Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕ್ಯಾನ್ಸರ್ ಚಿಕಿತ್ಸೆ ಪಡೆದವರಿಗೆ ಈ ಬಗೆಯ ಆಹಾರಕ್ರಮ ತುಂಬಾ ಒಳ್ಳೆಯದು
ಕ್ಯಾನ್ಸರ್ ಎಂಬುವುದು ಮಾರಾಣಾಂತಿಕ ಕಾಯಿಲೆಯಾದರೂ ಈ ಕಾಯಿಲೆಯನ್ನು ಸೋಲಿಸಿ ಬದುಕನ್ನು ಗೆದ್ದಿರುವ ಹಲವಾರು ಜನರು ನಮ್ಮ ಮಧ್ಯ ಇದ್ದಾರೆ. ಕ್ಯಾನ್ಸರ್ ಅನ್ನು ಪ್ರಾರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದರ ಜೊತೆಗೆ ಜೀವನಶೈಲಿ ಹಾಗೂ ಆಹಾರಶೈಲಿಯಲ್ಲಿ ಮಾಡಿಕೊಳ್ಳುವ ಬದಲಾವಣೆ ಬದುಕಿನಲ್ಲಿ ಹೊಸ ಚೈತನ್ಯ ತುಂಬುವುದು.
ಕ್ಯಾನ್ಸರ್ ಕಾಯಿಲೆಯಿಂದ ಚೇತರಿಸಿಕೊಂಡಿರುವವರಿಗೆ ಈ ಬಗೆಯ ಆಹಾರಶೈಲಿ ಅವರ ಆರೋಗ್ಯವನ್ನು ಉತ್ತಮಪಡಿಸಲು ತುಂಬಾನೇ ಸಹಕಾರಿ:

1. ಸಮತೋಲನವಿರುವ ಆಹಾರ ಸೇವಿಸಿ
ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವವರು ತಮ್ಮ ಆಹಾರಕ್ರಮದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು. ಬೀನ್ಸ್, ಧಾನ್ಯಗಳು, ನಟ್ಸ್, ಹಣ್ಣುಗಳು ಈ ಬಗೆಯ ಆಹಾರವನ್ನು ಹೆಚ್ಚಾಗಿ ಸೇವಿಸಿ. ಈ ಬಗೆಯ ಆಹಾರಶೈಲಿ ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುವವರಿಗೆ ಮಾತ್ರವಲ್ಲ ಉತ್ತಮ ಆರೋಗ್ಯ ಬೇಕೆಂದು ಬಯಸುವ ಪ್ರತಿಯೊಬ್ಬರು ಪಾಲಿಸಿಕೊಂಡು ಬಂದರೆ ತುಂಬಾನೇ ಆರೋಗ್ಯಕರವಾದ ದೇಹ ನಿಮ್ಮದಾಗುವುದು.
2. ಬೆರ್ರಿ ಹಾಗೂ ವಿಟಮಿನ್ ಸಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ
ದಿನದಲ್ಲಿ ಅರ್ಧ ಕಪ್ ಬೆರ್ರಿ ಹಣ್ಣುಗಳನ್ನು ಸೇವಿಸಿ. ಅದಲ್ಲದೆ ಸಿಟ್ರಸ್ ಹಣ್ಣುಗಳನ್ನು ಸೇವಿಸಿ. ಇವುಗಳಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವುದು.
3. ಮಾಂಸಾಹಾರವನ್ನು ಮಿತಿಯಲ್ಲಿ ಸೇವಿಸಿ
ಮಾಂಸಾಹಾರವನ್ನು ಮಿತಿಯಲ್ಲಿ ಸೇವಿಸಬೇಕು. ಮಾಂಸಾಹಾರಕ್ಕಿಂತ ಬೀನ್ಸ್, ಧಾನ್ಯಗಳು, ನಟ್ಸ್ ಸೇವಿಸಿ. ಇನ್ನು ಕೆಂಪು ಮಾಂಸಾಹಾರದ ಬದಲಿಗೆ ಚಿಕನ್, ಮೀನು ಇವುಗಳನ್ನು ಮಿತಿಯಲ್ಲಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
4. ಸ್ಯಾಚುರೇಟಡ್ ಆಹಾರಗಳಿಂದ ದೂರವಿರಿ
ಸ್ಯಾಚುರೇಟಡ್ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಕ್ಯಾನ್ಸರ್ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರಿಗೆ ಈ ಬಗೆಯ ಆಹಾರ ನೀಡದೇ ಇದ್ದರೆ ಇನ್ನೂ ಒಳ್ಳೆಯದು. ಅಲ್ಲದೆ ಕೃತಕ ಸಿಹಿಯ ಯಾವುದೇ ಜ್ಯೂಸ್ ಅಥವಾ ತಂಪು ಪಾನೀಯ ಸೇವಿಸಬೇಡಿ. ನೀವು ಜ್ಯೂಸ್ ಕುಡಿಯುವುದಾದರೆ ತಾಜಾ ಹಣ್ಣುಗಳಿಂದ ಮಾಡಿದ ಜ್ಯೂಸ್ ಮಾತ್ರ ಕುಡಿಯಿರಿ.
5. ವೈದ್ಯರು ಸೂಚಿಸದ ಯಾವುದೇ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಾರದು
ಕ್ಯಾನ್ಸರ್ ಚಿಕಿತ್ಸೆ ಪಡೆದ ಬಳಿಕ ದೇಹ ಸೊರಗಿರುತ್ತದೆ, ದೇಹ ಮೊದಲಿನಂತೆ ಚೇರಿಸಿಕೊಳ್ಳಲು ವರ್ಷಗಟ್ಟಲೆ ಬೇಕಾಗುತ್ತದೆ. ಈ ಸಮಯದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಿದೆ ಎಂದು ಯಾವುದೇ ಸಪ್ಲಿಮೆಂಟ್ಸ್ ತೆಗೆದುಕೊಳ್ಳಲು ಹೋಗಬೇಡಿ.
ಈ ಬಗೆಯ ತರಕಾರಿ ಹೆಚ್ಚಾಗಿ ಸೇವಿಸಿ
* ಟೊಮೆಟೊ, ಕ್ಯಾರೆಟ್, ಬೀನ್ಸ್, ಸಿಹಿ ಕುಂಬಳಕಾಯಿ, ನವಿಲುಕೋಸು, ಮೂಲಂಗಿ, ಹೂಕೋಸು, ಬ್ರೊಕೋಸಲಿ, ಎಲೆಕೋಸು ಇವುಗಳು ಕ್ಯಾನ್ಸರ್ ರೋಗಿಗಳಿಗೆ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
* ಹಾಗಲಕಾಯಿ ಜ್ಯೂಸ್ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟಲು ಸಹಕಾರಿ.
* ಸೊಪ್ಪುಗಳನ್ನು ಹೆಚ್ಚಾಗಿ ಬಳಸಿ
ಹಣ್ಣುಗಳು
ಕಿತ್ತಳೆ, ಬಾಳೆಹಣ್ಣು, ಕಿವಿ, ಪೀಚ್, ಮಾವಿನಹಣ್ಣು, ಸ್ಟ್ರಾಬೆರ್ರಿ, ಬೆಣ್ಣೆಹಣ್ಣು, ಸೀಬೆಕಾಯಿ, ಏಪ್ರಿಕಾಟ್ ಹೀಗೆ ಯಾವುದೇ ಬಗೆಯ ಹಣ್ಣುಗಳನ್ನು ಸೇವಿಸಬಹುದು. ಅದರಲ್ಲೂ ಸೀಸನ್ ಹಣ್ಣುಗಳನ್ನು ಹೆಚ್ಚಾಗಿ ಬಳಸಿ.
ಯಾವ ಬಗೆಯ ಆಹಾರ ಸೇವಿಸಬಾರದು
* ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥ ಸೇವಿಸಬಾರದು
* ಅತ್ಯಧಿಕ ಉಪ್ಪಿನಂಶವಿರುವ ಆಹಾರ, ಸಕ್ಕರೆ ಪದಾರ್ಥವಿರುವ ಆಹಾರ ಸೇವಿಸಬಾರದು
* ಜಾಮ್, ಉಪ್ಪಿನಕಾಯಿ, ಮದ್ಯ ಇವುಗಳಿಂದ ದೂರವಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
