Latest Updates
-
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ
ತೂಕ ಇಳಿಕೆಗಾಗಿ ತುಂಬಾನೇ ಟ್ರೆಂಡ್ ಆಗುತ್ತಿದೆ 90-30-50 ಡಯಟ್, ಏನಿದು? ಇದರ ಪ್ರಯೋಜನಗಳೇನು?
ತೂಕ ಇಳಿಕೆಗೆ ಅನೇಕ ಡಯಟ್ ಪ್ಲ್ಯಾನ್‌ಗಳಿವೆ, ಆದರೆ ಇತ್ತೀಚೆಗೆ 90-30-50 ಡಯಟ್ ಪ್ಲ್ಯಾನ್ ತುಂಬಾನೇ ಟ್ರೆಂಡ್‌ನಲ್ಲಿದೆ. ಈ ಡಯಟ್‌ನಲ್ಲಿ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿದ್ದು ಈ ಡಯಟ್ ಫಾಲೋ ಮಾಡಿದರೆ ಆರೋಗ್ಯಕರವಾಗಿ ಮೈ ತೂಕ ಕಡಿಮೆಯಾಗುವುದು ಎಂದು ಹೇಳಾಗುತ್ತಿದೆ, ಬನ್ನಿ ಈ ಡಯಟ್ ಪ್ಲ್ಯಾನ್ ಏನು, ಇದರ ಪ್ರಯೋಜನಗಳೇನು? ಇದರಿಂದ ಏನಾದರೂ ಅಡ್ಡಪರಿಣಾಮವಿದೆಯೇ ಎಂದು ನೋಡೋಣ ಬನ್ನಿ:

90-30-50 ಡಯಟ್
ಇದು ಪ್ರೊಟೀನ್, ನಾರಿನಂಶ ಹಾಗೂ ಆರೋಗ್ಯಕರ ಕೊಬ್ಬಿನಂಶದ ಡಯಟ್ ಆಗಿದೆ. ಈ ಮೂರು ದೇಹ ತನ್ನ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಲು ಅವಶ್ಯಕ. ಇದು ದೇಹದಲ್ಲಿ ಅವಶ್ಯಕವಾದ ಪ್ರೊಟೀನ್ ನೀಡುತ್ತದೆ, ಕೊಬ್ಬಿನಂಶ ನೀಡುತ್ತದೆ, ಚಯಪಚಯ ಕ್ರಿಯೆ ಉತ್ತಮವಾಗಲು ನಾರಿನಂಶ ಹಾಗೂ ಕಾರ್ಬ್ಸ್ ಅವಶ್ಯಕ.
ಇದರಲ್ಲಿ 90 ಗ್ರಾಂ ಪ್ರೊಟೀನ್ ಸೇವಿಸಬೇಕು
ನೀವು ಆಹಾರವನ್ನು ಸೇವಿಸುವಾಗ ಅದರಲ್ಲಿ 90 ಗ್ರಾಂ ಪ್ರೊಟೀನ್ ಇರಬೇಕು. ತೆಳು ಮಾಂಸ, ಪೌಲ್ಟ್ರಿ, ಮೀನು, ದಾನ್ಯಗಳು, ಹಾಲಿನ ಉತ್ಪನ್ನಗಳಲ್ಲಿ ಪ್ರೊಟೀನ್ ಅಧಿಕವಿದೆ.
ನಾರಿನಂಶ: ನಿಮ್ಮ ಆಹಾರದಲ್ಲಿ 30% ಕಾರ್ಬ್ಸ್ ಇರಬೇಕು
ಕಾರ್ಬ್ಸ್ ಕೂಡ ದೇಹದ ಆರೋಗ್ಯಕ್ಕೆ ತುಂಬಾನೇ ಅವಶ್ಯಕ, ಕೆಲವರು ಡಯಟ್‌ನಿಂದ ಕಾರ್ಬ್ಸ್ ಸಂಪೂರ್ಣ ಹೊರಗಿಡುತ್ತಾರೆ, ಆದರೆ ಇದರಿಂದ ನಿಶ್ಯಕ್ತಿ ಉಂಟಾಗುವುದು, ಕಾರ್ಬ್ಸ್ ದೇಹಕ್ಕೆ ಶಕ್ತಿಯನ್ನು ತುಂಬುವುದು. ಕಾರ್ಬ್ಸ್ ಆಹಾರ ನಿಮ್ಮ ಆಹಾರದಲ್ಲಿ ಶೆ.30ರಷ್ಟು ಇರುವಂತೆ ನೋಡಿಕೊಳ್ಳಿ.
ಆರೋಗ್ಯಕರ ಕೊಬ್ಬಿನಂಶ
ದೇಹದ ಆರೋಗ್ಯಕ್ಕೆ ಕೊಬ್ಬಿನಂಶ ಕೂಡ ತುಂಬಾನೇ ಅವಶ್ಯಕ. ಒಮೆಗಾ 3 ಕೊಬ್ಬಿನಂಶವಿರುವ ಆಹಾರ ಸೇರಿಸಿ. ಮೀನು, ಮೊಟ್ಟೆ, ತುಪ್ಪ ಈ ಬಗೆಯ ವಸ್ತುಗಳಲ್ಲಿ ಆರೋಗ್ಯಕರ ಕೊಬ್ಬಿನಂಶವಿರುತ್ತದೆ.
ತೂಕ ಇಳಿಕೆಗೆ ಸಹಕಾರಿ
ತುಂಬಾ ಜನರು ಈ ಡಯಟ್ ಫಾಲೋ ಮಾಡಿ ಮೈ ತೂಕ ಕಡಿಮೆ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಡಯಟ್ ಫಾಲೋ ಮಾಡುವುದರಿಂದ ದೇಹಕ್ಕೆ ಅವಶ್ಯಕವಾದ ಎಲ್ಲಾ ಪೋಷಕಾಂಶಗಳು ದೊರೆಯುತ್ತದೆ, ಆದ್ದರಂದ ಆರೋಗ್ಯಕರ ಮೈ ಕಟ್ಟು ಪಡೆಯಲು ಈ ಡಯಟ್ ಬೆಸ್ಟ್ ಎಂದು ಹೇಳಲಾಗುವುದು.
ಯಾರು ಈ ಡಯಟ್ ಪ್ಲ್ಯಾನ್ ಪಾಲಿಸಬಾರದು
ಇದರಲ್ಲಿ ಕೊಬ್ಬಿನಂಶ ಅಧಿಕವಿರುತ್ತದೆ, ಆದ್ದರಿಂದ ಹೃದಯ ಸಮಸ್ಯೆ ಇರುವವರಿಗೆ ಅಧಿಕ ಕೊಬ್ಬಿನಂಶ ಒಳ್ಳೆಯದಲ್ಲ, ಆದ್ದರಿಂದ ಹೃದಯದ ಸಮಸ್ಯೆ ಇರುವವರು ಈ ಡಯಟ್ ಫಾಲೋ ಮಾಡಬೇಡಿ.
ಈ ಡಯಟ್ ಫಾಲೋ ಮಾಡುವುದು ಕಷ್ಟವಾಗಬಹುದು
ಕೆಲವರಿಗೆ ಈ ಡಯಟ್ ಫಾಲೋ ಮಾಡುವುದು ಕಷ್ಟವಾಗಬಹುದು, ಏಕೆಂದರೆ ಪ್ರೊಟೀನ್, ಕಾರ್ಬ್ಸ್, ಕೊಬ್ಬಿನಂಶದ ಪ್ರಮಾಣ 90-30-50 ಅನುಪಾತದಲ್ಲಿ ಪಾಲಿಸಬೇಕು. ಯಾರು ಇದನ್ನು ಸ್ಟ್ರಿಕ್ಟ್ ಆಗಿ ಪಾಲಿಸುತ್ತಾರೋ ಅವರು ಉತ್ತಮ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗುವುದು.
ಯಾವಾಗಲೂ ಆರೋಗ್ಯಕರವಾಗಿ ತೂಕ ಇಳಿಸಬೇಕು:
ಪ್ರತಿಯೊಬ್ಬರು ಮೈ ತೂಕ ಕಡಿಮೆ ಮಾಡಬೇಕೆಂದು ಹಲವಾರು ಡಯಟ್ ಪಾಲಿಸುತ್ತಾರೆ. ಕೆಲವೊಂದು ಡಯಟ್ ಆರೋಗ್ಯಕರವಾಗಿದ್ದರೆ ಇನ್ನು ಕೆಲವೊಂದು ಡಯಟ್ ಆರೋಗ್ಯಕರವಾಗಿರಲ್ಲ, ಉದಾಹರಣೆಗೆ ಕ್ರಾಷ್ ಡಯಟ್. ಯಾವಾಗಲೂ ಆರೋಗ್ಯಕರ ಆಹಾರವನ್ನು ಸೇವಿಸಿ ಮೈ ತೂಕವನ್ನು ಕಡಿಮೆ ಮಾಡಬೇಕು. ಹಾಗೆ ನೋಡಿದರೆ ಈ 90-30-50 ಡಯಟ್ ಆರೋಗ್ಯಕರವಾಗಿದೆ. ನೀವು ಬೇರೆ-ಬೇರೆ ರುಚಿಯಲ್ಲಿ ಆಹಾರವನ್ನು ಸವಿಯಬಹುದು, ಆದ್ದರಿಂದ ಈ ಆಹಾರಕ್ರಮ ಟೇಸ್ಟ್ ಕೂಡ ಅನಿಸುವುದು. ನೀವು ಈ ಡಯಟ್ ಪಾಲಿಸುವ ಮುನ್ನ ನಿಮ್ಮ ಆರೋಗ್ಯ ತಜ್ಞರ ಸಲಹೆ ಪಡೆದು ಪಾಲಿಸಿ. ತೂಕ ಇಳಿಕೆಗೆ ಡಯಟ್ ಫಾಲೋ ಮಾಡುವಾಗ ಅದರ ಜೊತೆಗೆ ವ್ಯಾಯಾಮ ಕೂಡ ಮಾಡಿದರೆ ಬೇಗನೆ ಫಲಿತಾಂಶ ಸಿಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











