Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ಯಾಲೋರಿ ಕರಗಿಸಲು ಅಕ್ಕಿ ತೆಂಗಿನೆಣ್ಣೆಯ ನೈಸರ್ಗಿಕ ರೆಸಿಪಿ
ಸಾಮಾನ್ಯವಾಗಿ ದೇಹದ ತೂಕ ನಮ್ಮನ್ನು ಕೀಳರಿಮೆಯಿಂದ ಬಳಲುವಂತೆ ಮಾಡುತ್ತದೆ. ನಾವು ಇಷ್ಟಪಡುವ ದಿರಿಸು ನಮಗೆ ತೊಡಲು ಆಗದೇ ಇರುವುದು, ಸಾರ್ವಜನಿಕವಾಗಿ ತೂಕದ ಬಗ್ಗೆ ಮುಜುಗರವನ್ನು ಅನುಭವಿಸುವುದು, ಸ್ಥೂಲಕಾಯದಿಂದ ಉಂಟಾಗುವ ಹಲವಾರು ಕಾಯಿಲೆಗಳು ನಮ್ಮನ್ನು ಜರ್ಝರಿತರನ್ನಾಗಿಸುವುದು ನಿಜ.
ಹೀಗೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಸ್ಥೂಲಕಾಯತೆಯು ನಮಗೆ ತಂದೊಡ್ಡುತ್ತದೆ. ದೇಹದ ತೂಕವನ್ನು ಮತ್ತು ಬಿಎಮ್ಐ ಅನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಆವಶ್ಯಕವಾಗಿರುವುದರಿಂದ ಇದು ಆರೋಗ್ಯಕರ ದೇಹಕ್ಕೆ ಒಂದು ಉತ್ತಮ ಬುನಾದಿ ಎಂದೆನಿಸಿದೆ.
ನಿಯಮಿತವಾದ ಆಹಾರ ಪದ್ಧತಿ ಮತ್ತು ವ್ಯಾಯಾಮ ಆರೋಗ್ಯಕರ ತೂಕವನ್ನು ದಯಪಾಲಿಸುವಲ್ಲಿ ಸಹಾಯಕವಾಗಿದೆ. ದೇಹದ ತೂಕ ಅತಿಯಾಯಿತು ಎಂದಾದಲ್ಲಿ ರೋಗಗಳು ಹೇಳದೆಯೇ ನಮ್ಮ ದೇಹದಲ್ಲಿ ನೆಲೆಯೂರಿಬಿಡುತ್ತವೆ. ದೇಹದಲ್ಲಿ ಕೊಬ್ಬು ಶೇಖರವಾಗುವುದು ಬಹುಬೇಗ ನಡೆಯುವಂತಹ ಕ್ರಿಯೆಯಾಗಿದ್ದು ಇದನ್ನು ಕರಗಿಸುವುದು ಅಷ್ಟೇ ಕಷ್ಟದ ಮಾತಾಗಿದೆ.

ದೇಹದ ಕೊಬ್ಬನ್ನು ಕರಗಿಸಲು ವೈದ್ಯಕೀಯ ವಿಧಾನಗಳಿಗೆ ಮುಗಿಬೀಳುವುದಕ್ಕಿಂತ ಆರೋಗ್ಯಕರ ನೈಸರ್ಗಿಕ ವಿಧಾನವನ್ನೇ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಆ ವಿಧಾನವನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ. ಕ್ಯಾಲೋರಿ ಕರಗಿಸುವ ರಹಸ್ಯ, ವಿಚಿತ್ರವಾದರೂ ಇದು ಸತ್ಯ!
ಅಕ್ಕಿ ಮತ್ತು ತೆಂಗಿನೆಣ್ಣೆ ರೆಸಿಪಿಯೇ ಈ ವಿಧಾನವಾಗಿದ್ದು ಇದು ನೈಸರ್ಗಿಕವಾಗಿ ದೇಹದ ಕೊಬ್ಬು ಕರಗಿಸುವ ಅಸ್ತ್ರವಾಗಿದೆ. ಈ ರೆಸಿಪಿಯನ್ನು ತಯಾರಿಸುವ ವಿಧಾನವನ್ನು ಕೆಳಗೆ ನಾವು ನೀಡುತ್ತಿದ್ದು ಇದು ನಿಮ್ಮ ದೇಹದಲ್ಲಿ ಮಾಡುವ ಮ್ಯಾಜಿಕ್ ಅನ್ನು ನೀವೇ ಅರಿತುಕೊಳ್ಳಬಹುದಾಗಿದೆ.
*ತೆಂಗಿನೆಣ್ಣೆ - 1 ಚಮಚ
*ಅಕ್ಕಿ - 1/2 ಕಪ್
ಇತ್ತೀಚಿನ ಸಂಶೋಧನೆಯ ಪ್ರಕಾರ, ಅಕ್ಕಿ ಮತ್ತು ತೆಂಗಿನೆಣ್ಣೆ ಕ್ಯಾಲೋರಿಗಳನ್ನು ಕರಗಿಸುವಲ್ಲಿ ಸಹಾಯ ಮಾಡಲಿದೆ ಎಂದಾಗಿದೆ ಅಂತೆಯೇ ಕೊಬ್ಬನ್ನು ಕರಗಿಸುತ್ತದೆ. ಸಿದ್ಧತಾ ಸಮಯದಲ್ಲಿ ಅಕ್ಕಿಯ ಕಣಗಳ ನಡುವೆ ತೆಂಗಿನೆಣ್ಣೆ ಪ್ರವೇಶ ಮಾಡುತ್ತದೆ. ಈ ಮಿಶ್ರಣವು ಜೀರ್ಣಕ್ರಿಯೆ ಪ್ರಕ್ರಿಯೆಯು ತೂಕಕ್ಕೆ ಕಾರಣವಾಗಿರುವ ನಿರ್ದಿಷ್ಟ ಸಕ್ಕರೆ ಮತ್ತು ಕೊಬ್ಬಿಗೆ ಇದು ತಡೆಯೊನ್ನುಡ್ಡುತ್ತದೆ.
ಅಕ್ಕಿ ಮತ್ತು ತೆಂಗಿನೆಣ್ಣೆ ಮಿಶ್ರಣವು ನಿಮ್ಮ ಜೀರ್ಣಕ್ರಿಯೆಯ ವ್ಯವಸ್ಥೆ ಸಾಮರ್ಥ್ಯವನ್ನು ವಿಭಾಗಿಸಿ ಕೊಬ್ಬನ್ನು ಕರಗಿಸುವಂತೆ ಮಾಡುತ್ತದೆ ಇದರಿಂದ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.ಈ ಕ್ರಿಯೆಯು ಕ್ಯಾಲೋರಿಗಳನ್ನು ಕರಗಿಸಲು ನಿಮಗೆ ಸಹಾಯ ಮಾಡಿ ದೇಹದಲ್ಲಿರುವ ಕೊಬ್ಬನ್ನು ನಿವಾರಿಸುತ್ತದೆ. ಐಸ್ ತಿನ್ನುವುದರಿಂದ ಕ್ಯಾಲರಿ ಕಡಿಮೆಯಾಗುತ್ತಾ?
ಇದನ್ನು ಮಾಡುವುದು ಹೇಗೆ?
*ಇದಕ್ಕೆ ಒಂದು ಚಮಚದಷ್ಟು ತೆಂಗಿನೆಣ್ಣೆಯನ್ನು ಹಾಕಿ.
*ಚೆನ್ನಾಗಿ ಕಲಸಿ, ಮಿಶ್ರಣಕ್ಕೆ 1/2 ಕಪ್ನಷ್ಟು ಅಕ್ಕಿಯ ಕಾಳುಗಳನ್ನು ಬೆರೆಸಿ
*ಇನ್ನು ಅಕ್ಕಿ ಚೆನ್ನಾಗಿ ಬೇಯುವವರೆಗೆ ನೀರು ಕುದಿಯಲಿ
*ಇದೀಗ ಪಾತ್ರೆಗೆ ಮಿಶ್ರಣವನ್ನು ಹಾಕಿ ಮತ್ತು 12 ಗಂಟೆಗಳ ಕಾಲ ಇದನ್ನು ಫ್ರಿಡ್ಜ್ನಲ್ಲಿರಿಸಿ.
*ಖಾಲಿ ಹೊಟ್ಟೆಗೆ ಮಿಶ್ರಣವನ್ನು ಸೇವಿಸಿ
*ಫಲಕಾರಿ ಫಲಿತಾಂಶಗಳನ್ನು ಪಡೆದುಕೊಳ್ಳಲು ಈ ಕ್ರಿಯೆಯನ್ನು 15 ದಿನಗಳಿಗೊಮ್ಮೆ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


