Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಬೊಜ್ಜು ಕರಗಿಸುವ ಪರಿಣಾಮಕಾರಿ ಗಿಡಮೂಲಿಕೆ ಯಾವುದು?

ಈ ಅನಗತ್ಯ ಕೊಲೆಸ್ಟ್ರಾಲ್ ಕರಗಿಸಲು, ಸ್ಲಿಮ್ ಮತ್ತು ಫಿಟ್ ಆಗಿ ಕಾಣಲು ಹೆಚ್ಚು ಶ್ರಮ ಪಡಬೇಕಿಲ್ಲ. ಮನೆಯಲ್ಲೇ ಇರುವ, ಅಡುಗೆಗೆ ಬಳಸುವ ಕೆಲ ಗಿಡಮೂಲಿಕೆಗಳು ಅತಿ ಪರಿಣಾಮಕಾರಿಯಾಗಿ ಬೊಜ್ಜನ್ನು ಕರಗಿಸುವುದರೊಂದಿಗೆ ಆರೋಗ್ಯವನ್ನೂ ನೀಡುತ್ತದೆ.
ಕೊಲೆಸ್ಟ್ರಾಲ್ ಕರಗಿಸುವ ಐದು ಗಿಡಮೂಲಿಕೆಗಳು ಇಲ್ಲಿದೆ.
* ಶುಂಠಿ: ಎಲ್ಲರ ಮನೆಯಲ್ಲೂ ಸರ್ವೇ ಸಾಮಾನ್ಯವಾಗಿರುವ ಶುಂಠಿ ಬೊಜ್ಜು ಕರಗಿಸುವಲ್ಲಿ ಹೆಚ್ಚು ಸಹಕಾರಿ. ಹಾಲಿನೊಂದಿಗೆ ಒಂದು ಚಮಚ ಶುಂಠಿ ಪೌಡರ್ ಬೆರೆಸಿ ಕುಡಿದರೆ ಫಿಟ್ ನೆಸ್ ಕಾಪಾಡಿಕೊಳ್ಳಬಹುದು.
* ಗೋಧಿ ಹುಲ್ಲು: ಜ್ಯೂಸ್ ನಂತೆ ಕುಡಿಯಬಹುದಾದ ಈ ಗೋಧಿ ಹುಲ್ಲಿನ ರಸದಲ್ಲಿ ಅಧಿಕವಾದ ನಾರಿನಂಶವಿದೆ. ಈ ನಾರಿನಂಶ ದೇಹದಲ್ಲಿ ಬೊಜ್ಜು ಮನೆಮಾಡದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಕಬ್ಬಿಣಾಂಶ, ಪ್ರೊಟೀನ್ ಕೂಡ ಇದೆ. ಪಾಲಾಕ್ ಸೊಪ್ಪು ಮತ್ತು ಮೊಳಕೆ ಕಾಳಿಗಿಂತ ಹೆಚ್ಚಿನ ಪ್ರಯೋಜನವನ್ನು ಗೋಧಿ ಹುಲ್ಲಿನಿಂದ ಪಡೆದುಕೊಳ್ಳಬಹುದು.
* ಕೆಂಪು ಮೆಣಸಿನಕಾಯಿ: ಕೆಂಪು ಮೆಣಸಿನಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಚುರುಕುಗೊಳ್ಳುವುದಲ್ಲದೆ ದೇಹದಲ್ಲಿ ಶಕ್ತಿಯ ಮಟ್ಟವನ್ನೂ ಹೆಚ್ಚಿಸುತ್ತದೆ. ಬೊಜ್ಜು ಕರಗಿಸುವಲ್ಲಿಯೂ ಹೆಚ್ಚು ಶಕ್ತಿಯುತವಾಗಿರುವ ಮೆಣಸಿನಕಾಯಿಯನ್ನು ನಿಯಂತ್ರಿತ ಮಟ್ಟದಲ್ಲಿ ಸೇವಿಸಬೇಕು. ಇಲ್ಲವೆಂದರೆ ಹೊಟ್ಟೆಯಲ್ಲಿ ಉರಿಯೂ ಉಂಟಾಗುತ್ತದೆ.
* ಕಹಿ ಹುಳಿ ಕಿತ್ತಳೆ: ಕಹಿ ಕಿತ್ತಳೆ ನೈಸರ್ಗಿಕವಾಗಿ ದೇಹದ ತೂಕ ಇಳಿಸುತ್ತದೆ. ಇದು ದೇಹದ ಅನೇಕ ಭಾಗದಲ್ಲಿ ಅಧಿಕವಾಗಿ ತುಂಬಿಕೊಂಡ ಬೊಜ್ಜನ್ನು ಕ್ರಮೇಣ ಕರಗಿಸುತ್ತದೆ. ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೂ ಕಹಿ ಕಿತ್ತಳೆ ಸೇವನೆ ಒಳ್ಳೆಯದು.
* ಗ್ರೀನ್ ಟೀ ಎಲೆ- ಗ್ರೀನ್ ಟೀ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಪರಿಣಾಮಕಾರಿಯಾಗಿ ಸಾಧ್ಯವಿದೆ. ದಿನನಿತ್ಯ 2 ಕಪ್ ಗ್ರೀನ್ ಟೀ ಕುಡಿದರೆ ಟೀಯಲ್ಲಿನ ಆಂಟಿಯಾಕ್ಸಿಡಂಟ್ ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ.
ತೂಕ ಇಳಿಸಿಕೊಳ್ಳಲು ಇನ್ನಿತರ ಮಾರ್ಗ ಉಪಯೋಗಿಸಿಕೊಳ್ಳುವುದಕ್ಕಿಂತ ಈ ನೈಸರ್ಗಿಕ ಮಾರ್ಗವನ್ನು ಬಳಸಿಕೊಳ್ಳುವುದು ಹೆಚ್ಚು ಸೂಕ್ತ, ಸುಲಭ ಮತ್ತು ಆರೋಗ್ಯಕರ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
