Latest Updates
-
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ವ್ಯಕ್ತಪಡಿಸುವ ಮುನ್ನ ಎಚ್ಚರ: ದಂಪತಿಗಳಿಗೆ ಇಲ್ಲಿದೆ ಡಿಜಿಟಲ್ ಶಿಷ್ಟಾಚಾರದ ಟಿಪ್ಸ್ -
ಮಳೆಗಾಲದ ಸಂಜೆ: ನಿಮ್ಮ ಅಪಾರ್ಟ್ಮೆಂಟ್ ಸೋರಿಕೆಯಾಗದಂತೆ ತಡೆಯಲು ಈ ತ್ವರಿತ ಟಿಪ್ಸ್ ಫಾಲೋ ಮಾಡಿ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: 30 ನಿಮಿಷದಲ್ಲಿ ಸುಂದರ ಪೂಕಳಂ ಬಿಡಿಸುವುದು ಹೇಗೆ? -
ಶ್ರಾವಣ ಸೋಮವಾರದ ವ್ರತ: ಆಫೀಸ್ ಕೆಲಸದ ನಡುವೆ ಮಧುಮೇಹಿಗಳು ಆರೋಗ್ಯವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್ -
ಮಳೆಗಾಲದ ಫೋಟೋಗಳು ವೈರಲ್ ಆಗಬೇಕಾ? ಈ ಸಿಂಪಲ್ ಮೊಬೈಲ್ ಟ್ರಿಕ್ಸ್ ಟ್ರೈ ಮಾಡಿ! -
ಆಗಸ್ಟ್ 17 ರಂದು ರಜೆ ಇದೆಯಾ? ಕೃಷ್ಣ ಜನ್ಮಾಷ್ಟಮಿ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟ ಮಾಹಿತಿ -
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್!
ಬಾಲಿವುಡ್ ಅಂಗಳದಲ್ಲಿ ತಮಾಷಾ ಜೋಡಿಗಳ ರಿಂಗಣ
ರಣಬೀರ್ ಕಪೂರ್ ಮತ್ತು ದೀಪಿಕಾ ಜೋಡಿ ಚಿತ್ರವೆಂದರೆ ಅದಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಮಾತಿದೆ. ಅವರು ನಟಿಸಿದ್ದ ಯೇ ಜವಾನಿ ಹೇ ದಿವಾನಿ, ಬಚನಾ ಯೇ ಹಸೀನೊ ಚಿತ್ರದ ಅಭೂತಪೂರ್ವ ಯಶಸ್ಸು ಇದಕ್ಕೆ ಸಾಕ್ಷಿ. ಈಗ ಇದೇ ಜೋಡಿ ನಟಿಸಿರುವ ಇನ್ನೊಂದು ಚಿತ್ರ ತಮಾಷಾ ಶುಕ್ರವಾರ ಬಿಡುಗಡೆಗೊಂಡಿದೆ. ತಮಾಷಾ ಚಿತ್ರವು ಬಿಡುಗಡೆಗೆ ಮುನ್ನವೇ ಸಿನಿ ಅಂಗಳದಲ್ಲಿ ಸದ್ದನ್ನು ಮಾಡಿದ್ದು ಚಿತ್ರ ಗಲ್ಲಾ ಪೆಟ್ಟಿಗೆಯನ್ನು ಬಾಚುವುದು ಖಂಡಿತ ಎಂಬುದಾಗಿ ಬಾಲಿವುಡ್ ಪಂಡಿತರು ಭವಿಷ್ಯ ನುಡಿದಿದ್ದರು.
ರಣಬೀರ್ ಮತ್ತು ದೀಪಿಕಾ ಕೂಡ ಚಿತ್ರದಲ್ಲಿ ಗಮನ ಸೆಳೆಯುವಂತಹ ಪಾತ್ರಗಳನ್ನು ನಿರ್ವಹಿಸಿದ್ದು, ಚಿತ್ರದ ಬಿಡುಗಡೆಯ ಮುಂಚಿನ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ಅದ್ಭುತವಾಗಿಯೇ ತೊಡಗಿಸಿಕೊಂಡಿದ್ದರು. ಚಿತ್ರದದ ಯಶಸ್ಸು ಅದನ್ನು ಜನರಿಗೆ ನಾವು ಹೇಗೆ ತಲುಪಿಸುತ್ತೇವೆ ಎಂಬುದರ ಮೇಲಿದೆ ಎಂಬ ಸಿದ್ಧಾಂತವನ್ನು ಅನುಸರಿಸಿಕೊಂಡೇ ಈ ಬಾಲಿವುಡ್ ಜೋಡಿಗಳು ಪ್ರಚಾರ ಕಾರ್ಯದಲ್ಲಿ ಕೊಂಚವೂ ಲೋಪ ದೋಷವುಂಟಾಗದಂತೆ ಕಾರ್ಯನಿರ್ವಹಿಸಿದ್ದಾರೆ.

ಪ್ರಚಾರ ಕಾರ್ಯಕ್ರಮದಲ್ಲಿ ದೀಪಿಕಾ ರಣಬೀರ್ ಜೋಡಿ ಗಮನ ಸೆಳೆಯುವಂತಹ ರೀತಿಯಲ್ಲಿ ಸ್ಫೂರ್ತಿಯ ಸೆಲೆಯಾಗಿದ್ದರು. ಹೆಚ್ಚು ಚಟುವಟಿಕೆಯಿಂದ ತಮ್ಮ ಚಿತ್ರದ ಪ್ರಚಾರದಲ್ಲಿ ಒಂದಿನಿತೂ ಲೋಪವುಂಟಾಗದಂತೆ ಭರ್ಜರಿ ತಯಾರಿ ನಡೆಸಿದ್ದ ಬಾಲಿವುಡ್ ಮಾಜಿ ಪ್ರೇಮಿಗಳು ಸೌಹಾರ್ದಯುತವಾಗಿಯೇ ಚಿತ್ರದ ಪ್ರಮೋಶನ್ ಅನ್ನು ಮಾಡಿದ್ದಾರೆ. ಇನ್ನು ಇವರಿಬ್ಬರ ಜೊತೆ ನಿರ್ದೇಶಕ ಇಮ್ತಿಯಾಜ್ ಆಲಿ ಕೂಡ ಆಕರ್ಷಕವಾಗಿದ್ದರು.
ದೀಪಿಕಾ ಪಡುಕೊಣೆ ಮತ್ತು ಆಕೆಯ ಸೌಂದರ್ಯದ ಕುರಿತಾಗಿ ಏನು ತಾನೇ ಮಾತನಾಡೋಣ. ಆಕೆಯ ಸೌಂದರ್ಯವು ನಮ್ಮನ್ನು ಎಂದಿಗೂ ಮೈಮರೆಯುವಂತೆ ಮಾಡುತ್ತದೆ. ಈ ಸಮಾರಂಭದಲ್ಲಿ ಆಕೆ ಬಿಳಿಯ ಸ್ಕರ್ಟ್ ತೊಟ್ಟ ಗಂಧರ್ವ ಕನ್ಯೆಯಂತೆ ಕಂಡು ಬಂದಿದ್ದರು. ಅವರು ಧರಿಸಿದ್ದ ಸ್ವೆಟರ್-ಸ್ಕರ್ಟ್ ಡ್ರೆಸ್ ಋತುಧಗೆಗೆ ಹೇಳಿ ಮಾಡಿಸಿದಂತ್ತಿತ್ತು. ಸ್ಟೈಲಿಶ್ ಎಂದೆನಿಸಿದ್ದ ಚಪ್ಪಲಿ ಮತ್ತು ನೇತಾಡುವ ಕಿವಿಯಾಭರಣದ ಮೂಲಕ ದಿರಿಸಿಗೆ ದೀಪಿಕಾ ಇನ್ನಷ್ಟು ಫ್ಯಾಷನ್ ಟಚ್ ಅನ್ನು ನೀಡಿದ್ದರು. ಅಲ್ಲದೆ ಆಕೆ ತನ್ನ ಟ್ರೇಡ್ ಮಾರ್ಕ್ ಆಗಿದ್ದ ಬನ್ ಪೆಪ್ಡ್‌ನಿಂದ ಇನ್ನಷ್ಟು ಚೆಂದವಾಗಿದ್ದರು.
ರಣ್‌ಬೀರ್ ಸಹ ರಗಡ್ ಲುಕ್‌ನಲ್ಲಿ ಮಿರಿ ಮಿರಿ ಮಿಂಚುತ್ತಿದ್ದರು. ಡಿಸ್ಟ್ರೆಸ್ ಆಗಿದ್ದ ಡೆನಿಮ್ ಮತ್ತು ಅದಕ್ಕೆ ಒಪ್ಪುವ ಕ್ರ್ಯೂ ನೆಕ್ ಬ್ಲಾಕ್ ಟಿ-ಶರ್ಟ್, ಅದರ ಮೇಲೆ ನೀಲಿ ಬಣ್ಣದ ಜಂಪರ್ ಧರಿಸಿ, ಈ ಸುಂದರಾಂಗ ವೇದಿಕೆಯ ಮೇಲಿನಿಂದ ಎಲ್ಲರ ಕಣ್ಣು ಕುಕ್ಕುತ್ತಿದ್ದರು. ನಿರ್ದೇಶಕ ಇಮ್ತಿಯಾಜ್ ಅಲಿ ಸಹ ರಣ್‌ಬೀರ್ ಧರಿಸಿದ್ದ ಉಡುಗೆಗಳನ್ನು ಅನುಸರಿಸಿದ್ದರು. ಇವರು ಸಹ ನೀಲಿ ಡೆನಿಮ್ ಮತ್ತು ಕಪ್ಪು ಶರ್ಟ್ ಧರಿಸಿದ್ದರು. ಜೊತೆಗೆ
ಕಪ್ಪು ಜಂಪರ್ ಜಾಕೆಟ್ ಅನ್ನು ಧರಿಸಿದ್ದರು. ಒಟ್ಟಿನಲ್ಲಿ ಈ ಮೂವರಲ್ಲಿ ಯಾರಿಗೆ ನಮ್ಮ ಮತವನ್ನು ಹಾಕುವುದು ಎಂಬ ಜಿಜ್ಞಾಸೆ ಕಂಡುಬರುವಂತಿತ್ತು. ಅಂತೂ ಈ ಮೂವರೂ ಸ್ಟೈಲಿಶ್ ದಿರಿಸುಗಳಿಂದಲೇ ತಮ್ಮ ಚಿತ್ರದ ಪ್ರಚಾರವನ್ನು ಮಾಡಿದ್ದರು ಪ್ರೇಕ್ಷಕರನ್ನು ಚಿತ್ರ ನೋಡುವಂತೆ ಆಕರ್ಷಿಸಿದ್ದರು. ಹಾಗಿದ್ದರೆ ನೀವೂ ತಡಮಾಡದೇ ತಮಾಷಾದ ತಮಾಷೆಯನ್ನು ಆಸ್ವಾದಿಸಲು ಸಿದ್ಧರಾಗಿ.



Click it and Unblock the Notifications
