Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೆಳ್ಳಗಾಗಲು ಊಟ ಬಿಟ್ಟರೆ ಅದು ತಾತ್ಕಾಲಿಕವಷ್ಟೇ!
ಆರೋಗ್ಯವಾಗಿರಲು ಬೊಜ್ಜು ಕರಗಿಸಬೇಕು. ಆದರೆ ತೆಳ್ಳಗಾಗಲು ಮಾಡುವ ಡಯಟ್ ಹೇಗಿರಬೇಕೆಂದು ಕೇಳಿದರೆ "ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದು, ಒಂದು ಹೊತ್ತು ಊಟ ಬಿಡುವುದು" ಎನ್ನುವುದು ಹೆಚ್ಚಿನವರ ಉತ್ತರವಾಗಿರುತ್ತದೆ.
ಡಯಟ್ ಹೆಸರಿನಲ್ಲಿ ಅನೇಕರು ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳಿರುವ ಆಹಾರ ತಿನ್ನುವುದನ್ನು ನಿಲ್ಲಿಸಿಬಿಡುತ್ತಾರೆ. ಜ್ಯೂಸ್ ಮಾತ್ರ ಕುಡಿಯುವುದು, ಸರಿಯಾದ ಹೊತ್ತಿನಲ್ಲಿ ಊಟ ಮಾಡದೆ ಡಯಟ್ ಅಂತ ಉಪವಾಸ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು. ಡಯಟ್ ಮಾಡುವರು ಕೊಬ್ಬಿನಂಶವಿರುವ ಆಹಾರವನ್ನು ದೂರ ಇಡಬೇಕೆ ಹೊರತು ಅಧಿಕ ಪ್ರೊಟೀನ್ ಇರುವ ಆಹಾರಗಳನ್ನಲ್ಲ.
ಸರಿಯಾಗಿ ತಿನ್ನದೆ ತೂಕ ಕಮ್ಮಿಯಾದರೆ ಅದು ಕೇವಲ ತಾತ್ಕಾಲಿಕವಷ್ಟೇ. ಊಟ ಬಿಟ್ಟು ತೆಳ್ಳಗಾಗಲು ಪ್ರಯತ್ನಿಸಿದರೆ ಆರೋಗ್ಯದ ಮೇಲೆ ಈ ರೀತಿಯ ಅಪಾಯಗಳು ಉಂಟಾಗುತ್ತದೆ.

ದೇಹದಲ್ಲಿ ಇಂಧನ ಖಾಲಿಯಾಗುತ್ತದೆ
ನಾವು ಊಟ ಮಾಡಿದಾಗ ನಮ್ಮ ದೇಹದಲ್ಲಿ ಕೊಬ್ಬಿನಂಶ ಸಂಗ್ರಹವಾಗುತ್ತದೆ. ಈ ಕೊಬ್ಬಿನಂಶವನ್ನು ನಾವು ಊಟ ಮಾಡದಿದ್ದಾಗ ನಮ್ಮ ದೇಹವೂ ಬಳಸಿಕೊಳ್ಳುತ್ತದೆ. ಕೊಬ್ಬು ಸಂಪೂರ್ಣ ಕರಗಿದರೆ ನಿಶ್ಯಕ್ತಿ ಉಂಟಾಗಿ ಖಿನ್ನತೆ, ಸುಸ್ತು, ರಕ್ತ ಹೀನತೆ ಮುಂತಾದ ಸಮಸ್ಯೆ ಉಂಟಾಗುವುದು.
ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ
ಜೀರ್ಣಕ್ರಿಯೆಯಲ್ಲಿ ಏರುಪೇರಾಗಿ ಪೋಷಕಾಂಶದ ಕೊರತೆ ಉಂಟಾಗುವುದು, ಇದರಿಂದ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗುವುದು. ನೀವು ಉಪವಾಸ ಮಾಡಿದರೆ ನಿಮ್ಮ ಜಠರ ತನ್ನ ಕಾರ್ಯವನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ, ಇದಕ್ಕೆ ಜೀರ್ಣಕ್ರಿಯೆಗೆ ಆಹಾರ ಸಿಗದಿದ್ದರೆ ಅಲ್ಸರ್, ಕರುಳಿನ ಕ್ಯಾನ್ಸರ್ ಮುಂತಾದ ಸಮಸ್ಯೆ ಕಂಡು ಬರಬಹುದು ಎಚ್ಚರ!
ತಾತ್ಕಾಲಿಕವಾಗಿ ಸಣ್ಣಗಾಗುವಿರಿ
ಸರಿಯಾಗಿ ತಿನ್ನದೆ ಸಣ್ಣಗಾದರೆ ಅದು ತಾತ್ಕಾಲಿಕವಾದ ದೇಹದ ಮೈಕಟ್ಟಾಗಿರುತ್ತದೆ. ಏಕೆಂದರೆ ಉಪವಾಸ ಮಾಡುವುದನ್ನು ನಿಲ್ಲಿಸಿ ತಿನ್ನಲು ಪ್ರಾರಂಭಿಸಿದ ಮೇಲೆ ಇರುವುದಕ್ಕಿಂತೆ ಎರಡು ಪಟ್ಟು ದಪ್ಪಗಾಗುವ ಸಾಧ್ಯತೆ ಇದೆ. ಕೂದಲು ಉದುರುವುದು, ಬಿಳಿ ಕೂದಲು ಈ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
