Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
30 ದಿನದಲ್ಲಿ ಸಣ್ಣಗಾಗಲು ಏರೊಬಿಕ್ಸ್ ಮಾಡಿ

ಏರೊಬಿಕ್ಸನ್ನು 20 ನಿಮಿಷ ಅಥವಾ 40-1 ಗಂಟೆಯವರೆಗೂ ಅನುಸರಿಸಬಹುದು. ಬೆಳಗ್ಗೆ, ಸಂಜೆ ಎರಡೂ ಹೊತ್ತು ಏರೊಬಿಕ್ಸ್ ಮಾಡಬಹುದು. ನಯವಾದ ಸಂಗೀತದೊಂದಿಗೆ ಕ್ಯಾಲೊರಿ ಕರಗಿಸಲು ಏರೊಬಿಕ್ಸ್ ಅನುಸರಿಸುವುದು ಹೇಗೆ?
ಮನೆಯಲ್ಲೇ ಏರೊಬಿಕ್ಸ್ ವ್ಯಾಯಾಮದ ವಿಧಾನ:
1. ಮೊದಲು 10 ನಿಮಿಷ ವೇಗವಾಗಿ ಹಿಂದಕ್ಕೆ ಮುಂದಕ್ಕೆ ನಡಿಗೆ ಅಥವಾ ಜಾಗ್ ಮಾಡಬೇಕು.
2. ಆನಂತರ ಬಾಗುವ ವ್ಯಾಯಾಮವನ್ನು ಮಾಡಬೇಕು. ಮೇಲಕ್ಕೆ, ಕೆಳಕ್ಕೆ, ಅಕ್ಕಕ್ಕೆ ಪಕ್ಕಕ್ಕೆ ಹಿಂದಕ್ಕೆ, ಮುಂದಕ್ಕೆ ಎಲ್ಲಾ ಕಡೆಯೂ ಬಾಗಬೇಕು. ಕಾಲುಗಳ ಚಲನವಲನ ಹೆಚ್ಚಿರಬೇಕು.
3. ಕುರ್ಚಿಯ ಸಹಾಯದಿಂದ ವ್ಯಾಯಾಮವನ್ನು ಅನುಸರಿಸಬೇಕು. ಕುರ್ಚಿಯ ಮೇಲೆ ಕೂತು ನಿಲ್ಲುವುದನ್ನು 12 ಬಾರಿ ಮಾಡಬೇಕು. ಇದರಿಂದ ತೊಡೆ, ಕಾಲು ಮತ್ತು ಸೊಂಟದಲ್ಲಿನ ಸ್ನಾಯುಗಳು ಗಟ್ಟಿಗೊಳ್ಳುತ್ತದೆ. ಅಲ್ಲಿ ಸೇರಿಕೊಂಡ ಬೊಜ್ಜೂ ಕರಗಲು ಅನುವಾಗುತ್ತದೆ.
4. ಈಗ ಹೃದಯದ ಸ್ವಾಸ್ಥ್ಯಕ್ಕೆ ಅನುಕೂಲವಾಗುವ ವ್ಯಾಯಾಮವೊಂದನ್ನು ಅನುಸರಿಸಿ. ಓಡುವುದು ಅಥವಾ ಜೋರಾಗಿ ನೃತ್ಯ ಮಾಡುವುದು ಇದಾಗಿದೆ. ಈ ವ್ಯಾಯಾಮದಿಂದ ಹೃದಯದ ಬಡಿತ ಹೆಚ್ಚಾದಂತೆನಿಸುತ್ತದೆ.
5. ಕೊನೆಯಲ್ಲಿ ಹಾಡನ್ನು ನಿಲ್ಲಿಸಿ ಒಂದೆಡೆ ಕೂತು ದೀರ್ಘ ಉಸಿರಾಟ ನಡೆಸಬೇಕು. ಇದರಿಂದ ದೇಹ ಮತ್ತು ಮನಸ್ಸೂ ಎರಡೂ ರಿಲ್ಯಾಕ್ಸ್ ಆಗುತ್ತದೆ. ಕೆಲವು ನಿಮಿಷ ಧ್ಯಾನ ಮಾಡಿದರೆ ದಿನವಿಡೀ ಚೈತನ್ಯದಿಂದಿರಲು ಅನುವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
