Latest Updates
-
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಮಧುಮೇಹಿಗಳು ಡೈಜೆಸ್ಟಿವ್ ಬಿಸ್ಕೆಟ್ ತಿನ್ನಬಹುದೇ?
ಬಿಸ್ಕೆಟ್‌ಗಳ ಬಗ್ಗೆ ತಿಳಿಯದವರೂ ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಇದು ತುಂಬಾ ಬಡವನಿಂದ ಹಿಡಿದು ಶ್ರೀಮಂತರ ತನಕವೂ ಬಳಸುವಂತಹ ತಿಂಡಿಯಾಗಿದೆ. ದಿನನಿತ್ಯವೂ ಚಹಾ ಹಾಗೂ ಕಾಫಿ ಜತೆಗೆ ಬಿಸ್ಕೆಟ್ ಸೇವನೆ ಮಾಡುವುದು ಕೆಲವರಿಗೆ ಅಭ್ಯಾಸವಾಗಿರುವುದು. ಇನ್ನು ಕೆಲವರು ಹಸಿವಾದಾಗ ಬಿಸ್ಕೆಟ್ ಸೇವಿಸುವರು. ಹೀಗಾಗಿ ಪ್ರತಿಯೊಬ್ಬರಿಗೂ ಬಿಸ್ಕೆಟ್ ಅನ್ನುವುದು ತುಂಬಾ ಇಷ್ಟದ ತಿಂಡಿಯಾಗಿದೆ.

ಬಿಸ್ಕೆಟ್ ನಲ್ಲಿ ಹಲವಾರು ವಿಧಗಳು ಇವೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ತಿನ್ನಬಹುದಾದ ಬಿಸ್ಕೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಧುಮೇಹಿಗಳಿಗೆ ಬೇಕಾಗಿರುವಂತಹ ಬಿಸ್ಕೆಟ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಡೈಜೆಸ್ಟಿವ್ ಬಿಸ್ಕೆಟ್ ಬಗ್ಗೆ ನೀವು ಕೇಳಿರಬಹುದು. ಡೈಜೆಸ್ಟಿವ್ ಎಂದರೆ ಜೀರ್ಣವಾಗುವ ಎಂದರ್ಥವಾಗುವುದು. ಇದನ್ನು ತಿಂದರೆ ಜೀರ್ಣಕ್ರಿಯೆಯು ಸರಾಗವಾಗಿ ಆಗಬಹುದು ಎಂದು ನೀವು ಭಾವಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು. ಯಾಕೆಂದರೆ ಇದರ ಹಿಂದೆ ಹಲವಾರು ರಹಸ್ಯಗಳು ಅಡಗಿವೆ. ಬಿಸ್ಕೆಟ್ ಬಗ್ಗೆ ನಾವು ನಿಮಗೆ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಹೆಸರಿನಲ್ಲಿ ಏನಿದೆ?
ಬಿಸ್ಕೆಟ್ ಗಳನ್ನು 19ನೇ ಶತಮಾನದಲ್ಲಿ ತಯಾರಿಸುತ್ತಿದ್ದ ವೇಳೆ ಅದು ಜೀರ್ಣಕ್ರಿಯೆಗೆ ನೆರವಾಗುತ್ತಲಿತ್ತು. ಯಾಕೆಂದರೆ ಆ ಸಮಯದಲ್ಲಿ ತಯಾರಿಸುತ್ತಿದ್ದ ಬಿಸ್ಕೆಟ್ ನಲ್ಲಿ ಅಡುಗೆ ಸೋಡಾ ಇರುತಿತ್ತು ಮತ್ತು ಡೈಜೆಸ್ಟಿವ್ ಬಿಸ್ಕೆಟ್ ಅನ್ನು ಒರಟು ಕಂದುಬ್ರೆಡ್ ನಿಂದ ತಯಾರಿಸಲಾಗುತ್ತಿತ್ತು. ಆದರೆ ಆಧುನಿಕ ಯುಗದಲ್ಲಿ ಬಳಸುತ್ತಿರುವಂತಹ ಬಿಸ್ಕೆಟ್ ಗಳು ಕಂದು ಬ್ರೆಡ್ ಅನ್ನು ಬಳಸದೆ ಅದನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ.
ಇದನ್ನು ಗೋಧಿ ಹಿಟ್ಟಿನಿಂದ ತಯಾರಿಸುವ ಜತೆಗೆ ಇಂತಹ ಬಿಸ್ಕೆಟ್ ಗಳಲ್ಲಿ ಸೋಡಿಯಂ ಬೈಕಾರ್ಬೊನೇಟ್, ಅಮೋನಿಯಂ ಬೈಕಾರ್ಬೊನೇಟ್, ಮಾಲಿಕ್ ಆಮ್ಲ ಮತ್ತು ಟಾರ್ಟಾರಿಕ್ ಆಮ್ಲ, ತರಕಾರಿ ತೈಲ, ಹಾಲಿನ ಹುಡಿ, ಸಕ್ಕರೆ ಮತ್ತು ಅಡುಗೆ ಸೋಡಾವಿದೆ. ಇಲ್ಲಿ ಅಡುಗೆ ಸೋಡಾವು ನಮ್ಮ ಜೀರ್ಣಕ್ರಿಯೆಗೆ ನೆರವಾಗದಿರಲು ಪ್ರಮುಖ ಕಾರಣವೆಂದರೆ ಇಲ್ಲಿ ಬಿಸ್ಕೆಟ್ ತಯಾರಿಸುವ ವೇಳೆ ಬಿಸಿಯಿಂದಾಗಿ ಅಡುಗೆ ಸೋಡಾದ ಅಂಶಗಳು ನಾಶವಾಗುವುದು.
ಬಿಸ್ಕೆಟ್ ತುಂಬಾ ಆರೋಗ್ಯಕಾರಿ ಎಂದು ಭಾವಿಸಿ ನೀವು ಇದನ್ನು ತಿನ್ನುತ್ತಲಿದ್ದರೆ ಆಗ ನೀವು ಇದರ ಹಿಂದಿರುವ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲೇಬೇಕು.

ಡೈಜೆಸ್ಟಿವ್ ಬಿಸ್ಕೆಟ್ ನಲ್ಲಿರುವ ಪೋಷಕಾಂಶಗಳು
ಚಹಾ ಅಥವಾ ಕಾಫಿ ಕುಡಿಯುವ ವೇಳೆ ನೀವು ಎಷ್ಟು ಡೈಜೆಸ್ಟಿವ್ ಬಿಸ್ಕೆಟ್ ತಿನ್ನುತ್ತೀರಿ? ಒಂದೆರಡು ತಿನ್ನಬಹುದು ಅಲ್ಲವೇ? ಆದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಖಂಡಿತವಾಗಿಯೂ ಇದನ್ನು ನೀವು ದೊಡ್ಡ ಪ್ರಮಾಣದಲ್ಲಿ ನಿಮ್ಮ ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಬಾರದು. ಯಾಕೆಂದರೆ ಎರಡು ಡೈಜೆಸ್ಟಿವ್ ಬಿಸ್ಕೆಟ್ ನಲ್ಲಿ 150 ಕ್ಯಾಲರಿ, 20 ಕಾರ್ಬೋಹೈಡ್ರೇಟ್ಸ್, 6 ಗ್ರಾಂ ಕೊಬ್ಬು, 5 ಗ್ರಾಂ ಸಕ್ಕರೆ, 2 ಗ್ರಾಂ ಪ್ರೋಟೀನ್, 1 ಗ್ರಾಂ ನಾರಿನಾಂಶ ಮತ್ತು 0.1 ಗ್ರಾಂ ಸೋಡಿಯಂ ಇದೆ. ಒಂದು ಬಿಸ್ಕೆಟ್ ನಲ್ಲಿ 70 ಕ್ಯಾಲರಿ ಇದ್ದು, ಇದು ಕಡಿಮೆ ಪೋಷಕಾಂಶದೊಂಧಿಗೆ ಹೆಚ್ಚಿನ ಶಕ್ತಿ ನೀಡುವುದು.

ಆರೋಗ್ಯಕಾರಿ ಅಥವಾ ಅನಾರೋಗ್ಯಕಾರಿ?
ಬಿಸ್ಕೆಟ್ ನಲ್ಲಿ ಇರುವಂತಹ ಸಕ್ಕರೆ ಮಟ್ಟವು ಅತ್ಯಧಿಕವಾಗಿದೆ ಮತ್ತು ಇದನ್ನು ಅರೆ ಸಿಹಿ ತಿಂಡಿ ಎನ್ನುವ ವಿಭಾಗಕ್ಕೆ ಆರೋಗ್ಯ ಅಧಿಕಾರಿಗಳು ಕೂಡ ಸೇರ್ಪಡೆ ಮಾಡಿರುವರು.
ಬಿಸ್ಕೆಟ್ ನಲ್ಲಿ ಅನಾರೋಗ್ಯಕಾರಿ ಕೊಬ್ಬು, ಕ್ಯಾಲರಿ ಇದೆ. ಬಿಸ್ಕೆಟ್ ನಲ್ಲಿ ಸಣ್ಣ ಪ್ರಮಾಣದ ಪ್ರೋಟೀನ್ ಮತ್ತು ನಾರಿನಾಂಶವಿದೆ ಮತ್ತು ಇದು ದೈನಂದಿನ ಬಳಕೆಗೆ ಬೇಕಾಗುವಷ್ಟಿಲ್ಲ ಮತ್ತು ಇದು ಆರೋಗ್ಯಕಾರಿ ಸಮತೋಲಿತ ಆಹಾರ ಕ್ರಮಕ್ಕೆ ಸಾಕಾಗಲ್ಲ.
- ಇದರಲ್ಲಿ ಅತ್ಯಧಿಕ ಮಟ್ಟದ ಸೋಡಿಯಂ ಇದೆ. ನಾಲ್ಕು ಡೈಜೆಸ್ಟಿವ್ ಬಿಸ್ಕೆಟ್ ತಿಂದರೆ ಅದು ಒಂದು ಪ್ಯಾಕೆಟ್ ಬಟಾಟೆ ಚಿಪ್ಸ್ ತಿಂದಂತೆ.
- ಅಧಿಕ ರಕ್ತದೊತ್ತಡದ ಸಮಸ್ಯೆ ಇರುವ ಜನರು ಇಂತಹ ಆಹಾರ ಸೇವನೆ ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ.
- ಬಿಸ್ಕೆಟ್ ನಲ್ಲಿ ಖನಿಜಾಂಶ ಮತ್ತು ವಿಟಮಿನ್ ಗಳು ನಗಣ್ಯವಾಗಿದೆ. ಹಾಲನ್ನು ಇದನ್ನು ಸೇರಿಸಿದರೂ ಅದರಿಂದ ಯಾವುದೇ ರೂಪದಲ್ಲೂ ಕ್ಯಾಲ್ಸಿಯಂ ಲಭ್ಯವಾಗದು. ಇದರಲ್ಲಿ ಸಂಪೂರ್ನವಾಗಿ ಶೂನ್ಯ ಪೋಷಕಾಂಶ ಮೌಲ್ಯಗಳಿವೆ.
- ಡೈಜೆಸ್ಟಿವ್ ಬಿಸ್ಕೆಟ್ ನಲ್ಲಿ ಶೇ.10ರಷ್ಟು ಪರ್ಯಾಪ್ತ ಕೊಬ್ಬಿನ ಜತೆಗೆ ತರಕಾರಿ ತೈಲವು ಇದೆ. ಇದು ಆರೋಗ್ಯಕ್ಕೆ ಹಾನಿಕರ.

ಡೈಜೆಸ್ಟಿವ್ ಬಿಸ್ಕೆಟ್ ನ ಭಿನ್ನತೆಗಳು
ಸಕ್ಕರೆಯಂಶವಿರುವಂತಹ ಆಹಾರವೆಂದು ನಾವು ಬಿಸ್ಕೆಟ್ ಅನ್ನು ಪರಿಗಣಿಸಿದ್ದೇವೆ. ಆದರೆ ಕೆಲವೊಂದು ಬಿಸ್ಕೆಟ್ ಗಳು ಕಡಿಮೆ ಕೊಬ್ಬು ಹೊಂದಿವೆ. ಸಾಮಾನ್ಯ ಬಿಸ್ಕೆಟ್ ಗಿಂತಲೂ ಶೇ.25ರಷ್ಟು ಕಡಿಮೆ ಕೊಬ್ಬು ಇಂತಹ ಬಿಸ್ಕೆಟ್ ನಲ್ಲಿದೆ. ಇದು ಆರೋಗ್ಯಕಾರಿ ಎಂದು ಪರಿಗಣಿಸಿದರೂ ಉಳಿದ ಅಂಶಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಚಾಕಲೇಟ್ ರುಚಿಯಲ್ಲಿ ಸಿಗುವಂತಹ ಬಿಸ್ಕೆಟ್ ತುಂಬಾ ರುಚಿಕರವಾಗಿ ಇರುವುದು. ಆದರೆ ಇದರಲ್ಲಿ ಚಾಕಲೇಟ್ ಸೇರ್ಪಡೆಯಿಂದಾಗಿ ಸಕ್ಕರೆ ಹಾಗೂ ಕ್ಯಾಲರಿ ಅಂಶವು ಅಧಿಕವಾಗಿ ಇರುವುದು. ಒಂದು ಚಾಕಲೇಟ್ ಬಿಸ್ಕೆಟ್ ನಲ್ಲಿ ಸುಮಾರು 90 ಕ್ಯಾಲರಿ ಇದೆ.

ಡೈಜೆಸ್ಟಿವ್ ಬಿಸ್ಕೆಟ್ ನ ಲಾಭಗಳು
ಧಾನ್ಯಗಳು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಧಾನ್ಯಗಳು ದೇಹದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಂಡು ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದು. ಸರಿಯಾದ ಆಯ್ಕೆ ಮಾಡಿದರೆ ಆಗ ಗೋಧಿಯಿಂದ ಮಾಡುವಂತಹ ಬಿಸ್ಕೆಟ್ ಸ್ವಲ್ಪ ಮಟ್ಟಿಗೆ ಆರೋಗ್ಯಕ್ಕೆ ನೆರವಾಗಬಹುದು.
ಎರಡನೇಯದಾಗಿ ಬಿಸ್ಕೆಟ್ ನಲ್ಲಿ ಇರುವಂತಹ ನಾರಿನಾಂಶವನ್ನು ಹೊಟ್ಟೆ ತುಂಬಿದಂತೆ ಮಾಡುವುದು. ವಿಶ್ವದಲ್ಲಿ ಇಂದು ನಾರಿನಾಂಶ ಸೇವನೆಯು ಕಡಿಮೆ ಆಗಿ ಮಲಬದ್ಧತೆ ಸಮಸ್ಯೆಯು ಜನರನ್ನು ಕಾಡುವ ಕಾರಣದಿಂದಾಗಿ ಬಿಸ್ಕೆಟ್ ಸೇವನೆಯು ನೆರವಾಗಲೂಬಹುದು. ಕಡಿಮೆ ರಕ್ತದೊತ್ತಡದ ಸಮಸ್ಯೆ ಇರುವಂತಹ ಜನರು ಈ ಬಿಸ್ಕೆಟ್ ನಲ್ಲಿ ಇರುವಂತಹ ಸೋಡಿಯಂ ಅಂಶದಿಂದ ಲಾಭ ಪಡೆದುಕೊಳ್ಳಬಹುದು.
ಪದೇ ಪದೇ ಹಸಿವಾದಾಗ ಬಿಸ್ಕೆಟ್ ಸ್ವಲ್ಪ ಮಟ್ಟಿಗೆ ಹಸಿವಿಗೆ ಶಮನ ನೀಡುವುದು. ಆದರೆ ಇವುಗಳಲ್ಲಿ ಹೇಳಿದಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಇರುವುದೇ ಇಲ್ಲ.



Click it and Unblock the Notifications









