Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿಲ್ವಪತ್ರೆಯಿಂದ ಆರೋಗ್ಯಕ್ಕಿದೆ ನೂರೆಂಟು ಲಾಭ : ಹೃದ್ರೋಗ ಸಮಸ್ಯೆ, ಮಧುಮೇಹಕ್ಕೆ ರಾಮಬಾಣವಿದು
ಶಿವ ಎಂದಾಕ್ಷಣ ನೆನಪಾಗುವುದು ಬಿಲ್ವಪತ್ರೆ. ಬಿಲ್ವಪತ್ರೆ ಶಿವನಿಗೆ ಅತ್ಯಂತ ಪ್ರಿಯಕರವಾದ ವಸ್ತುಗಳ ಪೈಕಿ ಒಂದು. ಶಿವರಾತ್ರಿಯ ಸಮಯದಲ್ಲಂತೂ ಬಿಲ್ವಪತ್ರೆ ಇಲ್ಲವೆಂದರೆ ಆಗುವುದೇ ಇಲ್ಲ. ಶಿವನಿಗೆ ಪ್ರಿಯವಾದ ಈ ಬಿಲ್ವಪತ್ರೆ ಮರ ಅಡಿಯಿಂದ ಬುಡುದವರೆಗೂ ಸಾಕಷ್ಟು ಲಾಭಗಳನ್ನು ಹೊಂದಿದೆ.
ಬಿಲ್ವ ಪತ್ರೆ ಎಲೆಗಳು ಗಿಡಮೂಲಿಕೆಗಳಾಗಿ ಕಾರ್ಯ ನಿರ್ವಹಿಸಿದರೆ ಬಿಲ್ವಪತ್ರೆಯ ಬೇರು ಗರ್ಭಿಣಿಯರಲ್ಲಿ ಗರ್ಭಪಾತವಾಗದಂತೆ ತಡೆಯುವ ಕೆಲಸ ಮಾಡುತ್ತದೆ. ಬಿಲ್ವ ಪತ್ರೆಯ ಹಣ್ಣಿನ ಪಾನಕವಂತೂ ಬೇಸಿಗೆಯ ಧಗೆಯಲ್ಲಿ ನಿರಾಳತೆಯನ್ನು ನೀಡುತ್ತದೆ. ಮಾವಿನ ಹಣ್ಣಿನ ಸೀಸನ್ನ ನಡುವೆಯೂ ಬಿಲ್ವಪತ್ರೆ ಹಣ್ಣಿನ ಪಾನಕದ ಸ್ವಾದ ಎಲ್ಲರ ಬಾಯಲ್ಲಿ ನೀರೂರಿಸುವುದರಲ್ಲಿ ಹಿಂದೆ ಸರಿಯುವುದಿಲ್ಲ .

ಬಿಲ್ವಪತ್ರೆಯ ಎಲೆಗಳು ಉತ್ತಮ ಗಿಡಮೂಲಿಕೆಗಳು ಎಂದು ಆರ್ಯುವೇದ ವಿಜ್ಞಾನ ಹೇಳುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ಎಲೆಗಳನ್ನು ಸೇವಿಸುವುದರಿಂದ ಎಷ್ಟೆಲ್ಲ ಲಾಭವಿದೆ ಎಂಬುದನ್ನು ತಿಳಿದುಕೊಳ್ಳೋಣ:
ಕಫ ನಿವಾರಣೆ : ಬಿಲ್ಪ ಪತ್ರೆ ಎಲೆಗಳು ಕಫವನ್ನು ಹೋಗಲಾಡಿಸುವುದರಲ್ಲಿ ಹೆಸರುವಾಸಿಯಾಗಿದೆ. ಕಲ್ಲು ಸಕ್ಕರೆ, ಜೇನುತುಪ್ಪವನ್ನು ಬಿಲ್ವಪತ್ರೆ ಎಲೆಗಯೊಂದಿಗೆ ಸೇರಿಸಿ ತಿನ್ನುವುದರಿಂದ ಕಫ ನಿವಾರಣೆಯಾಗುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ : ಖಾಲಿ ಹೊಟ್ಟೆಯಲ್ಲಿ ಬೆಳಗ್ಗಿನ ಜಾವ ಬಿಲ್ವಪತ್ರೆ ಎಲೆ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬಿಲ್ವ ಪತ್ರೆ ಎಲೆಗಳಲ್ಲಿ ವಿಟಮಿನ್ ಸಿ ಅಂಶ ಇರುತ್ತದೆ. ಇವುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯ ಮಾಡುತ್ತದೆ.
ಅಸ್ತಮಾ ಸಮಸ್ಯೆಗೆ ಪರಿಹಾರ : ಕೇವಲ ಶೀತ ನೆಗಡಿಗೆ ಮಾತ್ರವಲ್ಲ ಅಸ್ತಮಾದಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರೂ ಕೂಡಾ ಬಿಲ್ವಪತ್ರೆಯಿಂದ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ. ಅಸ್ತಮಾದಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ಎಲೆಗೆ ಕಾಳು ಮೆಣಸು ಸೇರಿಸಿ ತಿನ್ನುವುದರಿಂದ ಅಸ್ತಮಾ ಸಮಸ್ಯೆ ಕ್ರಮೇಣ ವಾಸಿಯಾಗುತ್ತದೆ .
ಗರ್ಭಪಾತ ತಡೆತಯುತ್ತದೆ : ಪದೇ ಪದೇ ಗರ್ಭಪಾತವಾಗುತ್ತಿರುವ ಮಹಿಳೆಯರು ಸಹ ಬಿಲ್ವಪತ್ರೆಯ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಗರ್ಭಿಣಿಯಾದ ಬಳಿಕ ವಾರದಲ್ಲಿ ಎರಡು ದಿನ ಖಾಲಿ ಹೊಟ್ಟೆಯಲ್ಲಿ ಬಿಲ್ವ ಪತ್ರೆಯನ್ನು ಸೇವಿಸಬೇಕು. ಬಿಲ್ವ ಪತ್ರೆಯ ಬೇರನ್ನು ನೀರಲ್ಲಿ ತೇಯ್ದು ಕುಡಿಯುವುದರಿಂದಲೂ ಗರ್ಭಪಾತ ತಡೆಗಟ್ಟಬಹುದಾಗಿದೆ .
ಹೃದಯದ ಆರೋಗ್ಯ : ಬಿಲ್ವಪತ್ರೆಯ ಎಲೆಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಆಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಖಾಲಿ ಹೊಟ್ಟೆಯಲ್ಲಿ ಬಿಲ್ವ ಪತ್ರೆ ಸೇವನೆ ಉತ್ತಮ ಆಯ್ಕೆಯಾಗಿದೆ. ಹೃದಯ ರಕ್ತನಾಳದ ಆರೋಗ್ಯವನ್ನೂ ಸುಧಾರಿಸುತ್ತದೆ.
ಮಧುಮೇಹಿಗಳಿಗೆ ಮನೆಮದ್ದು : ಮಧುಮೇಹದಿಂದ ಬಳಲುತ್ತಿರುವವರಿಗೂ ಬಿಲ್ವಪತ್ರೆ ಉತ್ತಮ ಆಯ್ಕೆಯಾಗಿದೆ. ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ಸೇವಿಸುವುದರಿಂದ ಇನ್ಸುಲಿನ್ ಮಟ್ಟ ಹೆಚ್ಚುತ್ತದೆ ಹಾಗೂ ದೇಹಕ್ಕೆ ಶಕ್ತಿ ನೀಡುವ ಕಾರ್ಯ ಮಾಡುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.
ಉತ್ತಮ ಜೀರ್ಣಕ್ರಿಯೆ : ಉದರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರು ಬಿಲ್ವಪತ್ರೆ ಹಣ್ಣುಗಳ ಸೇವನೆ ಮಾಡಬಹುದಾಗಿದೆ. ಬಿಲ್ವಪತ್ರೆ ಹಣ್ಣುಗಳ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಚಯಾಪಚಯ ವೇಗ ಹೆಚ್ಚುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳು ವಾಸಿಯಾಗುತ್ತದೆ.
ಆ್ಯಂಟಿ ಬ್ಯಾಕ್ಟಿರಿಯಾ ಗುಣಗಳು : ಬ್ಯಾಕ್ಟಿರಿಯಾ ಸಂಬಂಧಿ ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಬಿಲ್ವಪತ್ರೆ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿಗೂ ಸಾಕಷ್ಟು ಆ್ಯಂಟಿ ಬ್ಯಾಕ್ಟಿರೀಯಾ ಸಂಬಂಧಿ ಔಷಧಿಗಳಲ್ಲಿ ಬಿಲ್ವಪತ್ರೆ ಹಣ್ಣುಗಳ ಬಳಕೆಯಾಗುತ್ತದೆ. ಬ್ಯಾಕ್ಟೀರಿಯಾ ಹಾಗೂ ವೈರಸ್ಗಳ ವಿರುದ್ಧ ಬಿಲ್ವಪತ್ರೆ ಹೋರಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications