Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ಲೋಸೆಟ್ ಲೇಬಲ್ ಉದ್ಘಾಟನೆಯಲ್ಲಿ ಮಿಂಚಿದ ಮಲೈಕಾ
ಸುಂದರಿ ಮಲೈಕಾ ಅರೋರಾ ಖಾನ್ ಮುಂಬೈಯಲ್ಲಿ ನಡೆದ ಕ್ಲೋಸೆಟ್ ಲೇಬಲ್ ಉದ್ಘಾಟನಾ ಸಮಾರಂಭದಲ್ಲಿ ಸೊಗಸಾಗಿ ಕಾಣುತ್ತಿದ್ದರು. ತನ್ನ ಸೂಕ್ತ ರೀತಿಯ ಸ್ಟೈಲ್ ಮತ್ತು ಅದ್ಭುತ ಮೈಮಾಟದಿಂದ ಪ್ರತಿಯೊಬ್ಬರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು ಈ ಬಾಲಿವುಡ್‌ನ ಚೆಲುವೆ. ಮುಂಬೈಯಲ್ಲಿ ನಡೆದ ಕ್ಲೋಸೆಟ್ ಲೇಬಲ್‌ನ ಉದ್ಘಾಟನೆಯಲ್ಲಿ ಅಲ್ಲಿ ನೆರೆದಿದ್ದ ತನ್ನ ಅಭಿಮಾನಿಗಳನ್ನು ಆಕರ್ಷಿಸುವಂತೆ ಮಲೈಕಾ ಕಂಡುಬಂದಿದ್ದರು. ಸುಂದರವಾದ ನಟಿ ಮತ್ತು ಕ್ರಿಯಾತ್ಮಕ ನಿರ್ದೇಶಕಿ ಮಲೈಕಾ ತಮ್ಮ ಹೊಸ ರೀತಿಯ ಉಡುಗೆಯ ಮೂಲಕ ಅಲ್ಲಿ ನೆರೆದಿದ್ದ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದರು. ನೀವು ನಟಿಯ ಸ್ಟೈಲ್ ಅನ್ನು ಇಷ್ಟಪಟ್ಟಿದ್ದರೆ, ಕ್ಲೋಸೆಟ್ ಲೇಬಲ್‌ನ ಉದ್ಘಾಟನೆಯಲ್ಲಿ ನಿಮಗಾಗಿ ಆಕೆ ಹೊಂದಿರುವುದನ್ನು ನೀವು ನಿಜವಾಗಿಯೂ ಇಷ್ಟಪಡುತ್ತೀರಿ.
ಕ್ಲೋಸೆಟ್ ಲೇಬಲ್ 2014 ರ ಉದ್ಘಾಟನಾ ಸಮಾರಂಭದ ವಿಶೇಷ ಮುನ್ನೋಟದಲ್ಲಿ ಬೆರಗುಗೊಳಿಸುವ ಮಲೈಕಾ ಅರೋರಾ ಖಾನ್‌ರನ್ನು ಬೆಂಬಲಿಸಲು ಹೆಚ್ಚಿನ ನಟ ನಟಿಯರು ಅಲ್ಲಿಗೆ ಬಂದಿದ್ದರು. ಅವರಲ್ಲೊಬ್ಬರು ಮಲೈಕಾ ಅರೋರಾರ ಸಹೋದರಿ ಅಮೃತಾ ಅರೋರಾ, ಇವರನ್ನೂ ಕೂಡ ಫ್ಯಾಷನ್ ವಿಷಯದಲ್ಲಿ ಯಾರಿಗೂ ಸೋಲಿಸಲಾಗದು.
ಸ್ಟೈಲಿಶ್ ಅಮೃತಾ ಕೂಡ ತನ್ನ ಹೆಚ್ಚಿನ ತೂಕ ಕಳೆದುಕೊಂಡು ಟಾಪ್‌ಶಾಪ್ ಧಿರಿಸಿನಲ್ಲಿ ಸುಂದರಳಾಗಿದ್ದರು, ಆಕೆಯ ಉಡುಗೆ ಪಾಪ್ ಹಾಡುಗಾರ ಮೈಕಲ್ ಜಾಕ್ಸನ್‌ನ ನೆನೆಪನ್ನು ತಂದದ್ದಂತೂ ನಿಜ.
ಕ್ಲೋಸೆಟ್ ಲೇಬಲ್ 2014 ರ ಉದ್ಘಾಟನಾ ಸಮಾರಂಭದಲ್ಲಿ ಸೆರೆಹಿಡಿದಿರುವ ಕೆಲವೊಂದು ಚಿತ್ರಗಳನ್ನು ಬೋಲ್ಡ್‌ಸ್ಕೈ ಇಂದು ನಿಮಗಾಗಿ ಹಂಚಿಕೊಂಡಿದೆ. ಚೆಲುವೆ ಮಲೈಕಾರ ಹಾಟ್ ಮತ್ತು ಸಿಜಿಲಿಂಗ್ ಶಾಟ್‌ಗಳು ಇಲ್ಲಿವೆ. ಉಸಿರಾಡುವುದನ್ನೇ ಮರೆಯುವಂತೆ ಮಾಡುವ ಸುಂದರಿ ಮಲೈಕಾರ ಸುಂದರ ಚಿತ್ರಗಳ ಮೇಲೆ ನೀವು ನೋಟ ಹರಿಸಲೇಬೇಕು.

ಅದ್ಭುತ ನೋಟ:
ಮಲೈಕಾ ಇನ್ನೊಬ್ಬರನ್ನು ಮಂತ್ರಮುಗ್ಧಗೊಳಿಸುವಲ್ಲಿ ಎಂದಿಗೂ ಸೋಲುಂಡಿಲ್ಲ. ಕ್ಲೋಸೆಟ್ ಲೇಬಲ್ 2014 ರ ಉದ್ಘಾಟನೆಗೆ ಬಂದಿದ್ದ ಮಲೈಕಾ ನೆಲಕ್ಕೆ ತಾಗುತ್ತಿದ್ದ ನೀಲಿ ಬಣ್ಣದ ಕಟ್ - ಔಟ್ ಡಿಟೇಲ್ ಮತ್ತು ಪ್ರಿಂಟೆಡ್ ಬಾಟಂಗಳುಳ್ಳ ನಿಲುವಂಗಿಯನ್ನು ಧರಿಸಿದ್ದಾರೆ. ಅವರ ಸೌಂದರ್ಯಕ್ಕೆ ಕಳಶಪ್ರಾಯದಂತೆ ಈ ಧಿರಿಸು ಕಂಡುಬರುತ್ತಿದೆ.

ಸುಂದರ ಕಣ್ಣುಗಳು:
ಕ್ರಿಸ್‌ಮಸ್ ಹಬ್ಬದ ಸಂಭ್ರಮದೊಂದಿಗೆ ಅವರ ಕಣ್ಣಿನ ಅಲಂಕಾರ ನಿಜಕ್ಕೂ ಹಬ್ಬಕ್ಕೆ ವಿಶೇಷ ಕಳೆ ನೀಡಿದೆ. ಅವರ ನೋಟಕ್ಕೆ ಅವರು ಮಾಡಿದ ಕಣ್ಣಿನ ಅಲಂಕಾರವು ಸೊಗಸಾಗಿ ಹೋಲುತ್ತಿದೆ. ಅವರ ಮಿಂಚುವ ಕಣ್ಣುಗಳು ವಾಸ್ತವವಾಗಿ ಸುದ್ದಿಗ್ರಾಸವಾಗಿದೆ.

ಸಂವೇದನಾಕಾರಿ ತುಟಿಗಳು:
ಕಂದು ಮತ್ತು ಮ್ಯಾರನ್ ಮೇಟ್ ಬಣ್ಣದ ಲಿಪ್‌ಸ್ಟಿಕ್ ಅವರ ತುಟಿಯನ್ನು ಎದ್ದುಕಾಣುವಂತೆ ಮಾಡಿದೆ. ಕ್ಲೋಸೆಟ್ ಲೇಬಲ್ ಉದ್ಘಾಟನೆಯಲ್ಲಿ ಕಂಡುಬಂದ ಅವರ ಮನಮೋಹಕ ನಗುವು ಈ ತುಟಿಗಳಿಂದ ಹೊರಹೊಮ್ಮಿದ್ದು ನಮ್ಮನ್ನು ಬಲಹೀನರನ್ನಾಗಿ ಮಾಡುವಂತಿದೆ.

ಟ್ರೆಂಡಿ ಚೈನ್:
ಈ ಸುಂದರ ನೋಟದೊಂದಿಗೆ ಪೈಪೋಟಿಗೆ ನಿಂತಿರುವಂತೆ ಕಂಡುಬರುತ್ತಿರುವ ಮಲೈಕಾ ಧರಿಸಿರುವ ನೆಕ್ಲೆಸ್ ನಮ್ಮ ಗಮನವನ್ನು ಅವರ ಮೇಲೆ ನೆಲೆನಿಲ್ಲುವಂತೆ ಮಾಡಿದೆ. ದಪ್ಪ ನೆಕ್ಲೇಸ್ ಮತ್ತು ಅದರ ಆಕರ್ಷಕ ವಿನ್ಯಾಸ ಅವರನ್ನು ಇನ್ನಷ್ಟು ಕಂಗೊಳಿಸುವಂತೆ ಮಾಡಿದೆ.

ಸ್ತಬ್ಧಗೊಳಿಸುವ ಮೇಕಪ್:
ನೀವು ಮಲೈಕಾ ಅರೋರಾರ ಮೇಕಪ್ ಕಡೆ ಸೂಕ್ಷ್ಮವಾಗಿ ಗಮನ ಹರಿಸಿದರೆ ಹೊಳೆಯುತ್ತಿರುವ ಗುಲಾಬಿ ಕೆನ್ನೆ ಕಂಡುಬರುತ್ತದೆ. ಅವರ ಕದಪುಗಳ ಮೇಲಿನ ನರುಗೆಂಪು ಬಣ್ಣದ ಬ್ಲಶ್ ಮೇಕಪ್ ಅವರ ನಿಜವಾದ ಸೌಂದರ್ಯವನ್ನು ತೆರೆದಿಟ್ಟಿದೆ.

ಮೃದುವಾದ ಕರ್ಲ್‌ಗಳು:
ಅವರ ಕೂದಲ ವಿನ್ಯಾಸವು ವೇವಿ ಕಟ್‌ನಲ್ಲಿದ್ದು ಹಗುರವಾದ ಕರ್ಲ್‌ಗಳು ಅವರಿಗೆ ಬಾರ್ಬಿ ಡೋಲ್‌ನ ನೋಟವನ್ನು ನೀಡಿದೆ. ಆಕೆಯ ಮೃದುವಾದ ಸುಂದರ ಕರ್ಲ್‌ಗಳ ಬಗೆಗೆ ನೀವೇನು ಆಲೋಚಿಸುತ್ತಿರುವಿರಿ?

ಶೂಗಳು:
ಈ ಸುಂದರ ಧಿರಿಸಿನೊಂದಿಗೆ ಅವರು ತೊಟ್ಟಿರುವ ಚಿನ್ನದ ಬಣ್ಣದ ಎತ್ತರದ ಸ್ಯಾಂಡಲ್‌ಗಳು ಅವರಿಗೆ ವಿಶೇಷ ಶೋಭೆಯನ್ನುಂಟು ಮಾಡಿದೆ. ಕ್ಲೋಸೆಟ್ ಲೇಬಲ್‌ನ ಉದ್ಘಾಟನೆಯಲ್ಲಿ ಅವರು ಧರಿಸಿರುವ ಈ ಸುಂದರ ಉಡುಪು ಮತ್ತು ಸ್ಯಾಂಡಲ್ ಉತ್ತಮ ಕಾಂಬಿನೇಷನ್ ಆಗಿದೆ.

ಸ್ಟೈಲಿಶ್ ಅಮೃತಾ ಅರೋರಾ:
ಕ್ಲೋಸೆಟ್ ಲೇಬಲ್ 2014 ರ ಉದ್ಘಾಟನೆಯಲ್ಲಿ, ಸ್ಟೈಲಿಶ್ ಅಮೃತಾ ಅರೋರಾ ಟೋಪ್‌ಶಾಪ್ ಉಡುಗೆಯಲ್ಲಿ ಮೈಕಲ್ ಜಾಕ್ಸನ್ ಸ್ಟೈಲ್‌ನೊಂದಿಗೆ ಇನ್ನಷ್ಟು ಮಿಂಚುತ್ತಿದ್ದಾರೆ.



Click it and Unblock the Notifications
