Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಹಾರಾಡುವ ವಯಸ್ಸಿನಲ್ಲಿ ಖಿನ್ನತೆ ರೆಕ್ಕೆ ಮುರಿಯುವುದು!

ಹೊಸ ಸ್ನೇಹಿತರು, ಆಧುನಿಕ ಜೀವನ ಶೈಲಿ, ರಂಗು ರಂಗಿನ ಕನಸುಗಳು ಇವುಗಳಿಂದ ಮನಸ್ಸು ಹುಚ್ಚು ಕುದುರೆಯಾಗಿರುತ್ತದೆ. ಪ್ರಪಂಚವನ್ನು ಗೆದ್ದು ಬಿಡುವೆ ಎಂಬ ಹುಮ್ಮಸ್ಸು, ಅದು ಈಡೇರಿದಿದ್ದಾಗ ಅದೆ ಅವರನ್ನು ಮಾನಸಿಕ ಖಿನ್ನತೆಗೆ ಒಳಪಡಿಸುತ್ತದೆ.
ಬೇಗನೆ ಕೋಪಕೊಳ್ಳುವ ಮನಸ್ಥಿತಿ, ಒಂಟಿಯಾಗಿ ಇರಲು ಬಯಸುವುದು ಮುಂತಾದ ಲಕ್ಷಣಗಳು ಮಾನಸಿಕ ಖಿನ್ನತೆಯ ಲಕ್ಷಣಗಳಾಗಿವೆ. ಅದನ್ನು ಪ್ರಾರಂಭದ ಹಂತದಲ್ಲಿ ಗುರುತಿಸುವುದು ಒಳ್ಳೆಯದು.
ಈ ರೀತಿಯ ಲಕ್ಷಣಗಳು ಹುಡುಗಿಯರಲ್ಲಿ ಕಂಡು ಬಂದಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಅವರಲ್ಲಿ ಖಿನ್ನತೆ ಹೋಗಲಾಡಿಸಿ ಹುರುಪು ತುಂಬ ಬಹುದಾಗಿದೆ.
1. ಮಕ್ಕಳೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿ ಅವರ ಭಾವನೆಗಳನ್ನು ಅರ್ಥೈಹಿಸಿಕೊಳ್ಳಬೇಕು.
2. ಹದಿಹರೆಯದ ಹೆಣ್ಣು ಮಕ್ಕಳು ಅವರ ಸ್ನೇಹಿತರ ಜೊತೆ ಚರ್ಚೆ ಮಾಡಿದ್ದನ್ನು ಅಪ್ಪ ಅಥವಾ ಅಮ್ಮನ ಬಳಿ ಹೇಳಿಕೊಳ್ಳುವ ಹುಮ್ಮಸು ಇರುತ್ತದೆ. ಅದನ್ನು ಸಮಧಾನದಿಂದ ಕೇಳಬೇಕು.
3. ಮಗಳು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ಪ್ರಯತ್ನಿಸಬೇಕು.
4. ನಿಮ್ಮ ಹದಿಹರೆಯದ ಸಮಯಕ್ಕೂ ಹೀಗಿನ ಕಾಲಕ್ಕೂ ಸಾಕಷ್ಟು ವ್ಯತ್ಯಾಸವಿರುವುದರಿಂದ ಹೋಲಿಕೆ ಮಾಡಬೇಡಿ. ಒಳ್ಳೆಯ ಅಂಶವನ್ನು ಮಾತ್ರ ಹೋಲಿಕೆ ಮಾಡಬೇಕು.
5. ಮಕ್ಕಳ ಡ್ರೆಸ್ ಮತ್ತು ಮೇಕಪ್ ಗಳ ಬಗ್ಗೆ ಇಷ್ಟವಾಗದಿದ್ದರೆ ನೇರವಾಗಿ ಹೇಳಬೇಡಿ, ಆ ಡ್ರೆಸ್ ಅಷ್ಟು ಚೆಂದ ಕಾಣುವುದಿಲ್ಲ ಎಂದು ನಿಧಾನವಾಗಿ ತಿಳಿ ಹೇಳಿದರೆ ಕೇಳುವುದು.
6. ಮಕ್ಕಳಿಗೆ ಏನಾದರು ತಿಳಿ ಹೇಳ ಬೇಕೆಂದಿದ್ದರೆ ಎಲ್ಲರ ಎದುರು ಹೇಳದೆ ಅವರು ಒಬ್ಬರೆ ಇದ್ದಾಗ ಹೇಳುವುದು ಸೂಕ್ತ.
7. ತುಂಬಾ ಖಿನ್ನತೆ ಇದ್ದರೆ ಕೌನ್ಸಿಲಿಂಗ್ ನೀಡಬಹುದು.



Click it and Unblock the Notifications
