Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ನಿಮ್ಮ ಕಣ್ಣುಗಳಿಗೆ ವ್ಯಾಯಾಮ ಮಾಡುವುದು ಹೇಗೆ?
ಜಿಮ್ ಗಳಿಗೆ ಹೋಗಿ, ಜಾಗಿಂಗ್, ಈಜು ಮುಂತಾದವುಗಳನ್ನು ಮಾಡಿ ನಮ್ಮ ದೇಹವನ್ನು ಸರಿಯಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯವೆಂಬುದು ನಮಗೆಲ್ಲ ಅರಿವಿದೆ. ಆದರೆ ಇದೇ ರೀತಿ ನಿಮ್ಮ ಕಣ್ಣುಗಳಿಗೂ ವ್ಯಾಯಾಮ ಒದಗಿಸಬಹುದು ಎಂಬುದು ಗೊತ್ತಿದೆಯಾ? ಕಣ್ಣುಗಳ ವ್ಯಾಯಾಮದಿಂದ ನಿಮ್ಮ ಕಣ್ಣುಗಳು ಆರೋಗ್ಯವಾಗಿರುತ್ತವೆ ಮತ್ತು ಕಣ್ಣುಗಳ ಸುಸ್ತು ಕಡಿಮೆಯಾಗುತ್ತದೆ.
ಈ ಕೆಳಗಿನ ಹಂತಗಳು ನಿಮ್ಮ ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸುವುದಿಲ್ಲ. ಬದಲಿಗೆ ದೃಷ್ಟಿಯನ್ನು ಹಗಲುಹೊತ್ತಿನಲ್ಲಿ ಚೆನ್ನಾಗಿರುವಂತೆ ನೋಡಿಕೊಳ್ಳುತ್ತವೆ ಮತ್ತು ಮುಂದೆ ಬರಬಹುದಾದ ದೃಷ್ಟಿ ದೋಷಗಳ ಸಾಧ್ಯತೆಯನ್ನು ಕಡಿಮೆಗೊಳಿಸುತ್ತವೆ.

ಹಂತಗಳು:
1. ಕುರ್ಚಿಯೊಂದರಲ್ಲಿ ಹಿತಕರವಾಗಿ ಕುಳಿತುಕೊಳ್ಳಿ. ಎರಡೂ ಕೈಗಳನ್ನು ಬೆಚ್ಚಗಾಗುವವರೆಗೆ ತಿಕ್ಕಿ. ಕಣ್ಣುಗಳನ್ನು ಮುಚ್ಚಿ ಮತ್ತು ಎರಡೂ ಹಸ್ತಗಳಿಂದ ನಿಮ್ಮ ಕಣ್ಣುಗಳನ್ನು ಮೃದುವಾಗಿ ಒತ್ತಿಕೊಳ್ಳಿ. ಕಣ್ಣುಗುಡ್ಡೆಗಳಿಗೆ ಒತ್ತಡ ಹಾಕಬೇಡಿ. ಮೂಗು ಮುಚ್ಚಿಕೊಳ್ಳದೆ ಕಣ್ಣುಗಳನ್ನು ಮಾತ್ರ ಮುಚ್ಚಿಕೊಂಡು ಬೆರಳು ಹಾಗೂ ಮೂಗಿನ ಸಂದಿಗಳಿಂದ ಬೆಳಕಿನ ಕಿರಣಗಳು ಕಣ್ಣೊಳಗೆ ನುಸುಳದಂತೆ ಎಚ್ಚರವಹಿಸಿ. ಮುಚ್ಚಿದ ಕಣ್ಣಿಗೆ ಬೇರೆ ಬೇರೆ ಬೆಳಕಿನ ಛಾಯೆಗಳು ಕಾಣಬಹುದು. ಸಂಪೂರ್ಣ ಕತ್ತಲೆಯನ್ನು ಕಲ್ಪಿಸಿಕೊಳ್ಳಿ ಮತ್ತು ಅದರ ಮೇಲೆ ಪೂರ್ತಿಯಾಗಿ ಕೇಂದ್ರೀಕರಿಸಿ. ದೀರ್ಘ ಉಸಿರು ತೆಗೆದುಕೊಳ್ಳುತ್ತ ಸಂತೋಷದ ಘಟನೆಗಳನ್ನು ನೆನಪಿಸಿಕೊಳ್ಳಿ ಅಥವಾ ದೂರದ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಸಂಪೂರ್ಣ ಕತ್ತಲಿನ ಹೊರತಾಗಿ ಬೇರೇನೂ ಕಾಣದಿದ್ದಾಗ ನಿಮ್ಮ ಹಸ್ತವನ್ನು ಕಣ್ಣುಗಳಿಂದ ತೆಗೆಯಿರಿ. 3 ನಿಮಿಷಕ್ಕೆ ಅಥವಾ ಹೆಚ್ಚಿನ ಸಮಯಕ್ಕೆ ಇದನ್ನು ಪುನರಾವರ್ತಿಸಿ.
2. ಕಣ್ಣುಗಳನ್ನು 3-5 ಸೆಕೆಂಡುಗಳ ಕಾಲ ಗಟ್ಟಿಯಾಗಿ ಮುಚ್ಚಿಕೊಳ್ಳಿ. 3-5 ಸೆಕೆಂಡುಗಳ ಕಾಲ ತೆರೆದಿಡಿ. ಇದನ್ನು 7 ರಿಂದ 8 ಬಾರಿ ಪುನರಾವರ್ತಿಸಿ.
3. ನಿಮ್ಮ ಕಣ್ಣುಗಳಿಗೆ ಮಸಾಜ್ ಮಾಡಿಕೊಳ್ಳಿ.
ಬಿಸಿ ಮತ್ತು ತಂಪು ಒತ್ತು: ಬಿಸಿ ನೀರಿನಲ್ಲಿ ಟವೆಲ್ ಒಂದನ್ನು ಅದ್ದಿ ತೆಗೆದು ಮತ್ತೊಂದು ಟವೆಲ್ ಅನ್ನು ತಂಪು ನೀರಿನಲ್ಲಿ ಅದ್ದಿ. ಯಾವುದಾದರೂ ಒಂದು ಟವೆಲ್ ತೆಗೆದುಕೊಂಡು ನಿಮ್ಮ ಮುಖದ ಭಾಗಗಳಿಗೆ ಒತ್ತಿಕೊಳ್ಳಿ. ಮುಖ್ಯವಾಗಿ ನಿಮ್ಮ ಕಣ್ಣು ಹುಬ್ಬುಗಳು, ಮುಚ್ಚಿದ ಕಣ್ಣುಗುಡ್ಡೆ ಮತ್ತು ಕೆನ್ನೆಗಳಿಗೆ. ಪರ್ಯಾಯವಾಗಿ ಎರಡೂ ಟವೆಲ್ ಗಳಿಂದ ಇದನ್ನು ಪುನರಾವರ್ತಿಸಿ. ಕಟ್ಟ ಕಡೆಯಲ್ಲಿ ತಂಪಾದ ಟವೆಲ್ ನಿಂದ ಒತ್ತಿಕೊಳ್ಳಿ.
ಪೂರ್ತಿ ಮುಖದ ಮಸಾಜ್: ಟವೆಲ್ ಒಂದನ್ನು ಬಿಸಿ ನೀರಿನಲ್ಲಿ ನೆನೆಸಿ. ಕಣ್ಣುಗಳನ್ನು ಹೊರತುಪಡಿಸಿ ಕುತ್ತಿಗೆ, ಹಣೆ ಮತ್ತು ಕೆನ್ನೆಯ ಭಾಗಗಳನ್ನು ಒರೆಸಿ. ನಂತರ ನಿಮ್ಮ ಬೆರಳ ತುದಿಯಿಂದ ನಿಧಾನವಾಗಿ ಹಣೆ ಹಾಗೂ ಮುಚ್ಚಿದ ಕಣ್ಣುಗಳಿಗೆ ಮಸಾಜ್ ಮಾಡಿಕೊಳ್ಳಿ.
ರೆಪ್ಪೆಗಳ ಮಸಾಜ್: ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ವೃತ್ತಾಕಾರಾವಾಗಿ ಬೆರಳಿನಿಂದ 1 ರಿಂದ 2ನಿಮಿಷ ಮಸಾಜ್ ಮಾಡಿಕೊಳ್ಳಿ. ನಿಮ್ಮ ಕಣ್ಣುಗಳನ್ನು ಅಪಾಯದಿಂದ ರಕ್ಷಿಸಿಕೊಳ್ಳಲು ನಿಧಾನವಾಗಿ ಒತ್ತಿ ಮತ್ತು ಕೈ ತೊಳೆದುಕೊಂಡು ಮಸಾಜ್ ಮಾಡಿಕೊಳ್ಳಿ.
4. ಎರಡೂ ಕೈಗಳ ಮೂರು ಬೆರಳುಗಳಿಂದ ಮೇಲಿನ ರೆಪ್ಪೆಯನ್ನು ಸ್ವಲ್ಪವೇ ಒತ್ತಿ. 1-2 ಸೆಕೆಂಡುಗಳ ಕಾಲ ಹಾಗೇ ಇಡಿ. ಇದನ್ನು ಐದಾರು ಬಾರಿ ಪುನರಾವರ್ತಿಸಿ.
5. ಕೂತು ವಿಶ್ರಾಂತಿ ತೆಗೆದುಕೊಳ್ಳಿ. ಕಣ್ಣುಗಳನ್ನು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿಗೆ ಮತ್ತೊಮ್ಮೆ ವಿರುದ್ದ ದಿಕ್ಕಿಗೆ ತಿರುಗಿಸಿ. ಕಣ್ಣುಗಳನ್ನು ಮುಚ್ಚಿ ತೆಗೆದು ಐದಾರು ಬಾರಿ ಪುನರಾವರ್ತಿಸಿ.
6. ಸುಮಾರು 150 ಅಡಿ ಅಥವಾ 50 ಮೀಟರ್ ದೂರದಲ್ಲಿರುವ ವಸ್ತುಗಳ ಮೇಲೆ 10-15 ಸೆಕೆಂಡುಗಳ ಕಾಲ ದೃಷ್ಟಿಯನ್ನು ಕೇಂದ್ರೀಕರಿಸಿ. ನಂತರ ಸುಮಾರು 30 ಅಡಿಗಿಂತ ಕಡಿಮೆ ಅಥವಾ 10 ಮೀಟರ್ ದೂರದಲ್ಲಿರುವ ಹತ್ತಿರದ ವಸ್ತುಗಳ ಮೇಲೆ ದೃಷ್ಟಿಯನ್ನು ತಲೆ ಅಲುಗಿಸದೇ ಪುನಃ ಕೇಂದ್ರೀಕರಿಸಿ. ಇದನ್ನೂ ಕೂಡ 5 ಬಾರಿ ಪುನರಾವರ್ತಿಸಿ.
7. ನಿಮ್ಮ ಕೈ ಅಳತೆಯ ದೂರದಲ್ಲಿ ಒಂದು ಪೆನ್ಸಿಲ್ ಹಿಡಿಯಿರಿ. ಕೈಯ್ಯನ್ನು ನಿಮ್ಮ ಮೂಗಿನ ಹತ್ತಿರಕ್ಕೆ ತನ್ನಿ. ನೀವು ಕೇಂದ್ರೀಕರಿಸಲು ಸಾದ್ಯವಿದ್ದಷ್ಟು ದೂರ ಪೆನ್ಸಿಲ್ ಅನ್ನು ಹಿಂಬಾಲಿಸಿ. ಹತ್ತು ಬಾರಿ ಇದನ್ನು ಪುನರಾವರ್ತಿಸಿ.(ಇನ್ನೊಂದು ಸಾಧ್ಯತೆಯೆಂದರೆ, ಬೆಳಕಿನ ರೇಖೆಯೊಂದಕ್ಕೆ ವಸ್ತುವೊಂದನ್ನು ಕಟ್ಟಿ ಹಿಂದೆ ಮುಂದೆ ಚಲಿಸುವಂತೆ ಮಾಡಿ ದೃಷ್ಟಿಯನ್ನು ಕೇಂದ್ರೀಕರಿಸಲು ಪ್ರಯತ್ನಿಸಿ)
8. ನಿಮ್ಮ ವಿರುದ್ದ ದಿಕ್ಕಿನಲ್ಲಿರುವ ಗೋಡೆಯತ್ತ ಮುಖ ಮಾಡಿ ನೋಡಿ ಹಾಗೂ ನಿಮ್ಮ ಕಣ್ಣುಗಳಿಂದ ಗೋಡೆಯ ಮೇಲೆ ಬರೆಯುತ್ತಿರುವಂತೆ ಕಲ್ಪಿಸಿಕೊಳ್ಳಿ. ತಲೆಯನ್ನು ಚಲಿಸಬೇಡಿ. ಮೊದ ಮೊದಲು ಇದು ಕಷ್ಟವೆನಸಿಬಹುದು. ಆದರೆ ಸಾಧ್ಯವಾದ ಮೇಲೆ ಮೋಜೆನಿಸುತ್ತದೆ. ದೊಡ್ಡ ದೊಡ್ಡ ಅಕ್ಷರಗಳಾದಷ್ಟೂ ನಿಮ್ಮ ಕಣ್ಣುಗಳಿಗೆ ಪರಿಣಾಮ ಒಳ್ಳೆಯದು.
9. ಲಯಬದ್ದ ಚಲನೆಯನ್ನು ಅಭ್ಯಾಸ ಮಾಡಿ.
10. ನೀವೊಂದು ದೊಡ್ಡ ಗಡಿಯಾರದ ಮುಂದೆ ನಿಂತಂತೆ ಕಲ್ಪಿಸಿಕೊಳ್ಳಿ. ಗಡಿಯಾರದ ಮಧ್ಯಭಾಗದಲ್ಲಿ ನೋಡಿ. ನಂತರ ತಲೆಯನ್ನು ಅಲುಗಿಸದೇ ತಾಸಿನ ಗುರುತಿನತ್ತ ನೋಡಿ. ಪುನಃ ಗಡಿಯಾರದ ಮಧ್ಯಭಾಗದಲ್ಲಿ ನೋಡಿ. ಮತ್ತೆ ಮತ್ತೊಂದು ತಾಸಿನ ಗುರುತಿನತ್ತ ನೋಡಿ. ಇದನ್ನು ಸುಮಾರು 12 ಬಾರಿ ಮಾಡಿ. ಈ ವ್ಯಾಯಾಮವನ್ನು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡೂ ಮಾಡಬಹುದು.
11. ದೂರದಲ್ಲಿರುವ ವಸ್ತುವಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿ. ಪ್ರತಿ ಅರ್ಧಗಂಟೆಗೊಮ್ಮೆ ಇದನ್ನು ಮಾಡಿ.
12. ಮೇಲಿನಿಂದ ಕೆಳಗೆ ಕಣ್ಣುಗಳನ್ನು ಚಲಿಸಿ. ಮೇಲಿನಿಂದ ಪ್ರಾರಂಭಿಸಿ. ಇದನ್ನು 8 ಬಾರಿ ಮಾಡಿ. ನಂತರ ಎಡದಿಂದ ಶುರುಮಾಡಿ ಬಲಗಡೆಗೆ ಕಣ್ಣುಗಳ ಚಲನೆ ಮಾಡಿ. ಇದನ್ನೂ 8 ಬಾರಿ ಮಾಡಿ. ನಿಮ್ಮ ಕಣ್ಣುಗುಡ್ಡೆಗಳು ಚಲಿಸುವುದಕ್ಕಿಂತ ದೂರ ತಿರುಗಿಸಲು ಒತ್ತಡ ಹಾಕಬೇಡಿ.
13. ಯಾವತ್ತೂ ಕೂಡ ಹಸ್ತದ ವ್ಯಾಯಾಮದಿಂದ ಅಥವಾ ಕಣ್ಣುಗಳ ವಿಶ್ರಾಂತಿಯ ತಂತ್ರಗಳಿಂದ ವ್ಯಾಯಾಮವನ್ನು ನಿಲ್ಲಿಸಿ.
ಸಲಹೆಗಳು:
ವ್ಯಾಯಾಮಗಳನ್ನು ಒಂದೇ ಸಲಕ್ಕೆ ಹೆಚ್ಚು ಸಮಯ ಮಾಡುವುದಕ್ಕಿಂತ ನಿರಂತರವಾಗಿ ಮಾಡುವುದು ಒಳ್ಳೆಯದು. 30 ರಿಂದ 60 ಸೆಕೆಂಡುಗಳ ಕಾಲ ಪ್ರತಿ ಗಂಟೆಗೊಮ್ಮೆ ಕಣ್ಣುಗಳನ್ನು ಚಲಿಸುತ್ತಿರುವುದು ಒಳ್ಳೆಯದು. ಉದಾಹರಣೆಗೆ, ನಿಮ್ಮ ಕಂಪ್ಯೂಟರ್ ನಿಧಾನವಾಗಿ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ನಿಮ್ಮ ಕಣ್ಣುಗಳಿಂದ ವೃತ್ತ ರಚಿಸಬಹುದು. ನೀವಿದನ್ನು ಪ್ರತಿದಿನ ಅಭ್ಯಾಸ ಮಾಡಿದರೆ ನಿಮ್ಮ ಕಣ್ಣುಗಳು ದಿನದ ಅಂತ್ಯದಲ್ಲಿ ಮೊದಲಿನಷ್ಟು ಆಯಾಸಗೊಳ್ಳದಿರುವುದನ್ನು ಗಮನಿಸಬಹುದು.
ನಿಮ್ಮ ಕಣ್ಣುಗಳಿಗೆ ಸುಸ್ತಾದಂತೆನಿಸಿದಾಗ ಹಸ್ತದ ವ್ಯಾಯಾಮ ಮಾಡಿದರೆ ಒಳ್ಳೆಯ ವಿಧಾನ.
ಕಣ್ಣು ಪಿಳುಕಿಸುವುದರಿಂದ ಕಣ್ಣುಗಳ ಸುಸ್ತು ಕಡಿಮೆಯಾಗುತ್ತದೆ.
ಹತ್ತಿರದ ಕೆಲಸಗಳಿಗೆ ಸಣ್ಣ ಸಣ್ಣ ವಿರಾಮ ತೆಗೆದುಕೊಳ್ಳುವುದು ಉತ್ತಮ. (ಕಂಪ್ಯೂಟರ್ ಮಾನಿಟರ್ ಕಡೆಡಗೆ ದಿಟ್ಟಿಸುವುದು) ದೂರದ ವಸ್ತಗಳತ್ತ ದಿಟ್ಟಿಸುವುದರಿಂದಲೂ ಕಣ್ಣಿನ ಸುಸ್ತು ಕಡಿಮೆಯಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











