Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಕಾರಣಕ್ಕೆ ಹೇಳುವುದು ಚಿನ್ನದ ಕಾಲ್ಗೆಜ್ಜೆಯಾಗಲಿ, ಚಿನ್ನದ ಕಾಲುಂಗುರವಾಗಲಿ ಧರಿಸಲೇಬಾರದು
ಈಗೆಲ್ಲಾ ಚಿನ್ನದ ಕಾಲ್ಗೆಜ್ಜೆ, ಚಿನ್ನದ ಕಾಲುಂಗುರ ಧರಿಸುವ ಅನೇಕರನ್ನು ನೋಡುತ್ತೇವೆ, ಅಲ್ಲದೆ ಮಕ್ಕಳ ಸೊಂಟಕ್ಕೆ ಚಿನ್ನದ ಉಡಿದಾರ, ಕಾಲಿಗೆ ಚಿನ್ನದ ಕಾಲ್ಗೆಜ್ಜೆ ಹಾಕುವವರೂ ಇದ್ದಾರೆ. ಚಿನ್ನವನ್ನು ಹಾಕುವ ಮೂಲಕ ತಮ್ಮ ಪ್ರತಿಷ್ಠೆ ತೋರಿಸಲು ಇಷ್ಟಪಡುತ್ತಾರೆ, ಆದರೆ ಚಿನ್ನವನ್ನು ಹೊಕ್ಕಳಿನಿಂದ ಕೆಳಗಡೆ ಧರಿಸಭಾರದಂತೆ ಅದಕ್ಕೆ ಧಾರ್ಮಿಕ ಕಾರಣಗಳನ್ನೂ ಹೇಳಲಾಗುವುದು, ವೈಜ್ಞಾನಿಕ ಕಾರಣವೂ ಇದೆ, ಚಿನ್ನವನ್ನು ಹೊಕ್ಕಳ ಕೆಳಗಡೆ ಏಕೆ ಬಳಸಬಾರದು ಎಂದು ನೋಡೋಣ ಬನ್ನಿ:

ಧಾರ್ಮಿಕ ನಂಬಿಕೆಗಳು
ಚಿನ್ನದ ಕಾಲ್ಗೆಜ್ಜೆ ಧರಿಸುವುದರಿಂದ ಕೇತು ದೋಷ ಉಂಟಾಗುವುದು ಎಂದು ಹೇಳಲಾಗುವುದು, ಅದೇ ಬೆಳ್ಳಿಯ ಆಭರಣ ಧರಿಸಿದರೆ ತುಂಬಾನೇ ಒಳ್ಳೆಯದು ಇದು ಕೇತುವಮನ್ನು ಶಾಂತವಾಗಿಸುತ್ತದೆ ಎಂದು ಹೇಳಲಾಗುವುದು.
ಅಲ್ಲದೆ ಚಿನ್ನವನ್ನು ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗಿದೆ
ಚಿನ್ನವನ್ನು ಕಾಲಿಗೆ ಧರಿಸಬಾರದೆಂದು ಹೇಳಲಾಗುವುದು, ಸೊಂಟದ ಕೆಳಗಡೆ ಚಿನ್ನ ಧರಿಸುವುದು ಲಕ್ಷ್ಮಿಯನ್ನು ಅಪಮಾನ ಮಾಡಿದಂತೆ , ಹಾಗಾಗಿ ಚಿನ್ನವನ್ನು ಕಾಲುಂಗುರವಾಗಿ ಅಥವಾ ಕಾಲ್ಗೆಜ್ಜೆಯಾಗಿ ಧರಿಸಬಾರದೆಂದು ಹೇಳಲಾಗುವುದು.
ಶ್ರೀ ವಿಷ್ಣುವಿಗೆ ಅಗೌರವ ತೋರಿದಂತೆ
ಚಿನ್ನವನ್ನು ಕಾಲಿಗೆ ಧರಿಸುವುದು ಶ್ರೀ ವಿಷ್ಣುವಿಗೆ ತೋರಿಸುವ ಅಗೌರವದಂತೆ, ಇದರಿಂದ ಮನುಷ್ಯ ಆರ್ಥಿಕ ತೊಂದರೆಗಳನ್ನು ಅನುಭವಿಸುವಂತಾಗುವುದು ಎಂದು ಹೇಳಲಾಗುವುದು.
ಇವೆಲ್ಲಾ ಧಾರ್ಮಿಕ ಕಾರಣಗಳಾದರೆ ನಿಜವಾದ ಕಾರಣವೇನು?
ಚಿನ್ನ ಧರಿಸುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗುವುದು: ಚಿನ್ನವನ್ನು ಕಾಲಿಗೆ ಧರಿಸಿದರೆ ಮೈ ಉಷ್ಣಾಂಶ ಹೆಚ್ಚಾಗುವುದು, ಅದೇ ಬೆಳ್ಳಿ ಧರಿಸಿದರೆ ದೇಹವನ್ನು ತಂಪಾಗಿಸುತ್ತದೆ, ದೇಹದ ಉಷ್ಣಾಂಶದಲ್ಲಿ ಸಮತೋಲನ ಕಾಪಾಡಲು ಕಾಲಿಗೆ ಚಿನ್ನಕ್ಕಿಂತ ಬೆಳ್ಳಿಯ ಆಭರಣ ಒಳ್ಳೆಯದು.
ಬೆಳ್ಳಿ ಸೋಂಕಾಣುಗಳ ವಿರುದ್ಧ ಹೋರಾಡುತ್ತೆ
ಬೆಳ್ಳಿಗೆ ಸೋಂಕಾಣುಗಳ ವಿರುದ್ಧ ಹೋರಾಡುವ ಗುಣವಿದೆ, ಹಾಗಾಗಿ ಚಿನ್ನವನ್ನು ಕಾಲಿಗೆ ಹಾಕಬಾರದು, ಬೆಳ್ಳಿ ಮಾತ್ರ ಕಾಲಿಗೆ ಹಾಕಬೇಕು ಎಂದು ಹೇಳಲಾಗುವುದು.
ನಮ್ಮ ದೇಹಕ್ಕೆ ಚಿನ್ನವಾಗಲಿ, ಬೆಳ್ಳಿಯಾಗಲಿ ಅದರದ್ದೇ ಗುಣ ನೀಡುತ್ತದೆ, ಅವುಗಳು ನಮ್ಮ ಆರೋಗ್ಯ ವೃದ್ಧಿಸುವ ಆಭರಣ ಮಾತ್ರವಲ್ಲ, ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.
ಚಿನ್ನವನ್ನು ಹೊಕ್ಕಳ ಕೆಳಗಡೆ ಧರಿಸಬಾರದು, ಹಾಗೆ ಧರಿಸಿದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು, ಹೊಟ್ಟೆಯ ಭಾಗದಲ್ಲಿ ನಾವು ತಿಂದ ಆಹಾರ ಶಕ್ತಿಯಾಗಿ ಪರಿವರ್ತನೆಯಾಗಿ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ಒದಗಿಸುತ್ತದೆ, ಅದೇ ಚಿನ್ನ ಧರಿಸಿದರೆ ಉಷ್ಣಾಂಶ ಹೆಚ್ಚಾಗುವುದು, ಇನ್ನು ಸ್ವಾದಷ್ಟಿನಾ ಚಕ್ರ ಅಂದ್ರೆ ಕಿಬ್ಬೊಟ್ಟೆಯಿಂದ ಕೆಳಗಡೆ ಹಾಗೂ ಕಾಲಿನ ನಾಲ್ಕು ಬೆರಳುಗಳು ಈ ಭಾಗದಲ್ಲಿ ಚಿನ್ನವಿದ್ದರೆ ದೇಹದಲ್ಲಿ ಉಷ್ಣಾಂಶ ಹೆಚ್ಚು ಮಾಡುತ್ತದೆ ಅಲ್ಲದೆ ಸುಸ್ತು, ಅಸಮಧಾನ ಈ ಬಗೆಯ ಅಸ್ವಸ್ಥತೆ ಉಂಟು ಮಾಡುತ್ತದೆ.
ಅದೇ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸಿದರೆ ಅದು ನೀಡುವ ಒತ್ತಡ ಮಹಿಳೆಯರ ಗರ್ಭಕೋಶಕ್ಕೆ ಒಳ್ಳೆಯದು, ಬೆಳ್ಳಿ ಮಾನಸಿಕ ಒತ್ತಡ ಕಡಿಮೆ ಮಾಡುವುದು ಎಂದು ಹೇಳಲಾಗುವುದು. ಬೇಸಿಗೆಯಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ನೀರು ಇಟ್ಟು ಕುಡಿಯುವುದು ಒಳ್ಳೆಯದು, ಇನ್ನು ಬಿಸಿಲಿನ ಧಗೆ ಅಧಿಕವಿರುವ ಕಡೆ ಬೆಳ್ಳಿಯ ಆಭರಣಗಳನ್ನು ಧರಿಸುವುದು ಒಳ್ಳೆಯದು.
ಹೀಗೆ ಚಿನ್ನ ಮತ್ತು ಬೆಳ್ಳಿಯ ಆಭರಣದಲ್ಲಿಇಷ್ಟೆಲ್ಲಾ ಸಂಗತಿಗಳಿವೆ.



Click it and Unblock the Notifications
