Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಿಲ್ವಾಲೆಯ ದಿಲ್ದಾರ್ ಹುಡುಗ ವರುಣ್ ಧವನ್ ಸ್ಟೈಲ್
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಯುವ ಜೋಡಿಗಳಿಗೆ ಹೆಚ್ಚು ಮಣೆ ಹಾಕುತ್ತಿದ್ದು ಅವರಿಗಾಗಿಯೇ ಭಿನ್ನ ಚಿತ್ರಕಥೆಗಳನ್ನು ನಿರ್ದೇಶಕರು ಸಿದ್ಧಪಡಿಸುತ್ತಿದ್ದಾರೆ. ಈ ಕಥೆಗಳಿಗೆ ಅನುಸಾರವಾಗಿಯೇ ಚಿತ್ರ ನಾಯಕರೂ ಅಮೋಘವಾಗಿ ಅಭಿನಯಿಸಿ ತಮ್ಮ ಕಲಾಪ್ರತಿಭೆಗಳನ್ನು ಪ್ರದರ್ಶಿಸುವುದರ ಜೊತೆಗೆ ಚಿತ್ರದ ಯಶಸ್ಸಿಗೂ ಕಾರಣವಾಗುತ್ತಿದ್ದಾರೆ. ಇನ್ನು ಈ ನಟರು ಸುಂದರರಾಗಿದ್ದರಂತೂ ಮುಗಿದೇ ಹೋಯಿತು. ಯುವ ಮನಸ್ಸುಗಳಲ್ಲಿ ಬೇಗನೇ ಅಚ್ಚೊತ್ತಿಬಿಡುತ್ತಾರೆ.
ಇಂತಹ ಹ್ಯಾಂಡ್ಸಮ್ ಹುಡುಗರ ಪಟ್ಟಿಗೆ ಸೇರಿದವರಾಗಿದ್ದಾರೆ 2012ರಲ್ಲಿ ಸ್ಟೂಡೆಂಟ್ ಆಫ್ ದ ಇಯರ್ ಚಿತ್ರದಲ್ಲಿ ನಟಿಸಿದ ವರುಣ್ ಧವನ್. ಕರಣ್ ಜೋಹರ್ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ ಇದಾಗಿತ್ತು. ತಮ್ಮ ಸಿನಿ ಜೀವನವನ್ನು ಈ ಚಿತ್ರದ ಮೂಲಕ ಆರಂಭಿಸಿದ ವರುಣ್ ನಂತರ ಹಿಟ್ ಚಿತ್ರಗಳ ಯಶಸ್ಸಿನ ಕಥೆಯನ್ನೇ ಬರೆದರು. ಮೇ ತೇರಾ ಹೀರೊ, ಹಂಪ್ಟಿ ಶರ್ಮಾ ಕೀ ದುಲ್ಹನಿಯಾ, ಬದ್ಲಾಪುರ್, ಎಬಿಸಿಡಿ 2, ದಿಲ್ವಾಲೇ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ಇನ್ನು ಫ್ಯಾಷನ್ ವಿಷಯದಲ್ಲೂ ಮುಂದಿರುವ ಧವನ್ ಮೋಹಕವಾಗಿ ಸಿದ್ಧರಾಗಿ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಜೇಮ್ಸ್ ಬಾಂಡ್ ಚಿತ್ರ ಫ್ಲಿಕ್ ಸ್ಪೆಕ್ಟ್ರೆಯ ವಿಶೇಷ ಸ್ಕ್ರೀನಿಂಗ್ಗಾಗಿ ವರುಣ್ ಆಗಮಿಸಿದ್ದರು. ಸ್ಮೋಕ್ ಗ್ರೇ ಸ್ವೆಟ್ ಶರ್ಟ್ ಅನ್ನು ಧರಿಸಿ ಗಾಢವಾದ ನೀಲಿ ಡೆನಿಮ್ ಶಾರ್ಟ್ಸ್ಗಳನ್ನು ಇವರು ಧರಿಸಿದ್ದರು. ನಿಜಕ್ಕೂ ವರುಣ್ ಅವರ ಕ್ಯಾಶುವಲ್ ಲುಕ್ ನಮಗೆ ಇಷ್ಟವಾಗಿದೆ.
ಶಾರುಖ್ ಖಾನ್, ಕಾಜಲ್ ಮತ್ತು ಕೃತಿ ಸೇನಾನಿ ತಾರಾಗಣದ ತಮ್ಮ ಮುಂದಿನ ಚಿತ್ರ ದಿಲ್ವಾಲೆಯ ಬಿಡುಗಡೆಯ ಸಂಭ್ರಮದಲ್ಲಿ ವರುಣ್ ಧವರಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶಿಸಿರುವ ಈ ಚಿತ್ರ ಡಿಸೆಂಬರ್ 18 ರಂದು ಚಿತ್ರಮಂದಿರಗಳಿಗೆ ಅಡಿ ಇಡಲಿದೆ. ಬೋಲ್ಡ್ ಸ್ಕೈ ಈ ವಿಶೇಷ ಸಂದರ್ಭದಲ್ಲಿ ತಾರಾ ಪ್ರತಿಭೆಗೆ ಶುಭಕೋರುತ್ತಿದೆ.
Read in english - Celeb Sighting: Varun Dhawan At Lighbox, Mumbai



Click it and Unblock the Notifications
