For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿಗೆ ಸರಳವಾಗಿ ಮಾಡಬಹುದಾದ ಕಿತ್ತಳೆ ಸಿಪ್ಪೆಯ ಫೇಸ್ ಮಾಸ್ಕ್

|

ತ್ವಚೆಗೆ ನೈಸರ್ಗಿಕ ಕಾಂತಿ ಹಾಗೂ ಸೌಂದರ್ಯ ನೀಡಬೇಕಾದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳ ಬದಲು ನೈಸರ್ಗಿಕವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾ ಆಗದು. ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಕ್ರೀಮ್ ಗಳು ಲೋಷನ್ ಹಾಗೂ ಇತರ ಕೆಲವು ಸಾಮಗ್ರಿಗಳು ತ್ವಚೆಗೆ ಕಾಂತಿ ನೀಡಿದರೂ ಅದರ ಪರಿಣಾಮ ಅಲ್ಪಕಾಲ ಮಾತ್ರ. ಇದರ ಜತೆಗೆ ಅದು ಹಲವಾರು ಅಡ್ಡಪರಿಣಾಮಗಳನ್ನು ಕೂಡ ಉಂಟು ಮಾಡಬಹುದು. ಇದಕ್ಕಾಗಿ ಇಂದು ಸಮಯದ ಅಭಾವ ಇದ್ದರೂ ನೈಸರ್ಗಿಕ ವಿಧಾನದ ಮೂಲಕ ತ್ವಚೆಗೆ ಕಾಂತಿ ಪಡೆಯಲು ಹೆಚ್ಚಿನವರು ಪ್ರಯತ್ನಿಸುವರು.

Orange Peel

ಹಣ್ಣುಗಳು ಹಾಗೂ ತರಕಾರಿಗಳು, ಹಾಲಿನ ಉತ್ಪನ್ನಗಳು ಇತ್ಯಾದಿಗಳನ್ನು ಬಳಸಿಕೊಂಡು ತ್ವಚೆಗೆ ನೈಸರ್ಗಿಕ ಕಾಂತಿ ನೀಡಬಹುದು. ಹಣ್ಣುಗಳಲ್ಲಿ ಪ್ರಮುಖವಾಗಿ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ತ್ವಚೆಯ ಆರೈಕೆ ಮಾಡಬಹುದು. ಹೌದು, ನೀವು ಕಿತ್ತಳೆ ಹಣ್ಣಿನ ತಿರುಳನ್ನು ತಿಂದು ಸಿಪ್ಪೆ ಕಸದ ಬುಟ್ಟಿಗೆ ಎಸೆದಿರಬಹುದು. ಆದರೆ ಸಿಪ್ಪೆಯಿಂದ ತ್ವಚೆಯ ಕಾಂತಿ ನೈಸರ್ಗಿಕವಾಗಿ ವೃದ್ಧಿಸಬಹುದು. ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಬ್ಲ್ಯಾಕ್ ಹೆಡ್, ಮೊಡವೆ, ಕಪ್ಪು ಕಲೆಗಳು, ಬಣ್ಣ ಕುಂದಿರುವ ಸಮಸ್ಯೆ ನಿವಾರಣೆ ಮಾಡಬಹುದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ.

ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ

ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ

ಇದು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ತುಂಬಾ ಕಾಂತಿಯುತ ಮತ್ತು ಮೊಡವೆ ಮುಕ್ತ ಚರ್ಮವನ್ನು ನಿಮ್ಮದಾಗಿಸಲಿದೆ. ಇನ್ನು ಮುಂದೆ ನೀವು ಕಿತ್ತಳೆ ಸಿಪ್ಪೆಯನ್ನು ಹಾಗೆ ಕಸದ ಬುಟ್ಟಿಗೆ ಬಿಸಾಡಬೇಡಿ ಮತ್ತು ಇದರಲ್ಲಿ ಇರುವಂತಹ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ನೀವು ಪಡೆಯಿರಿ. ಈ ಲೇಖನದಲ್ಲಿ ನಿಮಗೆ ಕಿತ್ತಳೆ ಸಿಪ್ಪೆಯನ್ನು ಬಳಸಿಕೊಳ್ಳುವ ತುಂಬಾ ಸರಳ ವಿಧಾನಗಳನ್ನು ಹೇಳಿಕೊಡಲಾಗಿದೆ. ಮನೆಯಲ್ಲಿ ತಯಾರಿಸಿದ ಈ ಫೇಸ್ ಪ್ಯಾಕ್ ನ್ನು ನೀವು ಬಳಸಿಕೊಳ್ಳಿ ಮತ್ತು ತ್ವಚೆಗೆ ಸಂಬಂಧಿಸಿರುವ ಎಲ್ಲಾ ರೀತಿಯ ಸಮಸ್ಯೆಯನ್ನು ದೂರವಿಡಿ.

ಮೊದಲ ಹಂತ

ಮೊದಲ ಹಂತ

ಕಿತ್ತಳೆ ಸಿಪ್ಪೆಯ ವಿವಿಧ ರೀತಿಯ ಲಾಭಗಳನ್ನು ಪಡೆಯಲು ನೀವು ಮೊದಲಾಗಿ ಕಿತ್ತಳೆ ಸಿಪ್ಪೆಯನ್ನು ಸರಿಯಾಗಿ ಒಣಗಿಸಿಕೊಳ್ಳಿ. ಕಿತ್ತಳೆ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಕೆಲವು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಲು ಹಾಕಿ. ಇದು ಸಂಪೂರ್ಣವಾಗಿ ಒಣಗಿದ ಬಳಿಕ ಮತ್ತು ತೇವಾಂಶವು ಸಂಪೂರ್ಣವಾಗಿ ಕಳೆದುಕೊಂಡ ಬಳಿಕ ನೀವು ಇದರ ಪುಡಿ ಮಾಡಿಕೊಳ್ಳಿ. ಬಿಗಿಯಾದ ಮುಚ್ಚಳ ಇರುವಂತಹ ಡಬ್ಬದಲ್ಲಿ ನೀವು ಈ ಹುಡಿಯನ್ನು ಹಾಕಿಡಿ. ಇನ್ನು ನೀವು ಈ ಹುಡಿಯನ್ನು ಬಳಸಿಕೊಂಡು ವಿವಿಧ ರೀತಿಯ ಫೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದು. 6 ತಿಂಗಳ ಕಾಲ ನೀವು ಈ ಹುಡಿಯನ್ನು ಬಳಸಿಕೊಳ್ಳಬಹುದು.

Most Read: ಕಿತ್ತಳೆ- ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ ಬೆರಗಾಗಲೇಬೇಕು..!

ಕಿತ್ತಳೆ ಹಣ್ಣಿನ ಸಿಪ್ಪೆ ಹುಡಿ ಮತ್ತು ಅಲೋವೆರಾ

ಕಿತ್ತಳೆ ಹಣ್ಣಿನ ಸಿಪ್ಪೆ ಹುಡಿ ಮತ್ತು ಅಲೋವೆರಾ

ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳಿಗೆ ಅಲೋವೆರಾವು ಅತ್ಯುತ್ತಮ ಪರಿಹಾರ ಆಗಿದೆ. ಕಿತ್ತಳೆ ಹಣ್ಣಿನ ಸಿಪ್ಪೆ ಹುಡಿ ಜತೆಗೆ ಇದನ್ನು ಹಾಕಿಕೊಂಡಾಗ, ಅದು ಅದ್ಭುತವಾಗಿ ಕೆಲಸ ಮಾಡುವುದು. 1-2 ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿ ಮತ್ತು ಒಂದು ಚಮಚ ಅಲೋವೆರಾ ಲೋಳೆ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದನ್ನು ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದರ ಬಳಿಕ ಹತ್ತು ನಿಮಿಷ ಕಾಲ ಹಾಗೆ ಬಿಡಿ. ಹತ್ತು ನಿಮಿಷ ಬಿಟ್ಟು ತಣ್ಣೀರು ಬಳಸಿಕೊಂಡು ಮುಖ ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ನೀವು ಈ ವಿಧಾನವನ್ನು ವಾರದಲ್ಲಿ ಎರಡು ಸಲ ಬಳಸಿಕೊಳ್ಳಿ.

ಕಿತ್ತಳೆ ಹಣ್ಣಿನ ಸಿಪ್ಪೆ ಹುಡಿ ಮತ್ತು ಮೊಸರು

ಕಿತ್ತಳೆ ಹಣ್ಣಿನ ಸಿಪ್ಪೆ ಹುಡಿ ಮತ್ತು ಮೊಸರು

ಮೊಸರು ಹಾಗೂ ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿಯು ದೇಹದಲ್ಲಿರುವ ಸತ್ತ ಚರ್ಮವನ್ನು ತೆಗೆದುಹಾಕುವುದು ಮತ್ತು ಇದರೊಂದಿಗೆ ಚರ್ಮವು ಬಿಳಿಯಾಗುವುದು. ಮುಖದಲ್ಲಿ ನಿಮಗೆ ಇದು ತುಂಬಾ ತಾಜಾತನದ ಅನುಭವ ನೀಡುವುದು. ಮುಖವು ತುಂಬಾ ಸ್ಪಷ್ಟ ಹಾಗೂ ತಾಜಾವಾಗಿ ಕಾಣುವುದು. ಒಂದು ಚಮಚ ಕಿತ್ತಳೆ ಸಿಪ್ಪೆಯ ಹುಡಿ ಮತ್ತು ಎರಡು ಚಮಚ ಮೊಸರು ಹಾಕಿಕೊಳ್ಳಿ. ಎರಡನ್ನು ಜತೆ ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ. ನೀವು ಫಲಿತಾಂಶವನ್ನು ಆಧರಿಸಿಕೊಂಡು ಇದನ್ನು ವಾರದಲ್ಲಿ ಒಂದು ಅಥವಾ ಎರಡು ಸಲ ಬಳಸಿಕೊಳ್ಳಬಹುದು. ನೀವು ಹಚ್ಚಿಕೊಂಡ ಕೆಲವೇ ದಿನಗಳಲ್ಲಿ ಇದು ಅದ್ಭುತ ಫಲಿತಾಂಶ ತೋರಿಸುವುದು.

Most Read: ಈ ಫೇಸ್ ಮಾಸ್ಕ್ ಬಳಸಿದರೆ ಮುಖದಲ್ಲಿ ಇರುವ ವೈಟ್ ಹೆಡ್ಸ್ ನಿವಾರಣೆಯಾಗುವುದು!

ಕಿತ್ತಳೆ ಹಣ್ಣಿನ ಸಿಪ್ಪೆ, ಅಡುಗೆ ಸೋಡಾ ಮತ್ತು ಜೇನುತುಪ್ಪ

ಕಿತ್ತಳೆ ಹಣ್ಣಿನ ಸಿಪ್ಪೆ, ಅಡುಗೆ ಸೋಡಾ ಮತ್ತು ಜೇನುತುಪ್ಪ

ಚರ್ಮದ ವಿವಿಧ ಸಮಸ್ಯೆಗಳನ್ನು ನಿವಾರಣೆ ಮಾಡುವ ಮತ್ತು ಅದ್ಭುತವಾಗಿ ಕೆಲಸ ಮಾಡುವಂತಹ ಮತ್ತೊಂದು ರಹಸ್ಯ ಸಾಮಗ್ರಿ ಎಂದರೆ ಅದು ಅಡುಗೆ ಸೋಡಾ. ಅಡುಗೆ ಸೋಡಾ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿಯನ್ನು ನೀವು ಜತೆ ಸೇರಿಸಿಕೊಂಡು ತ್ವಚೆಗೆ ಬಳಸಿಕೊಳ್ಳಬಹುದು. ಒಂದು ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿ ಮತ್ತು ಒಂದು ಚಮಚ ಅಡುಗೆ ಸೋಡಾ. 1-2 ಚಮಚ ಜೇನುತುಪ್ಪ ಹಾಕಿಕೊಂಡು ಇದನ್ನು ನೀವು ಸರಿಯಾದ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ನೀವು ಈಗ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 10-15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಜೇನುತುಪ್ಪವು ತ್ವಚೆಯನ್ನು ತುಂಬಾ ನಯ ಹಾಗೂ ಸುಂದರವಾಗಿಸುವುದು. ಚರ್ಮಕ್ಕೆ ಇದು ಮೊಶ್ಚಿರೈಸ್ ಕೂಡ ನೀಡುವುದು. ಆದರೆ ಕೆಲವೊಂದು ಚರ್ಮಕ್ಕೆ ಕಿತ್ತಳೆ ಹಣ್ಣಿನ ಸಿಪ್ಪೆಯು ಹುಡಿಯು ಅಲರ್ಜಿ ಉಂಟು ಮಾಡುವಂತಹ ಸಾಧ್ಯತೆಯು ಇರುವುದು. ಇದರಿಂದಾಗಿ ನೀವು ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ಬಳಕೆ ಮಾಡಲು ಮೊದಲು ಇದನ್ನು ಒಂದು ಸಲ ಬಳಸಿ ಅಲರ್ಜಿ ಉಂಟಾಗುವುದೇ ಎಂದು ನೋಡಿಕೊಳ್ಳಿ. ಹಚ್ಚಿಕೊಂಡ ಬಳಿಕ ಕಿರಿಕಿರಿ, ತುರಿಕೆ ಕಾಣಿಸಿಕೊಂಡರೆ ತಕ್ಷಣವೇ ಅದನ್ನು ತೆಗೆದು, ಔಷಧಿ ಹಚ್ಚಿಕೊಳ್ಳಿ.

English summary

Orange Peel For Skin: Easiest ways to make your own face mask

Natural ingredients are the best way to promote skin health without any side effects. Another great natural ingredient which is amazing for your skin is orange peel. Yes! something you considered thrash can provide you a glowing skin. An orange peel can help you treat blackheads, pigmentation, dark spots and marks. It has anti-bacterial and anti-microbial properties and is also loaded with Vitamin C.
X
Desktop Bottom Promotion