ಆಸ್ಕರ್‌ನಲ್ಲಿ ವರ್ಣರಂಜಿತ ಉಡುಗೆಗಳನ್ನು ಧರಿಸಿ ಮನಕದ್ದವರು

Posted By: Jaya Subramanaya
Subscribe to Boldsky

ಆಸ್ಕರ್‌ನ ರೆಡ್ ಕಾರ್ಪೆಟ್‌ ಅಂಗಳ ರಂಗೇರುತ್ತಿದೆ. ನಟೀ ಮಣಿಯರ ವಿಧ ವಿಧದ ದಿರಿಸುಗಳ ಪ್ರದರ್ಶನ ನೋಡಿದವರ ಮನದಲ್ಲಿ ಮಿಂಚಿನ ಸೆಳೆತವನ್ನುಂಟು ಮಾಡುತ್ತಿದೆ. ಒಂದು ರೀತಿಯಲ್ಲಿ ಸೆಲೆಬ್ರಿಟಿ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಆಸ್ಕರ್ ಎಲ್ಲರ ನಟಿಯರನ್ನೂ ಅಪ್ಪಿಕೊಳ್ಳುತ್ತದೆ, ಎಲ್ಲರಿಗೂ ಮನ್ನಣೆಯನ್ನು ನೀಡುತ್ತದೆ. ವರ್ಷ ವರ್ಷವೂ ಹೊಸ ಬಗೆಯಲ್ಲಿ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯುತ್ತಿದ್ದು, ಪ್ರತೀ ವರ್ಷ ಕೂಡ ಆಸ್ಕರ್‌ನಲ್ಲಿ ಕುತೂಹಲ ಇದ್ದೇ ಇರುತ್ತದೆ. ಈ ಬಾರಿ ಆಸ್ಕರ್‌ ಅವಾರ್ಡ್‌ನಲ್ಲಿ ಸೆಲೆಬ್ರಿಟಿಗಳು ಗಾಢ ಬಣ್ಣವನ್ನು ಆಯ್ದುಕೊಂಡಿದ್ದಾರೆ. ಹೆಚ್ಚಾಗಿ ಬಿಳಿ, ಕೆಂಪು ಮತ್ತು ಹಸಿರು ಬಣ್ಣಗಳೇ ಈ ಬಾರಿ ರೆಡ್ ಕಾರ್ಪೆಟ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ.

oscars-2018-colors

ಶುಭಾಶಯ ವಿನಿಯಮವನ್ನು ಮಾಡುತ್ತಾ, ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಈ ಬಾರಿ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್‌ನ ಮೇಲೆ ತಮ್ಮ ಸಂತಸವನ್ನು ಹಂಚಿಕೊಂಡರು. ಜೆನ್ನಿಫರ್ ಲಾರೆನ್ಸ್ ಅಂತೂ ಕುರ್ಚಿಯ ಮೇಲೆ ಏರಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ರೆಡ್ ಕಾರ್ಪೆಟ್‌ನಲ್ಲಿ ಮನರಂಜನೆಯನ್ನು ನೀಡಿತು. ಅಂತೂ ಪ್ರತಿಯೊಬ್ಬ ಸೆಲೆಬ್ರಿಟಿ ಕೂಡ ತಮ್ಮದೇ ಆದ ಸ್ಟೈಲ್ ಮತ್ತು ಭಂಗಿಯ ಮೂಲಕ ನೆರೆದವರ ಮನವನ್ನು ತಣಿಸಿದರು.

ನಿಕೋಲ್ ಕಿಡ್‌ಮ್ಯಾನ್ ಕೆಂಪು ಬಣ್ಣದ ಗೌನ್‌ನಲ್ಲಿ ರಾಜಕುಮಾರಿಯಂತೆ ಕಂಗೊಳಿಸಿದ್ದರು. ಕಪ್ಪು ಟ್ರೌಸರ್ ಅನ್ನು ಇದಕ್ಕೆ ಜೋಡಿಯಾಗಿ ನಿಕೋಲ್ ಧರಿಸಿದ್ದರು. ಇಂದಿನ ಲೇಖನದಲ್ಲಿ ರೆಡ್ ಕಾರ್ಪೆಟ್ ಅನ್ನು ಆಳಿದ ಇನ್ನಷ್ಟು ನಟೀಮಣಿಯ ವಿವರಗಳನ್ನು ನೀಡುತ್ತಿದ್ದು ನಿಜಕ್ಕೂ ಇದು ಮನರಂಜನೆಯನ್ನು ನೀಡಲಿದೆ....

oscars-2018-colors
oscars-2018-colors
oscars-2018-colors
oscars-2018-colors
English summary

oscars-2018-colors-are-back-at-the-red-carpet

The most awaited day for the Hollywood film fraternity led the whole world talking about the winners and the amazing spectrum of fashion and colors on the red carpet. After a long 'no color only black' phase in support of the #TimesUp campaign the Hollywood stars finally showed up in some bright colors at the Oscars, yesterday. While reds, greens and blues dominated the red carpet, there were some who stuck to black or monochrome.
Story first published: Monday, March 5, 2018, 23:32 [IST]