For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ತ್ವಚೆಯ ಆರೈಕೆಯಲ್ಲಿ ಮಾಡುವ ತಪ್ಪುಗಳು

|

ಹೆಚ್ಚಿನವರು ಬೆಳಗ್ಗೆ ಏಳುವುದೇ ತುಂಬಾ ತಡವಾಗಿ. ಹೀಗಾಗಿ ಅವರಿಗೆ ತಮ್ಮ ತ್ವಚೆಯ ಆರೈಕೆ ಮಾಡಲು ಸಮಯವೇ ಸಿಗುವುದಿಲ್ಲ ಹೀಗಾಗಿ ಸಿಕ್ಕಿದ್ದನ್ನು ಮುಖಕ್ಕೆ ಹಚ್ಚಿಕೊಂಡು ಹೇಗಾದರೂ ಮಾಡಿ ಕಚೇರಿಗೆ ಹೋಗುವರು. ಆದರೆ ಬೆಳಗ್ಗಿನ ಅವಧಿಯಲ್ಲಿ ಮಾಡುವಂತಹ ತ್ವಚೆಯ ಆರೈಕೆಯು ಅತೀ ಮಹತ್ವದ್ದಾಗಿರುವುದು ಎನ್ನುವುದನ್ನು ಹೆಚ್ಚಿನವರು ಮರೆತು ಬಿಡುವರು. ತ್ವಚೆಯ ಆರೈಕೆ ಸರಿಯಾಗಿ ಮಾಡದೆ ಇರುವುದು ದೊಡ್ಡ ತಪ್ಪು ಎಂದು ಹೇಳಲಾಗುತ್ತದೆ. ನೀವು ಬೆಳಗ್ಗಿನ ಅವಧಿಯಲ್ಲಿ ಮಾಡುವಂತಹ ಕೆಲವೊಂದು ಕ್ರಮಗಳು ಚರ್ಮದ ಮೇಲೆ ಪರಿಣಾಮ ಬೀರುವುದು.

Morning Skin Care Mistakes

ಬೆಳಗ್ಗಿನ ಅವಧಿಯಲ್ಲಿ ನಮಗೆ ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಇದನ್ನು ತಡೆದರೆ ಆಗ ತ್ವಚೆ ಆರೋಗ್ಯವಾಗಿ ಇರುವುದು. ಬೆಳಗ್ಗೆ ಚರ್ಮದ ಆರೈಕೆಯಲ್ಲಿ ಮಾಡುವ ತಪ್ಪುಗಳು ಮತ್ತು ಅದನ್ನು ತಡೆಯುವುದು ಹೇಗೆ? ಬೆಳಗ್ಗೆ ಮಾಡುವಂತಹ ತ್ವಚೆಯ ಆರೈಕೆಯು ಎಷ್ಟು ಮಹತ್ವದ್ದು ಎಂದು ನೀವು ತಿಳಿಯಿರಿ. ನೀವು ಕಡೆಗಣಿಸಬಹುದಾದ ಕೆಲವು ತಪ್ಪುಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ. ಈ ತಪ್ಪುಗಳು ನಿಮಗೆ ದೊಡ್ಡದು ಎಂದು ಅನಿಸದು. ಆದರೆ ನೀವು ಇದನ್ನು ಖಂಡಿತವಾಗಿಯೂ ಗಮನಿಸಬೇಕು. ನೀವು ಎಷ್ಟು ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದು ಗಮನಿಸಿ.

ಬೆಳಗ್ಗೆ ಮುಖ ಶುದ್ಧೀಕರಿಸುವುದು ಅತೀ ಅಗತ್ಯ

ಬೆಳಗ್ಗೆ ಮುಖ ಶುದ್ಧೀಕರಿಸುವುದು ಅತೀ ಅಗತ್ಯ

ತ್ವಚೆಯ ಆರೈಕೆಯಲ್ಲಿ ಬೆಳಗ್ಗೆ ಮುಖವನ್ನು ಶುದ್ಧೀಕರಿಸುವುದು ಅತೀ ಅಗತ್ಯ ಆಗಿರುವುದು. ನಿಮ್ಮ ಬೆಳಗ್ಗಿನ ತ್ವಚೆಯ ಆರೈಕೆಯು ಈ ಕ್ರಮದೊಂದಿಗೆ ಶುರುವಾಗುವುದು. ಆದರೆ ಕೆಲವರು ಇದನ್ನು ತಪ್ಪಿಸಿಕೊಳ್ಳುವರು. ರಾತ್ರಿ ವೇಳೆ ತ್ವಚೆಯ ಆರೈಕೆ ಮಾಡುವಂತಹ ಜನರು ಇದನ್ನು ಕಡೆಗಣಿಸುವರು. ಆದರೆ ನೀವು ತಿಳಿದುಕೊಳ್ಳಬೇಕಾದ ವಿಚಾರವೆಂದರೆ ರಾತ್ರಿ ವೇಳೆ ಮುಖವನ್ನು ಶುದ್ಧೀಕರಿಸುವುದು ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಬೆಳಗ್ಗೆ ಕೂಡ ನೀವು ಮುಖವನ್ನು ಶುದ್ಧೀಕರಿಸುವ ಕೆಲಸ ಮಾಡಬೇಕು. ಯಾಕೆಂದರೆ ಚರ್ಮದ ಮೇಲೆ ರಾತ್ರಿಯಿಡಿ ಎಣ್ಣೆಯಂಶ ಮತ್ತು ಸತ್ತ ಚರ್ಮದ ಕೋಶಗಳು ಜಮೆ ಆಗಿರುವುದು. ಹೀಗಾಗಿ ಇದನ್ನು ಶುದ್ಧೀಕರಿಸಬೇಕು. ಇದರಿಂದ ಬೆಳಗ್ಗೆ ನೀವು ಮುಖ ಶುದ್ಧೀಕರಿಸುವುದನ್ನು ಮರೆಯಬೇಡಿ.

ಬಿಸಿ ನೀರಿನ ಬಳಕೆ ಇದನ್ನು ತಕ್ಷಣವೇ ನಿಲ್ಲಿಸಬೇಕು

ಬಿಸಿ ನೀರಿನ ಬಳಕೆ ಇದನ್ನು ತಕ್ಷಣವೇ ನಿಲ್ಲಿಸಬೇಕು

ಮುಖವನ್ನು ಶುದ್ಧೀಕರಿಸಲು ಬಿಸಿ ನೀರು ಬಳಸುವುದು ಅಥವಾ ಸ್ನಾನ ಮಾಡಲು ಬಿಸಿ ನೀರು ಬಳಸುವುದು ನಾವು ಮಾಡುವಂತಹ ತಪ್ಪು. ಮುಖ ಶುಚಿಗೊಳಿಸಲು ಯಾವತ್ತಿಗೂ ಬಿಸಿ ನೀರು ಬಳಸಬೇಡಿ. ಇದರಿಂದ ಚರ್ಮದ ನೈಸರ್ಗಿಕ ಎಣ್ಣೆಯು ಮಾಯವಾಗುವುದು ಮತ್ತು ಚರ್ಮವು ಎಣ್ಣೆಯಂಶದಿಂದ ಇರುವುದು. ಇದನ್ನು ಯಾರೂ ಬಯಸುವುದಿಲ್ಲ. ಇದರಿಂದ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ ಮತ್ತು ಇದರ ಬಳಿಕ ಸ್ವಲ್ಪ ತಣ್ಣೀರು ಹಾಕಿ ತೊಳೆಯಿರಿ. ಉಗುರುಬೆಚ್ಚಗಿನ ನೀರು ಚರ್ಮದ ರಂಧ್ರಗಳನ್ನು ತೆರೆಯುವುದು ಮತ್ತು ಮುಖವನ್ನು ಸರಿಯಾಗಿ ಶುದ್ಧೀಕರಿಸಲು ನೆರವಾಗುವುದು. ತಣ್ಣೀರು ರಂಧ್ರಗಳನ್ನು ಮುಚ್ಚಲು ನೆರವಾಗುವುದು ಮತ್ತು ಇದರಿಂದ ಧೂಳು ಮತ್ತು ಕಲ್ಮಷವು ದೂರವಾಗುವುದು.

Most Read: ಸೌಂದರ್ಯ ವರ್ಧನೆಗೆ ಮಾಡುವ ಚಿಕಿತ್ಸೆಗೆ ನಾಚಿಕೆ ಪಡುವ ಅಗತ್ಯವಿಲ್ಲ

ದೇಹಕ್ಕೆ ಸಂಪೂರ್ಣವಾಗಿ ಮೊಶ್ಚಿರೈಸ್ ಮಾಡದೆ ಇರುವುದು

ದೇಹಕ್ಕೆ ಸಂಪೂರ್ಣವಾಗಿ ಮೊಶ್ಚಿರೈಸ್ ಮಾಡದೆ ಇರುವುದು

ನಾವು ತ್ವಚೆಯ ಆರೈಕೆ ವೇಳೆ ಕೇವಲ ಮುಖದ ಕಡೆ ಮಾತ್ರ ಗಮನಹರಿಸುತ್ತೇವೆ. ಆದರೆ ಇದು ಸರಿಯಲ್ಲ. ಬೆಳಗ್ಗೆ ಮಾಡುವಂತಹ ತ್ವಚೆಯ ಆರೈಕೆಯು ಸಂಪೂರ್ಣ ದೇಹಕ್ಕೆ ಸೀಮಿತವಾಗಿರಬೇಕು. ಮೊಶ್ಚಿರೈಸ್ ಮಾಡುವಾಗ ಕೇವಲ ಮುಖಕ್ಕೆ ಮಾತ್ರ ಮಾಡಬೇಡಿ. ಸಂಪೂರ್ಣ ದೇಹಕ್ಕೆ ಮೊಶ್ಚಿರೈಸ್ ಮಾಡಿ. ದೇಹಕ್ಕೆ ಮೊಶ್ಚಿರೈಸ್ ಮಾಡಲು ಮಾರುಕಟ್ಟೆಯಲ್ಲಿ ಸಿಗುವಂತಹ ಬಾಡಿ ಲೋಷನ್ ಬಳಸಬಹುದು ಅಥವಾ ನೈಸರ್ಗಿಕ ಸಾಮಗ್ರಿಗಳಾಗಿರುವ ಅಲೋವೆರಾದರಿಂದ ಮೊಶ್ಚಿರೈಸ್ ಮಾಡಬಹುದು ಮತ್ತು ಇದರಿಂದ ಚರ್ಮಕ್ಕೆ ಪೋಷಣೆ ಸಿಗುವುದು. ಸ್ನಾನ ಮಾಡಿಕೊಂಡು ಬಂದ ಕೂಡಲೇ ಹೀಗೆ ಮಾಡಿ.

ಸನ್ ಸ್ಕ್ರೀನ್ ಬಳಸದೆ ಇರುವುದು ಸರಿಯಾದ ನಿರ್ಧಾರವಲ್ಲ

ಸನ್ ಸ್ಕ್ರೀನ್ ಬಳಸದೆ ಇರುವುದು ಸರಿಯಾದ ನಿರ್ಧಾರವಲ್ಲ

ನೀವು ಸನ್ ಸ್ಕ್ರೀನ್ ಬಳಸದೆ ಇರುವಂತಹ ವಿಭಾಗದಲ್ಲಿ ಇದ್ದೀರಾ? ಈಗಿಂದೀಗಲೇ ನೀವು ಇದನ್ನು ಬಳಸಲು ಆರಂಭಿಸಬೇಕು. ಬಿಸಿಲಿನ ಕಿರಣಗಳು ಬೇರೆ ಎಲ್ಲದಕ್ಕಿಂತಲೂ ಹೆಚ್ಚಿಗೆ ಚರ್ಮಕ್ಕೆ ಹಾನಿ ಉಂಟು ಮಾಡುವುದು. ಬಿಸಿಲಿನಿಂದ ಚರ್ಮವನ್ನು ರಕ್ಷಣೆ ಮಾಡುವುದು ಅತೀ ಅಗತ್ಯ. ವಾತಾವರಣ ಹೇಗೆ ಇದ್ದರೂ ನೀವು ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಬೇಕು. ಒಳ್ಳೆಯ ಸನ್ ಸ್ಕ್ರೀನ್ ಬಳಸಿಕೊಳ್ಳಿ ಮತ್ತು ಇದನ್ನು ಪ್ರತಿನಿತ್ಯ ಹಚ್ಚಿಕೊಳ್ಳುವ ಅಭ್ಯಾಸ ಮಾಡಿ. ಮುಖ, ಕುತ್ತಿಗೆ ಮತ್ತು ಬಿಸಿಲಿಗೆ ಒಡ್ಡಲ್ಪಡುವ ದೇಹದ ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ. ನೀವು ಸ್ಕಾರ್ಪ್ ಅಥವಾ ಟೋಪಿ ಧರಿಸಿ ಬಿಸಿಲಿನಿಂದ ರಕ್ಷಣೆ ಪಡೆಯಬಹುದು. ಮನೆಯಿಂದ ಹೊರಗೆ ಹೋಗುವ ವೇಳೆ ಕೊಡೆ ಬಳಸಿದರೆ ಒಳ್ಳೆಯದು.

ನಿಯಮಿತವಾಗಿ ಟವೆಲ್ ನ್ನು ತೊಳೆಯದೆ ಇರುವುದು

ನಿಯಮಿತವಾಗಿ ಟವೆಲ್ ನ್ನು ತೊಳೆಯದೆ ಇರುವುದು

ತಾಜಾ ಹಾಗೂ ಶುದ್ಧವಾಗಿರುವಂತಹ ಟವೆಲ್ ನಿಂದ ಮುಖ ತೊಳೆಯುವುದು ಅತೀ ಅಗತ್ಯವಾಗಿರುವುದು. ಇದರಿಂದ ಕೆಲವು ದಿನಗಳಿಗೊಮ್ಮೆ ಟವೆಲ್ ನ್ನು ತೊಳೆಯಬೇಕು. ಒಂದೇ ಟವೆಲ್ ನ್ನು ಬಳಸಿಕೊಳ್ಳೂವ ಕಾರಣದಿಂದ ಅದು ಧೂಳು ಮತ್ತು ಬ್ಯಾಕ್ಟೀರಿಯಾ ಬರಲು ರಹದಾರಿಯಾಗುವುದು ಮತ್ತು ಬ್ಯಾಕ್ಟೀರಿಯಾವು ಚರ್ಮಕ್ಕೆ ಹಾನಿ ಉಂಟು ಮಾಡುವುದು. ಇದರಿಂದ ಮುಖದ ಮೇಲೆ ಮೊಡವೆ ಹಾಗೂ ಬೊಕ್ಕೆ ಕಾಣಿಸಿಕೊಳ್ಳುವುದು. ಇದರಿಂದ ಟವೆಲ್ ನ್ನು ಯಾವಾಗಲೂ ತೊಳೆಯುತ್ತಲಿರಿ. ಮುಖದ ಆರೋಗ್ಯಕ್ಕಾಗಿ ನೀವು ಯಾವಾಗಲೂ ಟವೆಲ್ ನ್ನು ತೊಳೆಯುತ್ತಲಿರಿ ಮತ್ತು ಬದಲಾಯಿಸಿಕೊಳ್ಳತ್ತಲಿರಬೇಕು.

Most Read: ಬರೀ 7 ದಿನಗಳಲ್ಲಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸರಳ ಟಿಪ್ಸ್

ವಯಸ್ಸಾಗುವ ಲಕ್ಷಣ ತಡೆಯುವ ಕ್ರೀಮ್ ಗಳನ್ನು ಬಳಸಬೇಡಿ

ವಯಸ್ಸಾಗುವ ಲಕ್ಷಣ ತಡೆಯುವ ಕ್ರೀಮ್ ಗಳನ್ನು ಬಳಸಬೇಡಿ

ಒಂದು ಹಂತದ ಬಳಿಕ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಕ್ರೀಮ್ ಬಳಸುವುದು ಅನಿವಾರ್ಯ ಎನ್ನುವಂತಾಗುವುದು ಮತ್ತು ಇದಕ್ಕೆ ಹೊಂದಿಕೊಂಡು ಹೋಗುತ್ತೇವೆ. ಆದರೆ ಇದರಲ್ಲಿ ಹೆಚ್ಚಿನ ಮಟ್ಟದ ರಾಸಾಯನಿಕಗಳು ಇದ್ದು, ಇದನ್ನು ಅತಿಯಾಗಿ ಬಳಸಿದರೆ ಆಗ ಚರ್ಮಕ್ಕೆ ಹಾನಿ ಉಂಟು ಮಾಡುವುದು ಎಂದು ತಿಳಿಯಬೇಕು. ಕೆಲವು ಕ್ರೀಮ್ ಗಳು ರಾತ್ರಿ ವೇಳೆ ಬಳಕೆ ಮಾಡಿದರೆ ಅದರಿಂದ ಒಳ್ಳೆಯ ಫಲಿತಾಂಶ ಸಿಗುವುದು. ಇದರಿಂದ ಬೆಳಗ್ಗೆ ಇಂತಹ ಕ್ರೀಮ್ ಬಳಸಬೇಡಿ ಮತ್ತು ಅತಿಯಾಗಿ ಇದರನ್ನು ಬಳಸಲೇಬೇಡಿ.

ತಪ್ಪು ಉತ್ಪನ್ನಗಳ ಆಯ್ಕೆ

ತಪ್ಪು ಉತ್ಪನ್ನಗಳ ಆಯ್ಕೆ

ಆ ದಿನಕ್ಕೆ ತಯಾರಾಗಲು ಬೆಳಗ್ಗೆ ನೀವು ಕೆಲವೊಂದು ಮೇಕಪ್ ಸಾಮಗ್ರಿಗಳನ್ನು ಬಳಸಿಕೊಳ್ಳುತ್ತೀರಿ. ಅದಾಗ್ಯೂ, ತಪ್ಪು ಆಯ್ಕೆಯ ಉತ್ಪನ್ನಗಳು ತೀವ್ರ ಹಾನಿ ಉಂಟು ಮಾಡಬಹುದು. ಅಗ್ಗದ ಉತ್ಪನ್ನಗಳ ಬಳಕೆಯಿಂದಾಗಿ ಹೆಚ್ಚಿನ ಹಾನಿ ಆಗಬಹುದು. ಇದನ್ನು ಬಳಸುವ ಕ್ರಮದ ಬಗ್ಗೆ ಕೂಡ ಸರಿಯಾಗಿ ತಿಳಿದುಕೊಳ್ಳಬೇಕು. ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿನಿತ್ಯವು ಮಾರುಕಟ್ಟೆಗೆ ಹಲವಾರು ರೀತಿಯ ಚರ್ಮದ ಆರೈಕೆಯ ಉತ್ಪನ್ನಗಳು ಬರುತ್ತದೆ. ಆದರೆ ನೀವು ಚರ್ಮದ ಬಗ್ಗೆ ತಿಳೀದು ಅದಕ್ಕೆ ಹೊಂದಿಕೊಳ್ಳುವ ಉತ್ಪನ್ನ ಆಯ್ಕೆ ಮಾಡಬೇಕು. ಆಯ್ಕೆ ಕೆಲವು ಉತ್ಪನ್ನಗಳನ್ನು ಬಳಸಿಕೊಳ್ಳಿ ಮತ್ತು ಹೆಚ್ಚು ಉತ್ಪನ್ನಗಳು ಬೇಡ. ಕಡಿಮೆ ಇದ್ದರೆ ಚರ್ಮಕ್ಕೆ ತುಂಬಾ ಒಳ್ಳೆಯದು. ಈ ಮೇಲಿನವು ಬೆಳಗ್ಗೆ ಮಾಡುವಂತಹ ತ್ವಚೆಯ ಆರೈಕೆಯ ಕೆಲವು ತಪ್ಪುಗಳು. ಆದರೆ ಇದರ ಬಗ್ಗೆ ನಿಮಗೆ ಈಗ ತಿಳಿದ ಕಾರಣದಿಂದಾಗಿ ನೀವು ಇದರ ಬಗ್ಗೆ ಗಮನಹರಿಸಿ, ತ್ವಚೆಯ ಆರೈಕೆ ಮಾಡಿ. ಯಾಕೆಂದರೆ ತ್ವಚೆ ಆರೋಗ್ಯವಾಗಿದ್ದರೆ ಆಗ ನಿಮ್ಮ ಸೌಂದರ್ಯವು ಎದ್ದು ಕಾಣುವುದು.

English summary

Morning Skin Care Mistakes

Morning skincare routine is an essential part of our life. Just like you charge yourself up every morning, your morning skincare charges your skin. You might overlook taking care of your skin during the day, but it's not acceptable to overlook it in the morning. However, there are certain mistakes we make that we need to avoid. Find out what these are!
Story first published: Monday, May 6, 2019, 17:25 [IST]
X
Desktop Bottom Promotion