Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬ್ಯೂಟಿ ಟಿಪ್ಸ್: ಬೆಲ್ಲ ಬಳಸಿ ಸೌಂದರ್ಯ ಹೆಚ್ಚಿಸಿ!
ದಕ್ಷಿಣ ಭಾರತೀಯರು ಬೆಲ್ಲವನ್ನು ಬಳಕೆ ಮಾಡುವುದು ಹೆಚ್ಚು ಎನ್ನಬಹುದು. ಬೆಲ್ಲದಿಂದ ಮಾಡಿರುವ ಆಹಾರವು ಮನಸ್ಸಿಗೆ ಖುಷಿ ನೀಡುವುದು ಮಾತ್ರವಲ್ಲದೆ ಇದು ಆರೋಗ್ಯಕ್ಕೂ ತುಂಬಾ ಲಾಭಕಾರಿ. ಬೆಲ್ಲದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ವಯಸ್ಸಾಗುವ ಪ್ರಕ್ರಿಯೆ ನಿಧಾನಗೊಳಿಸುವುದು. ಇದು ಕಪ್ಪು ಕಲೆ ಮತ್ತು ಬೊಕ್ಕೆಗಳ ನಿವಾರಣೆ ಮಾಡುವುದು. ವಿಟಮಿನ್ ಸಿ ಮತ್ತು ಕಬ್ಬಿನಾಂಶವನ್ನು ಹೊಂದಿರುವ ಬೆಲ್ಲವು ಕೂದಲು ನಿಸ್ತೇಜವಾಗುವುದನ್ನು ತಡೆಯುವುದು ಮತ್ತು ಕಾಂತಿಯುತಗೊಳಿಸುವುದು. ಪ್ರತಿನಿತ್ಯದ ಸೌಂದರ್ಯದ ಆರೈಕೆಯಲ್ಲಿ ಬೆಲ್ಲದ ಬಳಕೆ ಹೇಗೆ ಎಂದು ಈ ಲೇಖನದ ಮೂಲಕ ತಿಳಿಯುವ.

ಕಾಂತಿಯು ಚರ್ಮಕ್ಕೆ
ಬೆಲ್ಲದಲ್ಲಿ ಗ್ಲೈಕೊಲಿಕ್ ಆಮ್ಲವಿದ್ದು, ಇದು ಚರ್ಮದ ಕಾಂತಿ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಬೇಕಾಗುವ ಸಾಮಗ್ರಿಗಳು
2 ಚಮಚ ಬೆಲ್ಲದ ಹುಡಿ
2 ಚಮಚ ಜೇನುತುಪ್ಪ
ಕೆಲವು ಹನಿ ಲಿಂಬೆ
ಬಳಸುವ ವಿಧಾನ
ಬೆಲ್ಲವನ್ನು ಹುಡಿ ಮಾಡಿಕೊಳ್ಳಿ ಮತ್ತು ಇದಕ್ಕೆ ಜೇನುತುಪ್ಪ ಹಾಗೂ ಕೆಲವು ಹನಿ ಲಿಂಬೆ ರಸ ಹಾಕಿ. ಇದೆಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ನ್ನು ಶುಚಿಗೊಳಿಸಿರುವ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 5-10 ನಿಮಿಷ ಕಾಲ ಹಾಗೆ ಬಿಡಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ.

ಮೊಡವೆ ಹಾಗೂ ಬೊಕ್ಕೆಗಳಿಗೆ
ಬೆಲ್ಲವು ಮೊಡವೆ ಹಾಗೂ ಬೊಕ್ಕೆಗಳಿಂದ ಆಗಿರುವ ಕಲೆಗಳ ನಿವಾರಣೆ ಮಾಡುವುದು.
ಬೇಕಾಗುವ ಸಾಮಗ್ರಿಗಳು
ಬೆಲ್ಲ
ಲಿಂಬೆರಸ
ಬಳಸುವ ವಿಧಾನ
ಒಂದು ಚಮಚ ಬೆಲ್ಲದ ಹುಡಿ ಮತ್ತು ಕೆಲವು ಹನಿ ಲಿಂಬೆರಸ ಬೆರೆಸಿಕೊಳ್ಳಿ. ಲಿಂಬೆರಸದ ಬದಲು ಸ್ವಲ್ಪ ನೀರು ಹಾಕಿಕೊಳ್ಳಬಹುದು. ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಂಡು ಕೆಲವು ನಿಮಿಷ ಕಾಲ ಹಾಗೆ ಬಿಡಿ. ಪ್ರತಿನಿತ್ಯ ಇದನ್ನು ಬಳಸಿಕೊಂಡರೆ ವೇಗದ ಫಲಿತಾಂಶ ಪಡೆಯಬಹುದು.

ನೆರಿಗೆ ನಿವಾರಣೆ ಮಾಡಲು
ಗ್ಲೈಕೊಸಿಲ್ ಆಮ್ಲವು ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಿಸಲು ನೆರವಾಗುವುದು ಮತ್ತು ಮುಖದ ಮೇಲಿನ ನೆರಿಗೆ ಹಾಗೂ ಗೆರೆ ನಿವಾರಿಸುವುದು.
ಬೇಕಾಗುವ ಸಾಮಗ್ರಿಗಳು
1 ಚಮಚ ಬೆಲ್ಲದ ಹುಡಿ
1 ಚಮಚ ಕಪ್ಪು ಚಹಾ
1 ಚಮಚ ದ್ರಾಕ್ಷಿ ರಸ
ಚಿಟಿಕೆ ಅರಿಶಿನ
ಕೆಲವು ಹನಿ ರೋಸ್ ವಾಟರ್
ಬಳಸುವ ವಿಧಾನ
ಸ್ವಲ್ಪ ಕಪ್ಪು ಚಹಾ ಮಾಡಿಕೊಂಡು ತಣ್ಣಗಾಗಲು ಬಿಡಿ. ಒಂದು ಪಿಂಗಾಣಿಗೆ ಸ್ವಲ್ಪ ಬೆಲ್ಲದ ಹುಡಿ, ದ್ರಾಕ್ಷಿರಸ, ಕಪ್ಪು ಚಹಾ, ಚಿಟಿಕೆ ಅರಶಿನ ಮತ್ತು ಕೆಲವು ಹನಿ ರೋಸ್ ವಾಟರ್ ಹಾಕಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಗಡ್ಡೆ ನಿರ್ಮಾಣವಾಗದಂತೆ ಎಚ್ಚರ ವಹಿಸಿ. ಮುಖದ ಮೇಲೆ ಈ ಮಿಶ್ರಣ ಹಚ್ಚಿಕೊಂಡು 20 ನಿಮಿಷ ಹಾಗೆ ಬಿಡಿ. ಸಾಮಾನ್ಯ ನೀರಿನಿಂದ ತೊಳೆಯಿರಿ.

ಕಲೆಗಳು ಮತ್ತು ವರ್ಣದ್ರವ್ಯ ಕುಂದುವುದನ್ನು ನಿವಾರಿಸುವುದು
ಕಲೆಗಳು, ಮುಖದ ವರ್ಣ ಕಳೆಗುಂದುವುದರಿಂದ ನಿಮಗೆ ಚಿಂತೆಯಾಗಿದೆಯಾ? ಹಾಗಾದರೆ ಈ ಪ್ಯಾಕ್ ಬಳಸಿಕೊಂಡರೆ ಎಲ್ಲವೂ ನಿವಾರಣೆಯಾಗುವುದು.
ಬೇಕಾಗುವ ಸಾಮಗ್ರಿಗಳು
1 ಚಮಚ ಬೆಲ್ಲದ ಹುಡಿ
1 ಚಮಚ ಟೊಮೆಟೊ ರಸ
ಕೆಲವು ಹನಿ ಲಿಂಬೆರಸ
ಚಿಟಿಕೆ ಅರಿಶಿನ
ಬಳಸುವುದು ಹೇಗೆ
ಪಿಂಗಾಣಿ ಸ್ವಲ್ಪಗೊಳಿಸಿ ಅದಕ್ಕೆ ಬೆಲ್ಲದ ಹುಡಿ ಹಾಕಿ. ಟೊಮೆಟೊ ರಸ ಮತ್ತು ಕೆಲವು ಹನಿ ಲಿಂಬೆರಸ ಹಾಕಿ. ಅದಕ್ಕೆ ಚಿಟಿಕೆ ಅರಿಶಿನ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

ರೇಷ್ಮೆಯಂತಹ ಕೂದಲಿಗೆ
ಬೆಲ್ಲದಲ್ಲಿ ಇರುವಂತಹ ವಿಟಮಿನ್ ಸಿ ಕೂದಲನ್ನು ಬಲಿಷ್ಠ, ಮೃಧು ಮತ್ತು ರೇಷ್ಮೆಯಂತೆ ಮಾಡುವುದು.
ಬೇಕಾಗುವ ಸಾಮಗ್ರಿಗಳು
2 ಚಮಚ ಬೆಲ್ಲದ ಹುಡಿ
1 ಚಮಚ ಮುಲ್ತಾನಿ ಮಿಟ್ಟಿ
1-2 ಚಮಚ ಮೊಸರು
ತಯಾರಿಸುವುದು ಹೇಗೆ
ಬೆಲ್ಲದ ಹುಡಿ, ಮುಲ್ತಾನಿ ಮಿಟ್ಟಿ ಮತ್ತು ತಾಜಾ ಮೊಸರನ್ನು ಸರಿಯಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ಬಳಸಿ.



Click it and Unblock the Notifications
