Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಮದ್ದು-ಜಾಗಿಂಗ್
ಜಾಗಿಂಗ್ (ಓಡುವ ವ್ಯಾಯಾಮ) ಮಾಡಿದರೆ ದೇಹದ ತೂಕ ಕಮ್ಮಿಯಾಗುತ್ತೆ ಎನ್ನುವುದು ಎಲ್ಲರಿಗೆ ಗೊತ್ತಿರುವ ಅಂಶ. ಇದನ್ನು ಹೊರತು ಪಡಿಸಿ ಜಾಗಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಜಾಗಿಂಗ್ ವಾಕಿಂಗ್ ಗಿಂತ ಸ್ವಲ್ಪ ಶ್ರಮದಾಯಕವಾದ ಕೆಲಸ. ಹೆಚ್ಚೇನು ದಪ್ಪವಿಲ್ಲದೆ ಫಿಟ್ ನೆಸ್ ಬೇಕೆಂದು ಬಯಸುವವರು ಓಡುವ ಅಗ್ಯತವಿಲ್ಲ. ವೇಗವಾಗಿ ನಡೆಯುವ ವ್ಯಾಯಾಮಮ ಮಾಡಿದರೆ ಸಾಕು. ದೇಹದ ತೂಕ ಕಮ್ಮಿಯಾಗಬೇಕೆಂದು ಬಯಸುವವರು ಓಡುವ ವ್ಯಾಯಾಮ ಮಾಡುವುದು ಒಳ್ಳೆಯದು.
ಜಾಗಿಂಗ್ ಬಗ್ಗೆ ಮತ್ತೊಂದು ಮಾಹಿತಿಯೆಂದರೆ ಈ ವ್ಯಾಯಾಮವನ್ನು ಮಧ್ಯವಯಸ್ಸು ದಾಟಿದ ಮೇಲೆ ಮಾಡುವುದು ಸೂಕ್ತವಲ್ಲ, ಮಧ್ಯವಯಸ್ಸು ದಾಟಿದವರಿಗೆ ಹೆಚ್ಚಿನ ಶ್ರಮದಾಯಕವಲ್ಲದ ನಡೆಯುವ ವ್ಯಾಯಾಮ ಸೂಕ್ತವಾಗಿದೆ. ಯೌವನ ಪ್ರಾಯದವರಿಗೆ ಜಾಗಿಂಗ್ ಉತ್ತಮವಾಗಿದ್ದು, ಯೌವನದಲ್ಲಿ ಜಾಗಿಂಗ್ ಮಾಡಿದರೆ ದೇಹ ಫಿಟ್ ನೆಸ್ ಅನ್ನು ವಯಸ್ಸಾದ ಮೇಲೂ ಕಾಪಾಡಿಕೊಳ್ಳಬಹುದು.
ಅದಲ್ಲದೆ ಜಾಗಿಂಗ್ ಮಾಡಿದರೆ ಈ ಕೆಳಗಿನ ಆರೋಗ್ಯಕರ ಗುಣಗಳನ್ನು ಪಡೆಯಬಹುದು:

1. ಕೊಲೆಸ್ಟ್ರಾಲ್, ಒಬೆಸಿಟಿಯ ಭಯವಿಲ್ಲ
ಜಾಗಿಂಗ್ ಮಾಡಿದರೆ ದೇಹದಲ್ಲಿರುವ ಕೊಬ್ಬಿನಂಶ ಬೇಗನೆ ಕರುಗುತ್ತದೆ. ಸಮತೂಕವನ್ನು ಪಡೆಯಬಹುದು ಹಾಗೂ ಕೊಲೆಸ್ಟ್ರಾಲ್, ಒಬೆಸಿಟಿ ಈ ರೀತಿಯ ಸಮಸ್ಯೆಯಿಂದ ಮುಕ್ತರಾಗಿ ಇರಬಹುದು.

2. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ
ತುಂಬಾ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದೀರಾ? ಹಾಗಾದರೆ ಜಾಗಿಂಗ್ ಮಾಡಿ, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮನಸ್ಸೆಲ್ಲಾ ಹಗುರವಾಗುತ್ತದೆ. ದಿನಾವಿಡೀ ಚೈತನ್ಯದಿಂದ ಇರುವಿರಿ.

3. ಗುರಿ ಮುಟ್ಟಲು ಶಕ್ತಿ ತುಂಬುತ್ತದೆ
ನಮ್ಮ ಕೆಲಸದ ಮೇಲೆ ಮನಸ್ಸು ತುಂಬಾ ಪ್ರಭಾವ ಬೀಳುತ್ತದೆ. ಪ್ರತೀದಿನ ಓಡುವವ ವ್ಯಾಯಾಮ ಮಾಡುವವರಿಗೆ ಬುದ್ಧಿ ಶಕ್ತಿ, ಛಲ ಕೂಡ ಹೆಚ್ಚಾಗುವುದು. ಈ ಅಭ್ಯಾಸ ನಿಮ್ಮನ್ನು ಜೀವನದಲ್ಲಿ ನಿಮ್ಮ ಗುರಿಯನ್ನು ತಲುಪಲು ಮನೋಬಲ ನೀಡುತ್ತದೆ.

4. ದೇಹಬಲ
ಓಡುವಾಗ ನಾವು ನಮ್ಮ ದೇಹದ ಶಕ್ತಿಯನ್ನು ಮೀರಿ ಓಡುತ್ತೇವೆ. ಇದರಿಂದ ದೇಹ ಬಲ ದೊರೆಯುತ್ತದೆ. ಸ್ನಾಯುಗಳು ಬಲವಾಗುತ್ತದೆ.

5. ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ
ಜಾಗಿಂಗ್ ಮಾತ್ರವಲ್ಲ, ಯಾವುದೇ ಬಗೆಯ ವ್ಯಾಯಾಮ ಮಾಡಿದರೆ ನಿಮ್ಮಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.

6. ಮೂಳೆಗಳಿಗೆ ಒಳ್ಳೆಯದು
ಜಾಗಿಂಗ್ ಮಾಡಿದರೆ ಸ್ನಾಯುಗಳು ಹಾಗೂ ಮೂಳೆಗಳು ಬಲವಾಗುತ್ತದೆ. ಓಡುವಾಗ ಬರುವ ಬೆವರು ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ.

7. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
ಇದು ದೇಹಕ್ಕೆ ಮಾತ್ರವಲ್ಲ, ನಮ್ಮ ವ್ಯಕ್ತಿತ್ವಕ್ಕೂ ಒಂದು ಶೇಪ್ ಕೊಡುತ್ತದೆ . ಯಾವುದೇ ಕೆಲಸಕ್ಕೆ ಆತ್ಮವಿಶ್ವಾಸ ಅವಶ್ಯಕ. ಜಾಗಿಂಗ್ ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ.

8. ರಕ್ತ ಸಂಚಾರ ಹೆಚ್ಚಿಸುತ್ತದೆ
ದೇಹದಲ್ಲಿ ರಕ್ತಸಂಚಾರದ ತೊಂದರೆಯುಂಟಾದರೆ ಕಾಯಿಲೆಗಳು ಉಂಟಾಗುತ್ತದೆ. ಜಾಗಿಂಗ್ ರಕ್ತವನ್ನು ಶುದ್ಧೀಕರಿಸುತ್ತದೆ, ರಕ್ತ ಸಂಚಾರ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. ದೇಹವು ಆಮ್ಲಜನಕವನ್ನು ಹೆಚ್ಚು ಹೀರಿಕೊಂಡು ಆರೋಗ್ಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.

9. ಉದ್ವೇಗವನ್ನು ಕಮ್ಮಿ ಮಾಡುತ್ತದೆ
ಯಾವುದಾದರೂ ವಿಷಯಕ್ಕೆ ಬೇಗನೆ ಉದ್ವೇಗಕ್ಕೆ ಒಳಗಾಗುವುದು ಒಳ್ಳೆಯದಲ್ಲ. ಜಾಗಿಂಗ್ ನಮ್ಮ ಮನಸ್ಸನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

10. ನಮ್ಮನ್ನು ಸಂತೋಷವಾಗಿ ಇಡುತ್ತದೆ
ಜಾಗಿಂಗ್ ಮಾಡಿದರೆ ಸಂತೋಷವನ್ನು ಉಂಟು ಮಾಡುವ ಹಾರ್ಮೋನ್ ಎಂಡ್ರೋಪೈನ್ಸ್ (endrophins)ಉತ್ಪತ್ತಿಯಾಗುವುದಿಂದ ನಮ್ಮಲ್ಲಿರುವ ಖಿನ್ನತೆಯನ್ನು ಹೋಗಲಾಡಿಸಿ, ಸಂತೋಷವನ್ನಾಗಿ ಇಡುತ್ತದೆ.



Click it and Unblock the Notifications
