Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬ್ರಹ್ಮಗಂಟಿನ ಗುಂಡಮ್ಮ ಖ್ಯಾತಿಯ ಗೀತಾ ಭಟ್ 17 ಕೆಜಿ ಮೈ ತೂಕ ಇಳಿಸಿಕೊಂಡಿದ್ದಾರೆ!
ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಅವರು ಕರ್ನಾಟಕದಲ್ಲಿ ಚಿರಪರಿಚಿತ. ಸೀರಿಯಲ್ ವೀಕ್ಷಕರಿಗೆ ಮಾತ್ರವಲ್ಲ ಸಿನಿ ಪ್ರಿಯರಿಗೂ ಇವರ ಪರಿಚಯ ಇದೆ. ಲವ್ ಮಾಕ್ಟೇಲ್‌ನಲ್ಲಿ ಅಭಿನಯಿಸಿದ್ದಾರೆ, ಇನ್ನು ಕನ್ನಡ ಬಿಗ್‌ಬಾಸ್ 8ರ ಸ್ಪರ್ಧಿಯಾಗಿದ್ದು. ಆಲ್ಬಂನಲ್ಲೂ ಕಾಣಿಸಿಕೊಂಡಿದ್ದಾರೆ.
ಇವರು ಗುಂಡಮ್ಮ ಎಂದೇ ಖ್ಯಾತರಾಗಿದ್ದಾರೆ. ಅವರ ಮೈ ತೂಕ ತಕ್ಕ ಹಾಗೆಯೇ ಸೀರಿಯಲ್‌ನಲ್ಲಿ ಪಾತ್ರವಿರುವುದರಿಂದ ಜನರು ಕೂಡ ಅವರನ್ನು ಗುಂಡಮ್ಮ ಹಾಗೆಯೇ ಇಷ್ಟಪಟ್ಟಿದ್ದಾರೆ. ಆದರೆ ಅವರು ತಮ್ಮ ಅತೀ ಹೆಚ್ಚಿನ ಮೈ ತೂಕದಿಂದಾಗಿ ಸಾಕಷ್ಟು ಅವಮಾನ, ನೋವು ಕೂಡ ಅನುಭಿಸಿದ್ದಾರೆ. ಈಗ ತೂಕ ಇಳಿಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ....

ಸ್ಥೂಲಕಾಯದಿಂದ ನೋವು ಅನುಭವಿಸಿದ್ದರು
ಬಿಗ್‌ಬಾಸ್‌ನಲ್ಲೂ ಅವರ ಮೈ ತೂಕ ಹೆಚ್ಚಿರುವುದರಿಂದ ಟಾಸ್ಕ್‌ಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಇತರ ಕೆಲ ಸ್ಪರ್ಧಿಗಳು ಹೇಳಿ ನೋವುಂಟು ಮಾಡಿದ್ದನ್ನೂ ವೀಕ್ಷಕರು ನೋಡಿದ್ದಾರೆ. ಅವರು ಕೂಡ ತಮ್ಮ ಸ್ಥೂಲ ಕಾಯದ ಬಗ್ಗೆ ತುಂಬಾ ಚಿಂತೆ ಮಾಡದೆ ನಗು-ನಗುತ್ತಾಲೇ ಇರುತ್ತಿದ್ದರು.

ತೂಕ ಕಡಿಮೆ ಮಾಡಲು ಜಿಮ್ ಸೇರಿದ ಗೀತಾ ಭಟ್
ಆದರೆ ಬಿಗ್‌ಬಾಸ್‌ನಿಂದ ಬಂದ ಮೇಲೆ ಅವರು ತೂಕ ಕಡಿಮೆ ಮಾಡಲು ನಿರ್ಧಾರ ತೆಗೆದುಕೊಂಡರು. ತೂಕ ಇಳಿಕೆಗಾಗಿ ಟ್ರೈನರ್‌ನಿಂದ ಟ್ರೈನಿಂಗ್ ತೆಗೆದುಕೊಳ್ಳುತ್ತಿದ್ದು ಅದನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಾಕುತ್ತಿರುತ್ತಾರೆ. ಈಗ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ.

ಫಿಟ್ನೆಸ್ ಕಡೆ ಗೀತಾ ಭಟ್ ಜರ್ನಿ
ಇದೀಗ ಬರೋಬರಿ 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರು ಇನ್ನೂ ತೂಕ ಇಳಿಸಿಕೊಳ್ಳಬೇಕು, ಅದಕ್ಕೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
ಅವರ ಜಿಮ್ ಟ್ರೈನರ್ ಹೇಳುವಂತೆ ಅವರಿಗೆ ಫುಲ್ ಬಾಡಿ ವರ್ಕೌಟ್ ಹೆಚ್ಚಾಗಿ ಮಾಡಿಸುತ್ತಿದ್ದಾರಂತೆ. ಗೀತಾ ಭಾರತಿ ಭಟ್ ಕೂಡ ತುಂಬಾ ಖುಷಿ-ಖುಷಿಯಾಗಿ ವೇಯ್ಟ್ ಲಾಸ್ ಜರ್ನಿ ಮುಂದುವರೆಸಿದ್ದಾರೆ.

ಫಿಟ್ನೆಸ್ ಮೈಕಟ್ಟು ಹೆಚ್ಚಿಸುತ್ತೆ ಆತ್ಮವಿಶ್ವಾಸ
ಮೈ ತೂಕ ಹೆಚ್ಚಾದರೆ ಒಂದು ರೀತಿ ಆತ್ಮವಿಶ್ವಾಸ ಕುಗ್ಗುವುದು, ಆದರೆ ಸರಿಯಾದ ಮೈಕಟ್ಟು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತೆ. ಗೀತಾ ಅವರಿಗೆ ಕಡಿಮೆಯಾಗುತ್ತಿರುವ ಮೈ ತೂಕ ಖುಷಿ ತಂದಿದೆ. ಪ್ರಯತ್ನಪಟ್ಟರೆ ಮೈ ತೂಕ ಕರಗಿಸಲು ಸಾಧ್ಯ ಎಂದು ಇತರರಿಗೆ ಸ್ಪೂರ್ತಿಯಾಗಿದ್ದಾರೆ ಗೀತಾ ಭಾರತಿ ಭಟ್.



Click it and Unblock the Notifications
