Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ತಲೆ ಕೂದಲಿನಲ್ಲಿ ಡ್ಯಾಂಡ್ರಫ್ ಇದೆಯೇ? ಇಲ್ಲಿದೆ ನೋಡಿ ಸರಳ ಮನೆಮದ್ದುಗಳು
ಹದಿಹರೆಯದವರನ್ನು ಮತ್ತು ವಯಸ್ಕರನ್ನು ಅತೀ ಸಾಮಾನ್ಯವಾಗಿ ಕಾಡುವ ಮತ್ತು ಅತೀ ಕಿರಿಕಿರಿಯನ್ನು೦ಟು ಮಾಡುವ ಸಮಸ್ಯೆಗಳಲ್ಲೊ೦ದು ಈ ತಲೆಹೊಟ್ಟು (ಡ್ಯಾಂಡ್ರಫ್). ಇದು ಯಾವ ವಯಸ್ಸಿನಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ತಲೆಹೊಟ್ಟು ಸಾಮಾನ್ಯವಾಗಿ ಮುಜುಗುರಕ್ಕೀಡಾಗುವ ಸನ್ನಿವೇಶವನ್ನು೦ಟು ಮಾಡುತ್ತದೆ. ಏಕೆ೦ದರೆ, ತಲೆಹೊಟ್ಟು ತಲೆದೋರಿದಾಗ, ವ್ಯಕ್ತಿಯ ತಲೆಯಿ೦ದ ನಿರ್ಜೀವ ತ್ವಚೆಯು ಸಣ್ಣ ಸಣ್ಣ ತುಣುಕುಗಳ ರೂಪದಲ್ಲಿ ಉದುರುತ್ತವೆ ಅಥವಾ ಕೆಲವೊಮ್ಮೆ ತಲೆಯ ಮೇಲೆ ಹಾಗೆಯೇ ಉಳಿದುಬಿಡುತ್ತವೆ ಇಲ್ಲವೇ ಕೆಲವೊಮ್ಮೆ ಧರಿಸಿಕೊ೦ಡಿರುವ ಬಟ್ಟೆಗಳ ಮೇಲೂ ಉದುರಿಬಿಡುತ್ತವೆ.
ತಲೆಹೊಟ್ಟಿನ ಸಾಮಾನ್ಯವಾದ ರೋಗಲಕ್ಷಣಗಳೆ೦ದರೆ, ತಲೆಯ ಮೇಲೆ ಉರಿಯ೦ತಹ ಅನುಭವ, ತಲೆ ತುರಿಸುವಿಕೆ, ಮತ್ತು ನಿರ್ಜೀವ ತ್ವಚೆಯು ತುಣುಕುಗಳ ರೂಪದಲ್ಲಿ ತಲೆಯಿ೦ದ ಉದುರುವುದು. ಹಾಗಾದರೆ ಇದನ್ನು ಹೇಗೆ ನಿಯಂತ್ರಣಕ್ಕೆ ತರುವುದು? ಚಿಂತಿಸಬೇಡಿ, ನಿಮ್ಮ ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಈ ಸಮಸ್ಯೆಯನ್ನು ಹತೋಟಿಗೆ ತರಬಹುದು... ಅಂತಹ ಕೆಲವೊಂದು ಸರಳ ಮನೆಮದ್ದುಗಳನ್ನು ಇಲ್ಲಿ ನೀಡಿದ್ದೇವೆ ಮುಂದೆ ಓದಿ...
ಸರಳ ಟಿಪ್ಸ್: ತಲೆಹೊಟ್ಟು ಸಮಸ್ಯೆಗೆ ಪವರ್‌ಫುಲ್ ಮನೆಮದ್ದುಗಳು

1. ಬಾಳೆಹಣ್ಣಿನ ಹೇರ್ ಮಾಸ್ಕ್
ಮಾಗಿದ ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಸರಿಯಾಗಿ ಹಿಚುಕಿಕೊಂಡು ಅದಕ್ಕೆ ಒಂದು ಚಮಚ ಮೊಸರು ಮತ್ತು ನಾಲ್ಕು ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. 20 ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.

2. ದಾಸವಾಳದ ಎಣ್ಣೆ
ತಲೆಹೊಟ್ಟು ಹೆಚ್ಚಾಗಿದ್ದು ಸತತವಾಗಿ ತಲೆ ತುರಿಕೆಯಾಗುತ್ತಿದೆಯೇ? ಇದಕ್ಕೆ ದಾಸವಾಳದ ಎಣ್ಣೆ ಉತ್ತಮ ಪರಿಹಾರವಾಗಿದೆ. ನಿಯಮಿತವಾಗಿ ದಾಸವಾಳದ ಎಣ್ಣೆಯನ್ನು ತಲೆಗೆ ಹಚ್ಚುತ್ತ ಬರುವ ಮೂಲಕ ಶೀಘ್ರವೇ ತಲೆಹೊಟ್ಟು ಇಲ್ಲವಾಗಿ ತುರಿಕೆಯೂ ಇಲ್ಲವಾಗುತ್ತದೆ. ಮಾರುಕಟ್ಟೆಯಲ್ಲಿ ಈ ಎಣ್ಣೆ ಸಿಗದೇ ಇದ್ದರೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದರಲ್ಲಿ ಪೂರ್ಣ ಮುಳುಗುವಂತೆ ಕೆಲವು ದಾಸವಾಳದ ಹೂವಿನ ದಳಗಳನ್ನು ಜಜ್ಜಿ ಇದರೊಂದಿಗೆ ಕೆಲವು ನೆಲ್ಲಿಕಾಯಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಚಿಕ್ಕ ಉರಿಯಲ್ಲಿ ಕುದಿಯಲು ಬಿಡಿ. ಸುಮಾರಾಗಿ ಎಲ್ಲಾ ಹೂವಿನ ದಳಗಳು ಕರಗಿವೆ ಅನ್ನಿಸಿದ ಬಳಿಕ ಇಳಿಸಿ ಹಾಗೇ ತಣಿಯಲು ಬಿಡಿ. ಬಳಿಕ ಇದನ್ನು ಬಟ್ಟೆಯಲ್ಲಿ ಹಾಕಿ ಹಿಂಡಿ ಸೋಸಿ ಬಳಸಿ.

3. ಈರುಳ್ಳಿ ರಸ ಮತ್ತು ಲಿಂಬೆರಸ
*ಎರಡು ಚಮಚ ಈರುಳ್ಳಿ ರಸ ಮತ್ತು 3-4 ಚಮಚ ಲಿಂಬೆ ರಸ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ.
*ಐದು ನಿಮಿಷ ಕಾಲ ಬೆರಳಿನಿಂದ ಮಸಾಜ್ ಮಾಡಿಕೊಳ್ಳಿ.
*ಬಳಿಕ 15 ನಿಮಿಷ ಕಾಲ ಹಾಗೆ ಬಿಡಿ.
*ಉಗುರುಬೆಚ್ಚಗಿನ ನೀರಿನಿಂದ ತಲೆ ತೊಳೆಯಿರಿ.
*ಪರಿಣಾಮಕಾರಿಯಾಗಲು ವಾರದಲ್ಲಿ ಎರಡು ಸಲ ಈ ಮನೆಮದ್ದು ಬಳಸಿ.

4. ಈರುಳ್ಳಿ ರಸ ಮತ್ತು ಬೇವಿನ ರಸ
*ಒಂದು ಚಮಚ ಈರುಳ್ಳಿ ರಸ ಮತ್ತು ಎರಡು ಚಮಚ ಬೇವಿನ ರಸ ಮತ್ತು 2-3 ಚಮಚ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ.
*10-15 ನಿಮಿಷ ಕಾಲ ಕೂದಲಲ್ಲಿ ಹಾಗೆ ಇದನ್ನು ಬಿಟ್ಟುಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
*ತಲೆಹೊಟ್ಟು ನಿವಾರಣೆ ಮಾಡಲು ಈ ಮನೆಮದ್ದನ್ನು ವಾರದಲ್ಲಿ ಒಂದು ಸಲ ಬಳಸಿ.

5. ನಿಂಬೆರಸದೊಂದಿಗೆ ತೆಂಗಿನ ಎಣ್ಣೆ
ಇದನ್ನು ಹೆಚ್ಚಿನ ಮನೆಗಳಲ್ಲಿ ಬಳಸಿಕೊಳ್ಳುತ್ತಾರೆ. ತೆಂಗಿನ ಎಣ್ಣೆಯು ತಲೆಬುರುಡೆಗೆ ಮೊಶ್ವಿರೈಸರ್ ನೀಡುವುದು ಮತ್ತು ನಿಂಬೆರಸವು ನೈಸರ್ಗಿಕವಾಗಿ ತಲೆಹೊಟ್ಟನ್ನು ನಿವಾರಣೆ ಮಾಡುವುದು. ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ಕೆಲವು ಹನಿ ನಿಂಬೆರಸವನ್ನು ಹಾಕಿ ಮತ್ತು ಬೆರಳುಗಳನ್ನು ಬಳಸಿಕೊಂಡು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ.

6. ಲೋಳೆಸರ ಮತ್ತು ಮೆಂತೆ
ಸುಮಾರು ಒಂದು ಚಮಚದಷ್ಟು ಮೆಂತೆಕಾಳುಗಳನ್ನು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ನೆನೆದ ಕಾಳುಗಳನ್ನು ಅರೆದು ನುಣ್ಣನೆಯ ಮಿಶ್ರಣ ತಯಾರಿಸಿ. ಇದಕ್ಕೆ ಲೋಳೆಸರದ ಒಂದು ಚಿಕ್ಕ ಕೋಡನ್ನು ಸೇರಿಸಿ ಮತ್ತೊಮ್ಮೆ ಅರೆದು ನುಣ್ಣಗಿನ ಪೇಸ್ಟ್ ನಂತೆ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮೇಲಿನ ವಿಧಾನದಂತೆಯೇ ಹಚ್ಚಿ ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ತಲೆಯಲ್ಲಿರುವ ಹೆಚ್ಚುವರಿ ಎಣ್ಣೆ ಮತ್ತು ಬೂಸು ನಿವಾರಣೆಯಾಗುತ್ತದೆ. ಈ ವಿಧಾನದಲ್ಲಿ ಸ್ವಲ್ಪ ತಡವಾಗಿ ಫಲಿತಾಂಶ ಬರುವುದರಿಂದ ಕೊಂಚ ತಾಳ್ಮೆ ಅಗತ್ಯ.

7. ಲೋಳೆಸರ ಮತ್ತು ಲಿಂಬೆರಸ
ಅರ್ಧ ಲಿಂಬೆಹಣ್ಣಿನ ರಸಕ್ಕೆ ಒಂದು ಚಿಕ್ಕ ಕೋಡು ಲೋಳೆಸರವನ್ನು ಸೇರಿಸಿ ಅರೆಯಿರಿ. ಪ್ರಮಾಣ ಹತ್ತು ಭಾರ ಲೋಳೆಸರಕ್ಕೆ ಒಂದು ಭಾಗ ಲಿಂಬೆರಸದಂತೆ ಇರಲಿ. ಮೇಲಿನ ವಿಧಾನದಂತೆಯೇ ಇದನ್ನು ಹಚ್ಚಿ ಒಂದು ಘಂಟೆ ಒಣಗಲು ಬಿಡಿ. ಬಳೀಕ ತಣ್ಣೀರು ಮತ್ತು ಸ್ವಲ್ಪವೇ ಸ್ವಲ್ಪ ಪ್ರಮಾಣದ ಮೃದುವಾದ ಶಾಂಪೂ ಉಪಯೋಗಿಸಿ ತಲೆ ತೊಳೆದುಕೊಳ್ಳಿ. ಏಕೆಂದರೆ ಲಿಂಬೆಯ ಆಮ್ಲೀಯ ಪದರ ಬರೆಯ ನೀರಿನಿಂದ ಪೂರ್ತಿಯಾಗಿ ಹೋಗುವುದಿಲ್ಲ. ಹಾಗೇ ಉಳಿದರೆ ಆಮ್ಲದ ಗುಣದಿಂದಾಗಿ ಕೂದಲಿಗೆ ಹಾನಿಯುಂಟಾಗಬಹುದು.

8. ಹರಳೆಣ್ಣೆ
ಮೊದಲು ಲೋಳೆಸರವನ್ನು (ಅಲೋವೆರಾ) ಅರೆದು ಅರ್ಧ ಕಪ್ ನಷ್ಟು ತುಂಬಿಸಿ. ಇದಕ್ಕೆ ಎರಡು ಚಿಕ್ಕ ಚಮಚದಷ್ಟು ಹರಳೆಣ್ಣೆ ಸೇರಿಸಿ (ಸುಂಗಧವುಳ್ಳ ಹರಳೆಣ್ಣೆ ಬೇಡ, ಅಪ್ಪಟವಾದ ಹರಳೆಣ್ಣೆ ಇರಲಿ). ಈ ಎರಡನ್ನೂ ಚೆನ್ನಾಗಿ ಮಿಶ್ರಣಗೊಳಿಸಿ ತಲೆಗೆ ಹಚ್ಚಿ. ಇದು ಕೂದಲನ್ನು ಆವರಿಸಿ ದಪ್ಪನಾಗಿ ಬರುವಂತೆ ಇಡಿಯ ತಲೆಗೆ ಲೇಪಿಸಿ. ತಲೆಗೊಂದು ಪ್ಲಾಸ್ಟಿಕ್ಕಿನ ಟೊಪ್ಪಿಯನ್ನು ಧರಿಸಿ (ಸ್ನಾನ ಮಾಡುವಾಗ ತೊಡುವ ಶವರ್ ಕ್ಯಾಪ್) ಮಲಗಿಬಿಡಿ. ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತಲೆಯನ್ನು ನಿಧಾನವಾಗಿ ತೋಯಿಸುತ್ತಾ ತೊಳೆದುಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪವೇ ಸ್ವಲ್ಪ ಮೃದುವಾದ ಶಾಂಪೂ ಉಪಯೋಗಿಸಿ. ಈ ವಿಧಾನವನ್ನು ವಾರಕ್ಕೊಮ್ಮೆಯಂತೆ ನಾಲ್ಕೈದು ವಾರ ಅನುಸರಿಸಿ. ಶೀಘ್ರದಲ್ಲಿಯೇ ಕೂದಲ ಬುಡದಿಂದ ತಲೆಹೊಟ್ಟು ನಿವಾರಣೆಯಾಗುವುದರ ಜೊತೆಗೇ ಹೊಸ ಕೂದಲು ಹುಟ್ಟಲು ಮತ್ತು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

9. ಮೊಟ್ಟೆಗಳನ್ನು ಬಳಸಿ
ಎರಡು ಮೊಟ್ಟೆಗಳನ್ನು ತೆಗೆದುಕೊಂಡು, ಅದನ್ನು ಪೇಸ್ಟ್ ಆಗಿ ಪರಿವರ್ತಿಸಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ, ಒಂದು ಗಂಟೆ ನೆನೆಯಲು ಬಿಡಿ. ಈ ಚಿಕಿತ್ಸೆಯಿಂದ ನಿಮಗೆ ಇರುವ ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

10. ತುಳಸಿಯ ಮಹಿಮೆ
ತುಳಸಿ ಮತ್ತು ನೆಲ್ಲಿ ಕಾಯಿಯ ಪುಡಿಯನ್ನು ನೀರಿನಲ್ಲಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ. ಅರ್ಧ ಗಂಟೆಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ನಿಮ್ಮ ಕೂದಲನ್ನು ನೀರು ಮತ್ತು ಶ್ಯಾಂಪೂವನ್ನು ಬಳಸಿ ಚೆನ್ನಾಗಿ ತೊಳೆಯಿರಿ.

11. ಅಡುಗೆಮನೆಯ ಬೆಳ್ಳುಳ್ಳಿ
ಎರಡು ಚಮಚದಷ್ಟು ಬೆಳ್ಳುಳ್ಳಿಯ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆರಸವನ್ನು ಬೆರೆಸಿ ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ, 30 ರಿಂದ 40 ನಿಮಿಷಗಳಷ್ಟು ಕಾಲ ಬಿಡಿ. ನಂತರ ಇದನ್ನು ಶಾಂಪೂ ಮತ್ತು ತಣ್ಣೀರನ್ನು ಬಳಸಿ, ಚೆನ್ನಾಗಿ ತೊಳೆಯಿರಿ.

12. ಅಲೀವ್ ಎಣ್ಣೆ
ಒ೦ದು ಚಮಚದಷ್ಟು ಅಲೀವ್ ಎಣ್ಣೆಯೊ೦ದಿಗೆ ಮೂರು ಟೀ ಚಮಚದಷ್ಟು ಈರುಳ್ಳಿ ರಸವನ್ನು ಬೆರೆಸಿರಿ. ಈ ಮಿಶ್ರಣವನ್ನು ನಿಮ್ಮ ತೆಲೆಗೆ ಹಾಗೂ ಕೂದಲಿಗೆ ಹಚ್ಚಿರಿ. ನೀವೊ೦ದು ಬೆಚ್ಚನೆಯ ಟವಲ್ ಅನ್ನೂ ಸಹ ಅರ್ಧ ಗಂಟೆಯ ಕಾಲ ನಿಮ್ಮ ತಲೆಗೆ ಸುತ್ತಿಕೊಳ್ಳಬಹುದು. ನ೦ತರ ಮ೦ದವಾದ ಶಾ೦ಪೂವನ್ನು ಬಳಸಿ ತಲೆಯನ್ನು ತೊಳೆದುಕೊಳ್ಳುವುದರ ಮೂಲಕ ತಲೆಹೊಟ್ಟನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.

13. ಕೊಬ್ಬರಿ ಎಣ್ಣೆ ಹಾಗೂ ಲಿಂಬೆ ರಸ
ಒ೦ದು ಚಮಚದಷ್ಟು ಲಿ೦ಬೆರಸ, ಐದು ಚಮಚಗಳಷ್ಟು ಕೊಬ್ಬರಿ ಎಣ್ಣೆಯನ್ನು ಮಿಶ್ರಗೊಳಿಸಿರಿ. ಈಗ, ಈ ಮಿಶ್ರಣವನ್ನು ತಲೆಗೆ ಹಿಚ್ಚಿಕೊ೦ಡು 20 ರಿ೦ದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ, ನ೦ತರ ತಲೆಯನ್ನು ಚೆನ್ನಾಗಿ ತೊಳೆಯಿರಿ. ಇದು ತಲೆಹೊಟ್ಟು ನಿವಾರಿಸುವಲ್ಲಿ ಪರಿಣಾಮಕಾರಿ ಮನೆಮದ್ದಾಗಿದೆ.



Click it and Unblock the Notifications











