗಿರಬೇಕು. ಆದರೆ ಸಸ್ಯಾಹಾರಿ ಆಹಾರದಲ್ಲಿ ನೀವು ಎಲ್ಲಾ ರೀತಿಯ ಮಾಂಸ ಮತ್ತು ಸಮುದ್ರಾಹಾರವನ್ನು ಸೇವಿಸಬಾರದು.

ಸಕ್ಕರೆಯಂಶವಿರುವ ಆಹಾರಗಳು: ಸೋಡಾ, ಸಿಹಿ ಚಹಾ, ಸ್ಪೋರ್ಟ್ಸ್‌ ಡ್ರಿಂಕ್ಸ್, ಜ್ಯೂಸ್‌,

ಧಾನ್ಯಗಳು ಅಥವಾ ಪಿಷ್ಟಗಳು: ಬ್ರೆಡ್‌, ಅಕ್ಕಿ, ಕ್ವಿನೋವಾ, ಓಟ್ಸ್‌, ರಾಗಿ, ಬಾರ್ಲಿ,ಗೋಧಿ ಮತ್ತು ಪಾಸ್ತಾ

ಹಣ್ಣು: ಸೇಬು, ಬಾಳೆಹಣ್ಣು, ಕಿತ್ತಳೆ, ಬೆರ್ರಿ, ಕಲ್ಲಂಗಡಿ, ಏಪ್ರಿಕಾಟ್‌, ಪ್ಲಮ್ ಮತ್ತು ಪೀಚ್‌ ಹಣ್ಣು

ದ್ವಿದಳ ಧಾನ್ಯಗಳು: ಬೀನ್ಸ್, ಬಟಾಣಿ, ಮಸೂರ, ಕಡಲೆ

ಬೇರು ತರಕಾರಿಗಳು ಮತ್ತು ಗೆಡ್ಡೆಗಳು: ಆಲೂಗಡ್ಡೆ, ಸಿಹಿ ಆಲೂಗಡ್ಡೆ, ಕ್ಯಾರೆಟ್, ಪಾರ್ಸ್ನಿಪ್ಸ್, ಗೆಣಸು, ಬೀಟ್‌ರೂಟ್‌

ಕಾಂಡಿಮೆಂಟ್ಸ್ ಅಥವಾ ಸಾಸ್‌ಗಳು: ಬಾರ್ಬಿಕ್ಯೂ ಸಾಸ್, ಹನಿ ಸಾಸ್‌, ಟೆರಿಯಾಕಿ ಸಾಸ್, ಕೆಚಪ್, ಇತ್ಯಾದಿ.

ಸಂಸ್ಕರಿಸಿದ ಆಹಾರ: ಬ್ರೇಕ್‌ಫಾಸ್ಟ್ ಸೀರಿಯಲ್ಸ್, ಗ್ರಾನೋಲಾ, ಚಿಪ್ಸ್, ಕುಕೀಸ್‌, ಕ್ರ್ಯಾಕರ್ಸ್‌, ಬೇಕ್‌ ಮಾಡಿದ ತಿನಿಸು

ಸಿಹಿಕಾರಕಗಳು: ಬ್ರೌನ್‌ ಶುಗರ್‌, ಸಕ್ಕರೆ, ಜೇನುತುಪ್ಪ, ಮೇಪಲ್‌ ಸಿರಪ್‌, ಭೂ ತಾಳೆ ಮರದ ಸಿರಪ್‌

ಮದ್ಯ: ಬಿಯರ್, ವೈನ್, ಮದ್ಯ ಮಿಶ್ರ ಸಿಹಿ ಪಾನೀಯಗಳು

ಸಸ್ಯಾಹಾರಿ ಕಿಟೋ ಡಯಟ್‌ನಲ್ಲಿ ಈ ಆಹಾರಗಳಿರಬೇಕು..

ಆರೋಗ್ಯಕರ ಸಸ್ಯಾಹಾರಿ ಕಿಟೋ ಡಯಟ್‌ನಲ್ಲಿ ವಿವಿಧ ಪಿಷ್ಟರಹಿತ ತರಕಾರಿಗಳು, ಆರೋಗ್ಯಕರ ಕೊಬ್ಬು, ಪ್ರೋಟೀನ್‌ ಮೂಲಗಳಿರಬೇಕು. ಅವುಗಳು ಯಾವ ಆಹಾರದಲ್ಲಿರುತ್ತವೆ ನೋಡಿ..

ಪಿಷ್ಟರಹಿತ ತರಕಾರಿಗಳು: ಪಾಲಕ್‌, ಬ್ರೊಕೊಲಿ, ಅಣಬೆ, ಕೇಲ್‌, ಹೂಕೋಸು, ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ಮತ್ತು ಕ್ಯಾಪ್ಸಿಕಂ

ಆರೋಗ್ಯಕರ ತೈಲಗಳು: ಆಲಿವ್ ಎಣ್ಣೆ ಮತ್ತು ಆವಕಾಡೊ ಎಣ್ಣೆ, ತೆಂಗಿನ ಎಣ್ಣೆ

ಬೀಜಗಳು ಮತ್ತುಒಣ ಹಣ್ಣುಗಳು: ಬಾದಾಮಿ, ವಾಲ್ನಟ್ಸ್, ಗೋಡಂಬಿ, ಮಕಾಡೆಮಿಯಾ ನಟ್ಸ್‌, ಪಿಸ್ತಾ, ಬ್ರೆಜಿಲ್‌ ನಟ್ಸ್‌, ಚಿಯಾ ಸೀಡ್ಸ್‌, ಸೆಣಬಿನ ಬೀಜ, ಅಗಸೆ, ಕುಂಬಳಕಾಯಿ ಬೀಜ

ನಟ್‌ ಬಟರ್‌: ಬಾದಾಮಿ, ಕಡಲೆ, ಪೆಕನ್‌ ಮತ್ತು ಹೇಝಲ್‌ನಟ್‌ ಬಟರ್‌

ಫುಲ್‌ ಫ್ಯಾಟ್‌ ಡೈರಿ ಉತ್ಪನ್ನ: ಹಾಲು, ಮೊಸರು ಮತ್ತು ಚೀಸ್‌

ಪ್ರೊಟೀನ್‌: ಮೊಟ್ಟೆ, ಪನೀರ್‌, ನ್ಯಾಟೋ, ಸ್ಪಿರುಲಿನಾ ಮತ್ತು ಪೌಷಿಕಾಂಶಯುಕ್ತ ಯೀಸ್ಟ್

ಕಡಿಮೆ ಕಾರ್ಬ್‌ ಹಣ್ಣು: ಬೆರ್ರಿ, ನಿಂಬೆಹಣ್ಣು ಮಿತವಾಗಿ ಬಳಸಿ

ಆವಕಾಡೊಗಳು: ಆವಕಾಡೊಗಳು(ಬಟರ್‌ಫ್ರೂಟ್‌)

ಕಡಿಮೆ ಕಾರ್ಬ್ ತರಕಾರಿಗಳು: ಹಸಿರು ತರಕಾರಿಗಳು, ಟೊಮ್ಯಾಟೊ, ಈರುಳ್ಳಿ, ಮೆಣಸು, ಇತ್ಯಾದಿ.

ಮಸಾಲೆಗಳು: ಕರಿಮೆಣಸು, ಕೆಂಪು ಮೆಣಸು, ಅರಿಶಿನ, ಉಪ್ಪು, ಒರಿಗ್ಯಾನೋ, ರೋಸೆಮೆರಿ ಮತ್ತು ಥೈಮ್‌

ವಾರದ ಏಳು ದಿನ ನಿಮ್ಮ ಕಿಟೋ ಡಯಟ್‌ ಹೀಗಿರಲಿ..

ನೀವೂ ಕಿಟೋ ಡಯಟ್‌ ಅನುಸರಿಸುವವರಾದರೆ ನಿಮ್ಮ ಸಸ್ಯಾಹಾರಿ ಡಯಟ್‌ ಹೇಗಿರಬೇಕು, ವಾರಕ್ಕೆ ಅನುಗುಣವಾಗಿ ಒಂದು ತಿಂಗಳ ನಾಲ್ಕು ವಾರಗಳಲ್ಲಿಯಾವೆಲ್ಲಾ ಆಹಾರ ಸೇವನೆ ಮಾಡಬೇಕು ಎನ್ನುವ ಮಾಹಿತಿ ಈ ಕೆಳಗಿದೆ ನೋಡಿ.

ಮೊದಲನೇ ವಾರ

ಮುಂಜಾನೆ: ನಿಂಬೆ ರಸದೊಂದಿಗೆ 1 ಗ್ಲಾಸ್ ಬೆಚ್ಚಗಿನ ನೀರು

ಬೆಳಗಿನ ಉಪಾಹಾರ: 1 ಕಪ್ ಬುಲೆಟ್ ಕಾಫಿ ಜೊತೆಗೆ ಅರ್ಧ ಕಪ್ ಪನೀರ್ ಭುರ್ಜಿ ಒಂದು ಹಣ್ಣು

ಮಧ್ಯಾಹ್ನ ಊಟ: 1 ಕಪ್ ಸಲಾಡ್ ಜೊತೆಗೆ ಅರ್ಧ ಕಪ್ ಚೀಸ್ ಸಾಸ್ ಜೊತೆಗೆ ಒಂದೂವರೆ ಕಪ್‌ಕ್ವಿನೋವಾ ದಾಲ್ ಖಿಚಡಿ, 1 ಕಪ್ ಮೊಸರು

ಸಂಜೆ: 1 ಕಪ್ ಬುಲೆಟ್ ಕಾಫಿ ಗ್ರಿಲ್ಡ್ ಪನೀರ್ ಮತ್ತು ವಾಲ್ನಟ್

ರಾತ್ರಿ ಊಟ: 1 ಕಪ್ ಪಾಲಕ್‌ ಮಶ್ರೂಮ್ ಸೂಪ್, ಅರ್ಧ ಕಪ್ ಸೋಯಾ ಚಿಲ್ಲಿ

ಎರಡನೇ ವಾರ

ಮುಂಜಾನೆ: ಕಾಲು ಟೀಚಮಚ ದಾಲ್ಚಿನ್ನಿ ಪುಡಿಯೊಂದಿಗೆ 1 ಗ್ಲಾಸ್ ಬೆಚ್ಚಗಿನ ನೀರು

ಬೆಳಗಿನ ಉಪಾಹಾರ: 1 ಕಪ್ ಬುಲೆಟ್ ಕಾಫಿ ಜೊತೆಗೆ 1 ಕಪ್ ಗ್ರಿಲ್ಡ್ ಮಶ್ರೂಮ್ ಸಲಾಡ್

ಮಧ್ಯಾಹ್ನದ ಊಟ: 1 ಕಪ್ ಚೀಸ್ ಬ್ರೊಕೊಲಿ ಸೂಪ್, ಮೂರರಿಂದ ನಾಲ್ಕು ತುಂಡು ಸೋಯಾ ಪನೀರ್ ಪ್ಯಾಟಿ. 1 ಕಪ್ ಮೊಸರು

ಸಂಜೆ: ನಿಂಬೆಯೊಂದಿಗೆ 1 ಗ್ಲಾಸ್ ಬೆಚ್ಚಗಿನ ನೀರು

ರಾತ್ರಿಯ ಊಟ: ಅರ್ಧ ಕಪ್‌ ಕ್ರೀಮೀ ಕಪ್ಪು ಬೀನ್ ಮತ್ತು ತರಕಾರಿ ಹಾಟ್ಪಾಟ್

ಮೂರನೇ ವಾರ

ಮುಂಜಾನೆ: 1 ಗ್ಲಾಸ್ ನಿಂಬೆರಸ ಬೆರೆಸಿದ ನೀರು

ಬೆಳಗಿನ ಉಪಾಹಾರ: ಒಂದು ಲೋಟ ಮಜ್ಜಿಗೆ, ಒಂದು ಕಪ್‌ ಆಲಿವ್ ಆಯಿಲ್‌ಬೆರೆಸಿದ ತುರಿದ ಟೋಫು

ಮಧ್ಯಾಹ್ನದ ಊಟ: ಒಂದು ಕಪ್‌ ಜೀರಿಗೆ ನೀರು, ಮಶ್ರೂಮ್‌ ಆಮ್ಲೆಟ್‌, ರಾಜ್ಮಾ

ಸಂಜೆ: ನಿಂಬೆಯೊಂದಿಗೆ 1 ಗ್ಲಾಸ್ ಬೆಚ್ಚಗಿನ ನೀರು

ರಾತ್ರಿಯ ಊಟ: ಒಂದು ಕಪ್‌ ಸಲಾಡ್‌, ಒಂದು ಲೋಟ ಲೆಮನ್‌ ಜ್ಯೂಸ್‌, ಕಾಬೂಲಿ ಚನಾ

ನಾಲ್ಕನೇ ವಾರ

ಮುಂಜಾನೆ: ಜೀರಿಗೆ ಬೆರೆಸಿದ 1 ಗ್ಲಾಸ್ ಬೆಚ್ಚಗಿನ ನೀರು

ಬೆಳಗಿನ ಉಪಾಹಾರ: ಮೊಸರು, ಸ್ವಲ್ಪ ಒಣಹಣ್ಣು, ಸೋಯಾ ನಗೆಟ್ಸ್‌, ಚೀಸ್‌ ಸ್ಯಾಂಡ್‌ವಿಚ್‌

ಮಧ್ಯಾಹ್ನದ ಊಟ: ಒಂದು ಕಪ್ ಕಪ್ಪು ಚನಾ, ಕುಂಬಳಕಾಯಿ ಬೀಜ, ಮಜ್ಜಿಗೆ, ಸಲಾಡ್

ಸಂಜೆ: ಬುಲೆಟ್‌ ಕಾಫಿ ಜೊತೆಗೆ ಝುಕಿನಿ ಚಿಪ್ಸ್‌

ರಾತ್ರಿಯ ಊಟ: 4 - 5 ಮಧ್ಯಮ ಗಾತ್ರದ ಬಾರ್ಬಿಕ್ಯೂ ಪನೀರ್ ಜೊತೆಗೆ ಕ್ಯಾಪ್ಸಿಕಂ ಪೀಸ್‌ ಹಾಗೂ ಮೊಸರು ಬೆರೆಸಿದ 1 ಕಪ್ ಹುಳಿ ಎಲೆಕೋಸು ಸಲಾಡ್‌

ಕಿಟೋ ಡಯಟ್‌ನ ಅಡ್ಡಪರಿಣಾಮಗಳು

ಎಲ್ಲ ಡಯಟ್‌ ವಿಧಾನಗಳೂ ಎಲ್ಲರ ದೇಹಪ್ರಕೃತಿಗೆ ಹೊಂದಿಕೆಯಾಗದು. ಇದರಂತೆ ಕಿಟೋ ಡಯಟ್‌ ಕೆಲವರಿಗೆ ಆಗಿಬರದು. ಈ ಡಯಟ್‌ನಲ್ಲಿ ದೇಹದಲ್ಲಿ ಸಂಗ್ರಹಣೆಯಾದ ಹೆಚ್ಚುವರಿ ಕೊಬ್ಬನ್ನು ದೇಹವು ಕರಗಿಸಿಕೊಳ್ಳುವಾಗ ನಿಮ್ಮ ಮೂತ್ರಪಿಂಡಗಳ ಮೇಲೆ ಹೆಚ್ಚು ಒತ್ತಡ ಉಂಟಾಗಬಹುದು.

ಪೌಷ್ಟಿಕಾಂಶದ ಕೊರತೆ

ಬಹಳಷ್ಟು ಹಣ್ಣುಗಳು, ತರಕಾರಿಗಳು, ಬೇಳೆ ಕಾಳು, ದ್ವಿದಳ ಧಾನ್ಯಗಳನ್ನು ಕಡಿತಗೊಳಿಸುವುದರಿಂದ ನಮ್ಮ ದೇಹಕ್ಕೆ ವಿಟಮಿನ್‌ ಬಿ12, ಕಬ್ಬಿಣಾಂಶ, ಕ್ಯಾಲ್ಸಿಯಂ ಇತ್ಯಾದಿ ಜೀವಸತ್ವಗಳು ದೇಹಕ್ಕೆ ಸಿಗದಿರಬಹುದು. ಹಾಗಾಗಿ ಕಿಟೋ ಡಯಟ್‌ ಮಾಡುವುದಾದರೆ ಈ ಎಲ್ಲಾ ಅಂಶಗಳನ್ನು ಪರಿಗಣಿಸುವುದು ಮುಖ್ಯ.

ಜ್ವರ ಬರಬಹುದು

ಕೆಲವರಿಗೆ ಮಲಬದ್ಧತೆ, ತಲೆನೋವು, ವಾಕರಿಕೆ, ನಿದ್ರಾಹೀನತೆ, ಸ್ನಾಯು ಸೆಳೆತ, ಮೂಡ್‌ಸ್ವಿಂಗ್ಸ್‌, ತಲೆತಿರುಗುವಿಗೆ ಮುಂತಾದ ಅಡ್ಡಪರಿಣಾಮಗಳು ಕಿಟೋ ಡಯಟ್‌ನಿಂದ ಆಗಬಹುದು. ಹಾಗಾಗಿ ಕಿಟೋ ಡಯಟ್‌ ಜೊತೆಗೆ ಹೆಚ್ಚು ವಿಶ್ರಾಂತಿ, ವ್ಯಾಯಾಮ ಜೊತೆಗೆ ನೀರು ಕುಡಿಯುವುದು ಮುಖ್ಯ.

ಸಸ್ಯಾಹಾರಿ ಕಿಟೋ ಆಹಾರವನ್ನು ಸೇವಿಸುವಾಗ ಸಾಕಷ್ಟು ಜಾಗರೂಕತೆ ವಹಿಸಬೇಕಾಗುವುದು ಅಗತ್ಯ. ಈ ಸಸ್ಯಾಹಾರಿ ಆಹಾರ ಎಲ್ಲರಿಗೂ ಆಗಿಬರದಿರಬಹುದು, ಹಾಗಾಗಿ ಗರ್ಭಿಣಿಯರು, ಹಾಲುಡಿಸುವ ತಾಯಂದಿರು, ಕ್ರೀಡಾಪಟುಗಳು ಕಿಟೋ ಡಯಟ್‌ ಮಾಡದಿರುವುದು ಉತ್ತಮ.

ನೀವು ಮಧುಮೇಹ, ಹೃದಯ ಸಮಸ್ಯೆ ಹಾಗೂ ಅಧಿಕ ರಕ್ತದೊತ್ತಡ, ಬೊಜ್ಜು, ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಲ್ಲಿ, ಒಮ್ಮೆ ಕಿಟೋಜೆನಿಕ್‌ ಡಯಟ್‌ ಆರಂಭಿಸಿ ಮತ್ತೆ ಸಾಮಾನ್ಯ ಅಹಾರ ಕ್ರಮಕ್ಕೆ ಹೊಂದಿಕೊಳ್ಳುವಾಗ ಕಷ್ಟವಾಗಬಹುದು. ನೀವು ಯಾವುದೇ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಕಿಟೋ ಡಯಟ್‌ ಆರಂಭಿಸುವ ಮುನ್ನ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳುವುದು ಅವಶ್ಯಕ.

English summary

Keto Diet Plan for Vegetarians Know Benefits, Risks, Food Lists, and Meal Plan in Kannada

Keto Diet Plan for Vegetarians Know Benefits, Risks, Food Lists, and Meal Plan in Kannada....
X
Desktop Bottom Promotion