Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಸುಲಭದಲ್ಲಿ ಕರಗದ ಸೊಂಟದ ಬೊಜ್ಜು ಕರಗಿಸಲು ಟಿಪ್ಸ್
ಕೆಲವರಿಗೆ ಬೊಜ್ಜು ಹೊಟ್ಟೆಯ ಸಮಸ್ಯೆಯಾದರೆ ಮತ್ತೆ ಕೆಲವರಿಗೆ ಸೊಂಟದ ಸುತ್ತ ಬೊಜ್ಜು ಶೇಖರವಾಗುವ ಸಮಸ್ಯೆ. ಸ್ವಲ್ಪ ಪ್ರಯತ್ನಿಸಿದರೆ ಹೊಟ್ಟೆಯ ಬೊಜ್ಜು ಕರಗುವುದು, ಆದರೆ ಸೊಂಟದ ಸುತ್ತಲಿನ ಬೊಜ್ಜು ಸುಲಭದಲ್ಲಿ. ಅದರತ್ತ ನಾವು ನಿಗಾವಹಿಸಿದರೆ ಕೆಲವೇ ತಿಂಗಳುಗಳಲ್ಲಿ ಸೊಂಟದ ಸುತ್ತವಿರುವ ಬೊಜ್ಜನ್ನು ಕರಗಿಸಬಹುದು.
ಸೊಂಟದ ಸುತ್ತಲಿನ ಬೊಜ್ಜು ಕರಗಿಸಲು ನೀವು ಮಾಡಬೇಕಾದದು ವ್ಯಾಯಾಮ ಮತ್ತು ಸರಿಯಾದ ಆಹಾರಕ್ರಮ. ಇಲ್ಲಿ ನಾವು ಕೆಲವು ಟಿಪ್ಸ್ ನೀಡಿದ್ದೇವೆ, ಅವುಗಳನ್ನು ಪಾಲಿಸಿದರೆ ಸೊಂಟದ ಬೊಜ್ಜನ್ನು ಕರಗಿಸಿ ಆಕರ್ಷಕವಾದ ಮೈ ಮಾಟ ಪಡೆಯಬಹುದು:

ಸೊಂಟದ ಬೊಜ್ಜು ಕರಗಿಸುವ ವ್ಯಾಯಾಮ
ಸೂಚನೆ: ಇಲ್ಲಿರುವ ಪ್ರತೀ ವ್ಯಾಯಾಮವನ್ನು 5 ನಿಮಿಷ ಕಾಲ ಮಾಡಿ.
ಸೈಡ್ ಅಪ್ (Side up)
ಚಿತ್ರದಲ್ಲಿ ತೋರಿಸಿರುವಂತೆ ಮಾಡಿ. ಒಮ್ಮೆ ಎಡಕಾಲಿನಿಂದ ಮಾಡಿ ನಂತರ ಸಾವಾಧಾನವಾಗಿ ಸಮಸ್ಥಿತಿಗೆ ಬಂದು ನಂತರ ಬಲ ಕಾಲಿನಿಂದ ಮಾಡಿ, ಈ ರೀತಿ 5 ನಿಮಿಷ ಮಾಡಿ. ಈ ವ್ಯಾಯಾಮ ತೋಳಿನ ತೂಕ ಕಮ್ಮಿ ಮಾಡುವಲ್ಲಿಯೂ ಸಹಕಾರಿ.

ಸೊಂಟದ ಬೊಜ್ಜು ಕರಗಿಸುವ ವ್ಯಾಯಾಮ
ರಷ್ಯನ್ ಟ್ವಿಸ್ಟ್ (The russian twist)
ಈ ವ್ಯಾಯಾಮ ನಿಮ್ಮ ಸೊಂಟದ ಕೊಬ್ಬನ್ನು ಬೇಗನೆ ಕರಗಿಸುತ್ತದೆ.

ಸೊಂಟದ ಬೊಜ್ಜು ಕರಗಿಸುವ ವ್ಯಾಯಾಮ
ಕ್ರಿಸ್ ಕ್ರಾಸ್ ಕ್ರಂಚಸ್ (Criss cross crunches)
ಈ ವ್ಯಾಯಾಮ ಸೊಂಟದ ಬೊಜ್ಜನ್ನು ಕರಗಿಸಲು ಮಾತ್ರವಲ್ಲ, ಸಮತಟ್ಟಾದ ಹೊಟ್ಟೆ ಪಡೆಯಲೂ ಸಹಕಾರಿ.

ಸೊಂಟದ ಬೊಜ್ಜು ಕರಗಿಸುವ ವ್ಯಾಯಾಮ
ಸಿಂಗಲ್ ಲೆಗ್ ಸ್ಕ್ವಾಟ್ಸ್ (Single leg squats)
ಈ ವ್ಯಾಯಾಮ ನಿಮ್ಮ ಕಾಲುಗಳನ್ನು ಬಲ ಪಡಿಸುವಲ್ಲಿ ಸಹಕಾರಿಯಾಗಿದೆ.

ಸೊಂಟದ ಬೊಜ್ಜು ಕರಗಿಸುವ ವ್ಯಾಯಾಮ
ಸೈಕಲ್ ಸವಾರಿ
ಸೈಕಲ್ ಸವಾರಿ ಫಿಟ್ ಶರೀರ ಪಡೆಯಲು ತುಂಬಾ ಸಹಕಾರಿ. ಪ್ರತೀದಿನ 3-4 ಕಿ. ಮೀ ಸೈಕಲ್ ಸವಾರಿ ಮಾಡುವವರಿಗೆ ಯಾವುದೇ ವ್ಯಾಯಾಮ ಮಾಡದೆಯೇ ಆಕರ್ಷಕ ಮೈಕಟ್ಟನ್ನು ಉಳಿಸಿಕೊಳ್ಳಬಹುದು.

ಆಹಾರಕ್ರಮ
ಮೀನು, ಹಾಲಿನ ಉತ್ಪನ್ನಗಳು, ದವಸ ಧಾನ್ಯಗಳು ಹಾಗೂ ಕಡಿಮೆ ಕೊಬ್ಬಿನಂಶವಿರುವ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸಿ.

ಆಹಾರಕ್ರಮ
2. ಅಧಿಕ ಕ್ಯಾಲೋರಿ ಇರುವ ಆಹಾರಗಳನ್ನು ದೂರವಿಡಿ
ಸಿಹಿ ತಿಂಡಿ, ಚಿಪ್ಸ್, ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇವುಗಳನ್ನು ಮಿತಿಯಲ್ಲಿ ತಿನ್ನಿ.

ಆಹಾರಕ್ರಮ
3. ಪ್ರೊಟೀನ್ ಯುಕ್ತ ಬ್ರೇಕ್ ಫಾಸ್ಟ್
ಬ್ರೇಕ್ ಫಾಸ್ಟ್ ಮ್ಯಾಗಿ, ಪಾಸ್ತಾದಂತಹ ಫಾಸ್ಟ್ ಫುಡ್ ತಯಾರಿಸುವ ಬದಲು ಪ್ರೊಟೀನ್ ಯುಕ್ತ ಆಹಾರ ಸೇವಿಸಿ. ಬ್ರೆಡ್ ಆಮ್ಲೇಟ್ ಮತ್ತು 1 ಲೋಟ ಹಾಲು ಕುಡಿದರೂ ಸಾಕಾಗುತ್ತದೆ.

ಆಹಾರಕ್ರಮ
4. ಸ್ವಲ್ಪ-ಸ್ವಲ್ಪ ಆಹಾರವನ್ನು ಆಗಾಗ ತಿನ್ನಿ
ದಿನದಲ್ಲಿ 3 ಬಾರಿ ತಿನ್ನುವ ಬದಲು 6 ಬಾರಿ ತಿಂದರೆ ತೂಕ ಕಮ್ಮಿಯಾಗುವಲ್ಲಿ ತುಂಬಾ ಸಹಕಾರಿ. ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ 3 ಬಾರಿಯ ಆಹಾರವನ್ನು 6 ಭಾಗಗಳಂತೆ ವಿಂಗಡಿಸಿ ತಿನ್ನಬೇಕಷ್ಟೆ.

ಆಹಾರಕ್ರಮ
5. ವಿಶ್ರಾಂತಿ ತೆಗೆದುಕೊಳ್ಳಿ
ಮಾನಸಿಕ ಒತ್ತಡವನ್ನು ಹೊರಹಾಕಿ, ವಿಶ್ರಾಂತಿ ತೆಗೆದುಕೊಳ್ಳಿ.

ಆಹಾರಕ್ರಮ
6. ನಿದ್ದೆ
ದಿನದಲ್ಲಿ 6-7 ಗಂಟೆಗಳ ಸವಿ ನಿದ್ದೆಯನ್ನು ಮಾಡಲು ಮರೆಯಬೇಡಿ.

ಆಹಾರಕ್ರಮ
7. ಡ್ರೆಸ್ಸಿಂಗ್
ಡ್ರೆಸ್ಸಿಂಗ್ ಬಗೆಯೂ ಗಮನವಿರಲಿ, ಸೊಂಟದ ಬೊಜ್ಜು ಎದ್ದು ಕಾಣದಂತಹ ಡ್ರೆಸ್ ಧರಿಸಿ.

ಆಹಾರಕ್ರಮ
8. ಟ್ರಕ್ಕಿಂಗ್ ಕೂಡ ಸಹಕಾರಿ
ಟ್ರಕ್ಕಿಂಗ್ ಹೋಗುವುದು ಫನ್ ಮಾತ್ರವಲ್ಲ, ಅಧಿಕ ದೇಹದ ತೂಕವನ್ನು ಕಮ್ಮಿ ಮಾಡುವಲ್ಲಿ ಸಹಾಯ ಮಾಡುತ್ತದೆ.



Click it and Unblock the Notifications











