Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಪುರುಷರ ದೇಹದ ಸದೃಢತೆಗಾಗಿ ಫಲಪ್ರದ ಟಿಪ್ಸ್
ಸರಿಯಾದ ದೇಹದಾಢ್ಯತೆ, ಅಚ್ಚುಕಟ್ಟಾದ ಮೈಕಟ್ಟು, ಎಲ್ಲರೂ ಹುಬ್ಬೇರಿಸುವಂತಹ ಬಲಯುತ ಸ್ನಾಯುಗಳು ಇಂತಹ ಸುಂದರ ದೇಹ ಯಾರಿಗೆ ತಾನೇ ಇಷ್ಟವಾಗದು ಹೇಳಿ? ಇಂತಹ ಸದೃಢ ದೇಹವನ್ನು ತಮ್ಮದಾಗಿಸಿಕೊಳ್ಳಲು ನಿತ್ಯವೂ ಸಾಕಷ್ಟು ಮಂದಿ ಹಲವಾರು ವ್ಯಾಯಾಮ, ಯೋಗ, ಆಹಾರಕ್ರಮಗಳನ್ನು ಅನುಸರಿಸುತ್ತಾರೆ! ಬಾಲಿವುಡ್ ನಟರನ್ನು ನೋಡಿದಾಗಲಂತೂ ಅವರಂತೆ ನಮ್ಮ ದೇಹವನ್ನಾಗಿಸಬೇಕೆಂದು ಪ್ರತಿಯೊಬ್ಬ ಪುರುಷನಿಗೆ ಅನಿಸುತ್ತದೆ. ಬಾಡಿ ಬಿಲ್ಡ್ ಮಾಡುತ್ತಿರುವವರಿಗಾಗಿ ಈ ಟಿಪ್ಸ್
ಹಾಗಂದ ಮಾತ್ರಕ್ಕೆ ಈ ಸದೃಢ ದೇಹವನ್ನು ಹೊಂದುವುದು ಒಂದು ದಿನದಲ್ಲಿ ಸಾಧ್ಯವಾಗುವಂತದ್ದಲ್ಲ. ಅದಕ್ಕಾಗಿ ಸಾಕಷ್ಟು ಸಮಯವನ್ನು ವ್ಯಯಮಾಡಬೇಕಾಗುತ್ತದೆ! ಅಲ್ಪ ಸಮಯದಲ್ಲಿ ಸ್ನಾಯು ಬಲವನ್ನು ಹೊಂದುವ ಯೋಚನೆಯನ್ನು ಬಿಟ್ಟು, ಇದಕ್ಕಾಗಿ ನಿಮ್ಮ ಜೀವನಕ್ರಮವನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದರ ಮೇಲೆ ಹೆಚ್ಚು ಗಮನವಹಿಸಿ. ಸರಿಯಾದ ಆಹಾರಕ್ರಮ, ವ್ಯಾಯಾಮಗಳು ಆರೋಗ್ಯಕರವಾಗಿ ಸ್ನಾಯು ಬಲವನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ದೇಹದಾರ್ಢ್ಯ ಪಟುಗಳು ಸೇವಿಸಲೇಬೇಕಾದ ಆಹಾರಗಳು
ಪುರುಷರು ಧೃಡವಾದ ಮೈಕಟ್ಟು ಬೇಕೆಂದು ತುಂಬಾ ಇಷ್ಟ ಪಡುವುದು ಸಹಜ. ಆದರೆ ಕೆಲಸದ ಒತ್ತಡ, ಸಮಯ ಸಿಕ್ಕಿದಾಗ ಪಾರ್ಟಿ, ಆಧುನಿಕ ಜೀವನ ಶೈಲಿ ಇವೆಲ್ಲವೂ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ. ಆದರೆ ಕೆಲವು ಸರಳ ಉಪಾಯಗಳಿಂದ ಧೃಡವಾಗಿ ಮತ್ತು ಆರೋಗ್ಯಕರವಾಗಿ ಇರಬಹುದು. ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟು... ಮುಂದೆ ಓದಿ

ಒತ್ತಡವನ್ನು ಕಡಿಮೆ ಮಾಡಬೇಕು
ಕೆಲಸದಲ್ಲಿ ಒತ್ತಡ ಇರುವುದು ಸಾಮಾನ್ಯ. ಅಂತಹ ಒತ್ತಡವನ್ನು ಜೊತೆಯಲ್ಲಿಯೆ ಇಟ್ಟುಕೊಂಡು ಇರಬಾರದು. ಅವುಗಳಿಂದ ಆದಷ್ಟು ಬೇಗ ಹೊರಬೇಕು. ಅದಕ್ಕಾಗಿ ಯೋಗ ಮತ್ತು ವ್ಯಾಯಾಮ ಒಳ್ಳೆಯದು. ಧ್ಯಾನ ಮತ್ತು ಥೆರಪಿಗಳಿಂದ ಒತ್ತಡವನ್ನು ಕಡಿಮೆ ಮಾಡಬಹುದು.

ತಿನ್ನುವ ಆಹಾರದ ಮೇಲೆ ನಿಗಾ ಇರಲಿ
* ಎಣ್ಣೆ ಪದಾರ್ಥ, ತುಂಬಾ ಖಾರ ಮತ್ತು ಫ್ರೈ ಮಾಡಿರುವ ಪದಾರ್ಥಗಳನ್ನು ಹೆಚ್ಚಾಗಿ ಸೇಸಬಾರದು.
* ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಮಿತಿಯಲ್ಲಿ ಸೇವಿಸಬೇಕು.
* ಪ್ರೊಟೀನ್ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.
* ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು.
* ಮೈದಾ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಾರದು.
* ಮದ್ಯಪಾನ ಕುಡಿಯುವವರಾದರೆ ಮಿತಿಯಲ್ಲಿ ಇರಲಿ.

ನಡೆಯುವುದು ಹಾಗೂ ನಿಧಾನಗತಿಯಲ್ಲಿ ಓಡುವುದು
* ಕೆಲಸ ಮಾಡುತ್ತಿರುವಾಗ ಮದ್ಯದಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದು ಸ್ವಲ್ಪ ದೂರ ನಡೆದಾಡಿ ( ರೂಮಿನಲ್ಲಿಯೆ ನಡೆದಾಡಬಹುದು).
* ಬೆಳಗ್ಗೆ ಎದ್ದು ಅರ್ಧ ಗಂಟೆ ನಡೆಯುವುದು ಒಳ್ಳೆಯದು. ನಡೆಯುವುದರಿಂದ ಟೆನ್ಷನ್ ಕಡಿಮೆಯಾಗುವುದು. ಅಲ್ಲದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ದೇಹದ ತೂಕವನ್ನು ಮಿತಿಯಲ್ಲಿಡಬಹುದು.
* ರಾತ್ರಿ ಊಟದ ನಂತರ ಸ್ವಲ್ಪ ದೂರ ನಡೆಯುವುದು ಒಳ್ಳೆಯದು.
* ಪುಶ್ ಅಪ್ ವ್ಯಾಯಾಮ ಮಾಡುವುದು ಶರೀರಕ್ಕೆ ತುಂಬಾ ಒಳ್ಳೆಯದು.

ಆಟ ಅಡುವುದು
* ಇಷ್ಟವಿರುವ ಆಡಿ. ಇದರಿಂದ ಮನಸ್ಸಿಗೆ ಸಂತೋಷ ದೊರೆಯುವುದು. ದೇಹಕ್ಕೂ ಒಳ್ಳೆಯ ವ್ಯಾಯಾಮ. ಟನ್ನೀಸ್, ಕ್ರಿಕೆಟ್, ಹಾಕಿ ಇವುಗಳನ್ನು ಆಡುವುದರಿಂದ ದೇಹದ ತೂಕ ನಿಯಂತ್ರಣದಲ್ಲಿಡಬಹುದು ಮತ್ತು ಮನರಂಜನೆ ಕೂಡ ದೊರೆಯುವುದು.
* ಈಜುವುದು ತುಂಬಾ ಒಳ್ಳೆಯ ವ್ಯಾಯಾಮವಾಗಿದೆ. ಕೈ ಕಾಲುಗಳ ಸ್ನಾಯುಗಳು ಬಲವಾಗುತ್ತದೆ.

ನೀರು ಕುಡಿಯುವುದು
ದೇಹದ ಆರೋಗ್ಯಕರ ಸ್ಥಿತಿಗೆ ಹಾಗೂ ಸ್ನಾಯು ಬಲಕ್ಕೆ ಮುಖ್ಯವಾಗಿ ದಿನದಲ್ಲಿ ಅಧಿಕ ನೀರನ್ನು ಕುಡಿಯುವುದು ಅತ್ಯಗತ್ಯ. ವ್ಯಾಯಾಮವನ್ನು ಮಾಡಿದ ನಂತರ ಸಾಕಷ್ಟು ನೀರನ್ನು ಕುಡಿಯಿರಿ. ನಿಮ್ಮ ವ್ಯಾಯಾವದ ಸಂದರ್ಭದಲ್ಲಿಯೂ ಕೂಡ ಪ್ರತಿ 10-20 ನಿಮಿಷಗಳಿಗೊಮ್ಮೆ ನೀರನ್ನು ಕುಡಿಯುತ್ತಿರಿ.

ಪ್ರೊಟೀನ್
ಸ್ನಾಯುಬಲವನ್ನು ಹೆಚ್ಚಿಸುವಂತಹ ವ್ಯಾಯಾಮವನ್ನು ಮಾಡಿದಾಗ ಹಾಗೂ ಭಾರವನ್ನು ಎತ್ತುವ ವ್ಯಾಯಾಮ ಕ್ರಮವನ್ನು ಮಾಡಿದಾಗ ನಿಮ್ಮ ದೇಹಕ್ಕೆ ಪ್ರೊಟೀನ್ ಅಂಶ ಅತ್ಯಗತ್ಯವಾಗಿ ಬೇಕೆಬೇಕು. ಪ್ರೋಟೀನ್ ಯುಕ್ತ ಆಹಾರವನ್ನು ಅಧಿಕವಾಗಿ ಸೇವಿಸುವುದರಿಂದ ಸ್ನಾಯುಗಳ ಬಲವನ್ನು ಹೆಚ್ಚಿಸುವ ಅಮೈನೋ ಆಮ್ಲವು ದೇಹದಲ್ಲಿ ಉತ್ಪಾದನೆಯಾಗುತ್ತದೆ.

ಸರಿಯಾದ ವ್ಯಾಯಾಮ ವಿಧಾನ
ಸ್ನಾಯುಬಲವನ್ನು ಹೆಚ್ಚಿಸಲು ವ್ಯಾಯಾಮಗಳು ಅಗತ್ಯ. ಆದರೆ ಅದಕ್ಕಿಂತ ಪ್ರಮುಖ ವಿಷಯವೆಂದರೆ ವ್ಯಾಯಾಮವನ್ನು ಸರಿಯಾದ ವಿಧಾನದಲ್ಲಿ ಸರಿಯಾದ ಕ್ರಮದಲ್ಲಿ ಮಾಡಬೇಕು.



Click it and Unblock the Notifications











