Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮುಖದ ಸೌಂದರ್ಯ ಹೆಚ್ಚಿಸಲು 7 ಬಗೆಯ ಓಟ್ಸ್ ಫೇಸ್ ಪ್ಯಾಕ್!
ತ್ವಚೆಯ ಆರೈಕೆಗೆ ಓಟ್ಸ್ ರವೆಯ ಉಪಾಹಾರದ ಸೇವನೆ ಎಷ್ಟು ಪ್ರಯೋಜನಕಾರಿ ಎಂದು ಬಲ್ಲವರಿಗೆ ಮಾತ್ರ ಗೊತ್ತು. ಆದರೆ ಓಟ್ಸ್ ರವೆ ಆಹಾರದ ಹೊರತಾಗಿ ಮುಖಲೇಪದ ರೂಪದಲ್ಲಿಯೂ ತ್ವಚೆಗೆ ಹೊರಗಿನಿಂದಲೂ ಆರೈಕೆ ನೀಡುವ ಕ್ಷಮತೆ ಪಡೆದಿದೆ. ಅಲ್ಲದೇ ಯಾವುದೇ ಬಗೆಯ ತ್ವಚೆಯವರಿಗೂ ಈ ರವೆಯ ಲೇಪಗಳು ಸೂಕ್ತವಾಗಿವೆ. ವಿಶೇಷವಾಗಿ ಎಣ್ಣೆಚರ್ಮದ ವ್ಯಕ್ತಿಗಳು, ಮೊಡವೆ ಹೆಚ್ಚಿರುವ ತ್ವಚೆ ಮತ್ತು ವಿಶೇಷವಾಗಿ ದೇಹಕ್ಕೆ ಒಗ್ಗದ ಬೇರಾವುದೇ ಸಾಮಾಗ್ರಿಗಳಿದ್ದರೆ ಇನ್ನಷ್ಟು ಉಲ್ಬಣಗೊಳ್ಳುವ ಮೊಡವೆಗಳಿಗೂ ಓಟ್ಸ್ ರವೆ ಸೂಕ್ತ ಪರಿಹಾರವಾಗಿದೆ.
ಅಷ್ಟೇ ಅಲ್ಲ ಇದು ತ್ವಚೆಯಿಂದ ಹೆಚ್ಚುವರಿ ತೈಲವನ್ನು ಹೀರಿಕೊಂಡು ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಿ ಆರ್ದ್ರತೆಯನ್ನು ಒದಗಿಸುತ್ತದೆ, ತನ್ಮೂಲಕ ತ್ವಚೆಯ ಕಾಂತಿ ಹೆಚ್ಚಿಸುತ್ತದೆ. ಮುಖದ ಸೌಂದರ್ಯವನ್ನು ಹೆಚ್ಚಿಸಲು ಓಟ್ಸ್ ರವೆಯನ್ನು ಬಳಸುವುದು ಜಾಣತನದ ಆಯ್ಕೆಯಾಗಿದ್ದು ಇದರೊಂದಿಗೇ ಇತರ ಸೌಂದರ್ಯ ವರ್ಧಕಗಳನ್ನು ಬೆರೆಸಿದಾಗ ಇದರ ಕ್ಷಮತೆ ಇನ್ನಷ್ಟು ಹೆಚ್ಚುತ್ತದೆ. ಬನ್ನಿ, ಇಂತಹ ಪ್ರಮುಖ ನಾಲ್ಕು ವಿಧಾನಗಳ ಬಗ್ಗೆ ಇಂದು ಅರಿಯೋಣ...

ಜೇನು, ಹಾಲು ಮತ್ತು ಓಟ್ಸ್ ರವೆಯ ಮುಖಲೇಪ
ಸಾಮಾಗ್ರಿಗಳು: ಓಟ್ಸ್ ರವೆ, ಜೇನು, ಹಾಲು ಮತ್ತು ಮೊಸರು
ವಿಧಾನ: ಈ ಮುಖಲೇಪ ಎಲ್ಲಾ ಬಗೆಯ ತ್ವಚೆಯವರಿಗೂ ಸೂಕ್ತವಾಗಿದೆ.ಒಣಚರ್ಮದವರು ಹಾಲನ್ನು ತಪ್ಪದೇ ಸೇರಿಸಬಹುದು ಆದರೆ ಎಣ್ಣೆತ್ವಚೆಯವರು ಇದನ್ನು ಆಯ್ಕೆಯಾಗಿಸಿಕೊಳ್ಳಬಹುದು. ನಾಲ್ಕು ದೊಡ್ಡ ಚಮಚ ತಾಜಾ ಮೊಸರು ಮತ್ತು ಹಾಲನ್ನು ಎರಡು ದೊಡ್ಡ ಚಮಚ ನುಣ್ಣಗಾಗಿ ಪುಡಿಯಾಗಿಸಿದ ಓಟ್ಸ್ ವರೆಯೊಂದಿಗೆ ಬೆರೆಸಿ ಇದಕ್ಕೆ ಎರಡು ದೊಡ್ಡ ಚಮಚ ಜೇನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಅಷ್ಟೇ, ಮುಖಲೇಪ ಸಿದ್ಧ! ಈ ಲೇಪವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಡಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಹಾಲು ಮತ್ತು ಜೇನು ತ್ವಚೆಗೆ ಅಗತ್ಯವಿದ್ದ ಆರ್ದ್ರತೆಯನ್ನು ಒದಗಿಸಿದರೆ ಮೊಸರು ಒಂದು ನೈಸರ್ಗಿಕ ಬಿಳಿಚುಕಾರಕವಾಗಿರುವ ಕಾರಣ ಚರ್ಮವನ್ನು ತಂಪಗಾಗಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ.

ಲಿಂಬೆ, ಹಾಲು ಮತ್ತು ಓಟ್ಸ್ ರವೆಯ ಮುಖಲೇಪ
ಸಾಮಾಗ್ರಿಗಳು: ಹಸಿ ಹಾಲು, ಓಟ್ಸ್ ರವೆ ಮತ್ತು ಲಿಂಬೆರಸ
ವಿಧಾನ: ಎರಡು ದೊಡ್ಡ ಚಮಚ ಓಟ್ಸ್ ರವೆಯನ್ನು ಕೊಂಚ ನೀರಿನಲ್ಲಿ ಬೆರೆಸಿ ಬಿಸಿಮಾಡಿ. ನೀರು ಕುದಿಯಲು ಪ್ರಾರಂಭವಾದೊಡನೆ ಉರಿ ಆರಿಸಿ ಹಾಗೇ ತಣಿಯಲು ಬಿಡಿ. ತಣಿದ ಬಳಿಕ ಇದಕ್ಕೆ ಎರಡು ದೊಡ್ಡ ಚಮಚ ಹಸಿ ಹಾಲು ಮತ್ತು ನಾಲ್ಕು ದೊಡ್ಡ ಚಮಚ ಲಿಂಬೆರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪವನ್ನು ಈಗತಾನೇ ತೊಳೆದ ಮುಖದ ಮೇಲೆ ದಪ್ಪನಾಗಿ ಹಚ್ಚಿಕೊಂಡು ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಬಾದಾಮಿ, ಓಟ್ಸ್ ರವೆಯ ಮುಖಲೇಪ
ಸಾಮಾಗ್ರಿಗಳು: ಓಟ್ಸ್ ರವೆ, ಬಾದಾಮಿ, ಜೇನು ಮತ್ತು ಹಾಲು ಅಥವಾ ಮೊಸರು. ವಿಧಾನ: ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಬಾದಾಮಿಯನ್ನು ಚಿಕ್ಕದಾಗಿ ಪುಡಿ ಮಾಡಿ, ಇದಕ್ಕೆ ರವೆ ಸೇರಿಸಿ ಮತ್ತೊಮ್ಮೆ ಪುಡಿಮಾಡಿ. ಈ ಮಿಶ್ರಣಕ್ಕೆ ನಿಮ್ಮ ಆದ್ಯತೆಯ ಪ್ರಕಾರ ಮೊಸರು ಮತ್ತು ಜೇನನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಅಥವಾ ಒಣಗಿ ಪಕಳೆಯೇಳುವವರೆಗೂ ಹಾಗೇ ಬಿಟ್ಟು ಬಳಿಕ ಕೊಂಚ ನೀರಿನೊಂದಿಗೆ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ತೊಳೆದುಕೊಳ್ಳಿ

ಓಟ್ಸ್ ರವೆ ಮತ್ತು ಪಪ್ಪಾಯ ಹಣ್ಣಿನ ಮುಖಲೇಪನ
ಸಾಮಾಗ್ರಿಗಳು: ಪಪ್ಪಾಯ ಹಣ್ಣು, ಓಟ್ಸ್ ರವೆ ಮತ್ತು ಬಾದಾಮಿ ಎಣ್ಣೆ.
*ಮೊದಲು ಪಪ್ಪಾಯ ಹಣ್ಣಿನ ತಿರುಳನ್ನು ಸಂಗ್ರಹಿಸಿ. ಓಟ್ಸ್ ರವೆಯನ್ನು ನುಣ್ಣಗೆ ಪುಡಿಮಾಡಿ ಇದನ್ನು ಪೊಪಾಯಿ ತಿರುಳಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಒಂದು ಚಿಕ್ಕ ಚಮಚ ಬಾದಾಮಿ ಎಣ್ಣೆ ಬೆರೆಸಿ. ಒಂದು ವೇಳೆ ನಿಮಗೆ ಬಾದಾಮಿ ಎಣ್ಣೆ ಇಷ್ಟವಿಲ್ಲದಿದ್ದರೆ ಅಥವಾ ಲಭ್ಯವಿಲ್ಲದಿದ್ದರೆ ನಿಮ್ಮ ಇಷ್ಟದ ಬೇರಾವುದೇ ಅವಶ್ಯಕ ತೈಲವನ್ನು ಬೆರೆಸಬಹುದು. ಈ ಮುಖಲೇಪದಿಂದ ಮುಖದ ತ್ವಚೆಯನ್ನು ನಯವಾಗಿ ಉಜ್ಜಿಕೊಳ್ಳುತ್ತಾ ಹಾಗೂ ನಯವಾಗಿ ಮಸಾಜ್ ಮಾಡಿಕೊಳ್ಳುತ್ತಾ ಲೇಪವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು ಎರಡು ನಿಮಿಷಗಳವರೆಗೆ ಹೀಗೇ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಓಟ್ ಮೀಲ್, ಅಡುಗೆ ಸೋಡ ಮತ್ತು ನೀರು
*1 ಟೇಬಲ್ ಚಮಚ ಬೇಯಿಸಿದ ಓಟ್‌ಮೀಲ್ 1/2 ಟೀ ಚಮಚ ಬೇಕಿಂಗ್ ಸೋಡ ಮತ್ತು 3 ಟೀ ಚಮಚ ನೀರನ್ನು ಸೇರಿಸಿ.
*ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 10 ನಿಮಿಷಗಳ ಕಾಲ ಆರಲು ಬಿಡಿ. ನಂತರ ತಿಳಿಯಾದ ಸ್ಕಿನ್ ಟೋನರ್ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. *ವಾರಕ್ಕೊಮ್ಮೆ ಇದನ್ನು ಅನ್ವಯಿಸು ವುದರಿಂದ ಮುಖದ ಮೇಲಿರುವ ಕಪ್ಪು ಕಲೆಯನ್ನು ತೆಗೆಯ ಬಹುದು.

ಓಟ್ ಮೀಲ್ ಮತ್ತು ಮೊಸರು
*1 ಟೀ ಚಮಚ ಬೇಯಿಸಿದ ಓಟ್ ಮೀಲ್‌ಗೆ, 2 ಟೀ ಚಮಚ ಮೊಸರನ್ನು ಸೇರಿಸಿ. *ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 10 ನಿಮಿಷಗಳ ಕಾಲ ಆರಲು ಬಿಡಿ. *ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. *ವಾರಕ್ಕೊಮ್ಮೆ ಇದನ್ನು ಅನ್ವಯಿಸುವುದುರಿಂದ ಚರ್ಮವು ಮೃದು ಹಾಗೂ ಕೋಮಲತೆಯನ್ನು ಪಡೆದುಕೊಳ್ಳುತ್ತದೆ.

ಓಟ್ ಮೀಲ್ ಮತ್ತು ಬಾದಾಮಿ ಎಣ್ಣೆ
*1 ಟೀ ಚಮಚ ಬೇಯಿಸಿದ ಓಟ್‌ಮೀಲ್ 1 ಟೇಬಲ್ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ.
*ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ ಸ್ವಲ್ಪ ಸಮಯಗಳ ಕಾಲ ಆರಲು ಬಿಡಿ. *ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಬಳಿಕ ಮಾಯಿಶ್ಚರೈಸರ್ ಕ್ರೀಮ್ಅನ್ನು ಅನ್ವಯಿಸಿ.
*ವಾರಕ್ಕೆ ಎರಡು ಬಾರಿ ಇದನ್ನು ಅನ್ವಯಿಸುವುದುರಿಂದ ಚರ್ಮವು ಹೊಳಪು ಹಾಗೂ ಕಾಂತಿಯಿಂದ ಕೂಡಿರುತ್ತದೆ.



Click it and Unblock the Notifications