Latest Updates
-
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ತ್ಚಚೆಯ ಎಲ್ಲಾ ಸಮಸ್ಯೆಗಳಿಗೆ ಈ ವಿಟಮಿನ್ ಒಂದೇ ಮದ್ದು
ಇಂದಿನ ಕಾಲದಲ್ಲಿ ಮುಖ ತೊಳೆಯುವ ಫೇಸ್ ವಾಶ್ ನಿಂದ ಹಿಡಿದು, ಫೇಸ್ ಮಾಸ್ಕ್, ಕ್ರೀಮ್ ಗಳವರೆಗೂ ಸೌಂದರ್ಯ ಸಾಧನವಾಗಿ ಬಳಸುವ ಪ್ರತಿಯೊಂದು ಉತ್ಪನ್ನಗಳಲ್ಲಿಯೂ ವಿಟಮಿನ್ ಸಿ ಇರುವುದು. ಈ ವಿಟಮಿನ್ ಸಿ ತ್ವಚೆಯ ರಕ್ಷಣೆಗೆ ಬಳಸುವ ಉತ್ಪನ್ನಗಳಲ್ಲಿ ಅತ್ಯಂತ ಜನಪ್ರಿಯ ನೈಸರ್ಗಿಕ ಸಾರಗಳಲ್ಲಿ ಒಂದಾಗಿದೆ. ಗ್ರಾಹಕರು ಹಿಂದೆಂದಿಗಿಂತಲೂ ಹೆಚ್ಚು ವಿದ್ಯಾವಂತರು ಮತ್ತು ಸೌಂದರ್ಯ ಜಾಗೃತರಾಗಿರುವುದರಿಂದ, ನೈಸರ್ಗಿಕ ಸಾರಗಳಿಂದ ಸಮೃದ್ಧವಾಗಿರುವ ಉತ್ಪನ್ನಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹಾಗಾದರೆ ಅದರ ಪ್ರಯೋಜನಗಳೇನು ಎಂಬುದನ್ನು ನೊಡೋಣ.
ಸೌಂದರ್ಯಕ್ಕೆ ವಿಟಮಿನ್ ಸಿ ಯ ಕೊಡುಗೆಯೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ:

ಸೂರ್ಯನ ಕಿರಣಗಳಿಂದ ಆಗುವ ಹಾನಿಯನ್ನು ತಡೆಯುವುದು:
ವಿಟಮಿನ್ ಸಿ ಯ ಪ್ರಮುಖ ಪ್ರಯೋಜನಗಳಲ್ಲಿ ಫೋಟೊಪ್ರೊಟೆಕ್ಷನ್ ಒಂದು. ಇದರರ್ಥ ಮೂಲಭೂತವಾಗಿ ವಿಟಮಿನ್ ಸಿ
ಸೂರ್ಯನ ಕಠಿಣ ಕಿರಣಗಳಿಂದ ಉಂಟಾಗುವ ಹಾನಿಯಿಂದ ನಿಮ್ಮನ್ನು ಉಳಿಸುತ್ತದೆ. ಇದಲ್ಲದೆ, ಈ ಹಿಂದೆ ಸುರ್ಯನ ಕಿರಣಗಳಿಂದ ಆದ ಹಾನಿಯನ್ನು ಸರಿ ಮಾಡಿ, ಕೋಮಲ ತ್ವಚೆಯನ್ನು ನೀಡುವುದು.

ಕಲೆಯನ್ನು ಕಡಿಮೆ ಮಾಡುವುದು:
ಮುಖದ ಮೇಲಿನ ಕಲೆಗಳು ಅಥವಾ ಚರ್ಮದ ಬಣ್ಣವನ್ನು ಬದಲಾಗಲು ಸಾಕಷ್ಟು ಕಾರಣಗಳಿವೆ. ವಯಸ್ಸಾಗುವಿಕೆ, ವಿಟಮಿನ್ ಕೊರತೆ ಅಥವಾ ಪೋಷಕಾಂಶಗಳ ಕೊರತೆ ಹೀಗೆ. ಆದರೆ ವಿಟಮಿನ್ ಸಿ ಹೆಚ್ಚು ಈ ಕಲೆಗಳನ್ನು ಕಡಿಮೆ ಮಾಡಿ. ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಆದಕ್ಕೆ ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಅನ್ನು ಹೆಚ್ಚೆಚ್ಚು ಸೇರಿಸಿ.

ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುವುದು:
ತ್ವಚೆಯ ಮೇಲೆ ಉಂಟಾಗುವ ರೇಖೆಗಳು ವಯಸ್ಸಾಗುವಿಕೆಯ ಪರಿಣಾಮವಾಗಿರಬಹುದು. ಆದರೆ ವಿಟಮಿನ್ ಸಿ ಸೀರಮ್ ಗಳ ನಿಯಮಿತ ಬಳಕೆಯಿಮದ ನಿಮ್ಮ ಸುಕ್ಕಾಗುವಿಕೆ ಅಥವಾ ಸೂಕ್ಷ್ಮ ರೇಖೆಗಳು ಉಂಟಾಗುವುದನ್ನು ಬಹಳ ಸಮಯ ಮುಂದೂಡಬಹುದು. ಈ ಗೆರೆಗಳನ್ನು ಮರೆಯಾಗಿಸುವ ಮತ್ತು ಯಾವುದೇ ಚಿಂತೆಯಿಲ್ಲದೆ ಕಿರುನಗೆ ಬಿರಲು ನಿಮಗೆ ಸಹಾಯ ಮಾಡುವ ಮಾರ್ಗ ಇದಾಗಿದೆ.

ಹೈಡ್ರೇಟಿಂಗ್ ಮಾಡುವುದು:
ವಿಟಮಿನ್ ಸಿ ಚರ್ಮವನ್ನು ಆಳವಾಗಿ ಹೈಡ್ರೇಟ್ ಮಾಡುವುದಲ್ಲದೇ, ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಉತ್ತಮ ಜಲಸಂಚಯನವು ಆರೋಗ್ಯಕರ ಚರ್ಮದ ಅತ್ಯಂತ ಮುಖ್ಯ ಅಂಶವಾಗಿದೆ. ಆದ್ದರಿಂದ ವಿಟಮಿನ್ ಸಿ ಇರುವ ಫೇಸ್ ಮಾಸ್ಕ, ಹಣ್ಣಿನ ಸಿಪ್ಪೆಯ ಮಾಸ್ಕ, ಕ್ರೀಮ್ ಗಳ ಕಡೆಗೆ ಹೆಚ್ಚು ಗಮನ ಕೊಡಿ.



Click it and Unblock the Notifications