For Quick Alerts
ALLOW NOTIFICATIONS  
For Daily Alerts

ನಿಮ್ಮ ಸೌಂದರ್ಯ ವೃದ್ಧಿಗೆ ಬೆಸ್ಟ್ ಕೊಲೆಜೆನ್ ಸಪ್ಲಿಮೆಂಟ್ಸ್ ಯಾವುದು ಗೊತ್ತಾ?

|

ಇತ್ತೀಚಿನ ದಿನಗಳಲ್ಲಿ ಕೊಲೆಜೆನ್ ಹೆಚ್ಚೆಚ್ಚು ಪ್ರಸಿದ್ಧಿಯಾಗುತ್ತಿದೆ. ಯಾವುದೇ ತ್ವಚೆ, ಕೂದಲು ಅಥವಾ ಉಗುರಿನ ಸಮಸ್ಯೆ ಅಕಾಲಿಕ ವಯಸ್ಸಿನಲ್ಲಿ ಕಾಡುತ್ತಿದ್ದರೆ, ಅದಕ್ಕೆ ಕೊಲೆಜೆನ್ ಕೊರತೆ ಎಂಬ ಕಾರಣ ಸಾಮಾನ್ಯವಾಗಿದೆ. ಈ ಕೊಲೆಜೆನ್ ಕೊರತೆ ನಿವಾರಿಸಲು ಇರುವ ಮಾರ್ಗವೆಂದರೆ ಕೊಲೆಜೆನ್ ಪೂರಕ ಸೇವಿಸುವುದು. ಆದರೆ, ಎಂತಹ ಪೂರಕಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂಬ ಗೊಂದಲ ಹಲವರಲ್ಲಿರುತ್ತದೆ. ಅಂತಹವರಿಗಾಗಿ ತಜ್ಞರು ನೀಡುವ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ.

ಕೊಲೆಜೆನ್ ಎಂದರೇನು? ಇದೇಕೆ ಅತ್ಯಗತ್ಯ?:

ಕೊಲೆಜೆನ್ ಎಂದರೇನು? ಇದೇಕೆ ಅತ್ಯಗತ್ಯ?:

ಮಾನವ ದೇಹದಲ್ಲಿ ಕಂಡುಬರುವ ಎಲ್ಲಾ ಪ್ರೋಟೀನ್‌ಗಳಿಗಿಂತ, ಕೊಲೆಜೆನ್ ಹೆಚ್ಚು ಪ್ರಚಲಿತವಾಗಿದೆ. ಇದು ದೇಹದಾದ್ಯಂತ ಮೂಳೆ, ಚರ್ಮ, ಸ್ನಾಯುಗಳು, ಸ್ನಾಯುರಜ್ಜುಗಳ ರಚನೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಕೊಲೆಜೆನ್ ಒಂದು ಅಗತ್ಯವಾದ ಪ್ರೋಟೀನ್ ಆಗಿದ್ದು ಅದು ನಮ್ಮ ದೇಹದ ಅನೇಕ ಅಂಗಗಳನ್ನು ಒಟ್ಟಿಗೆ ಇಡಲು ಸಹಾಯ ಮಾಡುತ್ತದೆ. ಒಂದು ವೇಳೆ ದೇಹದಲ್ಲಿ ಇದರ ಪ್ರಮಾಣ ಕಡಿಮೆ ಇದ್ದಾಗ, ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಇದರ ನಿವಾರಣೆಗೆ ಕೊಲೆಜೆನ್ ಪೂರಕಗಳನ್ನು ತಜ್ಞರು ಶಿಫಾರಸ್ಸು ಮಾಡುತ್ತಾರೆ. ಈ ಮೂಲಕ ನಮ್ಮ ದೇಹಕ್ಕೆ ಅಗತ್ಯವಾದ ಕೊಲೆಜೆನ್ ಲಭ್ಯವಾಗುತ್ತದೆ.

ಯಾವ ರೂಪದ ಕೊಲೆಜೆನ್ ಪೂರಕ ಉತ್ತಮ?:

ಯಾವ ರೂಪದ ಕೊಲೆಜೆನ್ ಪೂರಕ ಉತ್ತಮ?:

ಕೊಲೆಜೆನ್ ಪುಡಿ ಅಥವಾ ಮಾತ್ರೆ ರೂಪದಲ್ಲಿ ಸಿಕ್ಕರೂ, ನಿಮ್ಮಲ್ಲಾದ ಪ್ರಗತಿಯನ್ನ ಪತ್ತೆಹಚ್ಚಲು ಮತ್ತು ಸೇವನೆಯನ್ನು ಹೆಚ್ಚಿಸಲು ಉತ್ತಮ ಪರ್ಯಾಯವೆಂದರೆ ಅದನ್ನು ದ್ರವ ರೂಪದಲ್ಲಿ ತೆಗೆದುಕೊಳ್ಳುವುದು. ಆರೋಗ್ಯಕರ ಚರ್ಮ, ಉಗುರುಗಳು ಮತ್ತು ಕೂದಲನ್ನು ಕಾಪಾಡಿಕೊಳ್ಳಲು ದ್ರವರೂಪದ ಕೊಲೆಜೆನ್ ಆಹಾರ ಪೂರಕವಾಗಿ ಸಾಕಷ್ಟು ಜನಪ್ರಿಯವಾಗಿದೆ.

ಅನೇಕ ದ್ರವ ರೂಪದ ಕೊಲೆಜೆನ್ ಪೂರಕಗಳಲ್ಲಿ ಶುದ್ಧೀಕರಿಸಿದ ನೀರು, ಕೆಲವು ರಸಗಳು ಅಥವಾ ಇತರ ದ್ರವಗಳನ್ನು ಒಳಗೊಂಡಿರುತ್ತವೆ. ಇದನ್ನು ದೇಹ ಹೀರಿಕೊಳ್ಳಲು ಸುಲಭವಾಗುತ್ತದೆ. ಮೀನಿನಿಂದ ಪಡೆದ ಜಲವಿಚ್ಛೇದಿತ ಸೀ ಕೊಲೆಜೆನ್ ಅಥವಾ ದ್ರವ ಕಾಲಜನ್ ಎಂಬದು ಒಂದು ವಿಶಿಷ್ಟ ಉತ್ಪನ್ನವಾಗಿದೆ.

ದ್ರವ ರೂಪದ ಕೊಲೆಜೆನ್ ಪೂರಕ ಯಾಕೆ ಸೂಕ್ತ ಆಯ್ಕೆ?:

ದ್ರವ ರೂಪದ ಕೊಲೆಜೆನ್ ಪೂರಕ ಯಾಕೆ ಸೂಕ್ತ ಆಯ್ಕೆ?:

ಉಳಿದ ಪೂರಕಗಳಿಗೆ ಹೋಲಿಸಿದರೆ, ಕೊಲೆಜೆನ್‌ನ ಹೈಡ್ರೊಲೈಸ್ಡ್ ರೂಪವಾಗಿರುವ ಕೊಲೆಜೆನ್ ಪೆಪ್ಟೈಡ್‌ಗಳು ದೇಹಕ್ಕೆ ಜೀರ್ಣಿಸಿಕೊಳ್ಳಲು ಮತ್ತು ಹೀರಿಕೊಳ್ಳಲು ಸುಲಭವಾಗಿದೆ. ದ್ರವರೂಪದಲ್ಲಿರುವ ಪೋಷಕಾಂಶಗಳು ವೇಗವಾಗಿ ಹೀರಲ್ಪಡುವುದರಿಂದ, ಪ್ರಯೋಜನಕಾರಿ ಪದಾರ್ಥಗಳು ದೇಹ ಸೇರುತ್ತವೆ. ಪುಡಿ ಅಥವಾ ಮಾತ್ರೆ ರೂಪದ ಕೊಲೆಜೆನ್ ಪೂರಕಗಳನ್ನು ದೇಹಕ್ಕೆ ಹೀರಿಕೊಳ್ಳಲು ಸ್ವಲ್ಪ ಕಷ್ಟಕಾರಿ. ಜೊತೆಗೆ ಈ ದ್ರವ ರೂಪದ ಕೊಲೆಜೆನ್‌ನಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉತ್ತಮವಾಗಿಡಲು ಸಹಾಯ ಆಗುತ್ತದೆ.

ಕೊಲೆಜೆನ್‌ಗಳಲ್ಲಿ ಸಮುದ್ರ ಕೊಲೆಜೆನ್ ಅಥವಾ ಸೀ ಕೊಲೆಜೆನ್ ಸೌಂದರ್ಯವರ್ಧಕ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುವ ವಿಧಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಮಾಲಿನ್ಯಕಾರಕಗಳನ್ನು ಒಳಗೊಂಡಿರುವ ಸಾಧ್ಯತೆ ಕಡಿಮೆ ಮತ್ತು ಪ್ರಾಣಿಗಳಿಂದ ಪಡೆದ ಕೊಲೆಜೆನ್‌ಗಿಂದ ಕಡಿಮೆ ಉರಿಯೂತವನ್ನು ಉಂಟುಮಾಡುತ್ತದೆ. ಜೊತೆಗೆ ಇದು ಉತ್ತಮ ವಯಸ್ಸಾದ ವಿರೋಧಿ ಪರಿಣಾಮಗಳನ್ನು ಹೊಂದಿರುವುದರಿಂದ, ಆರೋಗ್ಯ ಮತ್ತು ಸೌಂದರ್ಯ ಉದ್ಯಮದಲ್ಲಿ ಜನಪ್ರಿಯವಾಗಿದೆ.

ಕೊಲೆಜೆನ್ ಪೂರಕಗಳು ನಮ್ಮ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?:

ಕೊಲೆಜೆನ್ ಪೂರಕಗಳು ನಮ್ಮ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?:

ಪ್ರಸ್ತುತ ಕೊಲೆಜೆನ್ ಪೂರಕಗಳು ಲಭ್ಯವಿದ್ದರೂ, ಅವೆಲ್ಲವನ್ನೂ ಪ್ರಯೋಜನ ನೀಡುತ್ತವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಕೊಲೆಜೆನ್ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ಇಲ್ಲವೇ ಎಂಬುದು, ನಿಮ್ಮ ಜೀರ್ಣಾಂಗದಿಂದ ರಕ್ತಕ್ಕೆ ಎಷ್ಟು ಚೆನ್ನಾಗಿ ಹೀರಲ್ಪಡುತ್ತದೆ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ.

ಆದಾಗ್ಯೂ, ಮಾರುಕಟ್ಟೆಯಲ್ಲಿನ ಅನೇಕ ಕೊಲೆಜೆನ್ ಪೂರಕಗಳು ಚೆನ್ನಾಗಿ ಕಾರ್ಯನಿರ್ವಹಿಸಲಾರದು ಏಕೆಂದರೆ ಅವುಗಳು ದೇಹದ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇತರ ಕಾಲಜನ್ ಪೂರಕಗಳೊಂದಿಗೆ ಹೋಲಿಸಿದರೆ, ದ್ರವ ಕೊಲೆಜೆನ್ ಅದರ ತ್ವರಿತ ಹೀರಿಕೊಳ್ಳುವಿಕೆ ಮತ್ತು ಚರ್ಮವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯದಿಂದಾಗಿ ಪ್ರಸಿದ್ಧಿಯಾಗಿದೆ. ಇದರಿಂದಾಗಿ ಚರ್ಮ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ತಾರುಣ್ಯದ ನೋಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

English summary

How to Choose the Best Collagen Supplements For Healthy Skin, Nails And Hair in Kannada

Here we talking about How to Choose the Best Collagen Supplements For Healthy Skin, Nails And Hair in Kannada, read on
X
Desktop Bottom Promotion