Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮಧುಮೇಹಿಗಳಲ್ಲಿ ಇನ್ಸುಲಿನ್ ಹೆಚ್ಚಿಸುವ 13 ಆಹಾರಗಳು
ಮಧುಮೇಹ ಬಂದರೆ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಣದಲ್ಲಿಡುವ ಆಹಾರಗಳನ್ನು ತಿನ್ನಬೇಕಾದದು ಅವಶ್ಯಕ. ದೇಹದಲ್ಲಿ ಇನ್ಸುಲಿನ್ ಪ್ರಮಾಣ ನಿಯಂತ್ರಣದಲ್ಲಿಡಲು ಕೆಲವೊಂದು ಆಹಾರಗಳನ್ನು ತಿನ್ನಬೇಕಾಗುತ್ತದೆ, ಕೆಲವೊಂದು ಆಹಾರಗಳನ್ನು ಮುಟ್ಟಲೇಬಾರದು.
ಇನ್ಸುಲಿನ್ ಅಧಿಕವಾದರೆ ಕಾಯಿಲೆ ಹೆಚ್ಚಾಗಿ ಪ್ರಾನಕ್ಕೆ ಅಪಾಯ ಬರಬಹುದು. ಇನ್ಸುಲಿನ್ ಸರಿಪ್ರಮಾಣದಲ್ಲಿದ್ದರೆ ಇತರರಂತೆ ಸಾಮಾನ್ಯ ಬದುಕು ನಡೆಸಬಹುದು. ಇಲ್ಲಿ ನಾವು ಕೆಲವೊಂದು ಆಹಾರ ಪಟ್ಟಿಗಳನ್ನು ನೀಡಿದ್ಧೇವೆ. ಇವನ್ನು ಮಧುಮೇಹ ಇರುವವರು ತಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು. ಏಕೆಂದರೆ ಈ ಆಹಾರಗಳು ದೇಹದಲ್ಲಿ ಇನ್ಸುಲಿನ್ ಅಂಶ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತವೆ. ಬನ್ನಿ ಆ ಆಹಾರಗಳಾವುವು ಎಂದು ನೋಡೋಣ:

ನಟ್ಸ್
ನಟ್ಸ್ ನಲ್ಲಿ ವಿಟಮಿನ್ಸ್ ಮತ್ತು ಒಮೆಗಾ 3 ಕೊಬ್ಬಿನಂಶವಿದ್ದು ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ.

ಆಲೀವ್ ಎಣ್ಣೆ
ಮಧುಮೇಹ ಇರುವವರು ಆಲೀವ್ ಎಣ್ಣೆಯನ್ನು ಹಾಕಿ ಮಾಡಿದ ಅಡುಗೆಯನ್ನು ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಸರಿಯಾದ ರೀತಿಯಲ್ಲಿರುತ್ತದೆ. ದೇಹದ ತೂಕ ಕೂಡ ಕಮ್ಮಿಯಾಗುತ್ತದೆ.

ಬೀನ್ಸ್
ಬೀನ್ಸ್ ನಲ್ಲಿ ಪ್ರೊಟೀನ್, ಪೊಟಾಷ್ಯಿಯಂ ಮತ್ತು ಮ್ಯಾಗ್ನಿಷಿಯಂ ಇವೆ. ಈ ಮೂರು ಅಂಶಗಳು ಮಧುಮೇಹಿಗಳಿಗೆ ಅವಶ್ಯಕ.

ಕಡಿಮೆ ಕೊಬ್ಬಿನಂಶವಿರುವ ಮೊಸರು
ಇದು ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಿ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ.

ಮೀನು
ಮಧುಮೇಹ ಇರುವವರು ಮೀನನ್ನು ತಿನ್ನುವುದು ಒಳ್ಲೆಯದು. ಫಿಶ್ ಆಯಿಲ್ ಕುಡ ಒಳ್ಳೆಯದು. ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಮಧುಮೇಹಿಗಳಿಗೆ ಕಣ್ಣಿನ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.

ಸಿಟ್ರಸ್ ಆಹಾರ
ಸಿಟ್ರಸ್ ಆಹಾರಗಳಾದ ಕಿತ್ತಳೆ, ನಿಂಬೆ ಹಣ್ಣು ಇವೆಲ್ಲಾ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಆದ್ದರಿಂದ ಪ್ರತಿದಿನ ಒಂದು ಕಿತ್ತಳೆ ಹಣ್ಣು ತಿನ್ನುವುದು ಒಳ್ಳೆಯದು.

ಸೊಪ್ಪು
ಸೊಪ್ಪಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಇದ್ದು ಮಧುಮೇಹಿಗಳು ಸೊಪ್ಪನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ಟೊಮೆಟೊ
ಟೊಮೆಟೊದಲ್ಲಿ ವಿಟಮಿನ್ ಸಿ ಮತ್ತು ಸತುವಿಂಶವಿದ್ದು ಇದನ್ನು ಸಾರು ಮಾಡಿ ತಿನ್ನಬೇಡಿ. ಇದರಿಂದ ಸೂಪ್, ಜ್ಯೂಸ್ ಮಾಡಿ ಕುಡಿಯಿರಿ.

ಕುಂಬಳಕಾಯಿ
ಸಿಹಿ ಕುಂಬಳಕಾಯಿ ಮತ್ತು ಅದರ ಬೀಜದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಮ್ಮಿಯಿದ್ದು ಇದನ್ನು ತಿಂದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ. ಇದರಲ್ಲಿರುವ ವಿಟಮಿನ್ಸ್ ಆರೋಗ್ಯಕ್ಕೆ ಒಳ್ಳೆಯದು.

ಬೆರ್ರಿ
ಇದರಲ್ಲಿ ಸಕ್ಕರೆಯಂಶ ಕಡಿಮೆ ಇರುವುದರಿಂದ ಡಯಾಬಿಟಿಸ್ ಇರುವವರು ಯಾವುದೇ ಭಯವಿಲ್ಲದೆ ಬೆರ್ರಿ ಹಣ್ಣುಗಳನ್ನು ತಿನ್ನಬಹುದು.

ಗೋಧಿ
ಮಧುಮೇಹಿಗಳು ಅನ್ನದ ಬದಲು ಗೋಧಿಯಿಂದ ಮಾಡಿದ ಪದಾರ್ಥಗಳನ್ನು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಸರಿಯಾಗಿ ಇರುವಂತೆ ನೋಡಿಕೊಳ್ಳಬಹುದು.

ಹಾಗಲಕಾಯಿ
ಹಾಗಲಕಾಯಿಯಿಂದ ಮಾಡಿದ ಪದಾರ್ಥಗಳನ್ನು ದಿನನಿತ್ಯದ ಆಹಾರಕ್ರಮದಲ್ಲಿ ಇರುವಂತೆ ನೋಡಿಕೊಂಡರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ.

ಬೆಂಡೆಕಾಯಿ
ಬೆಂಡೆಕಾಯಿಯನ್ನು ಕತ್ತರಿಸಿ ಅದರ ನೀರನ್ನು ಒಂದು ಲೋಟಕ್ಕೆ ಹಾಕಿ ರಾತ್ರಿ ಇಟ್ಟು ಬೆಳಗ್ಗೆ ಕುಡಿಯುವುದರಿಂದ ಇನ್ಸುಲಿನ್ ಅನ್ನು ನಿಯಂತ್ರಣದಲ್ಲಿಡಬಹುದು.



Click it and Unblock the Notifications