Latest Updates
-
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ
ಸಮಯ ಹಾಳು ಮಾಡುವ 6 ಜಿಮ್ ವರ್ಕ್‌ಔಟ್‍ಗಳು
ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿ ಜೀವಿಗು ದಿನಕ್ಕೆ 24 ಗಂಟೆಗಳು ಅಂದರೆ ಕೇವಲ 1440 ನಿಮಿಷಗಳು ಮಾತ್ರ ಸಮಯ ಸಿಗುತ್ತದೆ. ಅದರಲ್ಲಿ ನಾವು ಬದುಕಲು ಊಟ,ತಿಂಡಿ, ತೀರ್ಥ, ನಿದ್ದೆ, ಕುಟುಂಬ ಮತ್ತು ಕೆಲಸ ಎಲ್ಲವನ್ನು ಮಾಡಬೇಕು. ಈ ಎಲ್ಲಕ್ಕಿಂತ ಮುಖ್ಯವಾಗಿ ಇದೆಲ್ಲ ಮಾಡಲು ಆರೋಗ್ಯವಂತರಾಗಿರುವ ಸಲುವಾಗಿ ಅದನ್ನು ಕಾಪಾಡಿಕೊಳ್ಳಬೇಕು. ಓಹ್! ಎಷ್ಟು ಕೆಲಸ ಮಾಡಬೇಕು!. ಇಷ್ಟೆಲ್ಲ ಕೆಲಸ ಕಾರ್ಯಗಳನ್ನು ನಾವೆಲ್ಲ ಇಟ್ಟುಕೊಂಡಾಗ ಇದರಲ್ಲಿ ಒಂದು ನಿಮಿಷವು ಪೋಲಾಗದಂತೆ ಕಾಪಾಡಿಕೊಳ್ಳಬೇಕು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಹಿಳೆಯ ಆರೋಗ್ಯದಲ್ಲಿ ಜಿಮ್ ನ ಪಾತ್ರ
ಅದರಲ್ಲಿ ಇತ್ತೀಚೆಗೆ ಜಿಮ್ ವರ್ಕ್‍ಔಟ್ ಎನ್ನುವುದು ನಮ್ಮ ಜೀವನದ ಒಂದು ಅಂಗವಾಗುತ್ತಿರುವ ಸಂದರ್ಭದಲ್ಲಿ ಅದರ ಸಮಯ ಮತ್ತು ಗುಣಮಟ್ಟದ ಬಗ್ಗೆ ಸ್ವಲ್ಪ ಗಮನ ನೀಡಬೇಕಾದುದು ಅತ್ಯಾವಶ್ಯಕ. ಈ ಆಧುನಿಕ ಜಗತ್ತಿನಲ್ಲಿ ಒಂದು ನಿಮಿಷ ವ್ಯರ್ಥ ಮಾಡಿದರು, ಅದು ಎಷ್ಟೋ ರೂಪಾಯಿಗೆ ಸಮ, ಅದಕ್ಕಾಗಿ ಜಿಮ್ ವರ್ಕ್ಔಟ್ ಮಾಡುವಾಗ ಸಮಯ ವ್ಯರ್ಥವಾಗದಂತೆ ಕಾಪಾಡುವ ಕೆಲವೊಂದು ಸಲಹೆಗಳನ್ನು ನಾವಿಲ್ಲಿ ನೀಡಿದ್ದೇವೆ ಓದಿಕೊಳ್ಳಿ;-
ಈ ಆಧುನಿಕ ಜಗತ್ತಿನಲ್ಲಿ ಕೆಲಸದ ಒತ್ತಡದಲ್ಲಿ ನಮಗೆ ವ್ಯಾಯಾಮ ಮಾಡುವ ಪುರುಸೊತ್ತು ದೊರೆಯುವುದೇ ದುರ್ಲಭ. ಅದಕ್ಕಾಗಿ ನಮ್ಮಲ್ಲಿ ಕೆಲವರು ನಿದ್ದೆಯನ್ನು ಕಡಿಮೆ ಮಾಡಿ, ಅಕ್ಕ ಪಕ್ಕದಲ್ಲಿರುವ ಜಿಮ್‍ಗಳಿಗೆ ಹೋಗಿ ಒಂದು ಗಂಟೆ ಜಿಮ್ ವರ್ಕ್‍ಔಟ್ ಮಾಡಿ ಬರುತ್ತಾರೆ. ಆದರೆ ಅವರು ಇಲ್ಲಿ ತಮ್ಮನ್ನು ತಾವು ತಪ್ಪು ತಪ್ಪಾದ ಅಧಿಕವಾದ ಮೈ ಸಡಿಲಗೊಳಿಸಿಕೊಳ್ಳುವ ವ್ಯಾಯಾಮಗಳು, ಅನಗತ್ಯವಾದ ವ್ಯಾಯಾಮಗಳು, ಭಾರ ಎತ್ತುವ ವ್ಯಾಯಾಮಕ್ಕೆ ಮೊದಲು ಅನಗತ್ಯವಾದ ಸ್ಟ್ರೆಚ್ಚಿಂಗ್ ಮತ್ತು ಅವುಗಳ ಮಧ್ಯೆ ಸುಧಾರಿಸಿಕೊಳ್ಳುವ ಸಲುವಾಗಿ ಕೆಲ ನಿಮಿಷಗಳು ಕುಳಿತುಕೊಳ್ಳುವುದು ಮಾಡುತ್ತಾರೆ. ಇದರಿಂದ ನಿಮ್ಮ ದೇಹದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವುದರ ಜೊತೆಗೆ, ನಿಮ್ಮ ಅಮೂಲ್ಯ ಸಮಯ ಸಹ ಹಾಳಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಕಿಕ್ ಮಾಡಿ: ಪುರುಷರ ಜಿಮ್ ಬ್ಯಾಗ್ ನಲ್ಲಿ ಇರಬೇಕಾದ ವಸ್ತುಗಳಿವು
ಜಿಮ್‍ಗೆ ಹೋಗಿ ಒಂದು ಗಂಟೆ ವರ್ಕ್ಔಟ್ ಮಾಡುವ ಜನರು, ಆ ಒಂದು ಗಂಟೆಯಲ್ಲಿ ಕೇವಲ 25-30 ನಿಮಿಷಗಳ ಕಾಲ ಮಾತ್ರ ವ್ಯಾಯಾಮ ಮಾಡುತ್ತಾರೆ ಎಂಬುದು ಬಹುತೇಕ ಫಿಟ್‍ನೆಸ್ ತರಬೇತಿದಾರರ ಅಭಿಪ್ರಾಯವಾಗಿದೆ. ಆದ್ದರಿಂದ ನಿಮ್ಮ ವರ್ಕ್‍ಔಟ್‍ನಲ್ಲಿ ನಿಮ್ಮ ಸಮಯವನ್ನು ಹಾಳು ಮಾಡುವ ಚಟುವಟಿಕೆಗಳನ್ನು ತೊಡೆದು ಹಾಕಿ ಈ ಅವಧಿಯನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು ಆಲೋಚಿಸಿ. ಅದು ಹೇಗೆ ಎಂದು ಮುಂದೆ ಓದಿ ತಿಳಿದುಕೊಳ್ಳಿ.

ಕೇವಲ ಯಂತ್ರಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವುದು.
ಯಂತ್ರಗಳ ಸಹಾಯದಿಂದ ವರ್ಕ್‍ಔಟ್ ಮಾಡುವುದು ಕೆಟ್ಟದ್ದಲ್ಲ. ಆದರೂ ಸಹ ನಿಮ್ಮ ಎಲ್ಲ ಗಮನವನ್ನು ಈ ಯಂತ್ರದ ಮೇಲೆ ಬಿಟ್ಟರೆ ಮಾತ್ರ, ನಿಮ್ಮ ಸಮಯ ಹಾಳಾಗಿ ಹೋಗುತ್ತದೆ. ಯಂತ್ರದ ಸಹಾಯದಿಂದ ಮಾಡುವ ವರ್ಕ್‍ಔಟ್ ಫ್ರೀ ಸ್ಟೈಲ್ ವ್ಯಾಯಾಮದಿಂದ ದೊರೆಯುವ ಅರ್ಧದಷ್ಟು ಪ್ರಯೋಜನವನ್ನು ಸಹ ನಿಮಗೆ ನೀಡಲಾರದು ಎಂದರೆ ನೀವು ನಂಬಲೇಬೇಕು. ತಙ್ಞರ ಪ್ರಕಾರ ಈ ಯಂತ್ರಗಳು ನಿಮ್ಮ ವರ್ಕ್‍ಔಟಿನ ಕಡೆಯ ಹಂತದಲ್ಲಿ ಹೆಚ್ಚಿಗೆ ಉಪಯೋಗಕ್ಕೆ ಬರುತ್ತವಂತೆ. ಆಗ ನಿಮ್ಮ ಸ್ನಾಯುಗಳು ಹೆಚ್ಚು ಸಡಿಲಗೊಂಡಿರುತ್ತವೆ ಮತ್ತು ಫ್ರೀ ವೇಯ್ಟ್ ತಂತ್ರದ ಮೂಲಕ ನೀವು ಮತ್ತಷ್ಟು ಭಾರವನ್ನು ಎತ್ತುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ.
ಬಹುಶಃ ಈ ಎಲ್ಲಾ ಕಾರಣಗಳಿಂದಾಗಿಯೇ ವಿದ್ಯುತ್ ಜಮ್‍ವಾಲ್, ವರುಣ್ ಧವನ್ ಮತ್ತು ಫಾರ‍್ಹನ್ ಅಖ್ತರ್‌ರವರಂತಹ ಪ್ರಸಿದ್ಧ ತಾರೆಯರು ತಮ್ಮ ಜಿಮ್ ವರ್ಕ್‍ಔಟ್ ಜೊತೆಗೆ ಯೋಗ,ಮಾರ್ಷಿಯಲ್ ಆರ್ಟ್ಸ್ ಮತ್ತು ಟಿಆರ್‌ಎಕ್ಸ್( ಇದೊಂದು ಹಗ್ಗದ ಮೂಲಕ ಮಾಡುವ ವ್ಯಾಯಮ; ಇದರಲ್ಲಿ ತರಬೇತಿ ದಾರರು ಮೇಲಿನಿಂದ ಹಗ್ಗವನ್ನು ಇಳಿ ಬಿಟ್ಟು, ವ್ಯಾಯಾಮ ಮಾಡುವವರನ್ನು ಗುರುತ್ವಾಕರ್ಷಣೆಯ ಮತ್ತು ದೇಹದ ತೂಕಕ್ಕೆ ವಿರುದ್ಧವಾಗಿ ವ್ಯಾಯಾಮ ಮಾಡಲು ಸಹಕರಿಸುತ್ತಾರೆ) ಅಥವಾ ವಿಐಪಿಆರ್‌ನಂತಹ ( ಇದೊಂದು ಒಂದು ಮೀಟರ್ ಉದ್ದ ಮತ್ತು 10 ರಿಂದ 20 ಕಿ.ಗ್ರಾಂ ತೂಕವಿರುವ ರಬ್ಬರ್ ದಿಮ್ಮಿ. ಇದನ್ನು ಎತ್ತಬಹುದು, ಎಳೆದುಕೊಂಡು ಹೋಗಬಹುದು, ತಿರುವಿ ಹಾಕಬಹುದು ಮತ್ತು ಅದರ ಮೇಲೆ ನಿಂತು ಇಡೀ ದೇಹಕ್ಕೆ ವ್ಯಾಯಾಮವನ್ನು ಒದಗಿಸಬಹುದು) ಫ್ರೀ ಸ್ಟೈಲ್ ವ್ಯಾಯಾಮಗಳನ್ನು ಸಹ ಮಾಡುತ್ತಾರೆ.
ಬಹುತೇಕ ಮಂದಿ ಯಂತ್ರಗಳ ಸಹಾಯದಿಂದ ವರ್ಕ್‍ಔಟ್ ಮಾಡಿದರೆ ಮಾತ್ರ ಪ್ರಯೋಜನಕ್ಕೆ ಬರುತ್ತದೆ ಎಂದು ತಪ್ಪಾಗಿ ಭಾವಿಸಿದ್ದಾರೆ.

ಸ್ಥಿರವಾಗಿ ನಿಂತು ಸಡಿಲಗೊಳಿಸುವ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು.
ದಿ ಜರ್ನಲ್ ಆಫ್ ಸ್ಟ್ರೆಂಥ್ ಅಂಡ್ ಕಂಡೀಷನಿಂಗ್ ರಿಸರ್ಚ್ ಪತ್ರಿಕೆಯು ಇತ್ತೀಚೆಗೆ ನಡೆಸಿದ ಅಧ್ಯಯನ ಪ್ರಕಾರ ಸ್ಥಿರವಾಗಿ ನಿಂತು ಮಾಡುವ ಸಡಿಲಗೊಳಿಸುವ ವ್ಯಾಯಾಮಗಳು - ಅಂದರೆ ದೇಹವನ್ನು ವಿಶ್ರಾಂತ ಸ್ಥಿತಿಯಲ್ಲಿ ಬಿಟ್ಟು ಸ್ನಾಯುಗಳನ್ನು ಸಡಿಲಗೊಳಿಸುವ ಪ್ರಕ್ರಿಯೆ. ಇದರಲ್ಲಿ ಸ್ನಾಯುಗಳನ್ನು ಹಿಗ್ಗಿಸಲು ಮತ್ತು ಕುಗ್ಗಿಸಲು 30 ಸೆಕೆಂಡುಗಳ ವ್ಯಾಯಾಮವಿರುತ್ತದೆ. ಇದರಿಂದ ಸ್ನಾಯುಗಳ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ.- ನಿಜವಾಗಿ ಹೇಳಬೇಕೆಂದರೆ ವರ್ಕ್‍ಔಟ್ ಆರಂಭವಾಗುವ ಮೊದಲು ನಮ್ಮ ಸ್ನಾಯುಗಳ ಸಾಮರ್ಥ್ಯವು ಶೇ. 5.5ರಷ್ಟು ಕಡಿಮೆಯಾಗಿರುತ್ತದೆ. ಇದೆಲ್ಲಕ್ಕು ಮುಖ್ಯವಾಗಿ ಸಡಿಲಗೊಳಿಸುವ ವ್ಯಾಯಾಮ ಮಾಡಲು ಮುಖ್ಯ ಕಾರಣ ಸ್ನಾಯುಗಳಲ್ಲಿ ನಮ್ಯತೆಯನ್ನು ತರಲು ಮತ್ತು ದೇಹವನ್ನು ತಂಪುಗೊಳಿಸುವ ಸಲುವಾಗಿ ಇದು ಅಗತ್ಯ. ಇದರಿಂದ ವ್ಯಾಯಾಮವು ಮತ್ತಷ್ಟು ಪ್ರಯೋಜನಕಾರಿಯಾಗುತ್ತದೆ. ಸ್ನಾಯುಗಳು ಸಡಿಲಗೊಂಡರೆ ವರ್ಕ್‌ಔಟ್ ಮಾಡುವಾಗ ಯಾವುದೇ ಗಾಯಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಮಿತಿ ಮೀರಿದ ದೇಹ ಸಡಿಲಗೊಳಿಸುವ ವ್ಯಾಯಾಮಗಳು:
ಜಿಮ್‍ನಲ್ಲಿ ವ್ಯಾಯಾಮ ಆರಂಭಿಸುವ ಮೊದಲು ದೇಹವನ್ನು ಸಡಿಲಗೊಳಿಸುವ ಪ್ರಕ್ರಿಯೆ ನಡೆಸಲೇಬೇಕು. ಉದಾ;- ಒಂದು ವೇಳೆ ಒಂದೇ ದಿನದಲ್ಲಿ ನೀವು ಎದೆ, ತೋಳು ಮತ್ತು ಭುಜಕ್ಕೆ ವರ್ಕ್‍ಔಟ್ ಮಾಡುವಂತಿದ್ದಲ್ಲಿ ಮೊದಲು ನೀವು ಎದೆ ಭಾಗವನ್ನು ಸಡಿಲಗೊಳಿಸಿಕೊಳ್ಳಬೇಕು. ಇದಕ್ಕಾಗಿ ಬಸ್ಕಿ (ಉಟ್-ಬೈಟ್) ಮಾಡಬೇಕು ಮತ್ತು ಕೈ ಹಾಗು ಭುಜಗಳನ್ನು ಚಾಚುವ ವ್ಯಾಯಾಮಗಳನ್ನು ಮಾಡಬಾರದು. ಏಕೆಂದರೆ ಇದರಿಂದ ನಿಮಗೆ ಯಾವುದೇ ಪ್ರಯೋಜನವು ದೊರೆಯುವುದಿಲ್ಲ, ಜೊತೆಗೆ ಸಮಯ ಬೇರೆ ಹಾಳಾಗುತ್ತದೆ.

ಅಧಿಕ ಸಮಯವನ್ನು ಕಾರ್ಡಿಯೋ ಮೇಲೆ ವ್ಯಯಿಸುವುದು.:
ಒಂದು ವೇಳೆ ನಿಮಗೆ ಜಿಮ್‍ನಲ್ಲಿ ಒಂದು ಗಂಟೆಗು ಅಧಿಕ ಸಮಯವನ್ನು ಕಳೆಯುವ ಅವಕಾಶವಿಲ್ಲದಿದ್ದಲ್ಲಿ, ಸುಮಾರು 45 ನಿಮಿಷಗಳ ಕಾಲ ಕಾರ್ಡಿಯೋವ್ಯಾಸ್ಕುಲರ್ ವ್ಯಾಯಾಮವನ್ನು ಮಾಡುವುದರಿಂದ ಸಮಯ ವ್ಯರ್ಥವಾಗುತ್ತದೆಯಷ್ಟೆ. ಸೈಕ್ಲಿಂಗ್ ಮತ್ತು ಓಡುವ ಚಟುವಟಿಕೆಗಳು ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸುತ್ತವೆ ಮತ್ತು ದೇಹದಲ್ಲಿ ರುವ ಕ್ಯಾಲೋರಿಗಳನ್ನು ಕರಗಿಸುತ್ತವೆ. ಆದರೂ ಈ ಕಾರ್ಡಿಯೋವ್ಯಾಸ್ಕುಲರ್ ವ್ಯಾಯಾಮವು ಒಂದು ಪರಿಪೂರ್ಣ ವ್ಯಾಯಾಮವಲ್ಲ. ಏಕೆಂದರೆ ಇದು ನಿಮ್ಮ ಸ್ನಾಯುಗಳ ಸದೃಢತೆಗೆ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ. ಅದಕ್ಕಾಗಿ ನೀವು ಭಾರ ಎತ್ತುವ ವ್ಯಾಯಾಮವನ್ನು ಸಹ ನಿಯಮಿತವಾಗಿ ಮಾಡಬೇಕು. ಇದರ ಸಲುವಾಗಿ ನಿಮ್ಮ ವ್ಯಾಯಾಮದಲ್ಲಿ ಕಾರ್ಡಿಯೋ ಮತ್ತು ಭಾರ ಎತ್ತುವ ವ್ಯಾಯಾಮಗಳ ಸಮತೋಲನವನ್ನು ಸಾಧಿಸಿ. ನಡು- ನಡುವೆ ಇವುಗಳನ್ನು 30 ನಿಮಿಷದ ಅಂತರದಲ್ಲಿ ಮಾಡುವುದರಿಂದ ಹೆಚ್ಚಿನ ಲಾಭವನ್ನು ನಿಮ್ಮದಾಗಿಸಿಕೊಳ್ಳಬಹುದು.

ಸುಮ್ಮನೆ ಕೂರುವುದು:
ವ್ಯಾಯಾಮದ ನಡುವೆ ಸುಮ್ಮನೆ ಕೂತು ವಿಶ್ರಾಂತಿಯನ್ನು ಪಡೆಯುವುದು ಉತ್ತಮವಾದ ತೀರ್ಮಾನವಾಗಿರುತ್ತದೆ. ಆದರೆ ಒಂದು ವಿಚಾರ ತಿಳಿದಿರಲಿ ವ್ಯಾಯಾಮದ ನಡುವೆ ಆಯಾಸವಾದಲ್ಲಿ ಸುಮ್ಮನೆ ನಿಂತುಕೊಳ್ಳಿ, ಅದರ ಬದಲಿಗೆ ಕೂತು ಇತರರ ಜೊತೆಗೆ ಮಾತನಾಡಬೇಡಿ. ಅಧಿಕವಾದ ವ್ಯಾಯಾಮ ಮಾಡಿ, ಇದ್ದಕಿದ್ದಂತೆ ಕೂರುವುದರಿಂದ ನಿಮ್ಮ ಹೃದಯದ ಬಡಿತವನ್ನು ಗಣನೀಯವಾಗಿ ಇಳಿಸುತ್ತದೆ. ಇದು ಅಪಾಯಕಾರಿ ಸಹ ಹೌದು. ಅದಕ್ಕಾಗಿ ತಙ್ಞರು ಹೇಳುವುದೇನೆಂದರೆ;- ಕಠಿಣ ವ್ಯಾಯಾಮದ ನಡುವೆ ನಡಿಗೆಯಂತಹ ಲಘು ವ್ಯಾಯಾಮಗಳನ್ನು ಮಾಡುವುದರಿಂದ ದೇಹಕ್ಕೆ ಅಗತ್ಯ ಚೇತರಿಕೆಯನ್ನು ಒದಗಿಸಬಹುದಂತೆ. ಅದಕ್ಕಾಗಿ ವ್ಯಾಯಾಮದ ನಡುವೆ ಇದ್ದಕಿದ್ದಂತೆ ಕೂರುವುದರಿಂದ ಚೇತರಿಕೆ ದೊರೆಯುವುದಿಲ್ಲ, ಇರುವ ಚೈತನ್ಯವು ಹಾಳಾಗುತ್ತದೆ ನೆನಪಿರಲಿ.

ಅನುಚಿತವಾದ ರೂಪ:
ಒಂದು ವೇಳೆ ನೀವು ಕಾರ್ಡಿಯೋವ್ಯಸ್ಕುಲರ್ ವ್ಯಾಯಾಮ ಅಥವಾ ಭಾರ ಎತ್ತುವ ತರಬೇತಿಯಲ್ಲಿ ಪಾಲ್ಗೊಂಡಿದ್ದೀರಾ? ಒಮ್ಮೆ ಆಲೋಚಿಸಿ, ನಿಮ್ಮ ನಡೆಯು ಸಮರ್ಪಕವಾಗಿದೆಯೇ ಅಥವಾ ಇಲ್ಲವೆ ಎಂದು? ಏಕೆಂದರೆ ಈ ವ್ಯಾಯಾಮಗಳನ್ನು ಮಾಡುವ ಮೊದಲು ಹಲವಾರು ಸಣ್ಣ ಮಟ್ಟದ ವ್ಯಾಯಾಮಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಅದನ್ನು ಬಿಟ್ಟು ಒಮ್ಮೆಗೆ ಕಾರ್ಡಿಯೋವ್ಯಸ್ಕುಲರ್ ವ್ಯಾಯಾಮ ಅಥವಾ ಭಾರ ಎತ್ತುವ ತರಬೇತಿಯಲ್ಲಿ ಪಾಲ್ಗೊಳ್ಳುವುದು ಸಮಯ ಹಾಳು ಮಾಡುವ ಪ್ರಕ್ರಿಯೆಯಾಗುತ್ತದೆ. ಸಣ್ಣ ಮಟ್ಟದ ವ್ಯಾಯಾಮಗಳು ನಿಮ್ಮ ಎದೆ, ತೋಳು, ಬೆನ್ನು ಮತ್ತು ಕಾಲುಗಳಿಗೆ ಚೈತನ್ಯವನ್ನು ನೀಡಿ, ಮುಂದಿನ ಕಠಿಣ ವ್ಯಾಯಾಮಗಳಿಂದ ಹೆಚ್ಚಿನ ಸದುಪಯೋಗವನ್ನು ದೊರೆಯುವಂತೆ ಮಾಡುತ್ತವೆ.
ಇದಕ್ಕಾಗಿ ವ್ಯಾಯಾಮ ಮಾಡುವಾಗ ಹೆಚ್ಚಿನ ಶ್ರಮ ಮತ್ತು ಕಠಿಣವಾಗಿ ಕಾಣಿಸುವ ವ್ಯಾಯಾಮಗಳಿಗೆ ಮನಸೋಲಬೇಡಿ. ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರಮಾಣಕ್ಕಿಂತ ಹೆಚ್ಚಾಗಿ ಗುಣಮಟ್ಟಕ್ಕೆ ಹೆಚ್ಚಿನ ಮನ್ನಣೆ ಇದೆ ಎಂಬುದನ್ನು ಮರೆಯಬೇಡಿ. ಇದು ವ್ಯಾಯಾಮಕ್ಕು ಸಹ ಅನ್ವಯವಾಗುತ್ತದೆ. ಎಷ್ಟು ಹೊತ್ತು ವ್ಯಾಯಾಮ ಮಾಡಿದಿರಿ ಎಂಬುದು ಮುಖ್ಯವಲ್ಲ. ಎಷ್ಟು ಪ್ರಯೋಜನಕಾರಿಯಾಗಿ ವ್ಯಾಯಾಮ ಮಾಡಿದಿರಿ ಎಂಬುದು ಮುಖ್ಯ.



Click it and Unblock the Notifications











