Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತೂಕ ಇಳಿಸಿಕೊಳ್ಳಲು ಬೆಳಗಿನ ತಿಂಡಿ ಹೇಗಿರಬೇಕು?

ತೂಕ ಕಳೆದುಕೊಳ್ಳಲು ಆರೋಗ್ಯಕರ ಬ್ರೇಕ್ ಫಾಸ್ಟ್ ಹೇಗಿರಬೇಕು?
1. ಮೊದಲು ತಿಂಡಿಯ ಸಮಯವನ್ನು ನಿಗದಿಗೊಳಿಸಿ. ನಿರಂತರವಾಗಿ ಆ ಸಮಯವನ್ನು ಪಾಲಿಸಿ. ಸಮಯ ವ್ಯತ್ಯಾಸವಾದರೆ ತೂಕ ಇಳಿಸಿಕೊಳ್ಳುವ ಸಾಧ್ಯತೆಯನ್ನು ಕಳೆದುಕೊಂಡಂತೆ.
2. ಓಟ್ ಮೀಲ್ ತೂಕ ಇಳಿಸಿಕೊಳ್ಳಬಯಸುವವರಿಗೆ ಒಳ್ಳೆ ಬ್ರೇಕ್ ಫಾಸ್ಟ್. ಇದು ಆರೋಗ್ಯಕರ ಮಾತ್ರವಲ್ಲ, ಹೊಟ್ಟೆಯನ್ನೂ ತುಂಬಿಸುತ್ತೆ. ಓಟ್ ಮೀಲ್ ನೊಂದಿಗೆ ಕೆಲವು ತರಕಾರಿ ಬಳಸಿ ಬಿಸಿಯಾಗಿ ತಿಂದರೆ ರುಚಿಯೂ ಸಿಗುತ್ತೆ.
3. ಬೆಳಗ್ಗೆ ಎರಡು ಬಾಳೆ ಹಣ್ಣು ತಿಂದರೆ ದಿನವಿಡೀ ಹಸಿವಾಗದಂತೆ ತಡೆಯುತ್ತೆ. ಬಾಳೆ ಹಣ್ಣಿನೊಂದಿಗೆ ಯಾವುದಾದರೂ ಹಣ್ಣಿನ ಜ್ಯೂಸ್ ಕುಡಿಯಬಹುದು. ಆದರೆ ಬಾಳೆ ಹಣ್ಣು ಸೇವಿಸುವವರು ಜಂಕ್ ಫುಡ್ ಮತ್ತು ಎಣ್ಣೆ ಪದಾರ್ಥವನ್ನು ಸೇವಿಸದಿದ್ದರೆ ಬೇಗನೆ ಫಲಿತಾಂಶ ಹೊಂದಬಹುದು.
4. ಬೇಯಿಸಿದ ಮೊಟ್ಟೆ ಬೆಳಗ್ಗಿನ ತಿಂಡಿಗೆ ಒಳ್ಳೆ ಆಯ್ಕೆ. ಬ್ರೆಡ್ ಟೋಸ್ಟ್ ಜೊತೆ ಬೇಯಿಸಿದ ಮೊಟ್ಟೆ ತಿಂದರೆ ಬೆಳಗ್ಗಿನ ತಿಂಡಿ ಆರೋಗ್ಯಕರವಾಗಿರುವುದಲ್ಲದೆ ತೂಕವನ್ನೂ ಇಳಿಸಿಕೊಳ್ಳಬಹುದು.
5. ಕಾರ್ನ್ ಫ್ಲೇಕ್ಸ್ ಕೂಡ ಬಹುತೇಕ ಜನರು ತೂಕ ಇಳಿಸಿಕೊಳ್ಳಲು ಬೆಳಗಿನ ತಿಂಡಿಗೆ ತಿನ್ನುತ್ತಾರೆ. ತೂಕ ಕಡಿಮೆ ಮಾಡಿಕೊಳ್ಳಲು ಇದು ಹೆಚ್ಚು ಪರಿಣಾಮಕಾರಿ. ಕೆನೆ ತೆಗೆದ ಹಾಲು ಅಥವಾ ಹಣ್ಣಿನ ಜ್ಯೂಸ್ ನೊಂದಿಗೂ ಕಾರ್ನ್ ಫ್ಲೇಕ್ಸ್ ತಿಂದರೆ ಹೊಟ್ಟೆಯನ್ನೂ ತುಂಬಿಸುತ್ತದೆ.
6. ತರಕಾರಿ ಸ್ಯಾಂಡ್ ವಿಚ್ ತೂಕ ಕಡಿಮೆ ಮಾಡಿಕೊಂಡು ತೆಳ್ಳಗೆ ಕಾಣಲು ಹೆಚ್ಚು ಸಹಕಾರಿ. ತರಕಾರಿ ಸ್ಯಾಂಡ್ ವಿಚ್ ಗೆ ಸಕ್ಕರೆ ಬೆರೆಸಬಾರದು. ಕಡಿಮೆ ಕೊಬ್ಬಿನಂಶದ ಚೀಸ್ ಬಳಸಿ ತಿನ್ನಬಹುದು.
ಈ ಆರೂ ಆಹಾರಗಳು ಬ್ರೇಕ್ ಫಾಸ್ಟ್ ಗೆ ಉತ್ತಮ. ಆದರೆ ಬೆಳಗ್ಗೆ ಹೊತ್ತು ಇವುಗಳನ್ನೂ ತುಂಬಾ ತಿನ್ನಬಾರದು. ಇದರಿಂದ ದೇಹದ ಶಕ್ತಿ ಜೀರ್ಣಕ್ರಿಯೆಯಲ್ಲಿಯೇ ವ್ಯಯಿಸಿಹೋಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
