Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೂಕ ಇಳಿಸಿಕೊಳ್ಳಲು ನೈಸರ್ಗಿಕ ಜ್ಯೂಸ್, ಪ್ರಯತ್ನಿಸಿ ನೋಡಿ
ದಢೂತಿ ದೇಹಿಗಳನ್ನು ನೋಡಿದರೆ ಯಾಕಪ್ಪಾ ಇವರು ಇಷ್ಟು ತಿಂದು ದೇಹ ಬೆಳೆಸಿಕೊಂಡಿದ್ದಾರೆ ಎಂದು ನಮಗೆ ಅನಿಸಬಹುದು. ಆದರೆ ಅನುವಂಶೀಯತೆ, ಕೆಲವೊಂದು ವೈದ್ಯಕೀಯ ಚಿಕಿತ್ಸೆ ಹಾಗೂ ಕೆಟ್ಟ ಆಹಾರ ಕ್ರಮದಿಂದ ದಢೂತಿ ದೇಹ ಬೆಳೆಸಿಕೊಳ್ಳುತ್ತಾರೆ. ಕೆಲವರು ಆರಂಭದಲ್ಲೇ ನಿಯಂತ್ರಣ ಮಾಡಿದರೆ ಇದನ್ನು ತಡೆಯಬಹುದು. ಕೆಲವರು ಮತ್ತಷ್ಟು ಬಾಯಿಗೆ ಹಾಕಿಕೊಂಡು ಚಪ್ಪರಿಸಿ ತಮ್ಮ ದೇಹದವನ್ನು ತಾವೇ ವಿಕಾರಗೊಳಿಸುತ್ತಾರೆ.
ದೇಹದ ಬೆಳೆಸುವುದು ಕಷ್ಟವಲ್ಲದರೆ ಇರಬಹುದು. ಅದನ್ನು ಮತ್ತೆ ಹಿಂದಿನ ಸ್ಥಿತಿಗೆ ತರುವುದು ಮಾತ್ರ ತುಂಬಾ ತ್ರಾಸದಾಯಕ. ತೂಕ ಕಳೆದುಕೊಳ್ಳಲು ಕಠಿಣ ಆಹಾರಕ್ರಮ ಮತ್ತು ವ್ಯಾಯಾಮ ಮಾಡುತ್ತಿರಬೇಕು. ಇದು ಕೆಲವರಿಗೆ ಕಷ್ಟವಾಗಬಹುದು. ಇಂತವರಿಗಾಗಿ ನಾವು ಒಂದು ಪಾನೀಯವನ್ನು ನಿಮಗಾಗಿ ತಂದಿದ್ದೇವೆ. ಇದನ್ನು ಕುಡಿದರೆ ದೇಹದ ತೂಕವನ್ನು ನೈಸರ್ಗಿಕವಾಗಿ ಕಳೆದುಕೊಳ್ಳಬಹುದು. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?
ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹದ ಕೊಬ್ಬನ್ನು ಕರಗಿಸುತ್ತದೆ. ಈ ಪಾನೀಯವನ್ನು ಮಾಡಲು ಬೇಕಾಗಿರುವ ಮುಖ್ಯ ಮೂರು ಸಾಮಗ್ರಿಗಳೆಂದರೆ ನಿಂಬೆ, ಸೌತೆಕಾಯಿ ಮತ್ತು ಪುದೀನಾ. ಸೌತೆಕಾಯಿಯಲ್ಲಿ ಉರಿಯೂತ ಶಮನಕಾರಿ ಮತ್ತು ಯೂರಿಕ್ ಆ್ಯಸಿಡ್ ನ್ನು ಕಡಿಮೆ ಮಾಡುವ ಗುಣಗಳಿವೆ.

ಲಿಂಬೆ ಹಣ್ಣು ಆ್ಯಸಿಡ್ ಒಳಗೊಂಡಿರುವ ಹಣ್ಣು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಪಡಿಸುವುದು ಮತ್ತು ಕೊಬ್ಬನ್ನು ಕರಗಿಸುವುದು. ಪುದೀನಾವು ಪೋಷಕಾಂಶಗಳನ್ನು ಹೀರಿಕೊಂಡು ಹೊಟ್ಟೆಯ ಆ್ಯಸಿಡ್ ನ್ನು ಕಡಿಮೆ ಮಾಡುವುದು. ಇದೆಲ್ಲವೂ ಜೀರ್ಣಕ್ರಿಯೆಗೆ ಉತ್ತಮವಾದ ಸಾಮಗ್ರಿಗಳು. ಇವುಗಳು ಜತೆಯಾದಾಗ ಅದ್ಭುತವಾದ ಕೆಲಸವನ್ನೇ ಮಾಡುತ್ತದೆ. ಇವು ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕಿ ತೂಕ ಕಳೆದುಕೊಳ್ಳುವ ಪ್ರಕ್ರಿಯೆಗೆ ನೆರವಾಗುವುದು.
ಈ ಪಾನೀಯ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ತಿಳಿದುಕೊಳ್ಳಿ
*ಬೇಕಾಗುವ ಸಾಮಗ್ರಿಗಳು
*ಅರ್ಧ ಸೌತೆಕಾಯಿ
*ಒಂದು ಲಿಂಬೆ
*10 ಪುದೀನಾ ಎಲೆಗಳು
*ಒಂದು ಲೀಟರ್ ನೀರು ಮೈ ತೂಕ ಹೆಚ್ಚಾಗಬೇಕೆ? ಈ ಆಹಾರ ತಿನ್ನಿ
ತಯಾರಿಸುವ ವಿಧಾನ
*ಅರ್ಧ ಸೌತೆಕಾಯಿ, ಹತ್ತು ಪುದೀನಾ ಎಲೆ ಮತ್ತು ಒಂದು ಲೀಟರ್ ನೀರನ್ನು ಜತೆಯಾಗಿ ಜ್ಯೂಸರ್‌ಗೆ ಹಾಕಿ ರುಬ್ಬಿ. ಇದಕ್ಕೆ ಲಿಂಬೆ ಹಣ್ಣಿನ ನೀರನ್ನು ಹಾಕಿ. ಕೆಲವೊಂದು ಐಸ್ ತುಂಡುಗಳನ್ನು ಹಾಕಿದರೆ ಕುಡಿಯಲು ತಂಪಾಗಿರುವುದು.
*ನಿಯಮಿತವಾಗಿ ಕುಡಿದರೆ ನಿಮಗೆ ಫಲಿತಾಂಶ ಸಿಗಲಿದೆ. ನಿಮ್ಮ ನಿತ್ಯ ಆಹಾರಕ್ರಮದಲ್ಲಿ ಇದನ್ನು ಸೇರ್ಪಡೆಗೊಳಿಸಿದರೆ ನೈಸರ್ಗಿಕವಾಗಿ ತೂಕ ಕಳೆದುಕೊಳ್ಳಲು ಇದು ನೆರವಾಗುವುದು. ಇದನ್ನು ತಯಾರಿಸುವುದು ಸುಲಭ ಮತ್ತು ಕುಡಿಯಲು ಚೆನ್ನಾಗಿರುವುದರಿಂದ ತೂಕ ಕಳೆದುಕೊಳ್ಳಲು ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

