ಬ್ಯೂಟಿ ಟಿಪ್ಸ್: ಮೈಕಾಂತಿ ಹೆಚ್ಚಿಸುವ ಹಳ್ಳಿಗಾಡಿನ 'ತೆಂಗಿನೆಣ್ಣೆ'

By: Hemanth
Subscribe to Boldsky

ಕೆಲವೊಂದು ಪ್ರದೇಶ ಹಾಗೂ ಹವಾಮಾನಕ್ಕೆ ಅನುಗುಣವಾಗಿ ವಿವಿಧ ರೀತಿಯ ಎಣ್ಣೆಯನ್ನು ಬಳಸಿಕೊಳ್ಳುತ್ತಾರೆ. ತಿನ್ನುವ ಆಹಾರದಿಂದ ಹಿಡಿದು ದೇಹ ಹಾಗೂ ತಲೆಗೆ ಕೂಡ ಎಣ್ಣೆಯನ್ನು ಬಳಸಿಕೊಳ್ಳಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪ್ರತಿಯೊಂದಕ್ಕೂ ತೆಂಗಿನೆಣ್ಣೆ ಬಳಸಲಾಗುತ್ತದೆ.

ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ತೆಂಗಿನ ಎಣ್ಣೆಯಲ್ಲಿರುವ ಕೆಲವೊಂದು ಪೋಷಕಾಂಶಗಳು ದೇಹ ಹಾಗೂ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ತ್ವಚೆಯ ಆರೋಗ್ಯಕ್ಕೆ ಸಂಬಂಧಿಸಿದರೆ ತೆಂಗಿನೆಣ್ಣೆಯು ತುಂಬಾ ಉಪಯುಕ್ತವಾಗಿದೆ. ಮೊಡವೆ, ನೆರಿಗೆ, ಬೊಕ್ಕೆಗಳಂತಹ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಉತ್ಪನ್ನಗಳು ಲಭ್ಯವಿದೆ. ಆದರೆ ತೆಂಗಿನೆಣ್ಣೆಯು ಎಷ್ಟು ಲಾಭಕಾರಿ ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ...

ಮೊಡವೆ

ಮೊಡವೆ

ಮಹಿಳೆಯರಂತೆ ಪುರುಷರಿಗೂ ಮೊಡವೆ ಎನ್ನುವುದು ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಳ್ಳುವುದು. ಮೊಡವೆಗಳು ನೋವು ಉಂಟು ಮಾಡುವುದು ಮಾತ್ರವಲ್ಲದೆ ಕೆಲವೊಂದು ಸಲ ಕನ್ನಡಿ ಮುಂದೆ ನಿಲ್ಲಲು ಹಿಂಜರಿಯುವಂತೆ ಮಾಡುವುದು. ತೆಂಗಿನೆಣ್ಣೆ ಬಳಸುವುದರಿಂದ ಪರಿಹಾರ ಸಿಗಬಹುದು. ಮೊದಲ ಮುಖ ತೊಳೆದು ಎಲ್ಲಾ ರೀತಿಯ ಕಲ್ಮಶಗಳನ್ನು ತೆಗೆದುಹಾಕಬೇಕು.

ನಿಮಗೆ ಗೊತ್ತಾ? ಬಾಳೆಹಣ್ಣಿನ ಸಿಪ್ಪೆಯಿಂದ ಮೊಡವೆ ನಿಯಂತ್ರಿಸಬಹುದು!

ಮೊಡವೆ

ಮೊಡವೆ

ಇದರ ಬಳಿಕ ಬಿಸಿ ನೀರಿನ ಆವಿಯನ್ನು ಮುಖಕ್ಕೆ ಕೊಟ್ಟ ನಂತರ. ಒಂದು ಚಮಚ ತೆಂಗಿನೆಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು. ಬಿಸಿ ಟವೆಲ್ ಅನ್ನು ಒತ್ತಿಹಿಡಿದು ಹೆಚ್ಚುವರಿ ಎಣ್ಣೆಯಂಶ ತೆಗೆದುಹಾಕಬೇಕು. ಕೆಲವೇ ದಿನಗಳಲ್ಲಿ ಮುಖದ ಮೇಲಿನ ಮೊಡವೆಗಳು ಹಾಗೆ ಮಾಯವಾಗುವುದನ್ನು ಕಾಣಬಹುದು.

ನೆರಿಗೆ

ನೆರಿಗೆ

ಮೂವತ್ತರ ಹರೆಯದಲ್ಲಿ ಕಣ್ಣಿನ ಕೆಳಗಡೆ ನೆರಿಗೆ ಬೀಳುವುದು ತುಂಬಾ ಭೀತಿ ಉಂಟು ಮಾಡುವುದು. ನೆರಿಗೆಯ ಭೀತಿ ಇರುವ ಮಹಿಳೆಯರು ಹಾಗೂ ಪುರುಷರು ತೆಂಗಿನೆಣ್ಣೆ ಬಳಸಿಕೊಂಡರೆ ತುಂಬಾ ಪರಿಣಾಮಕಾರಿ. ನೈಸರ್ಗಿಕದತ್ತವಾದ ತೆಂಗಿನೆಣ್ಣೆ ಬಳಸುವುದರಿಂದ ತ್ವಚೆಯಲ್ಲಿ ಮೂಡಿರುವ ನೆರಿಗೆಗಳನ್ನು ನಿವಾರಣೆ ಮಾಡಲು ತುಂಬಾ ಧನಾತ್ಮಕ ಫಲಿತಾಂಶ ನೀಡಲಿದೆ. ಮುಖವನ್ನು ಮೊದಲು ಸ್ವಚ್ಛ ಮಾಡಿಕೊಳ್ಳಬೇಕು ಮತ್ತು ಇದರ ಬಳಿಕ ತೆಂಗಿನೆಣ್ಣೆಯನ್ನು ನೆರಿಗೆ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ರಾತ್ರಿ ವೇಳೆ ಹೀಗೆ ಹಚ್ಚಿಕೊಂಡು ಬೆಳಿಗ್ಗೆ ಇದನ್ನು ಒರೆಸಿಕೊಂಡರೆ ಕೆಲವೇ ವಾರಗಳಲ್ಲಿ ಇದರ ಫಲಿತಾಂಶ ಪಡೆಯಬಹುದು. ಇದು ವಯಸ್ಸಾಗುವ ವೇಳೆ ಮೂಡುವ ನೆರಿಗೆ ಮತ್ತು ಕಲೆಗಳನ್ನು ನಿವಾರಣೆ ಮಾಡುವುದು.

ಮಾಯಿಶ್ಚರೈಸರ್

ಮಾಯಿಶ್ಚರೈಸರ್

ತ್ವಚೆಯ ಆರೈಕೆಗೆ ತೆಂಗಿನೆಣ್ಣೆಯನ್ನು ಒಳ್ಳೆಯ ಮಾಯಿಶ್ಚರೈಸರ್ ಆಗಿ ಬಳಸಿಕೊಳ್ಳಬೇಕು. ತೆಂಗಿನೆಣ್ಣೆ ಬಳಸಿದರೆ ಅದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುವುದು. ತೆಂಗಿನೆಣ್ಣೆ ಬಳಸಿಕೊಂಡು ಮುಖ ಹಾಗೂ ದೇಹಕ್ಕೆ ಸರಿಯಾಗಿ ಮಸಾಜ್ ಮಾಡಿಕೊಳ್ಳಬೇಕು. ರಾತ್ರಿಯಿಡಿ ಹಾಗೆ ಇರಲಿ ಬೆಳಿಗ್ಗೆ ಬಿಸಿ ನೀರಿನಲ್ಲಿ ಅದ್ದಿರುವ ಟವೆಲ್ ನಿಂದ ದೇಹವನ್ನು ಒರೆಸಿಕೊಳ್ಳಿ.

ಮಾಯಿಶ್ಚರೈಸರ್

ಮಾಯಿಶ್ಚರೈಸರ್

ತ್ವಚೆಗೆ ಒಳ್ಳೆಯ ಫಲಿತಾಂಶ ಪಡೆಯಬೇಕಾದರೆ ಒಂದು ವಾರ ಕಾಲ ಇದನ್ನು ಬಳಸಿ. ಚಳಿಗಾಲದಲ್ಲಿ ಚರ್ಮವು ಒಣಗುವುದರಿಂದ ಇದನ್ನು ಬಳಸಿದರೆ ತುಂಬಾ ಉಪಯುಕ್ತವಾಗಲಿದೆ. ತೆಂಗಿನೆಣ್ಣೆಯ ಕೆಲವೊಂದು ಪರಿಣಾಮಕಾರಿ ಉಪಯೋಗಗಳ ಬಗ್ಗೆ ತಿಳಿಸಿದ್ದೇವೆ. ಇದನ್ನು ಬಳಸಿ ತ್ವಚೆಯ ಆರೈಕೆ ಮಾಡಿಕೊಳ್ಳಿ.

English summary

Natural Coconut Oil For Skin Care

Though there are a number of skin products one can use to treat simple problems like that of pimples, wrinkles etc, the use of coconut oil ranks first! Here's letting you know some simple tips for skin care with the use of coconut oil.
Subscribe Newsletter