Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲದಲ್ಲಿ ಕಬ್ಬಿನ ಹಾಲು ಕುಡಿಯಬಹುದೇ?, ಮಧುಮೇಹಿಗಳು ಕಬ್ಬಿನ ಹಾಲು ಸೇವಿಸಬಹುದೇ?
ಚಳಿಗಾಲದಲ್ಲಿ ಆರೋಗ್ಯದ ಕಡೆಗೆ ಎಷ್ಟು ಗಮನಹರಿಸಿದರು ಸಾಲದು. ಏಕೆಂದ್ರೆ ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತೆ. ನೀವು ಎಷ್ಟೇ ಜಾಗೃತೆ ವಹಿಸಿದ್ರು, ಶೀತ, ಕೆಮ್ಮು, ನೆಗಡಿಯಂತಹ ಸಣ್ಣ ಪುಟ್ಟ ಅನಾರೋಗ್ಯಕ್ಕೆ ಒಳಗಾಗುತ್ತಲೇ ಇರುತ್ತೇವೆ. ಹೀಗಾಗಿ ನಾವು ಸೇವಿಸುವ ಆಹಾರದ ಬಗ್ಗೆ ಎಚ್ಚರ ವಹಿಸೋದು ಮುಖ್ಯ.

ಇನ್ನು ಚಳಿಗಾಲದಲ್ಲಿ ಯಾವ ರೀತಿಯ ಹಣ್ಣು, ಜ್ಯೂಸ್ ಸೇವಿಸಬೇಕು ಎಂಬುದು ನಮ್ಮ ಗಮನದಲ್ಲಿರಬೇಕು ಇಲ್ಲವಾದರೆ ಅನಾರೋಗ್ಯಕ್ಕೆ ತುತ್ತಾಗಬಹುದು. ಚಳಿಗಾಲದಲ್ಲಿ ಕಬ್ಬು ಅಥವಾ ಕಬ್ಬಿನ ಜ್ಯೂಸ್ ಸೇವನೆಗೆ ಯೋಗ್ಯವೇ ಎಂಬುದನ್ನು ನಾವು ತಿಳಿದುಕೊಳ್ಳೋಣ. ಕಬ್ಬು ಎಲ್ಲಾ ಸಮಯದಲ್ಲೂ ಸೇವನೆಗೆ ಯೋಗ್ಯ ಎಂಬುದು ತಿಳಿದಿರುವ ವಿಚಾರವಾಗಿದೆ.
ಕಬ್ಬು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಜೀರ್ಣಕ್ರಿಯೆಗೆ ಸಹಾಯ ಮಾಡುವವರೆಗೂ ಆರೋಗ್ಯಕರ ಅಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ.
ಕಬ್ಬಿನಲ್ಲಿ ಯಾವೆಲ್ಲಾ ಅಂಶವಿದೆ?
ಸಿಂಗ್ವಾಲ್ ಪ್ರಕಾರ 100 ಗ್ರಾಂ ಕಚ್ಚಾ ಕಬ್ಬಿನ ಪೌಷ್ಟಿಕಾಂಶದ ವಿವರ ಹೀಗಿದೆ.
ಕ್ಯಾಲೋರಿಗಳು: 43 ಕೆ.ಸಿ.ಎಲ್
ಕಾರ್ಬೋಹೈಡ್ರೇಟ್ಗಳು: 11.08 ಗ್ರಾಂ
ಆಹಾರದ ಫೈಬರ್ - 0.5 ಗ್ರಾಂ
ಸಕ್ಕರೆಗಳು: 8.97 ಗ್ರಾಂ
ಪ್ರೋಟೀನ್ - 0.27 ಗ್ರಾಂ
ಕೊಬ್ಬು - 0.23 ಗ್ರಾಂ
ವಿಟಮಿನ್ ಸಿ
ಕ್ಯಾಲ್ಸಿಯಂ
ಕಬ್ಬಿಣ
ಮೆಗ್ನೀಸಿಯಮ್
ಪೊಟ್ಯಾಸಿಯಮ್
ಕಬ್ಬಿನ ಆರೋಗ್ಯ ಪ್ರಯೋಜನಗಳು
ಹೈಡ್ರೇಷನ್: ಕಬ್ಬು ಹೈಡ್ರೇಷನ್ ಮತ್ತು ಎನರ್ಜಿಯ ಮೂಲವಾಗಿದೆ, ಇದು ನಿರ್ಜಲೀಕರಣವನ್ನು ಎದುರಿಸಲು ಪ್ರಯೋಜನಕಾರಿಯಾಗಿದೆ. ಆಯಾಸವಾದಾಗ ಅಥವಾ ಬಾಯಾರಿದಾಗ ಬೇರೆ ಪಾನೀಯಗಳಿಗಂತ ಕಬ್ಬಿನ ಜ್ಯೂಸ್ ಕುಡಿಯುವುದು ಉತ್ತಮ.
ಜೀರ್ಣಕ್ರಿಯೆಗೆ ಸಹಕಾರಿ: ಕಬ್ಬಿನಲ್ಲಿ ಫೈಬರ್ ಅಂಶವಿರುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಸಾಮಾನ್ಯ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಎನರ್ಜಿ ಬೂಸ್ಟರ್: ಕಬ್ಬಿನ ನೈಸರ್ಗಿಕ ಸಕ್ಕರೆಗಳು ತ್ವರಿತ ಶಕ್ತಿಯ ವರ್ಧಕವನ್ನು ನೀಡುತ್ತವೆ, ಇದು ನೈಸರ್ಗಿಕ ಸಿಹಿಕಾರಕಕ್ಕೆ ಉತ್ತಮ ಆಯ್ಕೆಯಾಗಿದೆ. ಸಕ್ಕರೆ ಬಳಸದೆ ಕಬ್ಬಿನ ಜ್ಯೂಸ್ ಸೇವನೆ ಮತ್ತಷ್ಟು ಉತ್ತಮವಾಗಿರುತ್ತದೆ.
ಎಲೆಕ್ಟ್ರೋಲೈಟ್ ಸಮತೋಲನ: ಕಬ್ಬಿನಲ್ಲಿ ಪೊಟ್ಯಾಸಿಯಮ್ನಂತಹ ಖನಿಜಗಳಿವೆ, ಇದು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಉತ್ಕರ್ಷಣ ನಿರೋಧಕಗಳು: ಕಬ್ಬು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಅದು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ.
ಶೀತದ ವಿರುದ್ಧ ಕಬ್ಬು ಹೋರಾಡುತ್ತದೆ: ಕಬ್ಬು ರೋಗ ನಿರೋಧಕ ಶಕ್ತಿಯ ಹೊಂದಿರುವುದರಿಂದ, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಎಲೆಕ್ಟ್ರೋಲೈಟ್ ಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿಯೇ ಇದು ನಿರ್ಜಲೀಕರಣಕ್ಕೆ ಅತ್ಯುತ್ತಮವಾಗಿದೆ. ಕಬ್ಬಿನ ಹಾಲು ಚಳಿಗಾಲದಲ್ಲಿ ಉಂಟಾಗುವ ಶೀತ ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡುತ್ತದೆ. ದೇಹದ ಪ್ರೋಟೀನ್ ಮಟ್ಟವನ್ನು ಹೆಚ್ಚಿಸಿ ಜ್ವರವನ್ನು ಬಾರದಂತೆ ಕಾಪಾಡುತ್ತದೆ.
ಮಧುಮೇಹಿಗಳು ಇದನ್ನು ಸೇವಿಸಬಹುದೇ?
ನೈಸರ್ಗಿಕ ಸಕ್ಕರೆ ಅಂಶವಿರುವ ಕಾರಣ ಮಧುಮೇಹಿಗಳು ಕಬ್ಬನ್ನು ಮಿತವಾಗಿ ಸೇವಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದು ಸೂಕ್ತ. ಆದರೆ ಇದು ನೈಸರ್ಗಿಕ ಸಕ್ಕರೆ ಅಂಶ ಹೊಂದಿರುವುದರಿಂದ ಮಧುಮೇಹಿಗಳು ಸಹ ನಿಯಮಿತವಾಗಿ ಸೇವಿಸಬಹುದು.
ಕಬ್ಬು ಸೇವನೆಗೂ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು
ಅಲರ್ಜಿ: ಅಪರೂಪದ ಸಂದರ್ಭದಲ್ಲಿ, ಕೆಲವರಿಗೆ ಕಬ್ಬು ಸೇವಿಸಿದಾಗ ಅಥವಾ ಜ್ಯೂಸ್ ಕುಡಿದಾಗ ಅಲರ್ಜಿ ಎದುರಿಸಬಹುದು. ಕಬ್ಬಿನಲ್ಲಿರುವ ರಾಸಾಯನಿಕವು ವ್ಯತಿರಿಕ್ತವಾಗಿ ವರ್ತಿಸಬಹುದು. ಯಾವುದಾದರು ಔಷಧಿಯನ್ನು ಸೇವಿಸಿದ ಬಳಿಕ ಕಬ್ಬಿನ ಉತ್ಪನ್ನ ಸೇವನೆ ಮಾಡದಿರುವುದು ಉತ್ತಮ.
ಸಕ್ಕರೆ ಅಂಶ: ಹೆಚ್ಚಾಗಿ ಮಧುಮೇಹಿಗಳು ಸಕ್ಕರೆ ಸೇವನೆ ಬಗ್ಗೆ ಗಮನಹರಿಸುತ್ತಿದ್ದರೆ, ಕಬ್ಬಿನ ಜ್ಯೂಸ್ ಸೇವನೆಗೂ ಮುನ್ನ ದೇಹದಲ್ಲಿರುವ ಸಕ್ಕರೆ ಮಟ್ಟದ ಮೇಲ್ವಿಚಾರಣೆ ಬಗ್ಗೆ ಗಮನ ಹರಿಸಬೇಕು.
ಅತಿಯಾದ ಸೇವನೆ: ಕಬ್ಬಿನ ಅತಿಯಾದ ಸೇವನೆಯು ಕ್ಯಾಲೋರಿ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು. ಹೀಗಾಗಿ ಅತೀಯಾಗಿ ಕಬ್ಬಿನ ಹಾಲು ಸೇವನೆ ಮಿತವಾಗಿದ್ದರೆ ಒಳಿತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications