Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ!
ಮೋಹಕ ತಾರೆ, ಮಾಧುರಿಯೆಂಬ ಚೆಲುವಿನ ಕನ್ನಿಕೆ
ಬಾಲಿವುಡ್ ನ ಅದ್ಭುತ ಚಲನಚಿತ್ರ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡ 2002 ರಲ್ಲಿ ಬಿಡುಗಡೆಯಾದ ದೇವದಾಸ್ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದ್ದು ನಮಗೆಲ್ಲರಿಗೂ ತಿಳಿದೇ ಇದೆ. ಶರತ್ ಚಂದ್ರ ಚಟ್ಟೋಪಾಧ್ಯಾಯರ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರ ಇದಾಗಿದ್ದು ಅದ್ಭುತ ಯಶಸ್ಸನ್ನು ಕಂಡಿತ್ತು. ಇನ್ನು ಚಿತ್ರದಲ್ಲಿ ನಟಿಸಿದ್ದ ಶಾರೂಕ್ ಖಾನ್, ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್ ತಮ್ಮ ಅನೂಹ್ಯ ನಟನೆಯಿಂದ ಚಿತ್ರ ರಸಿಕರ ಮನಸೂರೆಗೊಂಡಿದ್ದರು.
ಇನ್ನು ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಮಾಧುರಿ ದೀಕ್ಷಿತ್ ಮತ್ತು ಆಕೆಯ ವರ್ಣರಂಜಿತ ದಿರಿಸು ನಮ್ಮನ್ನು ದಿಗ್ಭ್ರಮೆಗೊಳಿಸಿದ್ದಂತೂ ಯಾರೂ ಮರೆಯಲಾರರು. ಚಿತ್ರದಲ್ಲಿ ತಮ್ಮ ಅಪೂರ್ವ ಸೌಂದರ್ಯದಿಂದ ಕಂಗೊಳಿಸಿದ್ದ ಮಾಧುರಿ ನಿಜಕ್ಕೂ ಸಿನಿಪ್ರಿಯರನ್ನು ಮಂತ್ರಮುಗ್ಧಗೊಳಿಸಿದ್ದರು. ಇಂದಿನ ಲೇಖನದಲ್ಲಿ ದೇವದಾಸ್ ಚಿತ್ರದಲ್ಲಿನ ಮಾಧುರಿಯ ಅದ್ಭುತ ನೋಟಗಳ ಕಡೆಗೆ ನಿಮ್ಮನ್ನು ನಾವು ಸೆಳೆದೊಯ್ಯುತ್ತಿದ್ದೇವೆ.

ಕನ್ನಡಿ ನೋಟ
ಕನ್ನಡಿಗಳಿಂದಲೇ ಅಲಂಕೃತಗೊಂಡ ದಿರಿಸು ಧರಿಸಿದ್ದ ಮಾಧುರಿಯ ನೆನಪು ನಿಮ್ಮ ಮನಸ್ಸಲ್ಲಿ ಹಾದುಹೋಗಬಹುದು. ಭಾರೀ ತೂಕದ ಕನ್ನಡಿಗಳಿಂದ ಹೊಳೆಯುತ್ತಿದ್ದ ಸುಂದರವಾದ ಲೆಹಂಗಾ ಮತ್ತು ಅದ್ಭುತ ದುಪ್ಪಟ್ಟ ಎಂಥವರನ್ನೂ ಮೋಡಿ ಮಾಡಿತ್ತು. ಭೂಮಿಗೆ ಇಳಿದು ಬಂದ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು
ಮಾರ್ ಡಾಲಾ ಲೆಹೆಂಗಾ
ದೇವದಾಸ್ ನ ಮಾರ್ ಡಾಲಾ ಹಾಡಂತೂ ಯಾರಿಗೂ ಮರೆಯಲು ಸಾಧ್ಯವೇ ಇಲ್ಲ ಬಿಡಿ. ಇನ್ನು ಈ ಹಾಡಿನಲ್ಲಿ ಮಾಧುರಿ ಅದ್ಭುತ ಲೆಹೆಂಗಾ ಧರಿಸಿ ಮನಸೂರೆಗೊಂಡಿದ್ದರು. ತೋಳುಗಳಲ್ಲಿದ್ದ ಜರಿಯ ಕುಸುರಿ ಕೆಲಸ ಮತ್ತು ಕುತ್ತಿಗೆಯ ಸುಂದರ ವಿನ್ಯಾಸ ನಿಜಕ್ಕೂ ನಮ್ಮನ್ನು ಮಾಧುರಿಗೆ ಮನಸೋಲುವಂತೆ ಮಾಡಿತ್ತು.
ಕೆಂಪು ಲೆಹೆಂಗಾ
ಕಾಹೆ ಚೇಡ್ ಮೋಹೆ ಎಂಬ ಹಾಡಲ್ಲಂತೂ ಮಾಧುರಿ ಧರಿಸಿದ್ದ ಕೆಂಪು ಲೆಹೆಂಗಾ ಮತ್ತು ಭಾರವಾದ ಆಭರಣ ಆಕೆಯ ಸೌಂದರ್ಯವನ್ನು ಕುರಿತು ನಮ್ಮಲ್ಲಿ ಹೊಟ್ಟೆಕಿಚ್ಚು ಉಂಟುಮಾಡಿದ್ದಂತೂ ಸುಳ್ಳಲ್ಲ.
ಡೋಲಾ ರೇ ಸೀರೆ
ಡೋಲಾ ರೇ ಸೀರೆಯಲ್ಲಂತೂ ಆಕೆ ಧರಿಸಿದ್ದ ಬಂಗಾಳಿ ಸೀರೆ ಮಾಧುರಿಯನ್ನು ದೇವಲೋಕದ ಅಪ್ಸರೆಯಂತೆ ಕಂಗೊಳಿಸಿತ್ತು. ಇನ್ನು ಈಕೆಗೆ ಜೋಡಿಯಾಗಿ ನೃತ್ಯದಲ್ಲಿ ಐಶ್ ಕೂಡ ಹೆಜ್ಜೆಹಾಕಿದ್ದರು. ಕೆಂಪು ಮತ್ತು ಬಿಳಿ ಬಣ್ಣ ಮಿಶ್ರವಾಗಿದ್ದ ಸೀರೆಯನ್ನು ಇವರಿಬ್ಬರೂ ಧರಿಸಿದ್ದರು.
ಅಂತೂ ದೇವದಾಸ್ ಚಿತ್ರದ ಮಾಧುರಿಯ ದೀಕ್ಷಿತ್ ನಮ್ಮನ್ನು ತಮ್ಮ ಅದ್ಭುತ ಸೌಂದರ್ಯ ರಾಶಿಯಿಂದ ಮರಳು ಮಾಡಿದ್ದಂತೂ ಸುಳ್ಳಲ್ಲ. ಚಿತ್ರದಲ್ಲಿ ಆಕೆಯ ನೋಟವನ್ನು ವರ್ಣಿಸಲು ಪದಗಳೇ ಇಲ್ಲವೆಂದೇ ಹೇಳಬಹುದು.



Click it and Unblock the Notifications


