For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮೂಸಂಬಿ ಹಣ್ಣಿನ ಮೂರು, ಮ್ಯಾಜಿಕ್ ಚಿಕಿತ್ಸೆ

|

ಸಿಹಿಯಾದ ನಿಂಬೆ ಎಂದು ಕರೆಯಲ್ಪಡುವ ಮೂಸಂಬಿ ಒಂದು ಸಿಟ್ರಸ್ ಹಣ್ಣು.ಇದು ವಿಟಮಿನ್‌ಗಳು ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ಈ ಫಲವು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಮೊಸಂಬಿ ಸಹಾಯ ಮಾಡುತ್ತದೆ.ಮೋಸಂಬಿಯು ಹೊಂದಿರುವ ಹಲವಾರು ಆರೋಗ್ಯಕರ ಪ್ರಯೋಜನಗಳಲ್ಲಿ ಇದೂ ಒಂದಾಗಿದೆ.ಆದರೆ ಸರಿಯಾಗಿ ಉಪಯೋಗಿಸಿದರೆ ಮೂಸಂಬಿ ನಿಮ್ಮ ಚರ್ಮಕ್ಕೆ ಎಷ್ಟು ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ?

ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಮೂಸಂಬಿ ಹಲವಾರು ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಅದು ನಿಮ್ಮ ಚರ್ಮದ ಸೌಂದರ್ಯವನ್ನು ಹಿಂದೆಂದೂ ಕಾಣದಷ್ಟು ಸುಂದರವಾಗಿ ಮಾಡುತ್ತದೆ.ಮೊಸಂಬಿಯ ಪ್ರತಿಜೀವಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಯೂ,ಮೃದುವಾಗಿ ಮತ್ತು ನಯವಾಗಿಯೂ ಇರುವಂತೆ ಮಾಡುತ್ತವೆ.ಇದು ಚರ್ಮದಲ್ಲಿ ರಕ್ತ ಪರಿಚಲನೆಯ ಸುಧಾರಣೆಗೆ ಸಹಾಯ ಮಾಡುತ್ತದೆ. ಇಲ್ಲಿ ನಾವು ಸನ್ ಟ್ಯಾನ್,ಕಳೆಗುಂದಿದ ಚರ್ಮ ಮತ್ತು ಕಣ್ಣಿನ ಸುತ್ತ ಕಪ್ಪಾಗುವ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಂತಹ 3 ಅದ್ಭುತ ಸೌಂದರ್ಯ ಪರಿಹಾರಗಳನ್ನು ಹೇಳುತ್ತೇವೆ.

Amazing Beauty Remedies Of Mosambi

ಸನ್ ಟ್ಯಾನ್ ಗೆ ಚಿಕಿತ್ಸೆ

ಹಠಮಾರಿಯಾದ ಸನ್ ಟ್ಯಾನ್ ಅನ್ನು ತೊಡೆದುಹಾಕಲು ನೀವು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಿದ್ದರೆ,ಈ ಪರಿಹಾರವು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ.

ಬೇಕಾಗಿರುವ ಪದಾರ್ಥಗಳು

  • ಒಣಗಿದ ಮೊಸಂಬಿಸಿಪ್ಪೆ
  • 1 ಚಮಚ ಜೇನುತುಪ್ಪ
  • ಒಂದು ಚಿಟಿಕೆ ಅರಿಶಿನ

ಮಾಡುವ ವಿಧಾನ

ಮೂಸಂಬಿ ಸಿಪ್ಪೆ, ಜೇನುತುಪ್ಪ ಮತ್ತು ಅರಿಶಿನವನ್ನು ಒಟ್ಟಿಗೆ ಸೇರಿಸಿ ದಪ್ಪದಾದ ಪೇಸ್ಟ್ ಮಾಡಿಕೊಳ್ಳಿ. ಸ್ವಚ್ಛವಾದ ಮುಖ ಮತ್ತು ಕತ್ತಿನ ಮೇಲೆ ಈ ಪೇಸ್ಟ್ ಅನ್ನು ಪದರದಂತೆ ಸರಿಯಾಗಿ ಹಚ್ಚಿಕೊಳ್ಳಿ.ಸುಮಾರು 5 ನಿಮಿಷಗಳ ಕಾಲ ಇದನ್ನು ಒಣಗಲು ಬಿಡಿ.ನಂತರ ಅದನ್ನು ನೀರಿನಿಂದ ತೊಳೆಯಿರಿ.ಉತ್ತಮ ಮತ್ತು ವೇಗವಾದ ಫಲಿತಾಂಶಗಳನ್ನು ಪಡೆಯಲು ವಾರಕ್ಕೆ ಎರಡು ಬಾರಿ ಇದನ್ನು ನೀವು ಉಪಯೋಗಿಸಬಹುದು .

ಕ್ಲೆನ್ಸರ್ ನ ರೀತಿ

ಮೊಸಂಬಿ ಒಂದು ಸಿಟ್ರಸ್ ಹಣ್ಣು ಹಾಗೂ ಇದು ವಿಟಮಿನ್ ಸಿ ಯ ಒಂದು ಉತ್ತಮ ಮೂಲವಾಗಿದೆ,ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಚರ್ಮವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ಬೇಕಾಗಿರುವ ಪದಾರ್ಥ:

  • 1 ಮಧ್ಯಮ ಗಾತ್ರದ ಮೊಸಂಬಿ

ತಯಾರಿಸುವ ವಿಧಾನ

ಒಂದು ಮಧ್ಯಮ ಗಾತ್ರದ ಮೊಸಂಬಿ ಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಭಾಗಗಳಾಗಿ ಕತ್ತರಿಸಿ.ಅದರ ಒಂದು ಭಾಗವನ್ನು ತೆಗೆದುಕೊಂಡು ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಮುಖದ ಮೇಲೆ ನಿಧಾನವಾಗಿ ಉಜ್ಜಿರಿ.8-10 ನಿಮಿಷಗಳವರೆಗೆ ಇದನ್ನು ಮುಂದುವರಿಸಿ.ನಂತರ ನೀರಿನಿಂದ ತೊಳೆಯಿರಿ.ನಿಮಗೆ ಇಷ್ಟವಾಗುವ ಮೋಯ್ಸ್ಟಿರೈಸರ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ನಿಧಾನವಾಗಿ ಒತ್ತಿರಿ.ಈ ಪರಿಹಾರವನ್ನು ವಾರಕ್ಕೊಮ್ಮೆ ಮಾಡುವುದರಿಂದ ಇದು ಚರ್ಮದ ಎಲ್ಲಾ ಕಲ್ಮಶಗಳನ್ನು ತೆಗೆದುಹಾಕಿ ನಿಮ್ಮ ತ್ವಚೆ ಆರೋಗ್ಯಕರವಾಗಿರುವಂತೆ ಮಾಡುತ್ತದೆ.

ಕಣ್ಣುಗಳ ಸುತ್ತ ಉಂಟಾದ ಕಪ್ಪು ವಲಯಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ

ಕಣ್ಣಿನ ಸುತ್ತದ ಕಪ್ಪು ಕಲೆಗಳು ಹಾಗೂ ಊದಿದ ಕಣ್ಣುಗಳು ನಮ್ಮ ಮುಖವನ್ನು ಕಳೆಗುಂದಿದಂತೆ ಮತ್ತು ದಣಿದಂತೆ ಕಾಣುವಂತೆ ಮಾಡುತ್ತವೆ .ಈ ಸಮಸ್ಯೆಗೆ ನಾವು ಒಂದು ಒಳ್ಳೆಯ ಪರಿಹಾರವನ್ನು ಹೇಳುತ್ತೇವೆ.ಇತರೆ ಬೇರೆ ಪದಾರ್ಥಗಳನ್ನು ಮೊಸಂಬಿಯೊಂದಿಗೆ ಸೇರಿಸಿದಾಗ ಈ ಪರಿಹಾರವು ನಿಮ್ಮ ಚರ್ಮದ ಮೇಲೆ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಬೇಕಾಗಿರುವ ಪದಾರ್ಥಗಳು

*½ ಚಮಚ ಮೂಸಂಬಿ ರಸ
*1 ಚಮಚ ಬಾಳೆಹಣ್ಣಿನ ಪೇಸ್ಟ್
*1 ಚಮಚ ಸೌತೆಕಾಯಿ ರಸ
*1 ಚಮಚ ವಿಟಮಿನ್ ಇ ಎಣ್ಣೆ

ಮಾಡುವ ವಿಧಾನ

ಒಂದು ಶುಚಿಯಾದ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಕೆಲವು ತಾಜಾ ಮೂಸಂಬಿ ಹಣ್ಣುಗಳನ್ನು ಹಾಕಿ ಸ್ಮಾಶ್ ಮಾಡಿ.ಚೆನ್ನಾಗಿ ಕಳೆತ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕಲೆಸಿ ಈ ಬಟ್ಟಲಿಗೆ ಹಾಕಿ.ಕೊನೆಗೆ ಸೌತೆಕಾಯಿ ರಸ ಮತ್ತು ವಿಟಮಿನ್ ಇ ಎಣ್ಣೆಯನ್ನು ಈ ಮಿಶ್ರಣಕ್ಕೆ ಸೇರಿಸಿ ನಯವಾದ ಪೇಸ್ಟ್ ಮಾಡಿ.ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಯನ್ನು ಸ್ವಚ್ಛ ಮಾಡಿ ಅದರ ಮೇಲೆ ಹಚ್ಚಿರಿ. 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ನೀರಿನಲ್ಲಿ ತೊಳೆಯಿರಿ.

English summary

Amazing Beauty Remedies Using Mosambi

Mosambi, otherwise called sweet lime, is a citrus fruit packed with vitamins and other nutrients. Mosambi also has several beauty benefits that will make your skin radiant like never before. The antibiotic and antioxidant properties of mosambi will keep your skin healthy, soft and supple. It also helps in improving the blood circulation of the skin.
X
Desktop Bottom Promotion