Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಜಿಮ್ ಹೋಗಿಲ್ಲ, ಪ್ರೋಟಿನ್ ಪೌಡರ್ ತಗೊಂಡಿಲ್ಲ, ನೈಸರ್ಗಿಕವಾಗಿಯೇ ಈ ಯುವ ಬಾಡಿ ಬಿಲ್ಡ್ ಮಾಡಿದ್ದೇಗೆ?
ಪುರುಷನ ಫಿಟ್ ಅಂಡ್ ಹ್ಯಾಂಡ್ಸಮ್ ಆಗಿದ್ದಾನೆ ಎಂದು ಹೇಳಲು ಈಗೀನ ಮಾನದಂಡ ಸಿಕ್ಸ್‌ಪ್ಯಾಕ್. ಯಾರು ಸಿಕ್ಸ್‌ಪ್ಯಾಕ್ ಹೊಂದಿದ್ದಾರೂ ಅವರು ತುಂಬಾ ಸೆಕ್ಸಿಯಾಗಿ ಕಾಣಿಸುತ್ತಾರೆ, ಮಹಿಳೆಯರು ಸಿಕ್ಸ್‌ಪ್ಯಾಕ್‌ಗೆ ಆಕರ್ಷಿತರಾಗುತ್ತಾರೆ ಎಂಬುವುದು ಹೀಗಾಗಲೇ ಯುವಕರ ತಲೆಯಲ್ಲಿ ಕುಳಿತಾಗಿದೆ. ಅದಕ್ಕೆ ಮುಖ್ಯ ಕಾರಣ ಸಿನಿಮಾಗಳು. ಸಿನಿಮಾಗಳಲ್ಲಿ ನಟನಿಗೆ ಸಿಕ್ಸ್‌ಪ್ಯಾಕ್ ಎಂದು ಬಯಸುವ ಕಾಲ, ಅವನು ಶರ್ಟ್ ಬಿಚ್ಚಿ ತನ್ನ ಸಿಕ್ಸ್‌ಪ್ಯಾಕ್ ತೋರಿಸಿದಾಗ ವೀಕ್ಷಕರು ಓ... ಎಂದು ಕಿರುಚುತ್ತಾರೆ ಹೀಗಾಗಿ ಸಿಕ್ಸ್‌ಪ್ಯಾಕ್ ಬಗ್ಗೆ ಪುರುಷರಲ್ಲಿ ತುಂಬಾನೇ ಕ್ರೇಝಿ ಇದೆ.

ಸಿಕ್ಸ್‌ಪ್ಯಾಕ್ ಏನೂ ಸುಮ್ಮನೆ ಬರಲ್ಲ ಅದಕ್ಕೆ ಜಿಮ್‌ನಲ್ಲಿ ಅಷ್ಟೊಂದು ವರ್ಕೌಟ್ ಮಾಡಬೇಕಾಗುತ್ತದೆ, ಆಹಾರಕ್ರಮದ ಕಡೆ ಗಮನ ನೀಡಬೇಕಾಗುತ್ತದೆ, ಕೆಲವು ತಿಂಗಳುಗಳ ಕಠಿಣ ಶ್ರಮದ ಬಳಿಕವಷ್ಟೇ ಸಿಕ್ಸ್‌ಪ್ಯಾಕ್ ಪಡೆಯಲು ಸಾಧ್ಯ. ಆದರೆ ಇಲ್ಲೊಬ್ಬರು ಯಾವುದೇ ಜಿಮ್‌ಗೆ ಹೋಗಿಲ್ಲ, ಪ್ರೋಟೀನ್ ಪೌಡರ್ ತೆಗೆದುಕೊಂಡಿಲ್ಲ ಆದರೆ ಸಿಕ್ಸ್ ಪ್ಯಾಕ್ ಮೂಲಕ ಉಕ್ಕಿನ ಮೈಕಟ್ಟು ಪಡೆದು ತುಂಬಾನೇ ಗಮನ ಸೆಳೆದಿದ್ದಾರೆ. ಹಾಗಾದರೆ ಹೇಗೆ ಇಂಥ ಮೈಕಟ್ಟು ಪಡೆದರು ಎಂದು ನೋಡುವುದಾದರೆ ಪ್ರಕೃತಿಯಲ್ಲಿನ ವಸ್ತುಗಳನ್ನೇ ಬಳಸಿ ಇಂಥ ಮೈಕಟ್ಟು ಪಡೆದಿದ್ದಾರೆ. ಇದೀಗ ಇವರು ಯಾವುದೇ ಜಿಮ್‌ಗೆ ಹೋಗದೆ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಅತ್ಯಂತ ಉಕ್ಕಿನ ಮೈಕಟ್ಟು ಪಡೆದಿದ್ದಾರೆ ಈ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ಯೂ ಟ್ಯೂಬ್ ವೀಡಿಯೋದಲ್ಲಿ ಹೇಗೆ ಆಕರ್ಷಕ ಮೈಕಟ್ಟು ಪಡೆದಿದ್ದಾರೆ ಎಂಬುವುದು ವಿವರಿಸಲಾಗಿದೆ ನೋಡಿ:
ಆತನ ಹೆಸರು ಮಿ. ವ್ಯಾಡ್ ಅವರನ್ನು ಸ್ಟೈಲ್ ಆಫ್ ಆಫ್ರಿಕಾ ಎಂದು ಕರೆಯಲಾಗುವುದು. ಯಾವುದೇ ಜಿಮ್ ಉಪಕರಣಗಳನ್ನು ಬಳಸದೆ, ಯಾವುದೇ ದುಬಾರಿ ಉಪಕರಣಗಳನ್ನು ಬಳಸದೆ ನೈಸರ್ಗಿಕವಾದ ವಸ್ತುಗಳನ್ನು ಬಳಸಿ ಸಿಕ್ಸ್‌ಪ್ಯಾಕ್ ಪಡೆದಿದ್ದಾರೆ.
ಪ್ರತಿದಿನ ಕಠಿಣ ವ್ಯಾಯಾಮ ಮಾಡುತ್ತಾರೆ ಈ ಮೂಲಕ ತಮ್ಮ ಮೈಕಟ್ಟು ಸದೃಢ ಮಾಡಿಕೊಂಡಿದ್ದಾರೆ, ಅದಕ್ಕಾಗಿ ಯಾವ ಪ್ರೊಟೀನ್ ಪೌಡರ್ ಬಳಸುತ್ತಿಲ್ಲ. ಇದೀಗ ಬಾಡಿ ಬಿಲ್ಡಿಂಗ್ ಲೋಕವನ್ನು ತಮ್ಮತ್ತ ನೋಡುವಂತೆ ಮಾಡಿದ್ದಾರೆ ಈ ಯುವಕ. ಇವರ ಸಾಧನೆ ಪ್ರಸಿದ್ಧ ಬಾಡಿ ಬಿಲ್ಡರ್ ಪೌಲ್ ಜೀನ್ ಗುಯಿಲೌಮ್ ಅವರ ಸಾಧನೆಗೆ ಹೋಲುತ್ತದೆ. ಗುಯಿಲೌಮ್ ಕೂಡ 1980, 90ರಲ್ಲಿ ಪ್ರಸಿದ್ಧ ಬಾಡಿ ಬಿಲ್ಡರ್ ಆಗಿ ಗುರುತಿಸಿಕೊಂಡವರು. ಆಗ ಬಾಡಿ ಬಿಲ್ಡರ್‌ಗಳು ಸ್ಟಿರಾಯ್ಡ್ ಪಡೆಯುತ್ತಿದ್ದರು, ಇವರು ಮಾತ್ರ ಯಾವುದೇ ಸ್ಟಿರಾಯ್ಡ್ ಇಲ್ಲದೆ ಬಾಡಿ ಬಿಲ್ಡಿಂಗ್ ಮೂಲಕ ಸಾಧನೆ ಮಾಡಿದವರು. ಇದೀಗ ಮಿ. ವ್ಯಾಡ್ ಅದೇ ಹಾದಿಯಲ್ಲಿಯೇ ಹೋಗುತ್ತಿದ್ದಾರೆ. .
ಜಿಮ್‌ಗೆ ಹೋಗದೆಯೂ ಬಾಡಿ ಬಿಲ್ಡ್ ಮಾಡಬಹುದು ಎಂಬುವುದಕ್ಕೆ ಉದಾಹರಣೆ ಮಿ. ವ್ಯಾಡ್
ಬಾಡಿ ಬಿಲ್ಡ್ ಮಾಡಬೇಕೆಂದರೆ ಜಿಮ್‌ಗೆ ಹೋಗಲೇಬೇಕು, ಪ್ರೊಟೀನ್ ಪೌಡರ್ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯ ಜನರಲ್ಲಿದೆ, ಆದರೆ ಇದ್ಯಾವುದು ಇಲ್ಲದೆಯೂ ಸರಿಯಾಗಿ ವರ್ಕೌಡ್ ಮಾಡಿದರೆ ಬಾಡಿ ಬಿಲ್ಡಿಂಗ್ ಮಾಡಬಹುದು. ಕೆಲವರಿಗೆ ಬಾಡಿ ಬಿಲ್ಡಿಂಗ್ ಮಾಡಬೇಕೆಂಬ ಆಸೆ ಇರುತ್ತದೆ, ಆದರೆ ಜಿಮ್‌ಗೆ ಹಣ ಕೊಡಲು ಸಾಧ್ಯವಿಲ್ಲವೆಂದು ಆ ಆಸೆ ಬಿಟ್ಟಿರುತ್ತಾರೆ, ಅದರೆ ಅಂಥವರು ಮಿ. ವ್ಯಾಡ್ ಅನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಬಾಡಿ ಬಿಲ್ಡ್ ಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
