Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ, ಮಲಬದ್ಧತೆ ಉಂಟಾಗುತ್ತೆ ಎನ್ನುವುದು ಸುಳ್ಳು
ಬಿಸಿಲು.. ಉರಿ ಬಿಸಿಲು ಕೆಲವು ಕಡೆ ಮಳೆ ಬಂದು ಭೂಮಿ ಸ್ವಲ್ಪ ತಂಪಾಗಿದೆ. ಮಳೆ ಬೀಳದೆ ಇರುವ ಕಡೆ ಉರಿ ಬಿಸಿಲಿನಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ, ಕೆಲವರು ಉರಿ ಬಿಸಿಲಿನಿಂದ ಸಾವನ್ನಪ್ಪಿರುವ ಘಟನೆ ಕೂಡ ಕರ್ನಾಟಕದಲ್ಲಿ ವರದಿಯಾಗಿದೆ.
ಈ ಬಿಸಿಲು ಅಧಿಕವಾಗಿರುವ ಈ ಸಮಯದಲ್ಲಿ ನಾವು ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕು. ನಾನ್‌ವೆಜ್ ಆಹಾರ ಸೇವನೆ ತುಂಬಾನೇ ಕಮ್ಮಿ ಮಾಡಬೇಕು, ಅದರೆ ಮೊಟ್ಟೆ ಸೇವಿಸಬಹುದು.

ಮೊಟ್ಟೆ ನಾನ್‌ವೆಜ್ ಅಲ್ಲ ವೆಜ್ ಎಂದು ವಾದ ಮಾಡುವವರು ಇದ್ದಾರೆ, ಅದು ಏನೇ ಇರಲಿ ಬೇಸಿಗೆಯಲ್ಲಿ ಉಷ್ಣಾಂಶ ಅಧಿಕವಿರುವಾಗ ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ದೊರೆಯುವ ಲಾಭವೇನು, ಅಡ್ಡಪರಿಣಾಮವಿದೆಯೇ? ಎಂದು ನೋಡೋಣ ಬನ್ನಿ:
ಮೊಟ್ಟೆಯಿಂದ ಪ್ರೊಟೀನ್ ದೊರೆಯುವುದು
ಮೊಟ್ಟೆಯಲ್ಲಿ ಪ್ರೊಟೀನ್ ಅಧಿಕವಿದೆ, ಅಲ್ಲದೆ 9 ಬಗೆಯ ಅಮೈನೋ ಆಮ್ಲವಿದೆ. ಇದರಿಂದಾಗಿ ಮೊಟ್ಟೆಯು ಹಾನಿಗೊಳಗಾದ ಸ್ನಾಯುಗಳನ್ನು ರಿಪೇರಿ ಮಾಡುತ್ತದೆ. ಅಲ್ಲದೆ ತೂಕ ನಿಯಂತ್ರಣಕ್ಕೆ ತುಂಬಾನೇ ಸಹಕಾರಿ.
ಮೊಟ್ಟೆಯಲ್ಲಿರುವ ಪೋಷಕಾಂಶಗಳು
ವಿಟಮಿನ್ ಎ
ವಿಟಮಿನ್ ಡಿ
ವಿಟಮಿನ್ ಇ
ವಿಟಮಿನ್ ಬಿ12
ರಿಬೋಪ್ಲೇವಿನ್
ಫೋಲೆಟ್
ಕಬ್ಬಿಣದಂಶ
ಸೆಲೆನಿಯಂ
ಸತುವಿನಂಶವಿದೆ.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಮೊಟ್ಟೆ ಸೇವನೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಯಲ್ಲಿರುವ ಪೊಷಕಾಂಶ ನಿಮ್ಮ ಕಣ್ಣಿನ ದೃಷ್ಟಿಗೆ ತುಂಬಾನೇ ಒಳ್ಳೆಯದು.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಮೊಟ್ಟೆಯಲ್ಲಿರುವ ಚೊಲೈನೆ ಅಂಶ ಮೆದೂಳಿನ ಆರೋಗ್ಯಕ್ಕೆ ಒಳ್ಳೆಯದು, ಮಕ್ಕಳಿಗೂ ಅವರ ಮೆದುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಸ್ನಾಯುಗಳನ್ನು ಬಲ ಪಡಿಸುತ್ತದೆ
ಬೇಸಿಗೆಯಲ್ಲಿ ಸ್ವಲ್ಪ ಓಡಾಡಿದರೆ ಸುಸ್ತಾಗುತ್ತದೆ, ಸ್ನಾಯುಗಳನ್ನು ಬಲಪಡಿಸಲು ಮೊಟ್ಟೆಯಲ್ಲಿರುವ ಪೋಷಕಾಂಶ ಸಹಾಯ ಮಾಡುತ್ತದೆ.
ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
ಮೊಟ್ಟೆಯಲ್ಲಿ ವಿಟಮಿನ್ ಎ, ಇ , ಸೆಲೆನಿಯಮ್,ಸತುವಿನಂಶವಿದೆ, ಇದು ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು, ಇನ್ನು ಮೊಟ್ಟೆಯಲ್ಲಿರುವ ವಿಟಮಿನ್ ಡಿ ಮೂಳೆಗಳ ಆರೋಗ್ಯಕ್ಕೂ ಒಳ್ಳೆಯದು.
ನ್ಯೂಟ್ರಿಷಿಯನಿಸ್ಟ್ ಅಮಿತಾಗದ್ರೆ ಏನೂ ಹೇಳಿದ್ದಾರೆ?
ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂನ್ಸರ್ ನಿಮಗೆ ಏನು ಅನಿಸುತ್ತದೆಯೋ ಅದನ್ನು ಮಾಡಿ, ಬೇಸಿಗೆಯಲ್ಲಿ ಮಾಡುವ ದೊಡ್ಡ ತಪ್ಪೆಂದರೆ ಸಾಕಷ್ಟು ನೀರು ಕುಡಿಯದೆ ಇರುವುದು ಹಾಗೂ ನಾರಿನಂಶದ ಆಹಾರ ಸೇವನೆ ಮಾಡದೆ ಇರುವುದು. ನೀವು ಮೊಟ್ಟೆ ಅಥವಾ ಮಾಂಸಾಹಾರ ಜೊತೆಗೆ ಹಣ್ಣು, ತರಕಾರಿಗಳನ್ನೂ ಸೇವಿಸಿ, ಇದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು.
ಮೊಟ್ಟೆಯಿಂದ ನಿಮಗೆ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ, ಬದಲಿಗೆ ನೀರು ಕುಡಿಯುವುದು ಕಡಿಮೆಯಾಗಿರುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದು ಎಂಬುವುದಾಗಿ ಹೇಳಿದ್ದಾರೆ.
ದೇಹದ ಆರೋಗ್ಯಕ್ಕೆ ಪ್ರೊಟೀನ್ ತುಂಬಾನೇ ಮುಖ್ಯ, ನೀವು ಮೊಟ್ಟೆ ಸೇವಿಸದೆ ಇದ್ದರೆ ಪ್ರೊಟೀನ್ ಇರುವ ಕಾಳುಗಳನ್ನು ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
