Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೀಗೆ ಮಾಡಿದರೆ ವ್ಯಾಕ್ಸಿಂಗ್ ನೋವು ಕಡಿಮೆಯಾಗುವುದು
ಮೃದುವಾದ ತ್ವಚೆಗಾಗಿ ಪ್ರತಿಯೊಬ್ಬ ಹೆಣ್ಣು ಇಷ್ಟಪಡುತ್ತಾಳೆ. ತ್ವಚೆ ಮುಟ್ಟಿದ ತುಂಬಾ ಮೃದುವಾಗಿರಬೇಕು, ಅದರಲ್ಲೂ ಮದುಮಗಳು ಈ ಕುರಿತು ತುಂಬಾನೇ ಯೋಚಿಸುತ್ತಾಳೆ, ತನ್ನ ಇನಿಯಾ ತನ್ನ ಕೈ ಮುಟ್ಟುವಾಗ 'ಎಷ್ಟೊಂದು ಮೃದುವಾಗಿದೆ ನಿನ್ನ ತ್ವಚೆ ಎಂದು ಹೇಳಬೇಕೆಂದು' ಬಯಸುತ್ತಾಳೆ.
ವ್ಯಾಕ್ಸ್ ಮಾಡಿದಾಗ ತ್ವಚೆ ಎಷ್ಟು ಮೃದುವಾಗುವುದು ಎಂದರೆ ಕೈ ಮುಟ್ಟಿದರೆ ಆ ನುಣಪಾದ ಕೈಗಳನ್ನು ಮತ್ತೆ-ಮತ್ತೆ ಮುಟ್ಟಿಸಬೇಕೆಂದು ಅನಿಸುತ್ತದೆ. ಆದರೆ ವ್ಯಾಕ್ಸ್ ಸಂದರ್ಭದಲ್ಲಿ ಅನುಭವಿಸುವ ನೋವು ಇದೆಯೆಲ್ಲಾ ಅಯ್ಯೋ ಈ ವ್ಯಾಕ್ಸ್ ಸಹವಾಸನೇ ಬೇಡ ಎಂದೆನಿಸುವಷ್ಟು ಭಯ ಹುಟ್ಟಿಸುತ್ತದೆ. ನಾವಿಲ್ಲಿ ವ್ಯಾಕ್ಸ್ ನೋವು ಕಡಿಮೆ ಮಾಡಲು ಕೆಲ ಟಿಪ್ಸ್ ನೀಡಿದ್ದೇವೆ ನೋಡಿ:

ಶುಗರ್ ವ್ಯಾಕ್ಸ್
ಇದಕ್ಕಾಗಿ ನೀವು ಸಕ್ಕರೆಯನ್ನು ಕರಗಿಸಬೇಕು. ಸಕ್ಕರೆ ಜೊತೆ ನಿಂಬೆರಸ ಕೂಡ ಬೇಕು. ಸಕ್ಕರೆ ಪಾಕ ಮಾಡಿ, ಅದಕ್ಕೆ ಸ್ವಲ್ಪ ನಿಂಬೆರಸ ಹಿಂಡಿ, ಅದರಲ್ಲಿ ಹತ್ತಿಯನ್ನು ಉಂಡೆ ಮಾಡಿ ಅದ್ದಿ ತ್ವಚೆ ಮೇಲೆ ಉಜ್ಜಿ ನಂತರ ವಿರುದ್ಧ ದಿಕ್ಕಿನಿಂದ ಎಳೆಯಿರಿ. ಈ ಆದರೆ ಈ ವ್ಯಾಕ್ಸಿಂಗ್ ಮಾಡುವುದಾದರೆ ನೀವು ವ್ಯಾಕ್ಸಿಂಗ್ ಮಾಡಿಸಿ 3 ವಾರ ಕಳೆದಿರಬೇಕು.

ಚಾಕೋಲೇಟ್ ವ್ಯಾಕ್ಸ್
ಚಾಕೋಲೇಟ್ ಕರಗಿಸಿ ಅದನ್ನು ತ್ವಚೆ ಮೇಲೆ ಹಚ್ಚಿ, ನಂತರ ವ್ಯಾಕ್ಸಿಂಗ್ ಸ್ಟ್ರೈಪ್ಸ್ ಬಳಸಿ ತೆಗೆಯಿರಿ, ಈ ವಿಧಾನ ಬಳಸುವುದರಿಂದ ನೋವು ಕಡಿಮೆ ಅಲ್ಲದೆ , ನಂತರ ಯಾವುದೇ ಉರಿ ಉಂಟಾಗುವುದಿಲ್ಲ.

ಸ್ಟ್ರಾಬೆರ್ರಿ ವ್ಯಾಕ್ಸ್
ಚಾಕೋಲೇಟ್ ವ್ಯಾಕ್ಸ್ ರೀತಿಯಲ್ಲೇ ಸ್ಟ್ರಾಬೆರ್ರಿ ವ್ಯಾಕ್ಸ್ ಕೂಡ ತುಂಬಾ ಸಹಕಾರಿಯಾಗಿದೆ. ಇದು ಬೇಗನೆ ಒಣಗುವುದರ ಜೊತೆಗೆ ತ್ವಚೆ ಕೆಂಪಾಗಿಸುವುದಿಲ್ಲ. ಸ್ಟ್ರಾಬೆರ್ರಿ ವ್ಯಾಕ್ಸ್ ಕೊಳ್ಳುವಾಗ ಆ ಪ್ಯಾಕ್‌ನಲ್ಲಿ ವಿಟಮಿನ್ ಹಾಗೂ ಆ್ಯಂಟಿಆಕ್ಸಿಡೆಂಟ್ ಅಂಶ ಇರಬೇಕು. ಈ ವ್ಯಾಕ್ಸ್ ನೀವು ಆನ್‌ಲೈನ್ ಮುಖಾಂತರವೂ ತರಿಸಬಹುದು.

ಅಲೋವೆರಾ ವ್ಯಾಕ್ಸ್
ಇದನ್ನು ಬೀವ್ಯಾಕ್ಸ್( ಜೇನು ಮೇಣ) ಅಥವಾ ಗ್ಲಿಸೆರಿನ್ ಹಾಕಿ ತಯಾರಿಸಬಹುದು. ತುಂಬಾ ಹಿಂದಿನ ಕಾಲದಿಂದಲೂ ವ್ಯಾಕ್ಸಿಂಗ್‌ನಲ್ಲಿ ಈ ವಿಧಾನ ಬಳಸುತ್ತಿದ್ದರು. ಈ ವ್ಯಾಕ್ಸಿಂಗ್‌ನಲ್ಲಿ ಬಳಸುವ ಲೋಳೆಸರ ತ್ವಚೆಯ ಮಾಯಿಶ್ಚರೈಸರ್ ಕಾಪಾಡುವಲ್ಲಿಯೂ ಸಹಕಾರಿ.
ಲೋಳೆಸರವನ್ನು ಗ್ಲಿಸರಿನ್ ಅಥವಾ ಜೇನುಮೇಣ ಜೊತೆ ಮಿಶ್ರ ಮಾಡಿ ಹಚ್ಚಿ ನಂತರ ಸ್ಟ್ರೈಪ್ಸ್ ಬಳಸಿ ತೆಗೆಯಿರಿ.



Click it and Unblock the Notifications
