For Quick Alerts
ALLOW NOTIFICATIONS  
For Daily Alerts

ಮುಖದಲ್ಲಿ ರಂಧ್ರ ಹಾಗೂ ಬ್ಲ್ಯಾಕ್‌ಹೆಡ್ಸ್ ಹೋಗಲಾಡಿಸಬೇಕೆ?

|

ತ್ವಚೆ ಕ್ರೀಮ್ ಹಚ್ಚದಿದ್ದರೆ ಮನಸ್ಸಿಗೆ ಸಮಧಾನವೇ ಆಗುವುದಿಲ್ಲ, ಇಲ್ಲಿ ಮೇಕಪ್ ಇಲ್ಲದೆ ಹೊರಗಡೆ ಹೋಗುವುದಾದರೂ ಹೇಗೆ ಅಲ್ವಾ? ನಮ್ಮ ಲುಕ್‌ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುವಲ್ಲಿ ಮೇಕಪ್ ತುಂಬಾ ಸಹಕಾರಿ, ಆದರೆ ನಿಮ್ಮ ಲುಕ್‌ ಕಾಪಾಡಿಕೊಳ್ಳಲು ಕೆಲವೊಮ್ಮೆ ತ್ವಚೆಗೆ ರೆಸ್ಟ್‌ ಕೊಡುವುದು ಕೂಡ ಅಷ್ಟೇ ಮುಖ್ಯ ಎಂಬುವುದನ್ನು ಮರೆಯಬಾರದು.

ಏಕೆಂದರೆ ಮೇಕಪ್ ಹೆಚ್ಚಾಗಿ ಬಳಸುವುದರಿಂದ ತ್ವಚೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಜೊತೆಗೆ ನಾವು ಇರುವ ಪರಿಸರ ಈಗ ಧೂಳು, ವಾಯು ಮಾಲಿನ್ಯದಿಂದ ತುಂಬಿರುವುದರಿಂದ ಇವು ಕೂಡ ತ್ವಚೆ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ನಮ್ಮ ತ್ವಚೆ ಮಂಕಾಗುವುದು. ಈಗಾಗಲೇ ನೀವು ಆ ಸಮಸ್ಯೆ ಎದುರಿಸುತ್ತಿದ್ದರೆ ಇಲ್ಲಿ ಕೆಲವೊಂದು ಮನೆಮದ್ದು ಹೇಳಿದ್ದೇವೆ, ಇವುಗಳು ನಿಮ್ಮ ತ್ವಚೆಯನ್ನು ಸಂರಕ್ಷಿಸುವುದರ ಜೊತೆಗೆ ಆಕರ್ಷಕವಾಗಿ ಕಾಣುವಂತೆ ಮಾಡುವುದು. ಇವುಗಳನ್ನು ಹೇಗೆ ಬಳಸುವುದು ಎಂದು ನೋಡೋಣ:

 ಬೇಕಾಗುವ ಸಾಮಗ್ರಿ

ಬೇಕಾಗುವ ಸಾಮಗ್ರಿ

ಗ್ರೀನ್ ಟೀ

ಜೇನು

ಮಾಡುವ ವಿಧಾನ:

ಈ ಎರಡೂ ವಸ್ತುವನ್ನು ಮಿಶ್ರ ಮಾಡಿ.

ನಂತರ ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷ ಬಿಡಿ.

 ಮಾಸ್ಕ್‌ ತೆಗೆಯುವುದು ಹೇಗೆ?

ಮಾಸ್ಕ್‌ ತೆಗೆಯುವುದು ಹೇಗೆ?

ಈ ಮಾಸ್ಕ್‌ನ ಉತ್ತಮ ಪ್ರಯೋಜನ ಪಡೆಯಬೇಕಾದರೆ ಗ್ರೀನ್ ಟೀ, ಜೇನಿನ ಮಾಸ್ಕ್‌ ಅನ್ನು ಮುಖದ ಮೇಲೆ ಮೆಲ್ಲನೆ ವೃತ್ತಾಕಾರವಾಗಿ ತಿಕ್ಕಿ ಮಸಾಜ್ ಮಾಡಬೇಕು. ಇದರಿಂದ ತ್ವಚೆಗೆ ಎಕ್ಸ್‌ಫೋಲೆಟ್‌ ಮಾಡಿದಂತೆ ಆಗುವುದು. ನಂತರ ಮುಖವನ್ನು ತೊಳೆದು, ಲೋಷನ್ ಹಚ್ಚಿ.

 ಪ್ರಯೋಜನಗಳು

ಪ್ರಯೋಜನಗಳು

ಈ ಸಾಮಗ್ರಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಧಿಕವಿದ್ದು ಮುಖದಲ್ಲಿ ಎದ್ದಿರುವ ಮೊಡವೆ ಕಡಿಮೆ ಮಾಡುತ್ತದೆ, ಮುಖದ ರಂಧ್ರಗಳನ್ನು ಮುಚ್ಚುತ್ತದೆ ಹಾಗೂ ಬ್ಲ್ಯಾಕ್‌ಹೆಡ್ಸ್ ಬಾರದಂತೆ ತಡೆಗಟ್ಟುತ್ತದೆ, ಅಲ್ಲದೆ ಈ ಮಾಸ್ಕ್‌ ಕಲೆ ಹೋಗಲಾಡಿಸಲೂ ತುಂಬಾನೇ ಸಹಕಾರಿ.

ಇನ್ನು ಅಕಾಲಿಕ ನೆರಿಗೆ ತಡೆಗಟ್ಟುವಲ್ಲಿಯೂ ತುಂಬಾನೇ ಸಹಕಾರಿಯಾಗಿದೆ.

ಅಲ್ಲದೆ ನೀವು ಈ ಫೇಸ್‌ಮಾಸ್ಕ್‌ ಈ ಸಾಮಗ್ರಿ ಹಾಕಿಯೂ ಬಳಸಬಹುದು

ಅಲ್ಲದೆ ನೀವು ಈ ಫೇಸ್‌ಮಾಸ್ಕ್‌ ಈ ಸಾಮಗ್ರಿ ಹಾಕಿಯೂ ಬಳಸಬಹುದು

* ಜೇನು ಬದಲಿಗೆ ನಿಂಬೆರಸ ಹಾಕಿಯೂ ಬಳಸಬಹುದು.

* ಗ್ರೀನ್ ಟೀ ಎಲೆ ಹಾಕಿ ಕುದಿಸುವ ಬದಲಿಗೆ ಅದರ ಪೌಡರ್ ಕೂಡ ಬಳಸಬಹುದು.

ವಾರದಲ್ಲಿ ಎಷ್ಟು ಬಾರಿ ಬಳಸಬೇಕು?

ವಾರದಲ್ಲಿ ಎರಡು ಬಾರಿ ಬಳಸುತ್ತಾ ಬಂದರೆ ಸಾಕು ಮುಖದಲ್ಲಿನ ಮೊಡವೆ ಕಡಿಮೆಯಾಗುವುದರ ಜೊತೆಗೆ ಮುಖ ಆಕರ್ಷಕವಾಗಿ ಕಾಣುವುದು.

English summary

DIY Green Tea And Honey Face Mask For Clogged Pores And Blackheads

DIY Green Tea and Honey Face Mask for clogged pores and blackheads, Read on.
X
Desktop Bottom Promotion