Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ರುಚಿಯೊಂದಿಗೆ ತೂಕ ಇಳಿಸುವ ಡಯಟ್ ಯಾವುದು?

ಏಳು ರೀತಿಯ ರುಚಿಕರ ಡಯಟ್:
1. ಚಾಕಲೇಟ್ ಡಯಟ್: ದಿನಕ್ಕೆ ಎರಡು ಚಾಕಲೇಟ್ ಬಾರನ್ನು ಸಕ್ಕರೆ ರಹಿತ ಟೀ ಯೊಂದಿಗೆ ಸೇವಿಸಬಹುದಂತೆ. ಇದನ್ನು 7 ದಿನಗಳ ಅವಧಿ ಮಾಡಿದರೆ ರುಚಿಯೊಂದಿಗೆ ಬೊಜ್ಜೂ ಕರಗುತ್ತೆ. ಆದರೆ ಈ ಡಯಟ್ ನಿಂದ ಅಡ್ಡ ಪರಿಣಾಮವೂ ಇರುವುದರಿಂದ ಸೂಚನೆ ಕಂಡಾಕ್ಷಣ ನಿಲ್ಲಿಸಬೇಕು.
2. ಇಟಾಲಿಯನ್ ಡಯಟ್: ಇಟಾಲಿಯನ್ ಡಯಟ್ ಗಳಲ್ಲಿ ಒಂದೆನಿಸಿರುವ ಪಾಸ್ತಾ ತಿನ್ನುವುದು ಕೂಡ ಒಳ್ಳೆಯದು. ಭಾರೀ ಭೋಜನದ ಬದಲು ಬಾಯಿಗೆ ರುಚಿ ಎನಿಸುವ ಪಾಸ್ತಾ ತಿಂದರೆ ಇದರಲ್ಲಿರುವ ಪೋಷಕಾಂಶ, ನಾರಿನಂಶ, ಅಮಿನೊ ಆಸಿಡ್ ತೂಕ ಇಳಿಸಲು ಸಹಕಾರಿಯಾಗುತ್ತದೆ.
3. ಕ್ಯಾಂಡಿ ಡಯಟ್: ಕ್ಯಾಂಡಿ ತಿನ್ನುವುದರಿಂದ ಅನವಶ್ಯಕ ಆಹಾರ ಸೇವಿಸುವುದನ್ನು ನಿಯಂತ್ರಿಸುತ್ತದೆ. ಊಟ ಹೆಚ್ಚು ಸೇರದಂತೆ ತಡೆಯುವ ಮೂಲಕ ತೂಕವನ್ನೂ ಕಡಿಮೆಗೊಳಿಸುತ್ತೆ.
4. ಐಸ್ ಕ್ರೀಂ ಅಥವಾ ಮೊಸರಿನ ಡಯಟ್: ಊಟಕ್ಕೆ ಮುನ್ನ ಅಥವಾ ನಂತರ ಐಸ್ ಕ್ರೀಂ ಮತ್ತು ಮೊಸರು ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ, ಊಟಕ್ಕೆ ಮುನ್ನ ಸೇವಿಸದರೆ ಹೆಚ್ಚು ಸೇವಿಸುವುದನ್ನು ತಡೆಯಬಹುದು. ಊಟವಾದ ನಂತರದ ಅವಧಿಯಲ್ಲಿ ಹಸಿವಾದರೂ ಇದನ್ನು ತಿಂದರೆ ಒಳ್ಳೆಯದು. ಇದು ಅನವಶ್ಯಕ ಬೊಜ್ಜನ್ನೂ ಕರಗಿಸುತ್ತೆ.
5. ಸೌತೆಕಾಯಿ/ ಕಲ್ಲಂಗಡಿ ಅಥವಾ ಬಾಳೆಹಣ್ಣಿನ ಡಯಟ್: ನೀರಿನಂಶ ಮತ್ತು ನಾರಿನಂಶ ಹೆಚ್ಚಿರುವ ಈ ಹಣ್ಣುಗಳನ್ನು ಅನ್ನ, ಬೇಕರಿ ಪದಾರ್ಥಗಳ ಬದಲಿಗೆ ತಿಂದರೆ ಒಳ್ಳೆಯದು. ಇದು ಜೀರ್ಣಕ್ರಿಯೆ ಚುರುಕುಗೊಳಿಸಿ ನಾರಿನಂಶದ ಮೂಲಕ ದೇಹದಲ್ಲಿ ಬೊಜ್ಜು ಕೂರದಂತೆ ಹೊರಗೆ ಹಾಕುತ್ತೆ.
6. ದ್ರಾಕ್ಷಿ ಡಯಟ್: ಕಡಿಮೆ ಕ್ಯಾಲರಿ ಹೊಂದಿರುವ ಹಣ್ಣುಗಳನ್ನು ಅದರಲ್ಲೂ ದ್ರಾಕ್ಷಿಯನ್ನು ತಿನ್ನುವುದರಿಂದ ಬಾಯಿಗೂ ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ಆಂಟಿಯಾಕ್ಸಿಡಂಟ್ ಮತ್ತು ವಿಟಮಿನ್ ಸಿ ಹೆಚ್ಚಿರುವುದರಿಂದ ಚರ್ಮಕ್ಕೂ ಹೊಳಪು ತರುತ್ತದೆ. ತೂಕ ಕೂಡ ಕ್ರಮೇಣ ಕಡಿಮೆಯಾಗುತ್ತೆ.
7. ಪಾಪ್ ಕಾರ್ನ್ ಡಯಟ್: ಪಾಪ್ ಕಾರ್ನ್ ಸೇವನೆಯಿಂದ ಹಸಿವನ್ನು ನಿಯಂತ್ರಿಸಬಹುದು ಮತ್ತು ಇದರಲ್ಲಿನ ಫೈಬರ್ ಅಂಶ ದೇಹದಲ್ಲಿ ಬೊಜ್ಜು ಉಳಿಯದಂತೆ ನೋಡಿಕೊಳ್ಳುತ್ತೆ.
ಆದರೆ ಈ ಡಯಟ್ ಕೆಲವರಿಗೆ ಹೊಂದಿಕೊಳ್ಳಬಹುದು, ಆಗದೆಯೂ ಇರಬಹುದು. ಒಂದೇ ತರಹದ ಆಹಾರ ಸೇವನೆ ಪೌಷ್ಟಿಕಾಂಶದ ಕೊರತೆಯನ್ನೂ ಉಂಟುಮಾಡಬಹುದು. ಆದ್ದರಿಂದ ಈ ಡಯಟ್ ನಿಮಗೆ ಸೂಕ್ತವೆನಿಸಿದರೆ ಮಾತ್ರ ಮುಂದುವರೆಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications