Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಾಟ್ ಲುಕ್‌ನಲ್ಲಿ ಹ್ಯಾಂಡ್ಸಮ್ ಬಾಯ್ ರಣಬೀರ್ ಕಪೂರ್
ಸಾವರಿಯಾ ಚಿತ್ರದಿಂದ ತನ್ನ ಸಿನಿ ಪ್ರಯಾಣವನ್ನು ಆರಂಭಿಸಿದ ಕಪೂರ್ ಕುಡಿ ರಣಬೀರ್ ಕಪೂರ್ರ ಮುದ್ದು ಮುಖ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಬಾಲಿವುಡ್ನಲ್ಲಿ ಕಪೂರ್ ವಂಶವೆಂದರೆ ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು. ಇನ್ನು ರಣಬೀರ್ಗಂತೂ ತುಂಬು ಕುಟುಂಬದ ಪ್ರೋತ್ಸಾಹ ಬೇರೆ. ಆದರೆ ಆರಂಭದಲ್ಲಿ ಸಾಕಷ್ಟು ಎಡರು ತೊಡರುಗಳನ್ನು ಕಂಡುಕೊಂಡ ಈ ನಟ ಒಂದು ಕಾಲದಲ್ಲಂತೂ ಹಾಸ್ಯಸ್ಪದವಾಗಿದ್ದರು.

ಆದರೆ ಮೈಕೊಡವಿಕೊಂಡು ನಟನೆಯ ಕೌಶಲ್ಯಗಳನ್ನು ಕೆಲವೇ ಸಮಯಗಳಲ್ಲಿ ಕಲಿತುಕೊಂಡು ಬಾಲಿವುಡ್ ಅಂಗಳದಲ್ಲಿ ದೃಢ ಹೆಜ್ಜೆಯನ್ನಿಟ್ಟಿದ್ದು ಈಗ ಇತಿಹಾಸವಾಗಿದೆ. ಇನ್ನು ಅವರ ಸ್ಟೈಲ್ ಸೆನ್ಸ್ ಅಂತೂ ಪರ್ಫೆಕ್ಟ್ ಎಂದೇ ಹೇಳಬಹುದು. ಯೇ ದಿಲ್ ಹೇ ಜರಾ ಮುಶ್ಕಿಲ್ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಲಂಡನ್ ನಿಂದ ಮರಳಿ ಬರುತ್ತಿರುವಾಗ ತಮ್ಮ ಸುಂದರ ದಿರಿಸಿನಿಂದ ವಿಮಾನ ನಿಲ್ದಾಣದಲ್ಲಿ ಕಂಡುಬಂದಿದ್ದಾರೆ.
ಹಾಟ್ ಆಗಿ ಕಾಣಿಸುತ್ತಿದ್ದ ರಣಬೀರ್ ನೀಲಿ ಬಣ್ಣದ ಚೆಕ್ಸ್ ಶರ್ಟ್ ಅನ್ನು ಧರಿಸಿದ್ದರು ಮತ್ತು ಗಾಢ ವರ್ಣದ ಡೆನಿಮ್ ಪ್ಯಾಂಟ್ ಇದಕ್ಕೆ ಜೋಡಿಯಾಗಿತ್ತು. ದಿರಿಸಿಗೆ ಸಾಥ್ ನೀಡಿದ್ದು ನ್ಯೂಯಾರ್ಕ್ ಸಿಟಿ ಕ್ಯಾಪ್ ಆಗಿದೆ. ರಣಬೀರ್ರ ಡೆನೀಮ್ ಮತ್ತು ಚೆಕ್ಸ್ ಲುಕ್ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ನಿಮ್ಮ ಅಭಿಪ್ರಾಯವನ್ನು ನಮಗೂ ತಿಳಿಸಿ.



Click it and Unblock the Notifications

