Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ವರ್ಕ್ ಔಟ್ ನಂತರ ಸೇವಿಸಬೇಕಾದ 10 ಆಹಾರಗಳು
ಬೆಳಗಿನ ಹೊತ್ತು ವ್ಯಾಯಾಮವನ್ನು ಮಾಡುವುದು ಉತ್ತಮ. ಆದರೆ ವ್ಯಾಯಾಮ ಮುಗಿದ ನಂತರ ದೇಹ ಸಾಕಷ್ಟು ದಣಿಯುತ್ತದೆ. ದೇಹದಿಂದ ಬೆವರಿನ ರೂಪದಲ್ಲಿ ದ್ರವ, ಪ್ರೋಟೀನ್ ಗಳು ಹೊರಹಾಕಲ್ಪಡುತ್ತವೆ. ಇದರಿಂದ ದೇಹದಲ್ಲಿ ಶಕ್ತಿ ಕುಂಠಿತವಾಗುತ್ತದೆ. ಆದ್ದರಿಂದ ವ್ಯಾಯಾಮದ ಜೊತೆಗೆ ಅದಕ್ಕೆ ಸರಿಹೊಂದುವಂತಹ ಆಹಾರವನ್ನು ಸೇವಿಸುವುದು ಕೂಡ ಅಷ್ಟೇ ಮುಖ್ಯ.
ವ್ಯಾಯಾಮವನ್ನು ಮಾಡಿದ ನಂತರ 30 ನಿಮಿಷಗಳಲ್ಲಿ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸುವುದು ಅತ್ಯಂತ ಅಗತ್ಯ. ವ್ಯಾಯಾಮದ ಸಂದರ್ಭದಲ್ಲಿ ಹೊರದೂಡಲ್ವಟ್ಟ ಪ್ರೋಟೀನ್ ಅಂಶಗಳು ಪುನಃ ದೇಹಕ್ಕೆ ಸೇರಲು ಆಹಾರವನ್ನು ಅಗತ್ಯವಾಗಿ ಸೇವಿಸಬೇಕು. ಹಾಗಾದರೆ ಇದುವರೆಗೆ ಮಾಡಿರುವ ವ್ಯಾಯಾಮವೆಲ್ಲವೂ ವ್ಯರ್ಥವಾಯಿತು ಎಂದು ಯೋಚಿಸುತ್ತೀದ್ದೀರ? ಚಿಂತೆಬೇಡ. ಇಲ್ಲಿ ಕೆಲವು ಆರೋಗ್ಯಪೂರ್ಣ, ವ್ಯಾಯಾಮದ ನಂತರ ಸೇವಿಸಬೇಕಾದ ಆಹಾರಗಳನ್ನು ಹೇಳಲಾಗಿದೆ. ಇನ್ನು ನಿಮ್ಮ ವ್ಯಾಯಾಮದ ನಂತರ ಈ ಆಹಾರವನ್ನು ಸೇವಿಸುವುದರಿಂದ ವ್ಯಾಯಾಮವು ಖಂಡಿತ ಫಲಕಾರಿಯಾಗುತ್ತದೆ!

ಆಮ್ಲೆಟ್
ವ್ಯಾಯಾಮದ ನಂತರ ದೇಹದ ಸ್ನಾಯು ಆರೋಗ್ಯಕ್ಕೆ ಅಧಿಕ ಪ್ರೊಟೀನ್ ಆಹಾರ ಅಗತ್ಯವಿದೆ. ಮೊಟ್ಟೆಯ ಬಿಳಿಯ ಭಾಗ ವಿವಿಧ ಜೀವಸತ್ವಗಳ ಜೊತೆಗೆ ಪ್ರೊಟೀನ್ ಮತ್ತು ಅಗತ್ಯ ಅಮೈನೋ ಆಮ್ಲಗಳನ್ನು ಉತ್ತಮ ಪ್ರಮಾಣಲ್ಲಿ ಹೊಂದಿದೆ. ಅಮೈನೋ ಆಮ್ಲ ತೀವ್ರ ವ್ಯಾಯಾಮವನ್ನು ನಂತರ ಹಾನಿಗೊಳಗಾದ ಅಂಗಾಂಶಗಳನ್ನು ಪುನರ್ ನಿರ್ಮಿಸಲು ಸಹಾಯ ಮಾಡುತ್ತದೆ.

ಆವಕಾಡೊ(ಬೆಣ್ಣೆ ಹಣ್ಣು)
ಆವಕಾಡೊ ಸ್ಯಾಚುರೇಟೆಡ್ ಕೊಬ್ಬುಗಳನ್ನು, ಫೋಲಿಕ್ ಆಮ್ಲ, ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಈ ಮತ್ತು ಪಾಂಟೊಥೆನಿಕ್ ಆಮ್ಲಗಳನ್ನು ಒಳಗೊಂಡಿದೆ. ಇದು ನಿಮ್ಮ ರಕ್ತದೊತ್ತಡ ಸರಿಯಾಗಿ ನಿಯಂತ್ರಿಸುವ ಪೊಟ್ಯಾಶಿಯಂ ಅಂಶವನ್ನು ಹೊಂದಿದೆ. ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನೀವು ದಿನವಿಡೀ ಸಕ್ರಿಯ ಮತ್ತು ಶಕ್ತಿಯುತರಾಗಿರಲು ಸಹಾಯ ಮಾಡುತ್ತದೆ.

ಮೀನು)
ಮೀನು ಶೀಘ್ರ ಚೇತರಿಕೆಗೆ ಅಗತ್ಯವಾದ ಪ್ರೋಟೀನ್ ಮತ್ತು ಒಮೆಗಾ -3 ಕೊಬ್ಬಿನ ಆಮ್ಲಗಳನ್ನು ಹೊಂದಿರುತ್ತದೆ. ಇದು ಜೀವಸತ್ವ ಡಿ, ಬಿ6 ಜೀವಸತ್ವ, ಮತ್ತು ಶಕ್ತಿಗ್ ಅಗತ್ಯವಾದ ವಿಟಮಿನ್ ಬಿ 12ನ್ನು ಹೊಂದಿದೆ. ಸಾಲ್ಮನ್ ಮೀನು, ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಮತ್ತು ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಏಕದಳ ಧಾನ್ಯ
ಒಂದು ಬಟ್ಟಲು ಏಕದಳ ಧಾನ್ಯ, ಸ್ನಾಯು ಶಕ್ತಿಗೆ ಒಂದು ಉತ್ತಮ ಮೂಲವಾಗಿದೆ. ಈ ಧಾನ್ಯಗಳಲ್ಲಿ ಜೀವಕೋಶೀಯ ಚಯಾಪಚಯ ಶಕ್ತಿಯನ್ನು ಹೆಚ್ಚಿಸುವ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ. ಹಾಲು ಅಥವಾ ಚಾಕಲೇಟ್ ಹಾಲಿನೊಂದಿಗೆ ಪ್ರೊಟೀನ್ ಹೊಂದಿರುವ ಏಕದಳ ಧಾನ್ಯಗಳನ್ನು ಒಂದು ಬೌಲ್ ನಷ್ಟು ಸೇವಿಸಿದರೆ ಸ್ನಾಯುಗಳು ಬಲಗೊಳ್ಳುತ್ತವೆ.

ಸಿಹಿ ಗೆಣಸು
ಸಿಹಿ ಗೆಣಸು ಆಹಾರದಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಪೊಟ್ಯಾಶಿಯಂ ಅಂಶಗಳು ಸಮೃದ್ಧವಾಗಿದೆ. ವ್ಯಾಯಾಮದ ನಂತರ, ದೇಹದ ಗ್ಲೈಕೋಜೆನ್ (glycogen) ಮಟ್ಟ ಕಡಿಮೆಯಾಗಲ್ಪಡುತ್ತದೆ, ಮತ್ತು ಸಿಹಿ ಗೆಣಸು, ಗ್ಲೈಕೋಜೆನ್ ಮಟ್ಟವನ್ನು ಮತ್ತೆ ಹೆಚ್ಚಿಸುತ್ತದೆ.

ಕೆಂಪಕ್ಕಿ ಅನ್ನ
ಕಂದು ಅಕ್ಕಿ (ಬ್ರೌನ್ ರೈಸ್) ಬಿಳಿ ಅಕ್ಕಿಗಿಂತ ಹೆಚ್ಚು ಆರೋಗ್ಯಕರ ಆಯ್ಕೆಯಾಗಿದೆ. ಆದರೆ ವ್ಯಾಯಾಮದ ನಂತರ ನೀವು ಗ್ಲೈಕೋಜಿನ್ ಮಟ್ಟವನ್ನು ಪುನಃ ಹೆಚ್ಚಿಸಲು ಹೆಚ್ಚಿನ ಗ್ಲೈಸೆಮಿಕ್ ಇರುವ (ಜಿಐ) ಆಹಾರ ಸೇವಿಸುವ ಅಗತ್ಯವಿದೆ. ವೈಟ್ ಅಕ್ಕಿಯ ಮೂಲಕವೂ ಏರಿಕೆಯಾಗುತ್ತದೆ.

ಡ್ರೈಫ್ರೂಟ್ಸ್
ನಟ್ಸ್ ಮತ್ತು ಡ್ರೈ ಫ್ರೂಟ್ಸ್ ಗಳಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ ಎ, ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ ಅಂಶಗಳು ಸಮೃದ್ಧವಾಗಿವೆ. ಡ್ರೈಫ್ರೂಟ್ಸ್ ಸೇವನೆಯಿಂದ ಸುಲಭವಾಗಿ ಜೀರ್ಣಿಸಿಕೊಳ್ಳಲು ಮತ್ತು ಗ್ಲೈಕೋಜಿನ್ ಮಟ್ಟ ಹೆಚ್ಚಲು ಸಾಧ್ಯ. ಮತ್ತು ಇದರಿಂದಾಗಿ ದೇಹದಲ್ಲಿ ಶಕ್ತಿಯ ಮಟ್ಟವೂ ಹೆಚ್ಚುತ್ತದೆ.

ಕ್ಯಾರೆಟ್
ಕ್ಯಾರೆಟ್ ಪ್ರೋಟೀನ್ ಮತ್ತು ಕಾಬ್ರೋಹೈಡ್ರೇಟ್ ನ ಒಂದು ಉತ್ತಮ ಮೂಲವಾಗಿದೆ. ಅಲ್ಲದೇ ಕಬ್ಬಿಣ ಮತ್ತು ವಿಟಮಿನ್ ಸಿ, ಎ ಹೇರಳವಾಗಿದೆ. ಆದ್ದರಿಂದ ವ್ಯಾಯಾಮದ ನಂತರ ಸೇವಿಸಬಹುದಾದ ಉತ್ತಮ ಆಹಾರ ಇದಾಗಿದೆ.

ಚಿಕನ್
ಜೀವಕೋಶೀಯ ಚಯಾಪಚಯ ಶಕ್ತಿಗೆ ಕೊಡುಗೆಯಾಗಿರುವ ಪ್ರೊಟೀನ್, ಒಮೇಗಾ 3 ಮತ್ತು ಅಮೈನೋ ಆಮ್ಲವನ್ನು ಚಿಕನ್ ಒದಗಿಸುತ್ತದೆ.

ಹಣ್ಣುಗಳು
ಹಣ್ಣುಗಳಲ್ಲಿ, ಫೈಬರ್, ನೀರು, ವಿಟಮಿನ್ ಸಿ ಹಾಗೂ ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವು ದೇಹಕ್ಕೆ ಪೋಷಕಾಂಶಗಳನ್ನು ಮರಳಿ ನೀಡಲು ಮತ್ತು ನಿಮ್ಮ ದಣಿದ ಸ್ನಾಯುಗಳನ್ನು ಶಕ್ತಿಯುತವಾಗಿಸಲು ಸಹಾಯ ಮಾಡುತ್ತವೆ. ಹಣ್ಣುಗಳು ಅಥವಾ ಹಣ್ಣಿನ ರಸವನ್ನು ವ್ಯಾಯಾಮದ ನಂತರ ಸೇವಿಸುವುದರಿಂದ ದಣಿದ ಸ್ನಾಯುಗಳಿಗೆ ಸಾಕಷ್ಟು ಪ್ರೊಟೀನ್ ಗಳು ದೊರಕುತ್ತವೆ.



Click it and Unblock the Notifications