Latest Updates
-
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು!
ಅಧ್ಯಯನ ವರದಿ: ಟೈಪ್ 2 ಮಧುಮೇಹ, ಪುರುಷರ ಸಂಖ್ಯೆಯೇ ಜಾಸ್ತಿ!
ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಪುರುಷರಲ್ಲಿ ಒಟ್ಟಾರೆ ಸಂಖ್ಯೆಯಲ್ಲಿ ಐದರಲ್ಲಿ ಇಬ್ಬರಿಗಿದ್ದರೆ ಮಹಿಳೆಯರಲ್ಲಿ ಪ್ರತಿ ಐವರಲ್ಲಿ ಒಬ್ಬರಿಗೆ ಆವರಿಸುತ್ತದೆ ಎಂದು ಒಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.....
ಟೈಪ್ 2 ಮಧುಮೇಹಿಗಳ ಸಂಖ್ಯೆಯನ್ನು ಗಮನಿಸಿದರೆ ಇದರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಾಗಿರುವುದು ಅಚ್ಚರಿ ತರಿಸುತ್ತದೆ. ಇದಕ್ಕೆ ಪ್ರಮುಖ ಕಾರಣ ಪುರುಷರ ದೇಹದಲ್ಲಿ ಮಹಿಳೆಯರಿಗಿಂತಲೂ ಹೆಚ್ಚಿರುವ ಕಬ್ಬಿಣದ ಸಂಗ್ರಹ.
ಈ ಪ್ರಕಾರ ಮಧ್ಯವಯಸ್ಸು ದಾಟಿದ ಬಳಿಕ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಪುರುಷರಲ್ಲಿ ಒಟ್ಟಾರೆ ಸಂಖ್ಯೆಯಲ್ಲಿ ಐದರಲ್ಲಿ ಇಬ್ಬರಿಗಿದ್ದರೆ ಮಹಿಳೆಯರಲ್ಲಿ ಪ್ರತಿ ಐವರಲ್ಲಿ ಒಬ್ಬರಿಗೆ ಆವರಿಸುತ್ತದೆ ಎಂದು ಒಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ನಮ್ಮ ದೇಹದ ಕೆಲವು ಅಂಗಗಳ ಕಾರ್ಯನಿರ್ವಹಣೆಗೆ ಕಬ್ಬಿಣ ಅತಿ ಅಗತ್ಯವಾಗಿದೆ. ಮುಖ್ಯವಾಗಿ ರಕ್ತದ ಹೀಮೋಗ್ಲೋಬಿನ್ ಕಣಗಳ ನಿರ್ಮಾಣಕ್ಕೆ. ಉಳಿದಂತೆ ಪ್ರೋಟೀನುಗಳು, ಕಿಣ್ವಗಳ ಬಳಕೆಗೂ ಸೈಟೋ ಕ್ರೋಮ್, ಮತ್ತು ಪೆರೋಕ್ಸಿಡೇಸ್ ಎಂಬ ಪೋಷಕಾಂಶಗಳ ನಿರ್ಮಾಣಕ್ಕೂ ಅಗತ್ಯವಾಗಿದೆ. ಟೈಪ್-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ
ಆದರೆ ಕಬ್ಬಿಣದ ಶೇಖರಣೆಗೂ ಒಂದು ಮಿತಿ ಇದೆ. ಸುಮ್ಮನೆ ಹಾಗೇ ಬಿಟ್ಟ ಕಬ್ಬಿಣ ತುಕ್ಕು ಹಿಡಿಯುವಂತೆಯೇ ದೇಹದೊಳಗೆ ಬಳಕೆಯಾಗದೇ ಉಳಿದ ಕಬ್ಬಿಣದ ಕಣಗಳು ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಬಿಡುಗಡೆ ಮಾಡುತ್ತವೆ.
ಈ ಕಣಗಳು ಕ್ಯಾನ್ಸರ್ ಕಾರಕವಾಗಿದ್ದು ವಿವಿಧ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇದರ ಇನ್ನೊಂದು ಗುಣವೆಂದರೆ ಮೇದೋಜೀರಕಾಂಗ ಇನ್ಸುಲಿನ್ ಅನ್ನು ಉತ್ಪಾದಿಸಲು ಅಗತ್ಯವಾದ ಬೀಟಾ ಜೀವಕೋಶಗಳನ್ನು ಸ್ರವಿಸುವ ಕ್ಷಮತೆಯನ್ನು ಉಡುಗಿಸುವುದು.
ಅಲ್ಲದೇ ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ಕಡೆಯದಾಗಿ ಬಳಸಬೇಕಾಗಿರುವ ಜೀವಕೋಶಗಳು ಮತ್ತು ಅಂಗಾಂಶಗಳು ಬಳಸಲು ಸಾಧ್ಯವಾಗದೇ ಹಾಗೇ ವ್ಯರ್ಥವಾಗಿ ಹೋಗುವ ಮೂಲಕ ಟೈಪ್ 2 ಮಧುಮೇಹ ಆವರಿಸುತ್ತದೆ. ಟೈಪ್ 2 ಡಯಾಬಿಟಿಸ್ ರೋಗಿಗಳ ಡಯೆಟ್
ಫಿನ್ಲಾಂಡ್ ದೇಶದ ಈಸ್ಟರ್ನ್ ಫಿನ್ಲಾಂಡ್ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಅಲೆಕ್ಸ್ ಓ ಅರೆಗ್ಬೆಸೋಲಾ ಎಂಬುವರ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಈ ಮೂಲಕ ಎದುರಾಗುವ ಮಧುಮೇಹದ ಸಾಧ್ಯತೆ ಪುರುಷರಲ್ಲಿ 61 ಶೇಖಡಾ ಇದ್ದರೆ ಮಹಿಳೆಯರಲ್ಲಿ 46 ಶೇಖಡಾ ಇರುತ್ತದೆ ಎಂದು ಕಂಡುಕೊಳ್ಳಲಾಗಿದೆ.
ದೇಹದಲ್ಲಿ ಕಬ್ಬಿಣದ ಸಂಗ್ರಹ ಮಿತಿಮೀರಿದರೆ ಇದಕ್ಕೆ ಅನುವಂಶಿಕವಾಗಿ ಬರುವ hereditary hemochromatosis ಎಂಬ ರೋಗವೂ ಕಾರಣವಿರಬಹುದು. ಇವರ ದೇಹ ಆಹಾರದ ಮೂಲಕ ಲಭ್ಯವಾಗುವ ಎಲ್ಲಾ ಕಬ್ಬಿಣವನ್ನು ಹೀರಿಕೊಂಡು ಸಂಗ್ರಹಿಸಲಾಗುತ್ತದೆ. ಇದರ ಮೂಲಕವೂ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ.
ಒಂದು ವೇಳೆ ಈ ಸ್ಥಿತಿ ಇರುವುದನ್ನು ಪ್ರಾರಂಭದಲ್ಲಿಯೇ ಕಂಡುಕೊಂಡರೆ ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳನ್ನು ವರ್ಜಿಸುವ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡಬಹುದು. ಸದ್ದಿಲ್ಲದೆ ಸದ್ದುಮಾಡುವ 'ಮಧುಮೇಹದ' ಬಗ್ಗೆ ಇರಲಿ ಎಚ್ಚರ!
ಕಬ್ಬಿಣದ ಪ್ರಮಾಣ ದೇಹದಲ್ಲಿ ಹೆಚ್ಚಿದ್ದಷ್ಟೂ ನಮ್ಮ ಜೀವ ರಾಸಾಯನಿಕ ಕ್ರಿಯೆ ಏರುಪೇರಾಗಿ ಗ್ಲುಕೋಸ್ ಅನ್ನು ಬಳಸಿಕೊಳ್ಳುವ ಪ್ರಮಾಣದಲ್ಲಿಯೂ ಏರುಪೇರಾಗುತ್ತದೆ. ವ್ಯತಿರಿಕ್ತವಾಗಿ ಕಬ್ಬಿಣದ ಪ್ರಮಾಣ ಕಡಿಮೆ ಇದ್ದಾಗಲೂ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಕಬ್ಬಿಣದ ಪ್ರಮಾಣ ಅತಿ ಕಡಿಮೆಯೂ ಇರಬಾರದು, ಅತಿ ಹೆಚ್ಚಾಗಿಯೂ ಇರಬಾರದು ಎಂದು ಸಂಶೋಧನೆ ತಿಳಿಸುತ್ತದೆ.
he journal Annals of Clinical Biochemistry ಎಂಬ ಮಾಧ್ಯಮದ ಮೂಲಕ ಡಾ. ಅರೆಗ್ಬೆಸೋಲಾರವರು ತಿಳಿಸಿರುವ ಮಾಹಿತಿಯಂತೆ "ದೇಹದಲ್ಲಿ ಕಬ್ಬಿಣದ ಅಂಶ ಆತಿ ಹೆಚ್ಚೂ ಇರದೇ ಅತಿ ಕಡಿಮೆಯೂ ಇರದಂತೆ ನೋಡಿಕೊಂಡರೆ ಇದರಿಂದ ಟೈಪ್ 2 ಮಧುಮೇಹವನ್ನು ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ"
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications















